India
Search
  • Follow NativePlanet
Share
» »ಕರ್ನಾಟಕದ ಪ್ರಸಿದ್ದ ಪಕ್ಷಿ ವೀಕ್ಷಣಾ ತಾಣಗಳು

ಕರ್ನಾಟಕದ ಪ್ರಸಿದ್ದ ಪಕ್ಷಿ ವೀಕ್ಷಣಾ ತಾಣಗಳು

ಪಶ್ಚಿಮ ಘಟ್ಟಗಳ ವಿಸ್ತಾರವಾದ ನೈಸರ್ಗಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕವು ಶ್ರೀಮಂತ ಸಸ್ಯವರ್ಗ, ವನ್ಯಜೀವಿಗಲು ಮತ್ತು ಪ್ರಕೃತಿಪ್ರೇಮಿಗಳು ಮತ್ತು ಛಾಯಾಗ್ರಾಹಕರಿಗೆ ನಿಸ್ಸಂದೇಹವಾಗಿ ಅಚ್ಚುಮೆಚ್ಚಿನ ಸ್ಥಳವಾಗಿದೆ. ಅಭಯಾರಣ್ಯದಿಂದ ಮಳೆಕಾಡುಗಳವರೆಗೆ, ಸುಂದರವಾದ ರಾಷ್ಟ್ರೀಯ ಉದ್ಯಾನಗಳಿಂದ ಅಭಯಾರಣ್ಯಗಳವರೆಗೆ ಕರ್ನಾಟಕದ ಭೂದೃಶ್ಯದ ಅನ್ವೇಷಣೆ ಮಾಡಲು ಬಯಸುವವರಿಗೆ ಬೇಕಾದ ಎಲ್ಲವನ್ನೂ ನೀಡುತ್ತದೆ.

ಅರಣ್ಯವನ್ನು ಆನಂದಿಸುವುದು ಒಂದು ವಿಷಯವಾದರೆ ಪಕ್ಷಿವೀಕ್ಷಣೆ ಮಾಡುವುದು ಇನ್ನೊಂದು ಹೆಚ್ಚಿನ ತಾಳ್ಮೆಯ ಹವ್ಯಾಸವಾಗಿದೆ. ನೀವು ನಿಜವಾದ ಪಕ್ಷಿವೀಕ್ಷಕರಾಗಿದ್ದರೆ, ನೀವು ತಪ್ಪದೇ ನೋಡಬೇಕಾದ ಕರ್ನಾಟಕದ ಕೆಲವು ಪ್ರಮುಖ ಪಕ್ಷಿವೀಕ್ಷಣಾ ತಾಣಗಳ ಪಟ್ಟಿ ಇಲ್ಲಿದೆ.

ranghanathittu bird sanctuary

ಶ್ರೀರಂಗಪಟ್ಟಣ

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಶ್ರೀರಂಗಪಟ್ಟಣವು ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕ ಮಹತ್ವವುಳ್ಳ ಪಟ್ಟಣವಾಗಿದೆ. ಇಲ್ಲಿಯ ಅತ್ಯಂತ ಪ್ರಸಿದ್ದ ಆಕರ್ಷಣೆಗಳಾದ ರಂಗನಾಥಸ್ವಾಮಿ ದೇವಾಲಯ ಮತ್ತು ಶ್ರಿರಂಗಪಟ್ಟಣ ಕೋಟೆಗಳ ಹೊರತಾಗಿಯೂ ಇಲ್ಲಿಯ ರಂಗನತಿಟ್ಟು ಪಕ್ಷಿಧಾಮದಿಂದಾಗಿ ಅತ್ಯಂತ ಹೆಸರುವಾಸಿಯಾದ ಪಕ್ಷಿವೀಕ್ಷಣಾ ತಾಣವೆನಿಸಿದೆ.

ಈ ಪಕ್ಷಿಧಾಮವು ಶ್ರೀರಂಗಪಟ್ಟಣದಿಂದ 5 ಕಿ.ಮೀ ಅಂತರದಲ್ಲಿದ್ದು, ಈ ಪಕ್ಷಿಗಳಲ್ಲಿ ಬಣ್ಣದ ಕೊಕ್ಕರೆ, ಸ್ಪಾಟ್-ಬಿಲ್ಡ್ ಪೆಲಿಕಾನ್, ಬೆಳ್ಳಕ್ಕಿ, ಕೊಕ್ಕರೆ -ಕೊಕ್ಕಿನ ಮಿಂಚುಳ್ಳಿ, ಸಾಮಾನ್ಯ ಸ್ಪೂನ್‌ಬಿಲ್ ಸೇರಿದಂತೆ ಹಲವಾರು ಇತರ ಸ್ಥಳೀಯ ಮತ್ತು ವಲಸೆ ಹಕ್ಕಿಗಳಿಗೆ ನೆಲೆಯಾಗಿದೆ. ರಂಗನತಿಟ್ಟು ಪಕ್ಷಿಧಾಮಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ನವೆಂಬರ್ ನಿಂದ ಜೂನ್.

Dandeli national park

ದಾಂಡೇಲಿ

ಪಶ್ಚಿಮಘಟ್ಟದಲ್ಲಿ ನೆಲೆಸಿರುವ ದಾಂಡೇಲಿಯು ಗೋವಾ ಮತ್ತು ಮಹಾರಾಷ್ಟ್ರ ಗಡಿಗಳಿಗೆ ಹತ್ತಿರದಲ್ಲಿದೆ. ದಾಂಡೇಲಿಯು ಸಾಹಸಪ್ರಿಯರುಗಳಲ್ಲಿ ಅತ್ಯಂತ ಪ್ರಸಿದ್ದಿಯನ್ನು ಪಡೆದಿದೆ. ಕಾಳೀ ನದಿಯಲ್ಲಿಯ ವೈಟ್ ವಾಟರ್ ರಾಫ್ಟಿಂಗ್, ಕವ್ಲಾದ ಗುಹೆಗಳ ಅನ್ವೇಷಣೆ , ಮತ್ತು ಸಿಂತೇರಿಯಲ್ಲಿಯ ಮತ್ತು ಸಿಂಥೇರಿಯಲ್ಲಿನ ಬೃಹತ್ ಸುಣ್ಣದ ಕಲ್ಲಿನ ರಚನೆಗಳವರೆಗೆ ಪಾದಯಾತ್ರೆ ಮಾಡುವುದು ದಾಂಡೇಲಿಯಲ್ಲಿ ನೀವು ಹೊಂದಬಹುದಾದ ಕೆಲವು ರೋಮಾಂಚಕ ಅನುಭವಗಳಾಗಿವೆ.

ಬೃಹತ್ ಅರಣ್ಯಪ್ರದೇಶಗಳಿಂದ ಆವೃತವಾದ ದಾಂಡೇಲಿಯು ಹಲವಾರು ವನ್ಯಜೀವಿಗಳಿಗೆ ನೆಲೆಯಾಗಿದೆ. ದಾಂಡೇಲಿಯ ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಎರಡನೇ ಅತಿದೊಡ್ಡ ಅಭಯಾರಣ್ಯವಾಗಿದೆ ಮತ್ತು ಇದು ಹುಲಿ, ಚಿರತೆ, ಪ್ಯಾಂಥರ್, ಜಿಂಕೆ, ಕರಡಿ, ಆನೆಗಳು ಇತ್ಯಾದಿ ಪ್ರಾಣಿಗಳಿಗೆ ನೈಸರ್ಗಿಕವಾಗಿ ಆಶ್ರಯವನ್ನು ನೀಡುತ್ತದೆ. ಈ ಅಭಯಾರಣ್ಯವು ಸುಮಾರು 200 ಜಾತಿಯ ಪಕ್ಷಿಗಳನ್ನು ಹೊಂದಿದ್ದು ನಿಜವಾಗಿಯೂ ಪಕ್ಷಿ ವಿಕ್ಷಣೆ ಮಾಡುವುದನ್ನು ಇಷ್ಟಪಡುವವರಿಗೆ ಸ್ವರ್ಗವಾಗಿದೆ. ದೊಡ್ಡ ಹಾರ್ನ್ಬಿಲ್ ಮತ್ತು ಮಲಬಾರ್ ಪೈಡ್ ಹಾರ್ನ್ಬಿಲ್ ತಳಿಯ ಪಕ್ಷಿಗಳು ಅತ್ಯಂತ ಪ್ರಮುಖವಾದವುಗಳಾಗಿವೆ.

mundagod buddhist monastery

ಮುಂಡಗೋಡ್

ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿರುವ ಮುಂಡಗೋಡ್ ಒಂದು ಸಣ್ಣ ಪಟ್ಟಣವಾಗಿದ್ದು ಇದು ಶಿರ್ಸಿಯಿಂದ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ ಸಿಗುತ್ತದೆ.

ಸ್ವಲ್ಪ ಶಾಂತವಾಗಿ ಸಮಯವನ್ನು ಕಳೆಯಲು ಬಯಸುವವರಿಗೆ ಇದು ಪರಿಪೂರ್ಣ ಆಫ್‌ಬೀಟ್ ತಾಣವಾಗಿದೆ. ಮುಂಡಗೋಡ್ ಬಚನಕಿ ಅಣೆಕಟ್ಟು ಮತ್ತು ಪ್ರಶಾಂತ ಬೌದ್ಧ ಮಠಕ್ಕೆ ಹೆಸರುವಾಸಿಯಾಗಿದೆ. ಮುಂಡಗೋಡದಿಂದ ಸುಮಾರು 15 ಕಿಮೀ ದೂರದಲ್ಲಿರುವ ಅತ್ತಿವೇರಿ ಪಕ್ಷಿಧಾಮವು ಅತ್ಯಂತ ಪ್ರಸಿದ್ಧವಾದ ಆಕರ್ಷಣೆಯಾಗಿದ್ದು, ಈ ಅಭಯಾರಣ್ಯದಲ್ಲಿ ನಾವು ಗುರುತಿಸಬಹುದಾದ ಪಕ್ಷಿಗಳ ಪ್ರಭೇದಗಳೆಂದರೆ ಯುರೇಷಿಯನ್ ಸ್ಪೂನ್‌ಬಿಲ್, ಬಿಳಿ-ಕಂಠದ ಮಿಂಚುಳ್ಳಿಗಳು, ಭಾರತೀಯ ಬೂದು ಹಾರ್ನ್‌ಬಿಲ್, ಇತ್ಯಾದಿಗಳು.

bankapur bir sanctuary

ಬಂಕಾಪುರ

ಐತಿಹಾಸಿಕ ಪಟ್ಟಣವಾದ ಬಂಕಾಪುರವು ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿದೆ. ಹಾವೇರಿಯ ಅತ್ಯಾಕರ್ಷಕ ದೇವಾಲಯಗಳು ಮತ್ತು ಪುರಾತತ್ತ್ವ ಶಾಸ್ತ್ರದ ಸ್ಮಾರಕಗಳಿಗೆ ಭೇಟಿ ನೀಡುವುದರ ಜೊತೆಗೆ ಪಕೃತಿ ಪ್ರೇಮಿಗಳು ಕರ್ನಾಟಕದ ಎರಡು ನವಿಲು ಅಭಯಾರಣ್ಯಗಳಲ್ಲಿ ಒಂದಾದ ಬಂಕಾಪುರ ನವಿಲು ಅಭಯಾರಣ್ಯಕ್ಕೆ ಭೇಟಿ ನೀಡಲೇಬೇಕು. ನವಿಲು ಅಭಯಾರಣ್ಯವು ಬಂಕಾಪುರ ಕೋಟೆಯೊಳಗೆ ನೆಲೆಗೊಂಡಿದೆ ಮತ್ತು ಸಾವಿರಕ್ಕೂ ಹೆಚ್ಚು ನವಿಲುಗಳು ಮತ್ತು ಪೀಹೆನ್‌ಗಳಿಗೆ ನೆಲೆಯಾಗಿದೆ.

ನವಿಲುಗಳ ಹೊರತಾಗಿ, ಅಭಯಾರಣ್ಯವು ಭಾರತೀಯ ರಾಬಿನ್, ಮ್ಯಾಗ್ಪೈ, ಗ್ರೇ ಹಾರ್ನ್‌ಬಿಲ್, ನೀಲಿ ಬಾಲದ ಬೀ-ಈಟರ್, ಮಿಂಚುಳ್ಳಿ, ಮರಕುಟಿಗ, ನೈಟ್‌ಜಾರ್ ಇತ್ಯಾದಿಗಳನ್ನು ಒಳಗೊಂಡಂತೆ ಹಲವಾರು ಇತರ ಜಾತಿಯ ಪಕ್ಷಿಗಳನ್ನು ಹೊಂದಿದೆ.

Ramnagar

ರಾಮನಗರ

ಬೆಂಗಳೂರಿನಿಂದ ಹೆಚ್ಚೇನು ದೂರದಲ್ಲಿರದ ರಾಮನಗರವು ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಲ್ಪಡುವ ಪ್ರಮುಖ ತಾಣಗಳಲ್ಲೊಂದಾಗಿದೆ. ರೇಷ್ಮೇ ಉದ್ಯಮವು ಪ್ರಮುಖವಾಗಿರುವ ಈ ನಗರವನ್ನು ರೇಷ್ಮೇ ನಗರವೆಂದೂ ಕರೆಯಲಾಗುತ್ತದೆ. ರಾಮನಗರವು ತನ್ನ ಬೃಹತ್ ಗ್ರಾನೈಟ್ ಸ್ಥಳಗಳಿಗೆ ಹೆಸರುವಾಸಿಯಾಗಿದೆ ಮತ್ತು ಆದ್ದರಿಂದ, ಅಡ್ರಿನಾಲಿನ್ ಹವ್ಯಾಸಿಗಳಿಗೆ ಜನಪ್ರಿಯ ರಾಕ್ ಕ್ಲೈಂಬಿಂಗ್ ಮತ್ತು ಟ್ರೆಕ್ಕಿಂಗ್ ತಾಣವಾಗಿದೆ.

ರಾಮನಗರದ ಮತ್ತೊಂದು ಜನಪ್ರಿಯ ಆಕರ್ಷಣೆಯೆಂದರೆ ರಾಮನಗರ ರಣಹದ್ದು ಅಭಯಾರಣ್ಯ, ಇದು ದೇಶದ ಏಕೈಕ ರಣಹದ್ದು ಅಭಯಾರಣ್ಯವಾಗಿದೆ. 2012 ರಲ್ಲಿ ಅಧಿಕೃತವಾಗಿ ರಣಹದ್ದುಗಳ ಅಭಯಾರಣ್ಯವೆಂದು ಘೋಷಿಸಲಾಯಿತು, ಈ ಸ್ಥಳವು ಹಲವಾರು ದಶಕಗಳಿಂದ ಈ ರಣಹದ್ದುಗಳಿಗೆ ಇವುಗಳಲ್ಲಿ ಉದ್ದ ಕೊಕ್ಕಿನ, ಈಜಿಪ್ಟ್ ಮತ್ತು ವೈಟ್ -ಬ್ಯಾಕ್ಡ್ ರಣಹದ್ದುಗಳು ಪ್ರಮುಖವಾಗಿದ್ದು, ಅವು ದೇಶದಲ್ಲಿ ಕಂಡುಬರುವ 9 ಜಾತಿಗಳಲ್ಲಿ 3 ಮಾತ್ರ ಇಲ್ಲಿ ಕಾಣಸಿಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X