Search
  • Follow NativePlanet
Share
» »ಪರಶುರಾಮನಿಗೂ ಅಂತರಗಂಗೆ ಬೆಟ್ಟಕ್ಕೂ ಏನ್‌ ಸಂಬಂಧ ಗೊತ್ತಾ?

ಪರಶುರಾಮನಿಗೂ ಅಂತರಗಂಗೆ ಬೆಟ್ಟಕ್ಕೂ ಏನ್‌ ಸಂಬಂಧ ಗೊತ್ತಾ?

ಭಾರತದಲ್ಲಿ ಪ್ರವಾಸಿ ತಾಣಗಳ ಜೊತೆ ಸಾಹಸಮಯ ತಾಣಗಳಿಗೂ ಹೆಚ್ಚು ಪ್ರೋತ್ಸಾಹವನ್ನು ನೀಡಲಾಗುತ್ತದೆ. ಈ ಮೂಲಕ ದೇಶದ ವಿಶೇಷ ಸ್ಥಳಗಳ ಪರಿಚಯವಾಗುತ್ತದೆ. ಇತ್ತೀಚೆಗಂತೂ ಪ್ರವಾಸಿಗರು ಹೆಚ್ಚು ತಿರುಗಾಡುವುದಕ್ಕಿಂತಲೂ ಸಾಹಸಮಯ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಹೆಚ್ಚು ಇಷ್ಟಪಡುತ್ತಾರೆ.

ಅಂತರಗಂಗೆ

ಅಂತರಗಂಗೆ

ಅಂತರಗಂಗೆಯು ಬೆಂಗಳೂರಿನಿಂದ 80 ಕಿ.ಮೀ ದೂರದಲ್ಲಿದೆ. ಈ ಸ್ಥಳವು ಸಾಹಸಮಯ ತಾಣವಾಗಿಯೇ ಪ್ರಸಿದ್ಧಿ ಹೊಂದಿದೆ. ಇಲ್ಲಿ ರಾಕ್‌ ಕ್ಲೈಂಬಿಂಗ್ ಹಾಗೂ ಟ್ರಕ್ಕಿಂಗ್ ಮಾಡಬಹುದು. ಇದು ಅಂತರರಾಜ್ಯದ ಸಾಹಸಪ್ರಿಯರನ್ನೂ ಆಕರ್ಷಿಸುತ್ತಿದೆ. ಈ ಸ್ಥಳವು ಗುಹೆಗಳು ಹಾಗೂ ಮಂದಿರಗಳಿಗೂ ಪ್ರಸಿದ್ಧಿ ಹೊಂದಿದೆ. ಇದೊಂದು ತೀರ್ಥ ಸ್ಥಳವೂ ಆಗಿದೆ. ವನಸ್ಪತಿಯಿಂದ ಸುತ್ತುವರಿದಿರುವ ಈ ತಾಣವು ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಸ್ನೇಹಿತರ ಜೊತೆ ಇಲ್ಲಿಗೆ ವಾರಾಂತ್ಯದ ಪ್ಲ್ಯಾನ್ ಹಾಕಿಕೊಳ್ಳಬಹುದು.

ಬೆಟ್ಟದ ಮೇಲೆ ಟ್ರಕ್ಕಿಂಗ್

ಬೆಟ್ಟದ ಮೇಲೆ ಟ್ರಕ್ಕಿಂಗ್

ಅಂತರಗಂಗೆಯು ಮುಖ್ಯವಾಗಿ ಬೆಟ್ಟದ ಟ್ರಕ್ಕಿಂಗ್‌ಗೆ ಹೆಸರುವಾಸಿಯಾಗಿದೆ. ಇಲ್ಲಿನ ಟ್ರಕ್ಕಿಂಗ್‌ನ ರೋಮಾಂಚಕ ಅನುಭವವನ್ನು ಪಡೆಯಲು ದೂರದೂರದಿಂದ ಸಾಹಸಪ್ರಿಯರು ಆಗಮಿಸುತ್ತಾರೆ. ಇಲ್ಲಿನ ಬೆಟ್ಟಗಳು ಟ್ರಕ್ಕಿಂಗ್‌ನ್ನು ಇನ್ನಷ್ಟು ರೋಮಾಂಚನಕಾರಿಯಾಗಿಸಲು ಸಹಾಯ ಮಾಡುತ್ತದೆ. ಈ ಸ್ಥಳವು ಅನೇಕಜ್ವಾಲಾಮುಖಿ ಬೆಟ್ಟಗಳು ಹಾಗೂ ಗುಹೆಗಳಿಂದ ಕೂಡಿದೆ. ಟ್ರಕ್ಕಿಂಗ್ ಮೂಲಕ ನೀವು ಗುಹೆಯ ಅನ್ವೇಷಣೆಯನ್ನೂ ಮಾಡಬಹುದು. ನೀವು ಸಾಹಸಮಯ ತಾಣಗಳಿಗೆ ಭೇಟಿ ನೀಡುವುದರಲ್ಲಿ ಆಸಕ್ತಿ ಹೊಂದಿದ್ದರೆ ಅಂತರಗಂಗೆಯು ಸೂಕ್ತ ತಾಣವಾಗಿದೆ.

ಧಾರ್ಮಿಕ ವಿಶೇ‍ಷತೆ

ಧಾರ್ಮಿಕ ವಿಶೇ‍ಷತೆ

PC: Vedamurthy J

ಅಂತರಗಂಗೆಯು ಸಾಹಸಮಯ ತಾಣದ ಜೊತೆಗೆ ಇಲ್ಲಿನ ಧಾರ್ಮಿಕ ಮಹತ್ವದಿಂದಾಗಿಯೂ ಪ್ರಸಿದ್ಧಿ ಹೊಂದಿದೆ. ನೀವು ಇಲ್ಲಿನ ಧಾರ್ಮಿಕ ತಾಣಗಳಿಗೂ ಭೇಟಿ ನೀಡಬಹುದು. ಇಲ್ಲಿ ವರ್ಷವಿಡೀ ತೀರ್ಥಯಾತ್ರಿಗಳು ಬರುತ್ತಲೇ ಇರುತ್ತಾರೆ. ಕಾಶೀ ವಿಶ್ವೇಶ್ವರನನ್ನು ಇಲ್ಲಿನ ಪ್ರಮುಖ ದೇವರು ಎನ್ನಲಾಗುತ್ತದೆ. ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂದೂ ಕರೆಯಲಾಗುತ್ತದೆ. ಇಲ್ಲಿ ಶಿವಲಿಂಗವಿದೆ. ಈ ಬೆಟ್ಟದ ಮೇಲಿನಿಂದ ಹರಿಯುವ ನೀರಿನಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಇಲ್ಲಿನ ನೀರು ಗಂಗೆಯ ರೂಪ ಎನ್ನಲಾಗುತ್ತದೆ. ಈ ನೀರಿನಲ್ಲಿ ರೋಗ ನಿರೋಧಕ ಗುಣವಿದೆ ಎನ್ನುವುದು ಜನರ ನಂಬಿಕೆ.

ಪೌರಾಣಿಕ ಮಹತ್ವ

ಪೌರಾಣಿಕ ಮಹತ್ವ

PC:Ramanarayanadatta astri

ಇದಕ್ಕೆ ಪೌರಾಣಿಕ ಮಹತ್ವವೂ ಇದೆ. ಅಂತರಗಂಗೆ ಬೆಟ್ಟವು ಪರಶುರಾಮ ಹಾಗೂ ಜಮದಗ್ನಿ ಋಷಿಗೆ ಸಂಬಂಧಿಸಿದ್ದು ಎನ್ನಲಾಗುತ್ತದೆ. ಪೌರಾಣಿಕ ಕಥೆಯ ಪ್ರಕಾರ ಪರಶುರಾಮನ ಮೂಲಕ ಕಾತ್ರ್‌ವೀರ್ಯ್ ಅರ್ಜುನನ ಹತ್ಯೆ ನಡೆಯುತ್ತದೆ. ಆತನ ಪುತ್ರರಿಂದ ಜಮದಗ್ನಿಯ ಹತ್ಯೆ ಹಾಗೂ ರೇಣುಕಾಳ ಆತ್ಮ ವಿಸರ್ಜನೆಯೂ ಇದೇ ಬೆಟ್ಟದಲ್ಲಿ ನಡೆದಿದ್ದು ಎನ್ನಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಅಂತರಗಂಗೆ ಬೆಟ್ಟವು ಕೋಲಾರದಿಂದ 4 ಕಿ.ಮಿ ದೂರದಲ್ಲಿ ಹಾಗೂ ಬೆಂಗಳೂರಿನಿಂದ 80 ಕಿ.ಮಿ ದೂರದಲ್ಲಿದೆ. ನೀವು ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಕೋಲಾರಕ್ಕೆ ಬಸ್‌ ಹಿಡಿಯಬಹುದು. ನಂತರ ಅಂತರಗಂಗೆಗೆ ಆಟೋ ಮೂಲಕ ಹೋಗಬಹುದು. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಬೆಂಗಳೂರು ವಿಮಾನ ನಿಲ್ದಾಣ. ನೀವು ಕೋಲಾರ ರೈಲು ನಿಲ್ದಾಣದ ಮೂಲಕ ಅಂತರಗಂಗೆಯನ್ನು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X