Search
  • Follow NativePlanet
Share
» »ಛಾಯಾಗ್ರಾಹಕನ ಲೆನ್ಸಿನಲ್ಲಿ ಕಂಡ ಮೈಸೂರು!

ಛಾಯಾಗ್ರಾಹಕನ ಲೆನ್ಸಿನಲ್ಲಿ ಕಂಡ ಮೈಸೂರು!

ಸಾಂಸ್ಕೃತಿಕ ನಗರ ಮೈಸೂರು ನಗರದಲ್ಲಿ ಕಂಡುಬರುವ ಪ್ರವಾಸಿ ಖ್ಯಾತಿಯ ಕೆಲವು ಆಕರ್ಷಕ ಪಾರಂಪರಿಕ ವಿನ್ಯಾಸವುಳ್ಳ ಕಟ್ಟಡಗಳು

By Vijay

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರೀಯವಾಗುತ್ತಿದೆ ಛಾಯಾಗ್ರಾಹಕನ ವೃತ್ತಿ. ಆಧುನಿಕ ತಂತ್ರಜ್ಞಾನಗಳು ಬೆಳೆಯುತ್ತಿರುವಂತೆ ಹೊಸ ಹೊಸ ಮಾದರಿಯ ಕ್ಯಾಮೆರಾಗಳು ಇಂದು ಲಭ್ಯವಿದ್ದು ಚಿತ್ರಪಟಗಳನ್ನು ನಾವು ಅತ್ಯಂತ ಸ್ಪಷ್ಟವಾಗಿ ಇಂದು ಕಾಣುವಂತಾಗಿದೆ.

ಹಿಂದೆ ಕಪ್ಪು ಬಿಳುಪಿನ ಚಿತ್ರಪಟಗಳನ್ನು ಸೆರೆಹಿಡಿಯಬಹುದಾದ ಕಾಲದಲ್ಲೆ ಸಾಕಷ್ಟು ಬೇಡಿಕೆಯಿತ್ತು ಚಿತ್ರಪಟಗಳಿಗೆ. ಇವು ನೆನಪುಗಳನ್ನು ಮತ್ತೆ ಪುನರ್ ಜೀವಿಸುವಂತೆ ಮಾಡುತ್ತಿದ್ದವು ಎನ್ನುಅವ ಕಾರಣಕ್ಕಾಗಿ. ಇಂದಂತೂ ಹೇಳಲೇಬೇಕಾಗಿಲ್ಲ, ಸ್ಥಳಗಳ ಸ್ಪಷ್ಟ ಚಿತ್ರ, ವನ್ಯಜೀವಿಗಳನ್ನು ಅತಿ ಹತ್ತಿರದಿಂದ ಗಮನಿಸಬಹುದಾದಂತಹ ಚಿತ್ತ್ರಗಳನ್ನು ಸೆರೆಹಿಡಿಯಬಹುದಾಗಿದೆ.

ಹೀಗೆ ಕ್ಯಾಮೆರಾಗಳು ಇಂದು ಪ್ರವಾಸ ಚಟುವಟಿಕೆಯ ಅವಿಭಾಜ್ಯ ಅಂಗವಾಗಿ ಪರಿವರ್ತಿತವಾಗಿವೆ. ಯಾರೆ ಆಗಲಿ ಪ್ರವಾಸ ಹೊರಟಾಗ ಕ್ಯಾಮೆರಾಗಳಿಲ್ಲದೆ ಹೊರಟಿರುವುದನ್ನು ಊಹಿಸಲೂ ಅಸಾಧ್ಯ. ಇನ್ನೂ ಭಾರತದಂತಹ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ದೇಶದಲ್ಲಿ ಚಿತ್ರಗಳನ್ನು ಸೆರೆಹಿಡಿಯುವುದೆಂದರೆ ಬಹುತೇಕ ವಿದೇಶಿ ಛಾಯಾಗ್ರಾಹಕರಿಗೆ ಬಲು ಇಷ್ಟ.

ಅಬ್ಬಾ...ಎಷ್ಟು ಸುಂದರ ಮೈಸೂರು ಮೃಗಾಲಯ!

ಕಾರಣ, ಈ ದೇಶದಲ್ಲಿರುವ ವೈವಿಧ್ಯತೆ, ಸಾಂಸ್ಕೃತಿಕ ಶ್ರೀಮಂತಿಕೆ, ವಿಶಿಷ್ಟ ಜೀವನಶೈಲಿ, ಜಗತ್ತೆ ನಿಬ್ಬೆರಗಾಗಿ ನೋಡುವಂತಹ ಶಿಲ್ಪಕಲೆಯ ರಚನೆಗಳು, ಮನಪುಳಕಿತಗೊಳ್ಳುವಂತೆ ಮಾಡುವ ಅಪಾರ ಸೃಷ್ಟಿ ಸೌಂದರ್ಯ ಮುಂತಾದವುಗಳು ಉತ್ತಮ ಪಟಗಳನ್ನು ಸೆರೆಹಿಡಿಯುವುದಕ್ಕೆ ವಿಫುಲವಾದ ಅವಕಾಶಗಳನ್ನು ಒದಗಿಸುತ್ತದೆ.

ಪ್ರಸ್ತುತ ಲೇಖನದಲ್ಲಿ ವಿದೇಶಿ ಛಾಯಾಗ್ರಾಹಕರಾದ ಕ್ರಿಸ್ಟೋಫರ್ ಲಿನ್ನ್ ಎಂಬುವವರು ತಮ್ಮ ಭಾರತದ ಪ್ರವಾಸದ ಸಮಯದಲ್ಲಿ ಮೈಸೂರಿನ ಕೆಲವು ಸುಂದರ ನೆನಪುಗಳನ್ನು ತಮ್ಮ ಕ್ಯಾಮೆರಾದಲ್ಲಿ ಯಾವ ರೀತಿ ಸೆರೆ ಹಿಡಿದಿರುವರೆಂದು ನೋಡಿ ಆನಂದಿಸಿ. ಇವು ಪ್ರವಾಸಿ ವಿಶೇಷತೆಯ ಸ್ಥಳಗಳಾಗಿದ್ದು, ನಿಮ್ಮಲ್ಲೂ ಪ್ರತಿಭೆಯಿದ್ದರೆ, ಆಸೆಯಿದ್ದರೆ ನೀವೂ ಸಹ ಮೈಸೂರಿಗೆ ತೆರಳಿದಾಗ ಒಂದು ಕೈ ನೋಡೇ ಬಿಡಿ.

ಗಡಿಯಾರ ಗೋಪುರ

ಗಡಿಯಾರ ಗೋಪುರ

ಮೈಸೂರು ನಗರದ ಒಂದು ಐತಿಹಾಸಿಕ ಗಡಿಯಾರ ಗೋಪುರವಿದು. ಮೈಸೂರು ನಗರ ಬಸ್ಸು ನಿಲ್ದಾಣದ ಬಳಿ ದೇವರಾಜ ಮಾರುಕಟ್ಟೆಯ ಎದುರಿಗಿದೆ. ಇದನ್ನು ಚಿಕ್ಕ ಗಡಿಯಾರ ಗೋಪುರ ಎಂತಲೂ ಸಹ ಕರೆಯುತ್ತಾರೆ.

ಚಿತ್ರಕೃಪೆ: Christopher J. Fynn

ದಸರಾ ಸಂದರ್ಭ

ದಸರಾ ಸಂದರ್ಭ

ಮೈಸೂರು ದಸರಾ ವಿಶ್ವದಲ್ಲೆ ಸಾಕಷ್ಟು ಖ್ಯಾತಿಯನ್ನು ಗಳಿಸಿರುವ ಕರ್ನಾಟಕದ ಅದ್ದೂರಿ ನಾಡ ಹಬ್ಬವೆಂದೆ ಜನಜನಿತವಾಗಿದೆ. ಈ ಸಂದರ್ಭದಲ್ಲಿ ಮೈಸೂರು ನಗರವೆ ಸುಂದರ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿರುತ್ತದೆ. ಅದರಲ್ಲೂ ವಿಶೇಷವಾಗಿ ಮೈಸೂರು ಅರಮನೆಯ ದೀಪಾಲಂಕಾರವು ನಗರದ ಕೇಂದ್ರ ಬಿಂದುವಾಗಿರುತ್ತದೆ.

ಚಿತ್ರಕೃಪೆ: Christopher J. Fynn

ಆರ್ಟ್ ಗ್ಯಾಲರಿ

ಆರ್ಟ್ ಗ್ಯಾಲರಿ

ಇಂದು ಆರ್ಟ್ ಗ್ಯಾಲರಿ ಅಥವಾ ಕಲಾ ಸಂಗ್ರಹಾಲಯವಾಗಿರುವ ಜಗನ್ಮೋಹನ ಅರಮನೆ ಮೈಸೂರಿನ ಹಲವು ಆಕರ್ಷಣೆಗಳಲ್ಲೊಂದಾಗಿದೆ. ಇಂದಿನ ಅಂಬಾ ವಿಲಾಸ ಅರಮನೆಯ ಪುನರ್ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಮೈಸೂರು ರಾಜವಂಶಸ್ಥರಿಗೆ ಅಧಿಕೃತ ನಿವಾಸವಾಗಿತ್ತು ಜಗನ್ಮೋಹನ ಅರಮನೆ. ಇಂದು ಇದು ಸಭಾಂಗಣ ಹೊಂದಿದ್ದು ರವಿವರ್ಮನ ನೂರು ವರ್ಷಗಳ ವರ್ಣಚಿತ್ರಗಳ ಪ್ರದರ್ಶನವೂ ಇಲ್ಲಿದೆ.

ಚಿತ್ರಕೃಪೆ: Christopher J. Fynn

ಸಾಂಪ್ರದಾಯಿಕ

ಸಾಂಪ್ರದಾಯಿಕ

ಮೈಸೂರಿನ ಹಲವು ಸಾಂಪ್ರದಾಯಿಕ ಅಂಗಡಿ ಮುಗ್ಗಟ್ಟುಗಳು, ಆಧುನಿಕ ಅಂಗಡಿಗಳು, ಉಪಹಾರದರ್ಶಿನಿಗಳನ್ನು ಒಳಗೊಂಡ ಆಕರ್ಷಕ ಮಾರುಕಟ್ಟೆ ಪ್ರದೇಶ ಹೊಂದಿರುವ ಅಗ್ರಹಾರ ವೃತ್ತ.

ಚಿತ್ರಕೃಪೆ: Christopher J. Fynn

ಅದ್ಭುತ ಪ್ರದೇಶ

ಅದ್ಭುತ ಪ್ರದೇಶ

ಮೈಸೂರಿನ ದೇವರಾಜ ಮಾರುಕಟ್ಟೆ ಒಂದು ಅದ್ಭುತ ಪ್ರದೇಶವೆಂದೆ ಹೇಳಬಹುದು. ಇಲ್ಲಿ ಬಲು ವೈವಿಧ್ಯಮಯ ವಸ್ತುಗಳು ಖರೀದಿ ಮಾಡಲು ದೊರೆಯುತ್ತವೆ. ಆಧುನಿಕದಿಂದ ಹಿಡಿದು ಸಾಂಪ್ರದಾಯಿಕ ಶೈಲಿಯ ಎಲ್ಲ ರೀತಿಯ ವಸ್ತುಗಳೂ ಸಹ ಇಲ್ಲಿ ದೊರೆಯುತ್ತವೆ. ಒಮ್ಮೆ ಭೇಟಿ ನೀಡಲೇಬೇಕಾದ ಮೈಸೂರಿನ ಮಾರುಕಟ್ಟೆ ಇದಾಗಿದೆ. ವಿಶೇಷವಾದ ಸುಗಂಧ ದ್ರವ್ಯಗಳು ಇಲ್ಲಿ ದೊರೆಯುತ್ತವೆ.

ಚಿತ್ರಕೃಪೆ: Christopher J. Fynn

ತ್ಯಾಗರಾಜ ರಸ್ತೆ

ತ್ಯಾಗರಾಜ ರಸ್ತೆ

ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿರುವ ಚಿಕ್ಕಾಂಜನೇಯ ದೇವಸ್ಥಾನವು ಚಿಕ್ಕದಾಗಿದ್ದರೂ ಬಲು ಜನಪ್ರೀಯವಾದ ದೇವಾಲಯವಾಗಿ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Christopher J. Fynn

ದೊಡ್ಡ ಗಡಿಯಾರ

ದೊಡ್ಡ ಗಡಿಯಾರ

ನಾಲ್ಕನೇಯ ಕೃಷ್ಣರಾಜ ವಡೇಯರ್ ಅವರ ಬೆಳ್ಳಿ ಹಬ್ಬದ ಪ್ರಯುಕ್ತವಾಗಿ 1927 ರಲ್ಲಿ ಈ ದೊಡ್ಡ ಗಡಿಯಾರ ಗೋಪುರದ ನಿರ್ಮಾಣ ಮಾಡಲಾಗಿದ್ದು ಮೈಸೂರಿನ ಗುರುತರ ಕೇಂದ್ರವಾಗಿ ಹಾಗೂ ಐತಿಹಾಸಿಕ ಆಕರ್ಷಣೆಯಾಗಿ ಗಮನಸೆಳೆಯುತ್ತದೆ.

ಚಿತ್ರಕೃಪೆ: Christopher J. Fynn

ಮೈಸೂರು ವಿಶ್ವವಿದ್ಯಾಲಯ

ಮೈಸೂರು ವಿಶ್ವವಿದ್ಯಾಲಯ

ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಸಂಕೀರ್ಣದಲ್ಲಿರುವ ಕ್ರಾವ್ಫೊರ್ಡ್ ಹಾಲ್. ಇದು ಸುಂದರ ಕುಕ್ಕರಹಳ್ಳಿ ಕೆರೆಯ ಪೂರ್ವಕ್ಕೆ ಸ್ಥಿತವಿದೆ.

ಚಿತ್ರಕೃಪೆ: Christopher J. Fynn

ಸಾಂಪ್ರದಾಯಿಕ ಶೈಲಿ

ಸಾಂಪ್ರದಾಯಿಕ ಶೈಲಿ

ಮೈಸೂರು ನಗರದಲ್ಲಿ ಹಾಗೆ ಸುತ್ತಾಡುವಾಗ ಅಲ್ಲಿರುವ ಸಾಕಷ್ಟು ರಚನೆಗಳು, ಕಟ್ಟಡಗಳು ಸಾಮ್ಪ್ರದಾಯಿಕ ರೀತಿಯಲ್ಲಿರುವುದರಿಂದ ಪ್ರವಾಸಿಗರ ಸಾಕಷ್ಟು ಗಮನಸೆಳೆಯುತ್ತವೆ. ಸಯ್ಯಾಜಿರಾವ್ ರಸ್ತೆಯಲ್ಲಿರುವ ಬನುಮಯ್ಯ ಕಾಲೇಜಿನ ಕಟ್ಟಡ.

ಚಿತ್ರಕೃಪೆ: Christopher J. Fynn

ಆಕರ್ಷಕ

ಆಕರ್ಷಕ

ಮೈಸೂರಿನ ಮತ್ತೊಂದು ಆಕರ್ಷಕ ಸಾಂಪ್ರದಾಯ ರೀತಿಯ ಕಟ್ಟಡ. ಈ ಕಟ್ಟಡವು ಜಿಲ್ಲಾಧಿಕಾರಿಯವರ ಕಚೇರಿ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಕಚೇರಿಗಳನ್ನು ಒಳಗೊಂಡಿದೆ.

ಚಿತ್ರಕೃಪೆ: Christopher J. Fynn

ಕೋಟೆ ಶ್ರೀ ಶಾಂತಿನಾಥ ಬಸದಿ

ಕೋಟೆ ಶ್ರೀ ಶಾಂತಿನಾಥ ಬಸದಿ

ಮೈಸೂರಿನ ಹೊಸ ಸಯ್ಯಾಜಿರಾವ್ ರಸ್ತೆಯಲ್ಲಿರುವ ದಿಗಂಬರ ಜೈನ ಮಂದಿರ.

ಚಿತ್ರಕೃಪೆ: Christopher J. Fynn

ಶಕ್ತಿದೇವಿ

ಶಕ್ತಿದೇವಿ

ಮೈಸೂರಿನ ಆದಿ ಪಂಪ ರಸ್ತೆಯಲ್ಲಿ ಸ್ಥಿತವಿರುವ ಶಕ್ತಿದೇವಿ ದುರ್ಗೆಗೆ ಮುಡಿಪಾದ ಸುಂದರ ದೇವಾಲಯ.

ಚಿತ್ರಕೃಪೆ: Christopher J. Fynn

ಸುಂದರ ಚಿತ್ರ

ಸುಂದರ ಚಿತ್ರ

ಛಾಯಾಗ್ರಾಹಕನ ಕ್ಯಾಮೆರಾದಲ್ಲಿ ಸುಂದರವಾಗಿ ಸೆರೆ ಹಿಡಿಯಲ್ಪಟ್ಟ ಮೈಸೂರಿಬ ಇರ್ವಿನ್ ರಸ್ತೆಯಲ್ಲಿರುವ ಮಸೀದಿಯೊಂದರ ಕಟ್ಟಡ. ಸಂಜೆಯ ಸಮಯದಲ್ಲಿ...

ಚಿತ್ರಕೃಪೆ: Christopher J. Fynn

ಸಂತೆಪೇಟೆ

ಸಂತೆಪೇಟೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಕಷ್ಟು ಪುರಾತನ ಬಡಾವಣೆಗಳಿದ್ದು ಅಲ್ಲಲ್ಲಿ ಚಿಕ್ಕ ಪುಟ್ಟ ಆಕರ್ಷಕ ದೇವಾಲಯಗಳನ್ನು ಕಾಣಬಹುದಾಗಿದೆ. ಇದು ಬಹು ಮಟ್ಟಿಗೆ ಜನರನ್ನು ಸೆಳೆಯುವ ದೇವಸ್ಥಾನಗಳಲ್ಲವಾದರೂ ಸ್ಥಳೀಯರಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿರುವ ದೇವಾಲಯಗಳು. ಸಂತೆಪೇಟೆಯಲ್ಲಿರುವ ಶಿವನಿಗೆ ಮುಡಿಪಾದ ನಂಜುಂಡೇಶ್ವರ ದೇವಾಲಯ.

ಚಿತ್ರಕೃಪೆ: Christopher J. Fynn

ಆಧುನಿಕ ಟಚ್

ಆಧುನಿಕ ಟಚ್

ಸಾಂಪ್ರದಾಯಿಕ ನಗರದಲ್ಲಿ ಆಧುನಿಕ ಟಚ್ ನೀಡಿರುವ ಗರುಡಾ ಶಾಪಿಂಗ್ ಮಾಲ್. ವಾರಾಂತ್ಯದ ರಜೆಗಳಲ್ಲಿ ಈ ಮಾಲ್ ಸಾಕಷ್ಟು ಜನರಿಂದ ತುಂಬಿರುತ್ತದೆ.

ಚಿತ್ರಕೃಪೆ: Christopher J. Fynn

ಗಾಯತ್ರಿ

ಗಾಯತ್ರಿ

1948 ರಲ್ಲಿ ನಿರ್ಮಾಣಗೊಂಡು ಇಂದಿಗೂ ಕಾರ್ಯ ನಿರ್ವಹಿಸುತ್ತಿರುವ ಮೈಸೂರಿನ ಹಳೆಯ ಗಾಯತ್ರಿ ಸಿನೆಮಾ ಟಾಕೀಸ್.

ಚಿತ್ರಕೃಪೆ: Christopher J. Fynn

ಮೈಸೂರು ವಿಶ್ವವಿದ್ಯಾಲಯ

ಮೈಸೂರು ವಿಶ್ವವಿದ್ಯಾಲಯ

ಅದ್ಭುತ ಇತಿಹಾಸ ಹೊಂದಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಒಳಪಟ್ಟಿರುವ ಪ್ರತಿಷ್ಠಿತ ಮಹಾರಾಜ ಕಾಲೇಜು ಕಟ್ಟಡ.

ಚಿತ್ರಕೃಪೆ: Christopher J. Fynn

ಚಾಮರಾಜಪುರ

ಚಾಮರಾಜಪುರ

ಕರ್ನಾಟಕ ರಾಜ್ಯದ ಎರಡನೇಯ ದೊಡ್ಡ ನಗರವಾದ ಮೈಸೂರು ನಗರದ ನಗರ ಪಾಲಿಕೆಯ ಕಚೇರಿ. ಚಾಮರಾಜಪುರದ ಸಯ್ಯಾಜಿರಾವ್ ರಸ್ತೆ, ಅಗ್ರಹಾರದಲ್ಲಿ ಸ್ಥಿತವಿದೆ.

ಚಿತ್ರಕೃಪೆ: Christopher J. Fynn

ನೆಹರೂ ವೃತ್ತ

ನೆಹರೂ ವೃತ್ತ

ಪ್ರಧಾನ ಅಥವಾ ಸಾರವಜನಿಕ ಅಂಚೆ ಕಚೇರಿಯ ಕಟ್ಟಡ. ಇದು ಮೈಸೂರು ನಗರದ ನೆಹರೂ ವೃತ್ತದ ಬಳಿ ಸ್ಥಿತವಿದೆ.

ಚಿತ್ರಕೃಪೆ: Christopher J. Fynn

ರೈಲು ನಿಲ್ದಾಣ

ರೈಲು ನಿಲ್ದಾಣ

ಪ್ರವಾಸಿ ದೃಷ್ಟಿಯಿಂದ ಖ್ಯಾತಿಗಳಿಸಿರುವ ಮೈಸೂರು ನಗರಕ್ಕೆ ರೈಲುಗಳ ಮೂಲಕ ಆಗಮಿಸುವ ಪ್ರವಾಸಿಗರ ಸಂಖ್ಯೆ ಅಪಾರ. ಮೈಸೂರು ಜಂಕ್ಷನ್ ರೈಲು ನಿಲ್ದಾಣದ ಕಟ್ಟಡ.

ಚಿತ್ರಕೃಪೆ: Christopher J. Fynn

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X