Search
  • Follow NativePlanet
Share
» »ಸಿ ಎಂ ಕುಮಾರಸ್ವಾಮಿ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?

ಸಿ ಎಂ ಕುಮಾರಸ್ವಾಮಿ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?

ಹಾಸನವು ಹಾಸನ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದ್ದು, ಈ ಪಟ್ಟಣಕ್ಕೆ ಸ್ಥಳೀಯ ದೇವತೆ ಹಾಸನಾಂಬೆಯ ಹೆಸರಿಡಲಾಗಿದೆ. ಇದು ಕರ್ನಾಟಕದ ವಾಸ್ತುಶಿಲ್ಪದ ಪಾಂಡಿತ್ಯಕ್ಕೆ ಹೆಸರುವಾಸಿಯಾಗಿದೆ. ಹೊಯ್ಸಳರ ಕಾಲದಲ್ಲಿ ಈ ಜಿಲ್ಲೆಯನ್ನು ಕಾಣಬಹುದು. ಹೊಯ್ಸಳರು 11 - 14 ನೇ ಶತಮಾನಗಳ ನಗರದ ಹೆಗ್ಗುರುತುಗಳಾಗಿರುವ ಹಳೆಬೀಡನ್ನು ಕಾಣಬಹುದಾಗಿದೆ. ಹಾಸನ ನಗರ ಮಾತ್ರವಲ್ಲದೇ ಜಿಲ್ಲೆಯೂ ಸಹ ಅತ್ಯಂತ ಸುಂದರವಾದ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ.

ಚಾಮುಂಡೇಶ್ವರಿಯಿಂದಾಗಿ ಸೋತರಾ ಸಿದ್ಧರಾಮಯ್ಯ?ಚಾಮುಂಡೇಶ್ವರಿಯಿಂದಾಗಿ ಸೋತರಾ ಸಿದ್ಧರಾಮಯ್ಯ?

ರಾಜ್ಯದ 25ನೇ ಮುಖ್ಯಮಂತ್ರಿಯಾಗಿರುವ ಹೆಚ್‌ ಡಿ ಕುಮಾರಸ್ವಾಮಿ ಜನಿಸಿದ್ದು ಹಾಸನ ಜಿಲ್ಲೆಯ ಹೊಳೇನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ. ಕುಮಾರಸ್ವಾಮಿಯವರ ಹುಟ್ಟೂರಾದ ಕರ್ನಾಟಕದ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗಿರುವ ಹಾಸನದ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.

ಇಲ್ಲಿಗೆ ಭೇಟಿ ನೀಡಿದರೆ ಕುಜ ದೋಷವಿದ್ದವರಿಗೂ ಕಂಕಣ ಭಾಗ್ಯ ಕೂಡುತ್ತೆಇಲ್ಲಿಗೆ ಭೇಟಿ ನೀಡಿದರೆ ಕುಜ ದೋಷವಿದ್ದವರಿಗೂ ಕಂಕಣ ಭಾಗ್ಯ ಕೂಡುತ್ತೆ

ವೇಗವಾಗಿ ಬೆಳೆಯುತ್ತಿರುವ ನಗರ

ವೇಗವಾಗಿ ಬೆಳೆಯುತ್ತಿರುವ ನಗರ

PC: Tukaram Hanumegowda

ಹಾಸನವು ತನ್ನ ಐತಿಹಾಸಿಕ ಹೆಗ್ಗುರುತುಗಳಿಗೆ ಹೆಸರುವಾಸಿಯಾಗಿದೆ ಮತ್ತು ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಇದು ಮಲೆನಾಡು ಮತ್ತು ಬಯಲು ಸೀಮೆಯ ನಡುವೆ ನೆಲೆಸಿರುವುದರಿಂದ ಇಡೀ ಜಿಲ್ಲೆಯ ವಾಯುಗುಣ ಅತ್ಯಂತ ಆಹ್ಲಾದಕರತೆಯಿಂದ ಕೂಡಿರುತ್ತದೆ. ರಾಜ್ಯದ ರಾಜಧಾನಿ ಬೆಂಗಳೂರಿನಿಂದ 187 ಕಿ.ಮೀ ದೂರದಲ್ಲಿದೆ. 79% ರಷ್ಟು ಸಾಕ್ಷರತೆಯನ್ನು ಹೊಂದಿದೆ. ಮತ್ತು ಇದು ಕೆಲವು ಅಮೂಲ್ಯವಾದ ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದೆ. ಕೃಷಿಯು ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದ್ದು ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಗೆ ಮೈಸೂರು ಮಿನರಲ್ಸ್ ರವರು ನಡೆಸುವ ಕ್ರೋಮೈಟ್ ಗಣಿಗಾರಿಕೆಯು ಆರ್ಥಿಕತೆಗೆ ಪ್ರಮುಖ ಕೊಡುಗೆಯನ್ನು ನೀಡುತ್ತದೆ. ಹಾಸನವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ( ISRO)ದ ಪ್ರಮುಖ ನಿಯಂತ್ರಣ ಕೇಂದ್ರವು ಸಹಾ ಹಾಸನದಲ್ಲಿ ನೆಲೆಗೊಂಡಿದೆ.

ಹಾಸನ ಪ್ರವಾಸೋದ್ಯಮ

ಹಾಸನ ಪ್ರವಾಸೋದ್ಯಮ

PC: നിരക്ഷരൻ

ಬೇಲೂರು, ಹಳೆಬೀಡು, ಶ್ರವಣಬೆಳಗೊಳ ಇಲ್ಲಿನ ಜನಪ್ರಿಯ ಪ್ರವಾಸಿ ಆಕರ್ಷಣೆಗಳಾಗಿವೆ. ಹಾಸನ ನಗರದಲ್ಲಿ ಅನೇಕ ವಿಧದ ಉತ್ತಮ ಗುಣಮಟ್ಟದ ಸೌಕರ್ಯಗಳಿವೆ . ಕರ್ನಾಟಕದ ಇತಿಹಾಸ ಮತ್ತು ಸಂಪ್ರದಾಯವನ್ನು ತಿಳಿದುಕೊಳ್ಳಲು ನೀವು ಆಸಕ್ತಿ ಹೊಂದಿದ್ದರೆ, ನೀವು ಒಮ್ಮೆ ಹಾಸನಕ್ಕೆ ಪ್ರಯಾಣಿಸಬೇಕು.

ನುಗ್ಗೆಹಳ್ಳಿ

ನುಗ್ಗೆಹಳ್ಳಿ

ಈ ಪ್ರದೇಶವು ಲಕ್ಷ್ಮಿ ನರಸಿಂಹ ದೇವಸ್ಥಾನ ಮತ್ತು ಸದಾಶಿವ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯಗಳು ಶ್ರೀಗಂಧದ ವಿಶೇಷ ಕಲ್ಲುಗಳಿಂದ ತಯಾರಿಸಲ್ಪಟ್ಟಿವೆ ಎಂಬುದು ಗಮನಾರ್ಹ. ಲಕ್ಷ್ಮಿ ನರಸಿಂಹ ದೇವಾಲಯವು 1246ರಲ್ಲಿ ನಿರ್ಮಾಣಗೊಂಡಿದ್ದು ತ್ರಿಕೂಟ(ಮೂರು ಗೋಪುರ) ಗಳನ್ನು ಹೊಂದಿದೆ. ಈ ದೇವಾಲಯದ ಗೋಡೆಗಳಲ್ಲಿ ಹಲವು ಕೆತ್ತನೆಗಳನ್ನು, ವಿಮಾನ(ಪ್ರಾರ್ಥನೆಯ ಭವನ), ಬೃಹದಾಕಾರದ ಮಂಟಪವನ್ನು ಈ ದೇವಾಲಯದ ನಿರ್ಮಾಣದ ನಂತರ ನಿರ್ಮಿಸಲಾಗಿದೆ. ಈ ದೇವಾಲಯದ ಮಂಟಪವು ಮೂರು ಗರ್ಭಗುಡಿಗಳನ್ನು ಮತ್ತು 9 ದ್ವಾರಗಳನ್ನು ಹೊಂದಿದೆ. ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ನಿಂತಿರುವ ಭಂಗಿಯಲ್ಲಿರುವ ಪಾರ್ವತಿ ದೇವಿಯ ಮೂರ್ತಿ. ಸದಾಶಿವ ದೇವಾಲಯವು ಏಕಕೂಟ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯವಾಗಿದ್ದು, ನಾಗರ ಶೈಲಿಯ ಗೋಪುರವನ್ನು ಹೊಂದಿದೆ. ಈ ದೇವಾಲಯದ ಗರ್ಭ ಗುಡಿಯಲ್ಲಿ ಬೃಹದಾಕಾರದ ಶಿವಲಿಂಗವಿದೆ. ಗೋಡೆಯಲ್ಲಿ ಹಲವಾರು ಕಿಟಕಿಗಳನ್ನು ಹೊಂದಿರುವ ಕೋಣೆಯಲ್ಲಿ ಒಂದು ಸುಂದರ ನಂದಿ ವಿಗ್ರಹವನ್ನು ಇಲ್ಲಿ ಪ್ರತಿಷ್ಟಾಪಿಸಲಾಗಿದೆ. ಈ ಸ್ಥಳಕ್ಕೆ ಬರುವಾಗ ಪ್ರವಾಸಿಗರು ಎರಡು ಗಣಪತಿ ವಿಗ್ರಹಗಳನ್ನು ನೋಡುತ್ತಾರೆ. ಒಂದು ದೇವಿಯ ಮೂರ್ತಿಯಿರುವ ದೇವಾಲಯ ದ್ವಾರದ ಬಳಿಯಾದರೆ ಮತ್ತೊಂದು ಲಿಂಗವಿರುವ ಗರ್ಭಗುಡಿಯ ಹೊರಭಾಗದಲ್ಲಿ ಕಾಣಬಹುದು.

ಒಂಭತ್ತುಗುಡ್ಡ

ಒಂಭತ್ತುಗುಡ್ಡ

ಚಾರಣ ಮಾಡಲು ಬಯಸುವ ಪ್ರವಾಸಿಗರು ಇಲ್ಲಿನ ಒಂಭತ್ತುಗುಡ್ಡಕ್ಕೆ ಭೇಟಿ ಕೊಡಬಹುದು. ಹೆಸರೆ ಸೂಚಿಸುವಂತೆ ಇಲ್ಲಿ ಒಂಭತ್ತು ಗುಡ್ಡಗಳಿರುವ ಕಾರಣದಿಂದಾಗಿ ಇದಕ್ಕೆ ಈ ಹೆಸರು ಬಂದಿದೆ. ಈ ಗುಡ್ಡಗಳು ಸಮುದ್ರ ಮಟ್ಟದಿಂದ 971 ಮೀಟರ್ ಎತ್ತರದಲ್ಲಿವೆಯಷ್ಟೆ ಅಲ್ಲದೆ ಪಶ್ಚಿಮ ಘಟ್ಟಗಳಲ್ಲಿಯೆ ಅತ್ಯಂತ ಎತ್ತರ ಬೆಟ್ಟಗಳಲ್ಲಿ ಒಂದು ಎಂದು ಖ್ಯಾತಿ ಪಡೆದಿದೆ. ಈ ಪ್ರದೇಶದ ಸುತ್ತ ಕಬ್ಬಿನಾಲೆ ಮೀಸಲು ಅರಣ್ಯ ಪ್ರದೇಶ, ಶಿರಡಿ ಶ್ರೀಸಲ ಮೀಸಲು ಅರಣ್ಯ ಪ್ರದೇಶ ಮತ್ತು ಬಾಲೂರು ಮೀಸಲು ಅರಣ್ಯ ಪ್ರದೇಶಗಳು ಇವೆ.

ಹಾಸನವನ್ನು ತಲುಪುವುದು ಹೇಗೆ?

ಹಾಸನವನ್ನು ತಲುಪುವುದು ಹೇಗೆ?

PC: BishkekRocks

ರೈಲು ಮತ್ತು ರಸ್ತೆಯ ಮೂಲಕ ಹಾಸನವನ್ನು ರಾಜ್ಯದ ಎಲ್ಲ ಭಾಗಗಳಿಂದ ಸುಲಭವಾಗಿ ತಲುಪಬಹುದು. ಹಾಸನಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು (115 ಕಿಮೀ) ಮತ್ತು ಬೆಂಗಳೂರು (187 ಕಿ.ಮೀ) ವಿಮಾನ ನಿಲ್ದಾಣ. ಆದ್ದರಿಂದ ಈ ನಗರವನ್ನು ಭೇಟಿ ಮಾಡುವುದು ಸುಲಭ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X