Search
  • Follow NativePlanet
Share
» »ಮಕ್ಕಳ ಅಚ್ಚುಮೆಚ್ಚಿನ ವಿಶ್ವೇಶ್ವರಯ್ಯ ಸಂಗ್ರಹಾಲಯ

ಮಕ್ಕಳ ಅಚ್ಚುಮೆಚ್ಚಿನ ವಿಶ್ವೇಶ್ವರಯ್ಯ ಸಂಗ್ರಹಾಲಯ

By Vijay

ಇನ್ನೇನು ಮಕ್ಕಳ ವಾರ್ಷಿಕ ಪರೀಕ್ಷೆಗಳು ಮುಗಿಯುತ್ತಿದ್ದು ದೀರ್ಘ ರಜೆಗಳು ಪ್ರಾರಂಭವಾಗುವ ಕ್ಷಣ ಬಂದಿದೆ. ಇತ್ತ ಪಾಲಕರು ತಮ್ಮ ತಮ್ಮ ಮಕ್ಕಳು ದೊರಕುವ ದೀರ್ಘ ರಜೆಗಳನ್ನು ದುರ್ಬಳಕೆ ಮಾಡಿಕೊಳ್ಳದಂತೆ ಬೇಸಿಗೆ ಶಿಬಿರ, ವ್ಯಕ್ತಿತ್ವ ವಿಕಸನ ತರಬೇತಿ, ನೃತ್ಯ-ಸಂಗೀತ ತರಬೇತಿ ಶಿಬಿರಗಳಿಗೆ ಕಳಿಸಲು ಚಿಂತಿಸುತ್ತಿರಲೂಬಹುದು.

ಮೇಕ್ ಮೈ ಟ್ರಿಪ್ ನಿಂದ ಸ್ಥಳೀಯ ಫ್ಲೈಟ್ ಗಳ ಮೇಲೆ 15% ರಷ್ಟು ಕಡಿತ

ಏನೆ ಆಗಲಿ ಮಕ್ಕಳಿಗೆ ಸ್ವಲ್ಪ ಸಮಯವಾದರೂ ಸರಿ, ಆಟವಾಡಿಕೊಳ್ಳಲು ಬಿಡಲೇಬೇಕು. ಇದರಿಂದ ಅವರ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯ ಹೆಚ್ಚುವುದರಲ್ಲಿ ಸಂಶಯವಿಲ್ಲ. ಆದರೆ ದಿನ ಪೂರ್ತಿ ಆಟವಾಡುವುದೂ ಸಹ ಅಷ್ಟೊಂದು ಸರಿಯಲ್ಲ. ಬದಲು ಪಾಲಕರು ಆವಾಗಾವಾಗ ಬಿಡುವು ಮಾಡಿಕೊಂಡು ಮಕ್ಕಳಿಗೆ ಅನುಕೂಲವಾಗುವಂತಹ, ಮನರಂಜನೆ ಜೊತೆಗೆ ಅವರ ಬೌದ್ಧಿಕ ಜ್ಞಾನ ವೃದ್ಧಿಯಾಗುವಂತಹ ಕೆಲ ಚಟುವಟಿಕೆಗಳನ್ನು ಅನುಸರಿಸಿದರೆ ಇನ್ನೂ ಒಳ್ಳೆಯದು ಉದಾಹರಣೆಗೆ ಸಂಗ್ರಹಾಲಯಗಳಿಗೆ ಕರೆದುಕೊಂಡು ಹೋಗುವುದು, ತಾರಾಲಯಕ್ಕೆ ಭೇಟಿ ನೀಡುವುದು, ಕರಕುಶಲ ತರಬೇತಿ ಕೇಂದ್ರಗಳಿಗೆ ಕರೆದೊಯ್ಯುವುದು ಮುಂತಾದವುಗಳು.

ವಿಶೇಷ ಲೇಖನ : ಜಂತರ್ ಮಂತರ್ ಪ್ರಾಚೀನ ಖಗೋಳ ತಾರಾಲಯ

ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯಾ ಕೈಗಾರಿಕೆ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯವು ಈ ನಿಟ್ಟಿನಲ್ಲಿ, ಮಕ್ಕಳನ್ನು ಕರೆದುಕೊಂಡು ಹೋಗಬಹುದಾದ ಒಂದು ಒಳ್ಳೆಯ ತಾಣವೆನ್ನಬಹುದು. ಇತ್ತ ಮನರಂಜನೆಗೂ ಸೈ, ಅತ್ತ ಜ್ಞಾನವೃದ್ಧಿಗೂ ಸೈ ಅನ್ನುವಂತಿದೆ ಈ ಅದ್ಭುತ ಸಂಗ್ರಹಾಲಯ. ಕೇವಲ ಮಕ್ಕಳೇಕೆ, ಹಿರಿಯರೂ ಸಹ ದಂಗುಪಡುವಂತಹ, ತಿಳಿದುಕೊಳ್ಳಬಹುದಾದ ಅನೇಕ ಯಾಂತ್ರಿಕ ಸಲಕರಣೆಗಳು, ವಿಸ್ಮಯಗೊಳಿಸುವ ವಿಜ್ಞಾನ ಪರೀಕ್ಷೆಗಳು, ಥ್ರೀ ಡಿ ದೃಶ್ಯಾವಳಿಗಳು ಇಲ್ಲಿದ್ದು ನೀವು ಹುಬ್ಬೇರಿಸುವಂತೆ ಮಾಡುತ್ತವೆ.

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯವು ಬೆಂಗಳೂರಿನ ಒಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ ಹಾಗೂ ಭಾರತದ ಅತ್ಯುನ್ನತ ವಸ್ತುಸಂಗ್ರಹಾಲಯಗಳಲ್ಲಿ ಒಂದೆನಿಸಿದೆ. ಇದು ಭಾರತ ಸರ್ಕಾರದ 'ರಾಷ್ಟ್ರೀಯ ವೈಜ್ಞಾನಿಕ ಸಂಗ್ರಹಾಲಯಗಳ ಸಮೂಹ'ಕ್ಕೆ ಸೇರಿದೆ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಬೆಂಗಳೂರಿನ ಕಸ್ತೂರ್ಬಾ ರಸ್ತೆಯಲ್ಲಿ ಈ ಸಂಗ್ರಹಾಲಯವು ನೆಲೆಸಿದ್ದು ಕಬ್ಬನ್ ಉದ್ಯಾನಕ್ಕೆ ಹೊಂದಿಕೊಂಡಿದೆ. ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ಶತಾಬ್ದಿ ಆಚರಣೆಯ ಅಂಗವಾಗಿ 1962 ರಲ್ಲಿ ಇದನ್ನು ಸ್ಥಾಪಿಸಲಾಗಿದೆ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಇಲ್ಲಿ ಮೊದಲ ಸಾರ್ವಜನಿಕ ಪ್ರದರ್ಶನವನ್ನು "ಎಲೆಕ್ಟ್ರೊ ಟೆಕ್ನಿಕ್" ಮೇಲೆ 27 ಜುಲೈ 1965 ರಲ್ಲಿ ಆಯೋಜಿಸಲಾಯಿತು. ಅಂದಿನಿಂದ ಇಲ್ಲಿಯವರಗೆ ಈ ಸಂಗ್ರಹಾಲಯವು ಮಕ್ಕಳ ಶೈಕ್ಷಣಿಕ ಪ್ರವಾಸಗಳಿಗೆ ನೆರವಾಗಿದೆ ಹಾಗೂ ಪ್ರತಿ ವರ್ಷ ಈ ಸಂಗ್ರಹಲಾಯಕ್ಕೆ ಏನಿಲ್ಲವೆಂದರೂ ಸುಮಾರು ಹತ್ತು ಲಕ್ಷಗಳಷ್ಟು ಜನ ಭೇಟಿ ನೀಡುತ್ತಾರೆನ್ನಲಾಗಿದೆ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವರ್ಷದ ಎಲ್ಲ ದಿನಗಳಲ್ಲೂ (ದೀಪಾವಳಿ ಹಾಗೂ ಗಣೇಶ ಚತುರ್ಥಿಯ ರಜೆಗಳನ್ನು ಹೊರತುಪಡಿಸಿ) ತೆರೆದಿರುವ ಈ ಸಂಗ್ರಹಾಲಯಕ್ಕೆ ಭೇಟಿ ನೀಡುವ ಸಮಯವನ್ನು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಿಗದಿಪಡಿಸಲಾಗಿದೆ. ಪ್ರವೇಶಿಸಲು ವಿವಿಧ ರೀತಿಯ ಶುಲ್ಕಗಳಿದ್ದು ಅದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: christopherhu

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಜ್ಯಾಕೋಬ್ಸ್ ಲ್ಯಾಡರ್ ಉಪಕರಣ. ಹೈ ವೊಲ್ಟೇಜ್ ಮೂಲಕ ದಿಪವು ಹೊತ್ತಿ ಮೇಲೆರುವುದನ್ನು ಅದ್ಭುತವಾಗಿ ಇದರ ಮೂಲಕ ನೋಡಬಹುದು.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಮಾನವ ನಿರ್ಮಿತ ಕೃತಕ ಉಪಗ್ರಹಗಳು ಯಾವ ರೀತಿ ಇರುತ್ತವೆ ಎಂದು ತೋರ್ಪಡಿಸುವ ಮಾದರಿಗಳು.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಸಂಗ್ರಹಾಲಯದಲ್ಲಿರುವ "ಡಿಜಿಟಲ್ ಕೌಂಟರ್" ಆಂಗ್ಲದ ಸಂಖ್ಯೆಗಳು ಯಾವ ರೀತಿ ಎಣಿಸಲ್ಪಡುತ್ತವೆ ಎಂದು ತೋರಿಸುವ ಉಪಕರಣ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಭೌತಶಾಸ್ತ್ರ ವಿಜ್ಞಾನಿ ಸರ್ ಜೋಸೆಫ್ ಜಾನ್ ಥಾಮ್ಸನ್ ಅವರು ಅಧ್ಯಯನ ಮಾಡುತ್ತಿದ್ದ ಕೊಣೆ ಹೇಗಿತ್ತೆಂಬುದನ್ನು ಮಾರ್ಮಿಕವಾಗಿ ವಿವರಿಸುವ ಸೆಟ್.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಸರ್ಕ್ಯೂಟ್ ಗಳಲ್ಲಿ ವಿದ್ಯುತ್ ಪ್ರವಾಹವು ಯಾವ ರೀತಿ ಆಗುತ್ತದೆಂದು ಸರಳವಾಗಿ ವಿವರಿಸುವ ವಿದ್ಯುತ್ ಚಾಲಿತ ಉಪಕರಣ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

1940 ರಿಂದ ಇಲ್ಲಿಯವರೆಗೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಾದ ಅಗಾಧ ಪ್ರಗತಿಯನ್ನು ಸರಳವಾಗಿ ತೋರಿಸುವ ಮಾದರಿ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಕೈಗಾರಿಕೆಗಳಲ್ಲಿ ವ್ಯವಸ್ಥಿತವಾಗಿ ವಿದ್ಯುತ್ ಅನ್ನು ಹೇಗೆ ಪ್ರಸರಿಸಬೇಕೆಂದು ತೋರಿಸಿ ಕೊಡುವ ಮಾದರಿ. ಈ ರೀತಿಯ ಮಾದರಿಗಳು ಮಕ್ಕಳಿಗೆ ಸರಳವಾಗಿ ಪ್ರಾಯೋಗಿಕ ಅನುಭವವನ್ನು ನೀಡುತ್ತವೆ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಉಷ್ಣ ಸ್ಥಾವರಗಳನೊಳಗೊಂಡ ಕೈಗಾರಿಕೆಯ ಇನ್ನೊಂದು ಮಾದರಿ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಜ್ಞಾನದಲ್ಲಿ "ಎಲೆಕ್ಟ್ರೊ ಮ್ಯಾಗ್ನೆಟಿಕ್" ಎಂಬ ಪದವು ಮಕ್ಕಳಿಗೆ ಬಲು ಚಿರಪರಿಚಿತ. ಇದು ಹೇಗೆ ಉಂಟಾಗುತ್ತದೆ ಎಂದು ವಿವರಿಸುವ ಮಾದರಿ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಫ್ಯಾರಡೆಯ ಬಲೆ ಇದು. ಇದೊಂದು ವಿಸ್ಮಯಕರ ಬಲೆ. ಇದು ವಿದ್ಯುತ್ ಅನ್ನು ಹಿಡಿದುಕೊಂಡು ಅಲ್ಲಲ್ಲೆ ಚಲಿಸುವ ಹಾಗೆ ಮಾಡುತ್ತದೆ. ಇದರಲ್ಲಿ ಮನುಷ್ಯನು ನಿಂತು, ಬಲೆಗೆ ವಿದ್ಯುತ್ ಹಾಯಿಸಿದಾಗ ವಿದ್ಯುತ್ ಸ್ಪಷ್ಟವಾಗಿ ಬಲೆಯ ಸುತ್ತಲೂ ಚಲಿಸುವುದನ್ನು ಕಾಣಬಹುದು ಹೊರತಾಗಿ ಮನುಷ್ಯನಿಗೆ ಯಾವ ರೀತಿಯ ಶಾಕ್ ಹೊಡೆಯುವುದಿಲ್ಲ. ಮೈಕಲ್ ಫ್ಯಾರಡೆ ಎಂಬ ವಿಜ್ಞಾನಿ ಇದರ ನಿರ್ಮಾತೃ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಕಾರುಗಳ ಹಿಂಭಾಗದಲ್ಲಿರುವ ಆಕ್ಸಲ್ ಗಳು ಯಾವ ರೀತಿಯಾಗಿ ವಿನ್ಯಸಿಸಲ್ಪಟ್ಟಿರುತ್ತವೆ ಎಂದು ತೋರಿಸುವ ಒಂದು ಮಾದರಿ ಆಕ್ಸಲ್.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

1800 ರ ಕೊನೆಯ ಸಂದರ್ಭದಲ್ಲಿ ಅದರಲ್ಲೂ ಲಂಡನ್ ಪ್ರಾಂತ್ಯದಲ್ಲಿ ಡಿಸೆಲ್ ಎಂಜಿನ್ ಗಳ ಪರಿಷಕರಣೆ ಸಾಕಷ್ಟಾಯಿತು. ಅಂದಿನ ಸಮಯದಲ್ಲಿ ಜನಪ್ರೀಯವಾದ ಮೀರ್ ಲೀಸ್ ಡಿಸೆಲ್ ಎಂಜಿನ್ ನ ಒಂದು ಮಾದರಿ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

"ಸೂಂಯ್" ಎಂದು ಬಾನಲ್ಲಿ ರಭಸವಾಗಿ ಹಾರಾಡುವ ಜೆಟ್ ವಿಮಾನಗಳನ್ನು ಕಂಡಾಗ ಮಕ್ಕಳಿಗೆ ರೋಮಾಂಚನವಾಗದೆ ಇರಲಾರದು. ಇಂತಹ ವಿಮಾನಗಳ ಎಂಜಿನ್ ಗಳು ಹೇಗಿರಬಹುದೆಂದು ಒಮ್ಮೊಮ್ಮೆ ಕುತೂಹಲ ಉಂಟಾಗುವುದು ಸಹಜ. ಆ ಕುತೂಹಲ ನಿಮ್ಮಲ್ಲೂ ಸಹ ಇದ್ದರೆ ಈ ಸಂಗ್ರಹಾಲಯಕ್ಕೆ ಭೇಟಿ ನೀಡಿ ತೃಪ್ತರಾಗಿ. ಇದು ಜೆಟ್ ಎಂಜಿನ್ ಮಾದರಿ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಮಾನಗಳಲ್ಲಿ ಕಂಡುಬರುವ ಇನ್ನೊಂದು ಬಗೆಯ ಯಂತ್ರಗಳು.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಸಾಮಾನ್ಯವಾಗಿ ದ್ವಿಚಕ್ರ ವಾಹನಗಳಲ್ಲಿ ಟೂ ಸ್ಟ್ರೋಕ್, ಫೋರ್ ಸ್ಟ್ರೋಕ್ ಎಂದೆಲ್ಲ ಕೇಳಿರುತ್ತೇವೆ. ಆದರೆ ಈ ಯಂತ್ರಗಳು ಹೇಗಿರುತ್ತವೆ ಎಂಬ ಕುತೂಹಲವೆ? ಇಲ್ಲಿದೆ ನೋಡಿ ಫ಼ೋರ್ ಸ್ಟ್ರೋಕ್ ಎಂಜಿನ್ ಮಾದರಿ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯದಲ್ಲಿರುವ ಥ್ರಿ ಡಿ ಪರದೆ. ಇದನ್ನು ವೀಕ್ಷಿಸುವಾಗ ಅದರಲ್ಲಿ ಬಿತ್ತರಗಳ್ಳುವ ಚಲನವಲನಗಳು ನಮ್ಮ ಸುತ್ತ ಮುತ್ತಲಿನಲ್ಲಿ ನೈಜವಾಗಿಯೆ ಆಗುತ್ತಿದೆ ಎಂಬ ಭಾವ ಮೂಡುತ್ತದೆ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಹಿಂದೆ ಬಳಸಲಾಗುತ್ತಿದ್ದ ಉಗಿ ಯಂತ್ರದ ಒಂದು ಮಾದರಿಯನ್ನು ಸಂಗ್ರಹಾಲಯದ ಆವರಣದೊಳಗೆ ಸ್ಥಾಪಿಸಲಾಗಿದೆ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಕಾರಿನ ಸ್ಟೆರಿಂಗ್ ಯಾವ ರೀತಿ ಇರುತ್ತದೆ ಹಾಗೂ ಹೇಗೆ ಕೆಲಸ ಮಾಡುತ್ತದೆಂದು ತಿಳಿಸುವ ಒಂದು ಮಾದರಿ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಇದು ಆರ್ಕಿಮಿಡಿಸ್ ಸ್ಕ್ರಿವ್. ಈ ಸಿದ್ಧಾಂತದ ಅನ್ವಯ ಕೆಳ ಸ್ತರದಲ್ಲಿರುವ ನೀರನ್ನು ಸುಲಭವಾಗಿ ಮೇಲೆತ್ತಬಹುದಾಗಿದೆ. ಇದರ ಪ್ರಯೋಗವನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: Amanjosan2008

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ಹಿಂದೆ ಪ್ರಚಲಿತದಲ್ಲಿದ್ದ, ಇಂದಿನ ಮಕ್ಕಳಿಗೆ ಅಪರೂಪವಾಗಿರುವ ಉಗಿ ಬಂಡಿಯ ಒಂದು ಮಾದರಿ.

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯ:

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಕಟ್ಟಡ.

ಚಿತ್ರಕೃಪೆ: Amanjosan2008

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X