Search
  • Follow NativePlanet
Share
» » ವಿವೇಕಾನಂದರು ಸ್ನಾನ ಮಾಡುತ್ತಿದ್ದ ಕೊಳದಲ್ಲಿದೆ 37 ಅಡಿ ಎತ್ತರದ ಪ್ರತಿಮೆ

ವಿವೇಕಾನಂದರು ಸ್ನಾನ ಮಾಡುತ್ತಿದ್ದ ಕೊಳದಲ್ಲಿದೆ 37 ಅಡಿ ಎತ್ತರದ ಪ್ರತಿಮೆ

ಈ ಸರೋವರದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿ ಸ್ಥಾಪಿಸಲಾಗಿರುವ ಸ್ವಾಮಿ ವಿವೇಕಾನಂದರ 37 ಅಡಿ ಎತ್ತರದ ಪ್ರತಿಮೆ.

ರಾಯ್‌ಪುರವು ಚತ್ತೀಸ್‌ಗಡ್‌ನಲ್ಲಿರುವ ಒಂದು ಸುಂದರ ನಗರವಾಗಿದೆ. ರಾಯ್‌ಪುರದಲ್ಲಿ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿವೆ. ಅವುಗಲ್ಲಿ ಬೂಡಾ ತಾಲಾಬ್‌ ಕೂಡಾ ಒಂದು. ಇದನ್ನು ವಿವೇಕಾನಂದ ಸರೋವರ ಎಂದೂ ಕರೆಯುತ್ತಾರೆ. ಈ ಸರೋವರದ ವಿಶೇಷತೆಗಳ ಬಗ್ಗೆ ನಾವಿಂದು ತಿಳಿಸಲಿದ್ದೇವೆ.

 ವಿವೇಕಾನಂದರು ಸ್ನಾನ ಮಾಡಿದ್ದ ಕೊಳ

ವಿವೇಕಾನಂದರು ಸ್ನಾನ ಮಾಡಿದ್ದ ಕೊಳ

ರಾಯ್‌ಪುರದಲ್ಲಿರುವ ವಿವೇಕಾನಂದ ಸರೋವರವನ್ನು ಬೂಡಾ ತಲಾಬ್ ಎಂದೂ ಕರೆಯುತ್ತಾರೆ. ಇದು ನಗರದ ಹಳೆಯ ಸರೋವರವಾಗಿದ್ದು, ಸ್ವಾಮಿ ವಿವೇಕಾನಂದ ಅವರು ರಾಯ್‌ಪುರದಲ್ಲಿದ್ದಾಗ ಕೊಳದಲ್ಲಿ ಸ್ನಾನ ಮಾಡಿದ್ದರು ಹಾಗಾಗಿ ಈ ಸರೋವರಕ್ಕೆ ಅವರ ಹೆಸರಿಡಲಾಗಿದೆ ಎಂದು ಹೇಳಲಾಗಿದೆ.

37 ಅಡಿ ಎತ್ತರದ ಪ್ರತಿಮೆ

37 ಅಡಿ ಎತ್ತರದ ಪ್ರತಿಮೆ

PC: Theasg sap
ಈ ಸರೋವರದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿ ಸ್ಥಾಪಿಸಲಾಗಿರುವ ಸ್ವಾಮಿ ವಿವೇಕಾನಂದರ 37 ಅಡಿ ಎತ್ತರದ ಪ್ರತಿಮೆ. ಸ್ವಾಮಿ ವಿವೇಕಾನಂದರ ಅತಿದೊಡ್ಡ ಪ್ರತಿಮೆಯಾಗಿರುವುದರಿಂದ ಇದನ್ನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿಸಲಾಗಿದೆ. ಈ ಪ್ರತಿಮೆಯು ಕಂಚಿನಿಂದ ಮಾಡಲ್ಪಟ್ಟಿದೆ ಮತ್ತು ಕುಳಿತುಕೊಂಡ ಸ್ಥಿತಿಯಲ್ಲಿದೆ.

ಯಾವಾಗ ಭೇಟಿ ನೀಡುವುದು ಸೂಕ್ತ

ಯಾವಾಗ ಭೇಟಿ ನೀಡುವುದು ಸೂಕ್ತ

PC: youtube
ವರ್ಣರಂಜಿತ ಬೆಳಕಿನ ಕಾರಂಜಿಗಳು ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಚ್ಚಿನ ಸೌಂದರ್ಯವನ್ನು ನೀಡಿತ್ತವೆ. ಈ ಸರೋವರವನ್ನು ಭೇಟಿ ಮಾಡಲು ಸಂಜೆ ಅತ್ಯುತ್ತಮ ಸಮಯವಾಗಿದೆ. ಸರೋವರದ ಪಕ್ಕದಲ್ಲಿ ಸುಂದರವಾಗಿ ನಿರ್ವಹಿಸಲ್ಪಟ್ಟ ಉದ್ಯಾನವು ಮತ್ತೊಂದು ಆಕರ್ಷಣೆಯಾಗಿದೆ. ಸರೋವರದಲ್ಲಿ ಬಟ್ಟೆ ಒಗೆಯುವುದರಿಂದ ಮಾಲಿನ್ಯದ ಮಟ್ಟ ಹೆಚ್ಚುತ್ತಿರುವ ಕಾರಣ ಇತ್ತೀಚೆಗೆ ಈ ಸರೋವರವು ಸುದ್ದಿಯಲ್ಲಿದೆ. ಕೆರೆಯನ್ನು ಸಂರಕ್ಷಿಸಲು ರಾಜ್ಯ ಸರ್ಕಾರವು ಕ್ಲೀನಿಂಗ್ ಡ್ರೈವ್ ಪ್ರಾರಂಭಿಸಿದೆ.

ಸ್ವಾಮಿ ವಿವೇಕಾನಂದ ಆಶ್ರಮ

ಸ್ವಾಮಿ ವಿವೇಕಾನಂದ ಆಶ್ರಮ

ಒಮ್ಮೆ ನೀವು ಸರೋವರದ ಸುತ್ತಲೂ ನಡೆದರೆ ನೀವು ಸರೋವರದಿಂದ 2.7 ಕಿ.ಮೀ ದೂರದಲ್ಲಿರುವ ಸ್ವಾಮಿ ವಿವೇಕಾನಂದ ಆಶ್ರಮಕ್ಕೂ ಭೇಟಿ ನೀಡಬಹುದು. ಇದು ವಿವೇಕಾನಂದರ ಸಿದ್ಧಾಂತಗಳಿಗೆ ಹೆಸರುವಾಸಿಯಾಗಿದೆ.

ಬೋಟಿಂಗ್ ಅನ್ನು ಆನಂದಿಸಿ

ಬೂಡಾ ತಲಾಬ್ ನಗರದ ಹೃದಯಭಾಗದಲ್ಲಿದೆ. ಸರೋವರವನ್ನು ಸುತ್ತುವರೆದಿರುವ ಸುಂದರವಾದ ಉದ್ಯಾನ-ದ್ವೀಪವು ಪ್ರವಾಸಿಗರಿಂದ ಹೆಚ್ಚು ಮೆಚ್ಚುಗೆ ಪಡೆದಿದೆ. ಇದು ರಾಯ್‌ಪುರದ ಅತ್ಯಂತ ಸುಂದರವಾದ ತಾಣಗಳಲ್ಲಿ ಒಂದಾಗಿದೆ. ಬೋಟಿಂಗ್ ಅನ್ನು ಸಹ ಆನಂದಿಸಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC: Ambuj.kulshresth
ರೈಲಿನ ಮೂಲಕ: ರಾಯಪುರ ಜಂಕ್ಷನ್ ರೈಲ್ವೆ ನಿಲ್ದಾಣವು ಭಾರತೀಯ ರೈಲ್ವೆಯ ಹೌರಾ-ನಾಗ್ಪುರ-ಮುಂಬೈ ಮಾರ್ಗದಲ್ಲಿದೆ (ಭೂಸಾವಲ್, ನಾಗ್ಪುರ, ಗೊಂಡಿಯಾ, ಬಿಲಾಸ್ಪುರ್, ರೂರ್ಕೆಲಾ, ಖರಗ್ಪುರ ಮೂಲಕ) ಮತ್ತು ಹೆಚ್ಚಿನ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದೆ.ಅಲ್ಲಿಂದ ಟ್ಯಾಕ್ಸಿ ಮೂಲಕ ವಿವೇಕಾನಂದ ಸರೋವರವನ್ನು ತಲುಪಬಹುದು.

ವಿಮಾನದ ಮೂಲಕ: ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣ ಅಥವಾ ಮನ ವಿಮಾನ ನಿಲ್ದಾಣವು ಚತ್ತೀಸ್‌ಘಡ್‌ ರಾಜ್ಯಕ್ಕೆ ಸೇವೆ ಸಲ್ಲಿಸುವ ಪ್ರಾಥಮಿಕ ವಿಮಾನ ನಿಲ್ದಾಣವಾಗಿದೆ. ವಿಮಾನ ನಿಲ್ದಾಣವು ರಾಯಪುರದ ದಕ್ಷಿಣಕ್ಕೆ 15 ಕಿ.ಮೀ ದೂರದಲ್ಲಿ ನಯಾ ರಾಯ್‌ಪುರದ ಬಳಿ ಇದೆ. ಅಲ್ಲಿಂದ ಟ್ಯಾಕ್ಸಿ ಮೂಲಕ ವಿವೇಕಾನಂದ ಸರೋವರವನ್ನು ತಲುಪಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X