Search
  • Follow NativePlanet
Share
» »ಬಣ್ಣದ ಹೆಸರುಗಳನ್ನು ಹೊಂದಿರುವ ಭಾರತ ದೇಶದ ನಗರಗಳ ಹಿಂದಿನ ರಹಸ್ಯಗಳು...

ಬಣ್ಣದ ಹೆಸರುಗಳನ್ನು ಹೊಂದಿರುವ ಭಾರತ ದೇಶದ ನಗರಗಳ ಹಿಂದಿನ ರಹಸ್ಯಗಳು...

ಭಾರತ ದೇಶ ಅತ್ಯಂತ ಉತ್ಸಹಭರಿತವಾದ ಮತ್ತು ಬಣ್ಣ ಬಣ್ಣದ ದೇಶವಾಗಿದೆ. ದೇಶದಲ್ಲಿನ ಬಣ್ಣಗಳ ನಗರಕ್ಕೆ ಮತ್ತೊಂದು ಹೆಸರುಗಳನ್ನು ಕೂಡ ಇಟ್ಟಿದ್ದಾರೆ. ಬಣ್ಣಗಳ ಹೆಸರಿನಿಂದ ಕರೆಯುವ ನಗರವೆಂದರೆ ಅದು ಗುಲಾಬಿ ರಂಗನ್ನು ಹೊಂದಿರುವ ಜೈಪುರ್. ಭಾರತ ದೇಶದಲ

ಭಾರತ ದೇಶ ಅತ್ಯಂತ ಉತ್ಸಹಭರಿತವಾದ ಮತ್ತು ಬಣ್ಣ ಬಣ್ಣದ ದೇಶವಾಗಿದೆ. ದೇಶದಲ್ಲಿನ ಬಣ್ಣಗಳ ನಗರಕ್ಕೆ ಮತ್ತೊಂದು ಹೆಸರುಗಳನ್ನು ಕೂಡ ಇಟ್ಟಿದ್ದಾರೆ. ಬಣ್ಣಗಳ ಹೆಸರಿನಿಂದ ಕರೆಯುವ ನಗರವೆಂದರೆ ಅದು ಗುಲಾಬಿ ರಂಗನ್ನು ಹೊಂದಿರುವ ಜೈಪುರ್. ಭಾರತ ದೇಶದಲ್ಲಿ, ಉಲ್ಲಾಸವಾಗಿ ಬಣ್ಣಕ್ಕೆ ಪ್ರಸಿದ್ಧಿ ಹೊಂದಿರುವ ನಗರಗಳು ಆನೇಕವಿದೆ.

ಕೆಲವು ನಗರಗಳಿಗೆ ಬಣ್ಣಗಳ ಹೆಸರು ಹೇಗೆ ಬಂದಿತು? ಎಂಬುದಕ್ಕೆ ಆಸಕ್ತಿಕರವಾದ ಕಥೆಗಳು ಇವೆ. ಉದಾಹರಣೆಗೆ, ಜೈಪೂರ್ ಗುಲಾಬಿ ಬಣ್ಣದ ನಗರ, ಜೋಧಪುರ್ ನೀಲಿ ಬಣ್ಣದ ನಗರ, ಜೈಸ್‍ಲ್ಮರ್ ಬಂಗಾರ ಬಣ್ಣದ ನಗರ. ಬಣ್ಣಗಳಿಂದ ತುಂಬಿ ಹೋಗಿರುವ ಈ ಕೆಲವು ನಗರಗಳ ಕುರಿತು ಲೇಖನದಲ್ಲಿ ತಿಳಿಯಿರಿ.

ನಿತ್ಯವು ಹಚ್ಚ ಹಸಿರಿನಿಂದ ಇರುವ ನಗರ: ತಿರುವನಂತಪುರಂ

ನಿತ್ಯವು ಹಚ್ಚ ಹಸಿರಿನಿಂದ ಇರುವ ನಗರ: ತಿರುವನಂತಪುರಂ

ಕೇರಳದಲ್ಲಿರುವ ಸುಮಾರು ಎಲ್ಲಾ ಸ್ಥಳಗಳು ಹಚ್ಚ ಹಸಿರಿನಿಂದ ಕೂಡಿರುವುದೇ ಆಗಿದೆ. ಆದರೆ ತಿರುವನಂತಪುರ ಮಾತ್ರ ಎಂದೆಂದಿಗೂ ಹಚ್ಚ ಹಸಿರಿನ ಬಣ್ಣದಲ್ಲಿರುತ್ತದೆ ಎಂದು ಗಾಂಧಿಯವರು ಬಣ್ಣಿಸಿದ್ದಾರೆ. ಗಾಂಧಿಯವರು ಈ ಬಣ್ಣದ ಹೆಸರಿಡಲು ಕಾರಣವೇನೆಂದರೆ ಇಲ್ಲಿನ ಹಚ್ಚ ಹಸಿರಿನ ವಾತಾವರಣದ ಕಾಲದ ಜೊತೆ ಜೊತೆಗೆ ಹಳೆಯದಾದ ಪ್ರವಾಸಿ ಸ್ಥಳಗಳನ್ನು ನೋಡಿ ಈ ಹೆಸರು ಇಟ್ಟರಂತೆ.

ಅರೆಬಿಯಾ ಸಮುದ್ರಕ್ಕೆ ಮತ್ತು ಪಶ್ಚಿಮ ದಿಕ್ಕಿನ ಮಧ್ಯೆಯಲ್ಲಿ ನೆಲೆಸಿರುವ ಆ ಪ್ರದೇಶವು ಎಲ್ಲಾ ವಿಷಯಗಳಲ್ಲಿ ನಿಜವಾಗಿಯೂ ಅಹ್ಲಾದಕರವಾದುದು. ಈ ನಗರ ಕೇರಳದ ಪರಿಪಾಲನೆ ಮಾಡಿದ ಪೀಠವೇ ಅಲ್ಲದೇ ಆನೇಕ ದೇವಾಲಯಕ್ಕೆ, ಬೀಚ್‍ಗಳಿಗೆ, ಬೆಟ್ಟ ಪ್ರದೇಶಗಳಿಗೆ ನೆಲೆಯಾಗಿದೆ.

PC: Ashcoounter

ಬಿಳಿ ಬಣ್ಣದ ನಗರ, ಉದಯ್‍ಪುರ್

ಬಿಳಿ ಬಣ್ಣದ ನಗರ, ಉದಯ್‍ಪುರ್

ಉದಯ್‍ಪುರ್ ಬಿಳಿ ಬಣ್ಣದ ನಗರ ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಲೆಕ್ಕವೇ ಇಲ್ಲದಷ್ಟು ನದಿಗಳು ಮತ್ತು ಸುಂದರವಾದ ಅಮೃತಶಿಲೆಯಿಂದ ನಿರ್ಮಾಣ ಮಾಡಿದ ಕಟ್ಟಡಗಳಿಗೆ ಪ್ರತೀತಿ. ಇಲ್ಲಿ ಹೆಚ್ಚಾಗಿ ನದಿಗಳು ಇದ್ದ ಕಾರಣದಿಂದ ಈ ಪ್ರದೇಶವನ್ನು "ಪೂರ್ವದ ವೆನಿಸ್" ಎಂದು ಮತ್ತು "ನದಿಗಳ ನಗರ" ಎಂದು ಕೂಡ ಕರೆಯುತ್ತಾರೆ.

ರಾಜಸ್ಥಾನದಲ್ಲಿರುವ ಅನೇಕ ನಗರಗಳಲ್ಲಿ ಉದಯ್‍ಪುರ ಕೂಡ ಒಂದು. ಆದರೆ ಉದಯ್‍ಪುರದಲ್ಲಿರುವ ದೊಡ್ಡ-ದೊಡ್ಡ ಕೋಟೆಗಳು, ವರ್ಷದಾದ್ಯಂತ ಜನರನ್ನು ಆಕರ್ಷಿಸುವ ಪ್ರಧಾನವಾದ ಆಕರ್ಷಣೆಗಳು ಇಲ್ಲಿವೆ. ಈ ನಗರಕ್ಕೆ ಪ್ರಾಕೃತಿಕ ಸೌಂದರ್ಯವನ್ನು ಇರುವುದೇ ಅಲ್ಲದೇ ಚಾರಿತ್ರಿಕ ವಿಷಯಗಳನ್ನು ಹಾಗು ಸ್ಥಳಗಳನ್ನು ಕಾಣಲು ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಾರೆ.

PC: Suket Dedhia


ಬಂಗಾರದ ಬಣ್ಣದ ನಗರ, ಜೈಸಲ್ಮರ್

ಬಂಗಾರದ ಬಣ್ಣದ ನಗರ, ಜೈಸಲ್ಮರ್

ಥಾರ್ ಬೇಸಿಗೆಯ ಸಮಯದಲ್ಲಿ ಬಂಗಾರದ ಛಾಯೆಗಳು, ಗೋಧಿ ಮತ್ತು ಹಳದಿ ಬಣ್ಣಗಳಿಂದಾಗಿ ಜೈಸಲ್ಮರ್‍ಗೆ ಬಂಗಾರದ ಬಣ್ಣದ ನಗರ ಎಂದು ಹೆಸರು ಬಂದಿತು. ಥಾರ್ ಬೇಸಿಗೆಯ ಬಂಗಾರ, ಹಳದಿ ಮತ್ತು ಗೋಧಿ ಬಣ್ಣಗಳ ಛಾಯೆಯಿಂದಾಗಿ ಈ ನಗರವು ಮತ್ತಷ್ಟು ಅದ್ಭುತವಾದ ನಗರವಾಗಿ ಕಾಣುತ್ತದೆ. ಜೈಸಲ್ಮರ್‍ನಲ್ಲಿರುವ ವಿವಿಧ ರಂಗಗಳಲ್ಲಿ ಪ್ರತ್ಯೇಕ ಸಾಂಪ್ರದಾಯಗಳಿರುವ ಸೌಂದರ್ಯವನ್ನು ಪ್ರತಿ ವರ್ಷ ಪ್ರಪಂಚದಲ್ಲಿರುವ ಯಾತ್ರಿಕರನ್ನು ಆಕರ್ಷಿಸುತ್ತದೆ. ಎಷ್ಟೋ ಹೆಸರು ಮತ್ತು ಮರ್ಯಾದೆಯನ್ನು ಪಡೆದ "ರಾಜಸ್ಥಾನದ ಜಾನಪದ ನೃತ್ಯ" ಮತ್ತು ಸಂಗೀತಕ್ಕೆ ಜೈಸಲ್ಮರ್ ಪ್ರಸಿದ್ಧಿ ಪಡೆದಿದೆ.

PC: DEZALB

ನೀಲಿ ಬಣ್ಣದ ನಗರ, ಜೋದಪೂರ್

ನೀಲಿ ಬಣ್ಣದ ನಗರ, ಜೋದಪೂರ್

ಈ ನಗರದ ಒಳಗೆ ಪ್ರವೇಶಿಸಿದ ಶೀಘ್ರವೇ ಮನೋಹರವಾದ ಮೆಹ್ರೋನ್ಗರ್ ಕೋಟೆ ಕಾಣಿಸುತ್ತದೆ. ಇದೊಂದು ಎತ್ತರವಾದ ಕಟ್ಟಡ ಕೂಡ ಆಗಿದೆ. ಅಲ್ಲಿ ಸಮುದ್ರದಿಂದಾಗಿಯೇ ನೀಲಿ ಬಣ್ಣದ ಮನೆಗಳನ್ನು ಕಂಡ ಪ್ರವಾಸಿಗರು ಮಂತ್ರಮುಗ್ಧರಾಗುತ್ತಾರೆ. ಮನೆಗೆ ಸೌಂದರ್ಯವನ್ನು ನೀಡುವ ಸಲುವಾಗಿ, ಈ ನೀಲಿ ಬಣ್ಣವನ್ನು ಮನೆಗಳನ್ನು ಬ್ರಾಹ್ಮಣರು ಪ್ರಾರಂಭ ಮಾಡಿದರು. ಕಾಲಾನಂತರ, ಆ ಪದ್ಧತಿಯು ಪ್ರಜೆಗಳಲ್ಲಿಯೂ ಸಾಧಾರಣವಾಯಿತು. ನಗರದಲ್ಲಿನ ವಾತಾವರಣವು ನೀಲಿಯಾಗುತ್ತಾ ಇದ್ದಂತೆ ಈ ಸುಂದರವಾದ ನಗರಕ್ಕೆ "ನೀಲಿ ನಗರ" ಎಂದು ಹೆಸರು ಕೂಡ ಬಂದಿತು.

PC: Premaram67

ಗುಲಾಬಿ ಬಣ್ಣದ ನಗರ, ಜೈಪೂರ್

ಗುಲಾಬಿ ಬಣ್ಣದ ನಗರ, ಜೈಪೂರ್

ರಾಜಸ್ಥಾನದ ರಾಜಧಾನಿಯಾದ ಜೈಪೂರ್, ಪ್ರಪಂಚ ವ್ಯಾಪಕವಾಗಿ ಗುಲಾಬಿ ಬಣ್ಣದ ನಗರವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಪುರಾತನ ಕಥೆಯ ಪ್ರಕಾರ, ಹೋಲ್ಸ್ ಯುವರಾಜ ಮತ್ತು ವಿಕ್ಟೋರಿಯಾ ಮಹಾರಾಣಿಯನ್ನು ಆಹ್ವಾನ ಮಾಡಲು, 1876 ರಲ್ಲಿ ನಗರವೆಲ್ಲಾ ಗುಲಾಬಿ ಬಣ್ಣವಾಗಿ ಮಾರ್ಪಾಟು ಮಾಡಲಾಯಿತು. ಅಂದು ನಗರವನ್ನು ಆಳ್ವಿಕೆ ಮಾಡುತ್ತಿದ್ದ ಮಹಾರಾಜ ಸಾವೈ ರಾಂ ಸಿಂಗ್, ತದನಂತರ ನಗರದಲ್ಲಿನ ಎಲ್ಲಾ ಭವನಗಳನ್ನು ಮತ್ತು ಮನೆಗಳಿಗೆ ಗುಲಾಬಿ ಬಣ್ಣವನ್ನು ಹಾಕಬೇಕು ಎಂದು ಕಾನೂನನ್ನು ಜಾರಿಗೊಳಿಸಿದನು. ಅಂದಿನಿಂದ ಆ ಕಾನೂನು ಮುಂದುವರೆಸಿಕೊಳ್ಳುತ್ತಾ ಬಂದಿದೆ.


PC: Firoze Edassery

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X