Search
  • Follow NativePlanet
Share
» »ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ

ಮೋಜಿನ ವಾರಾಂತ್ಯದ ಪ್ರವಾಸಕ್ಕಾಗಿ ಇಲ್ಲಿಗೆ ಭೇಟಿ ನೀಡಿ

ವೀಕೆಂಡ್ ಟ್ರಿಪ್'ನಲ್ಲಿ ಮಸ್ತ್ ಮಜಾ ಮಾಡಲು ಒಮ್ಮೆ ಇಲ್ಲಿ ಭೇಟಿ ಕೊಡಿ

ಈ ಆಗಸ್ಟ್ ತಿಂಗಳಲ್ಲಿ ಹೆಚ್ಚು ಕಡಿಮೆ ಸಾರ್ವತಿಕ ರಜಾ ದಿನಗಳೇ ಹೆಚ್ಚು. ಹಾಗಾಗಿ ಮಕ್ಕಳಿಂದ ಹಿಡಿದು ಉದ್ಯೋಗಸ್ಥರವರೆಗೂ ಆಗಸ್ಟ್ ತಿಂಗಳಿನಲ್ಲಿ ಪ್ರವಾಸಕ್ಕೆ ತೆರಳಲು ಪ್ಲ್ಯಾನ್ ಮಾಡುತ್ತಿರಬಹುದು. ಮತ್ತೆ ಕೆಲವರು ಸ್ವಲ್ಪ ವಿಶ್ರಾಂತಿ ಪಡೆಯಲು ಬಯಸುತ್ತಿರಬಹುದು. ಇಂತಹ ಸಮಯದಲ್ಲಿ ನೀವು ವೀಕೆಂಡ್ ಟ್ರಿಪ್ ಆಯೋಜಿಸಿದರೆ ದೊಡ್ಡವರ ಮನಸ್ಸು ಪ್ರಶಾಂತವಾಗಿರುತ್ತದೆ. ಮಕ್ಕಳು ಹ್ಯಾಪಿಯಾಗಿರುತ್ತಾರೆ. ಇನ್ನು ಪ್ರವಾಸಕ್ಕೆ ಎಲ್ಲಿಗೆ ಹೋದರೆ ಸೂಕ್ತ ಎಂದು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಿದ್ದರೆ, ಆ ಚಿಂತೆಯನ್ನೂ ಬಿಡಿ. ಏಕೆಂದರೆ ನಿಮಗೆ ಸುಲಭವಾಗಲು ನಿಮಗೆ ಸಮೀಪವಾಗುವ ಕೆಲವು ಪ್ರವಾಸಿ ಸ್ಥಳಗಳ ಪಟ್ಟಿ ಕೊಡಲಾಗಿದೆ.

ಈ ಸ್ಥಳಗಳು ವಿಶೇಷವಾಗಿ ದಕ್ಷಿಣ ಭಾರತ ಅಥವಾ ಕರ್ನಾಟಕದ ಪ್ರವಾಸಿಗರಿಗೆ ಬಹಳ ಹತ್ತಿರವಾಗುತ್ತವೆ. ಇಲ್ಲಿ ನಿಮಗೆ ಪ್ರವಾಸಿ ಚಟುವಟಿಕೆಗಳಿಗೂ ಅವಕಾಶವಿರುವುದರಿಂದ ಮನಸೋಇಚ್ಛೆ ಸಂತಸದಿಂದ ಜಿಗಿಯಬಹುದು, ಕುಣಿಯಬಹುದು, ಆನಂದಿಸಬಹುದು. ಹಾಗಾದರೆ ಬನ್ನಿ, ಆ ಸ್ಥಳಗಳು ಯಾವುವೆಂದು ತಿಳಿದುಕೊಳ್ಳೋಣ.

ಕೂರ್ಗ್

ಕೂರ್ಗ್

ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯಲ್ಲಿರುವ ಪುಟ್ಟ ಗಿರಿಧಾಮ ಪಟ್ಟಣ ಕೂರ್ಗ್ ಅಥವಾ ಕೊಡಗು. ಕಾಫಿ ತೋಟಗಳು, ಬೆಟ್ಟಗಳು, ಅದ್ಭುತ ಸಸ್ಯ ಮತ್ತು ಪ್ರಾಣಿ ಸಂಕುಲ ಹಾಗೂ ಜಲಪಾತಗಳಿಗೆ ಹೆಸರುವಾಸಿಯಾಗಿರುವ ಕೂರ್ಗ್ ರಾಜಧಾನಿ ಬೆಂಗಳೂರಿಗೆ ಬಹಳ ಹತ್ತಿರ. ಹಾಗಾಗಿ ವೀಕೆಂಡ್ ಟ್ರಿಪ್ ಹೋಗಲು ಇದು ಅತ್ಯುತ್ತಮ ಸ್ಥಳವಾಗಿದೆ. ಕೂರ್ಗ್ ಪ್ರಕೃತಿ ಮತ್ತು ಸಾಹಸ ಪ್ರಿಯರ ಸ್ವರ್ಗವಾಗಿದ್ದು, ಆನೆ ಸವಾರಿ, ವನ್ಯಜೀವಿ ಸಫಾರಿ ಮತ್ತು ನೇಚರ್ ವಾಕ್'ನಂತಹ ಪ್ರವಾಸಿ ಚಟುವಟಿಕೆಗಳನ್ನು ನೀವಿಲ್ಲಿ ಕೈಗೊಳ್ಳಬಹುದು. ನಾನ್ ವೆಜ್ ಪ್ರಿಯರಾಗಿದ್ದರೆ ಇಲ್ಲಿ ಪಂದಿ ಕರಿ (ಹಂದಿ ಕರಿ) ಸವಿಯಬಹುದು. ಇಲ್ಲಿ ಇದು ಸಖತ್ ಫೇಮಸ್. ಕರಿ ಜೊತೆಗೆ ಹಬೆಯಾಡುವ ಬಿಸಿ ರೊಟ್ಟಿ ಕೂಡ ಲಭ್ಯವಿದೆ. ಈ ಸ್ಥಳದ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂದು ಬಯಸಿದರೆ ರಾಜಾಸೀಟ್ ಮತ್ತು ಕೋಟೆಗಳನ್ನು ಕಣ್ತುಂಬಿಕೊಳ್ಳಬಹುದು.

ಮಣಿಪಾಲ

ಮಣಿಪಾಲ

ಕರ್ನಾಟಕದ ಕರಾವಳಿ ಪ್ರದೇಶ ಉಡುಪಿಯಲ್ಲಿರುವ ಮಣಿಪಾಲ ಕಾಲೇಜ್ ಟೌನ್ ಎಂದೇ ಖ್ಯಾತಿ ಪಡೆದಿದೆ. ಇನ್ನು ಮಣಿಪಾಲ ವಿಶ್ವವಿದ್ಯಾಲಯವು ಮಣಿಪಾಲಕ್ಕೆ ಹೆಚ್ಚಿನ ಆಕರ್ಷಣೆ ನೀಡಿದೆ ಎಂದರೆ ತಪ್ಪಾಗಲಾರದು. ಮಣಿಪಾಲವು ಯಾವಾಗಲೂ ಯುವ ಶಕ್ತಿಯಿಂದ ಗಿಜಿಗುಡುತ್ತಿರುತ್ತದೆ. ಇದು ಕೂಡ ತುಂಬಾ ದೂರದಲ್ಲಿಲ್ಲ. ಈ ಪಟ್ಟಣಕ್ಕೆ ನೀವು ಕೇವಲ ವಿದ್ಯಾಭ್ಯಾಸಕ್ಕೆ, ಆಸ್ಪತ್ರೆಗೆ ಬರಬೇಕೆಂದಿಲ್ಲ. ಇಲ್ಲಿಯೂ ನಿಮಗೆ ಸಾಕಷ್ಟು ತಿಳಿದುಕೊಳ್ಳುವ ವಿಷಯಗಳಿವೆ. ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರದ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬಹುದು. ಮಣಿಪಾಲದ ಉದ್ದಕ್ಕೂ ಅಡ್ಡಾಡುತ್ತಾ ಹೋದರೆ ವಿಶ್ವವಿದ್ಯಾಲಯದ ಕ್ಯಾಂಪಸ್ ನೋಡಬಹುದು. ನೀವು ನಿಮ್ಮ ಸಂಗಾತಿ ಅಥವಾ ಸ್ನೇಹಿತರೊಂದಿಗೆ ವಾರಾಂತ್ಯ ಕಳೆಯಲು ಬಯಸಿದರೆ ಈ ಸ್ಥಳ ಖಂಡಿತವಾಗಿಯೂ ನಿಮ್ಮ ಪಟ್ಟಿಯಲ್ಲಿರಬೇಕು.

ವೈಜಾಗ್

ವೈಜಾಗ್

ಹೆಸರು ಕೇಳಿದರೇನೇ ಇದು ನಮ್ಮ ರಾಜ್ಯದಲ್ಲಿ ಇಲ್ಲವಲ್ಲ ಎಂದನಿಸಬಹುದು. ಹೌದು, ಇದು ನಮ್ಮ ರಾಜ್ಯದಲ್ಲಿ ಇಲ್ಲ. ಆದರೆ ನಮ್ಮ ರಾಜ್ಯಕ್ಕೆ ಸಮೀಪವಿದೆ. ವೈಜಾಗ್ ಅಥವಾ ವಿಶಾಖಪಟ್ಟಣಂ ಆಂಧ್ರಪ್ರದೇಶದ ಒಂದು ದೊಡ್ಡ ಬಂದರು ನಗರವಾಗಿದ್ದು, ಇದು ರಾಜ್ಯದ ಅತಿದೊಡ್ಡ ಮತ್ತು ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ. ಇಲ್ಲಿನ ಪ್ರಶಾಂತ ವಾತವರಣ, ಸೌಂದರ್ಯ ಮತ್ತು ಕಡಲತೀರಗಳು ವಿಶ್ವ ಪ್ರಸಿದ್ಧವಾಗಿದೆ. ನೀವು ಸ್ವಲ್ಪ ನೀರಿನಲ್ಲಿ ಆಟವಾಡಬೇಕು, ಶಾಂತಿ ಮತ್ತು ನಿಶ್ಯಬ್ದ ಬೇಕು ಎಂದು ಬಯಸಿದರೆ, ಯರಡ ಬೀಚ್'ಗೆ ಬನ್ನಿ. ಇದೆಲ್ಲದರ ಜೊತೆಗೆ ವೈಜಾಗ್'ನಲ್ಲಿ ಐಎನ್'ಎಸ್ ಕುರುಸುರ ಜಲಾಂತರ್ಗಾಮಿ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿತ ಜಲಾಂತರ್ಗಾಮಿ ನೌಕೆ ನೋಡಬಹುದು. ಅಷ್ಟೇ ಅಲ್ಲ, ಬೊರ್ರಾ ಗುಹೆಗಳಂತಹ ಆಕರ್ಷಕ ಪ್ರವಾಸಿ ತಾಣವೂ ಇಲ್ಲಿದೆ. ಮತ್ತೆ ವೈಜಾಗ್‌ ಗೆ ಭೇಟಿ ಕೊಟ್ಟಾಗ ನೀವು ಆಂಧ್ರ ಬಿರಿಯಾನಿ ಮತ್ತು ರುಚಿಕರವಾದ ವೈಜಾಗ್ ಸ್ಟ್ರೀಟ್ ಫುಡ್ ಟೇಸ್ಟ್ ಮಾಡಲು ಮರೆಯಬೇಡಿ.

ವರ್ಕಳ

ವರ್ಕಳ

ನಿಮಗೆ ಗೋವಾಗೆ ಹೋಗಲು ಸಾಧ್ಯವಾಗದಿದ್ದರೆ ಅಥವಾ ಅಷ್ಟು ದೂರ ಪ್ರಯಾಣಿಸಲು ಬಯಸದಿದ್ದರೆ ವರ್ಕಳಕ್ಕೆ ಭೇಟಿ ನೀಡಿ. ಇಲ್ಲಿಯೂ ಗೋವಾದಲ್ಲಿರುವಂತೆಯೇ ಪರಿಶುದ್ಧ ಕಡಲತೀರಗಳಿವೆ. ಭವ್ಯವಾದ ಕಡಲತೀರಗಳ ಪಕ್ಕದಲ್ಲಿ ಕಂಡುಬರುವ ಬಂಡೆಗಳು ಪ್ರವಾಸಿಗರಿಗೆ ಕೆಲವು ಅದ್ಭುತ ದೃಶ್ಯಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ವಿಶೇಷವಾಗಿ ಇದು ಸೂರ್ಯಾಸ್ತದ ಸಮಯದಲ್ಲಿ ಜೆಟ್ ಸ್ಕೀಯಿಂಗ್‌'ನಂತಹ ಹೊಸ ಮತ್ತು ಸಾಹಸಮಯ ಜಲ ಕ್ರೀಡೆಗಳನ್ನು ಅನ್ವೇಷಿಸಲು ಉತ್ತಮ ಸ್ಥಳವಾಗಿದೆ. ನೀವು ಸಮುದ್ರತೀರದಲ್ಲಿ ವಿಶ್ರಾಂತಿ ಪಡೆಯುತ್ತಾ, ರುಚಿಕರವಾದ ಸಮುದ್ರಾಹಾರವನ್ನು ಆನಂದಿಸಲು ವರ್ಕಳವು ಖಂಡಿತವಾಗಿಯೂ ಉತ್ತಮ ಸ್ಥಳವಾಗಿದೆ.

ಕೋವಲಂ

ಕೋವಲಂ

ಕೋವಲಂ ಕೂಡ ಅತ್ಯದ್ಭುತ ಬೀಚ್'ಗೆ ನೆಲೆಯಾಗಿದೆ. ಇದು ಕೇರಳ ರಾಜ್ಯದ ಅತ್ಯಂತ ತುದಿಯಲ್ಲಿದೆ. ಕೋವಲಂ ಲೈಟ್‌ ಹೌಸ್ ನಿಮ್ಮ ಪ್ರವಾಸವನ್ನು ಪ್ರಾರಂಭಿಸಲು ಉತ್ತಮ ಸ್ಥಳವಾಗಿದೆ. ಇಲ್ಲಿ ನೀವು ಸುಂದರವಾದ ಕಡಲ ತೀರವನ್ನು ಕಣ್ತುಂಬಿಕೊಳ್ಳುವ ಜೊತೆಗೆ ರಮಣೀಯ ದೃಶ್ಯಗಳನ್ನು ಆನಂದಿಸಬಹುದು. ಲೈಟ್‌ಹೌಸ್ ಬೀಚ್ ಹತ್ತಿರದಲ್ಲಿಯೇ ಇದೆ. ಕೋವಲಂನಲ್ಲಿ ಅನೇಕ ಪ್ರಸಿದ್ಧ ಆಯುರ್ವೇದ ಮತ್ತು ಸ್ಪಾಗಳಿವೆ. ಆದ್ದರಿಂದ ನೀವು ವಿಶ್ರಾಂತಿ ಪಡೆಯಲು ಬಯಸಿದರೆ ಇದು ನಿಮಗೆ ಸೂಕ್ತ ಸ್ಥಳವಾಗಿದೆ. ಜೊತೆಗೆ ನೀವು ಹೌಸ್‌ಬೋಟ್ ರೈಡ್‌ ಕೂಡ ಮಾಡಬಹುದು.

ಕೊಚ್ಚಿ

ಕೊಚ್ಚಿ

ಕೇರಳದಲ್ಲಿ ನೋಡಲು ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಅದರಲ್ಲಿ ಕೊಚ್ಚಿಯು ಒಂದು. ಕೊಚ್ಚಿಯು ಕೇರಳದ ಮಧ್ಯಭಾಗದಲ್ಲಿರುವ ಬಂದರು ನಗರವಾಗಿದೆ. ಇದು ರಾಜ್ಯದ ರಾಜಧಾನಿಯಲ್ಲದಿದ್ದರೂ, ಈ ನಗರ ಯಾವಾಗಲೂ ಚಟುವಟಿಕೆಯಿಂದ ಕೂಡಿರುತ್ತದೆ. ಅಂದರೆ ನೀವು ಶಾಪಿಂಗ್, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು. ವೀಕೆಂಡ್ ಟ್ರಿಪ್ ಮೋಜಿನಿಂದ ಕೂಡಿರಬೇಕೆಂದುಕೊಂಡಿದ್ದರೆ ಕೊಚ್ಚಿಗಿಂತ ಅದ್ಭುತ ಸ್ಥಳ ಮತ್ತೊಂದಿಲ್ಲ. ಅಷ್ಟೇ ಅಲ್ಲ, ಮತ್ತಂಚೇರಿ ಅರಮನೆ ಮತ್ತು ಯಹೂದಿ ಸಿನಗಾಗ್ ನಂತಹ ಐತಿಹಾಸಿಕ ಪ್ರದೇಶಗಳನ್ನು ನೋಡಬಹುದು. ಪುರಾತನ ಪೀಠೋಪಕರಣಗಳನ್ನು ಶಾಪಿಂಗ್ ಮಾಡುವವರಿಗೆ ಇದು ಬೆಸ್ಟ್ ಪ್ಲೇಸ್. ಭಾರತದ ಅತಿದೊಡ್ಡ ಮಾಲ್‌'ಗಳಲ್ಲಿ ಒಂದಾದ ಲುಲು ಮಾಲ್‌'ನಲ್ಲಿ ಶಾಪಿಂಗ್ ಮಾಡಬಹುದು. ಆಹಾರ ಪ್ರಿಯರಿಗೆ ಅತ್ಯುತ್ತಮವಾದ ರೆಸ್ಟೋರೆಂಟ್ ಲಭ್ಯವಿದ್ದು, ಕೊಚ್ಚಿಗೆ ಭೇಟಿ ನೀಡಿದಾಗ ಮೇಲೆ ಹೇಳಿದ ಎಲ್ಲವನ್ನೂ ಆನಂದಿಸುವುದನ್ನು ಮರೆಯಬೇಡಿ.

ಯೆರ್ಕಾಡ್

ಯೆರ್ಕಾಡ್

ಬಹುತೇಕರು ಪ್ರವಾಸಕ್ಕೆ ಗಿರಿಧಾಮಗಳನ್ನು ಅಂದರೆ ಹಿಲ್ ಸ್ಟೇಷನ್ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ಗಿರಿಧಾಮಕ್ಕೆ ತೆರಳಬೇಕೆಂದು ಬಯಸುವ ಪ್ರತಿಯೊಬ್ಬರೂ ಯೆರ್ಕಾಡ್'ಗೆ ಭೇಟಿ ನೀಡುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಯೆರ್ಕಾಡ್ ತಮಿಳುನಾಡಿಗೆ ಹತ್ತಿರದಲ್ಲಿದೆ. ನಮ್ಮ ರಾಜ್ಯದಿಂದ ಪ್ರವಾಸಿಗರು ಇಲ್ಲಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಏಕೆಂದರೆ ವಾರಾಂತ್ಯವನ್ನು ಕಳೆಯಲು ಇದು ಶಾಂತ ಮತ್ತು ರಮಣೀಯ ಸ್ಥಳವಾಗಿದೆ. ಯೆರ್ಕಾಡ್ ಸರೋವರದಲ್ಲಿ ಬೋಟಿಂಗ್ ಹೋಗುವುದು, ಕಿಲಿಯೂರ್ ಜಲಪಾತದ ಸೊಬಗು, ಪಗೋಡಾ ಪಾಯಿಂಟ್‌ ಎಲ್ಲವೂ ನಿಮಗೆ ಅದ್ಭುತ ಅನುಭವನ್ನು ಕಟ್ಟಿಕೊಡುತ್ತವೆ. ಮಳೆಗಾಲದಲ್ಲಿ ಇಲ್ಲಿನ ವಾತವರಣ ಬಹಳ ತಂಪಾಗಿರುತ್ತದೆ. ಆಹಾರ ಪ್ರಿಯರು ಇಲ್ಲಿಗೆ ಬಂದಾಗ ಮಸಾಲೆ ದೋಸೆ, ಬಿಸಿ ಬಿಸಿ ಸೂಪ್, ವಿಭಿನ್ನವಾದ ಸ್ವೀಟ್ ಸೇವಿಸುವುದನ್ನು ಮರೆಯಬೇಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X