Search
  • Follow NativePlanet
Share
» »ಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದು

ಈ ಜೈಲಿನಲ್ಲಿ ಕೈದಿಗಳಿಗೆ ಅಪಾರ್ಟ್‌ಮೆಂಟ್ ಕೊಡ್ತಾರೆ, ಹೆಂಡ್ತಿ ಮಕ್ಕಳ ಜೊತೆ ವಾಸಿಸಬಹುದು

ಜೈಲು ಅಂದರೆ ಹೇಗಿರುತ್ತೆ ಗೊತ್ತಲ್ವಾ? ಬಿಳಿ ಬಟ್ಟೆ, ತಟ್ಟೆ , ಕಂಬಿಯೊಳಗಿನ ಜೀವನ. ಪೊಲೀಸರ ಪೆಟ್ಟು, ಇವೆಲ್ಲಾ ಜೈಲು ಅಂದರೆ ಸಾಮಾನ್ಯವಾಗಿ ಪ್ರತಿಯೊನ್ನರ ಮನಸ್ಸಿನಲ್ಲಿ ಬರೋ ಕಲ್ಪನೆ. ಆದ್ರೆ ನಿಮ್ಮ ಈ ಕಲ್ಪನೆಯನ್ನು ಸುಳ್ಳು ಮಾಡ ಹೊರಟಿದೆ ಈ ಓಪನ್ ಜೈಲು. ಈ ಜೈಲು ಪ್ರತಿಯೊಬ್ಬ ಖೈದಿಗೂ ಇಷ್ಟವಾಗೋದರಲ್ಲಿ ಸಂಶಯವೇ ಇಲ್ಲ.

ಎಲ್ಲಿದೆ ಈ ಓಪನ್ ಜೈಲು

ಎಲ್ಲಿದೆ ಈ ಓಪನ್ ಜೈಲು

ಮಧ್ಯಪ್ರದೇಶದ ಇಂದೋರ್‌ನಲ್ಲಿ ಒಂದು ಓಪನ್ ಜೈಲು ಇದೆ. ಅದರ ಹೆಸರು ಅಹಲ್ಯಾ ಬಾಯಿ ಓಪನ್ ಜೈಲು. ಇಲ್ಲಿ ಕೈದಿಗಳಿಗೆ ತಾವು ಜೈಲಿನಲ್ಲಿದ್ದೇವೆ ಎನ್ನುವ ಭಾವನೆಯೇ ಬರೋದಿಲ್ಲವಂತೆ. ಸ್ವಚ್ಛಂದವಾಗಿರುತ್ತಾರೆ. ಆದರೆ ಜೈಲಿನ ಕೆಲವು ನಿಯಮಗಳನ್ನು ಪಾಲಿಸಬೇಕಷ್ಟೇ.

ಲೋಹವನ್ನು ಚಿನ್ನವನ್ನಾಗಿ ಬದಲಾಯಿಸುವ ಕಲ್ಲು ಈ ಕೋಟೆಯಲ್ಲಿದೆಯಂತೆಲೋಹವನ್ನು ಚಿನ್ನವನ್ನಾಗಿ ಬದಲಾಯಿಸುವ ಕಲ್ಲು ಈ ಕೋಟೆಯಲ್ಲಿದೆಯಂತೆ

ಏನಿದರ ವಿಶೇಷತೆ

ಏನಿದರ ವಿಶೇಷತೆ

ಕೈದಿಗಳು ಕಂಬಿಯೊಳಗೆ ಬಂದಿಯಾಗಿರಬೇಕಾಗಿಲ್ಲ. ಬೇರೆಯ ಅಪಾರ್ಟ್‌ಮೆಂಟ್ ವ್ಯವಸ್ಥೆ ಇದೆ. ಪ್ರತಿಯೊಂದು ಅಪಾರ್ಟ್‌ಮೆಂಟ್‌ನಲ್ಲಿ ಎರಡು ಕೋಣೆಗಳಿವೆ. ಇಲ್ಲಿ ಅವರು ತಮ್ಮ ಹೆಂಡತಿ ಮಕ್ಕಳೊಂದಿಗೆ ಇರಬಹುದು. ಅಷ್ಟೇ ಅಲ್ಲದೆ ಹೊರಗೆ ಸುತ್ತಾಡಲೂ ಬಹುದು. ಕೆಲಸಕ್ಕೂ ಹೋಗಬಹುದು.

10 ಕುಟುಂಬಗಳಿವೆ

10 ಕುಟುಂಬಗಳಿವೆ

ಅಹಲ್ಯಾ ಬಾಯಿ ಓಪನ್ ಜೈಲಿನಲ್ಲಿ ಪ್ರಸ್ತುತ ಈ ಜೈಲಿನಲ್ಲಿ ಹತ್ತು ಜನ ಕೈದಿಗಳು ತಮ್ಮ ಫ್ಯಾಮಿಲಿ ಜೊತೆ ವಾಸಿಸುತ್ತಿದ್ದಾರಂತೆ. ಅವರು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಹೊರಗೆ ಹೋಗಿ ಕೆಲಸ ಮಾಡಬಹುದು.

ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!

ಓಪನ್ ಜೈಲು

ಓಪನ್ ಜೈಲು

ಭಾರದಲ್ಲಿ ಸಾಕಷ್ಟು ಓಪನ್ ಜೈಲುಗಳಿವೆ. ಆದರೆ ಇಂತಹ ಫೇಸಲಿಟಿ ಎಲ್ಲೂ ಇರಲಿಕ್ಕಿಲ್ಲ ಎನ್ನಬಹುದು. ಇಲ್ಲಿ ಕೈದಿಗಳಿಗೆ ಹೊರಗೆ ಹೋಗಲು ಅವಕಾಶವಿದೆ. ಜೊತೆಗೆ ಫ್ಯಾಮಿಲಿ ಜೊತೆ ಇರಲೂ ಅವಕಾಶವಿದೆ.

 ಕುಟುಂಬದ ಜೊತೆ ನೆಲೆಸಿರುವ ಕೈದಿ

ಕುಟುಂಬದ ಜೊತೆ ನೆಲೆಸಿರುವ ಕೈದಿ

ಭೂಪೇಂದ್ರ ಸಿಂಗ್ ಎನ್ನುವ ಕೈದಿ ಕಳೆದ ಹನ್ನೆರಡು ವರ್ಷಗಳಿಂದ ಜೈಲಿನಲ್ಲಿದ್ದಾನೆ. ಕೊಲೆ ಅಪರಾಧಿಯಾಗಿರುವ ಈತನನ್ನು ಅನೇಕ ಜೈಲಿಗೆ ವರ್ಗಾಯಿಸಲಾಯಿತು. ಕೊನೆಗೆ ಈಗ ಅಹಲ್ಯಾ ಬಾಯಿ ಓಪನ್ ಜೈಲಿಗೆ ವರ್ಗಾಯಿಸಲಾಗಿದೆ. ಇಲ್ಲಿಗೆ ಬಂದ ಮೇಲೆ ತನಗೆ ಜೈಲಿನಿಂದ ಬಿಡುಗಡೆಯಾದಂತಾಗಿದೆ. ನನ್ನ ಜೀವನವೇ ಬದಲಾಗಿದೆ ಎನ್ನುತ್ತಾನೆ.

ಇಲ್ಲಿ ವಿವಾಹಿತ ಮಹಿಳೆಯರು ಐದು ದಿನಗಳ ಕಾಲ ಬೆತ್ತಲಾಗಿರಬೇಕು ಯಾಕೆ?ಇಲ್ಲಿ ವಿವಾಹಿತ ಮಹಿಳೆಯರು ಐದು ದಿನಗಳ ಕಾಲ ಬೆತ್ತಲಾಗಿರಬೇಕು ಯಾಕೆ?

ಯಾರಿಗೆಲ್ಲಾ ಇದೆ ಇಲ್ಲಿ ಅವಕಾಶ

ಯಾರಿಗೆಲ್ಲಾ ಇದೆ ಇಲ್ಲಿ ಅವಕಾಶ

ಅಹಲ್ಯಾಬಾಯಿ ಓಪನ್ ಜೈಲಿನಲ್ಲಿರುವ ಅವಕಾಶ ಕೇವಲ ಕೆಲವರಿಗಷ್ಟೇ ಸಿಗುತ್ತದೆ. ಜೀವನಾಪರ್ಯಂತ ಜೈಲು ಶಿಕ್ಷೆ ದೊರೆತಿದ್ದರೆ. ಅವರ ಒಳ್ಳೆಯ ನಡವಳಿಕೆಯಿಂದಾಗಿ ಶಿಕ್ಷೆಯನ್ನು ಕಡಿಮೆ ಮಾಡಲಾಗಿದ್ದು. ಇನ್ನೇನು ೨-೩ ವರ್ಷದಲ್ಲಿ ಬಿಡುಗಡೆಯಾಗುವವರಾಗಿದ್ದರೆ ಅವರನ್ನು ಇಲ್ಲಿಗೆ ವರ್ಗಾಯಿಸಲಾಗುತ್ತದೆ.

ಭೇಟಿ ನೀಡುವವರ ಮಾಹಿತಿ ಬರೆದಿಡಲಾಗುತ್ತದೆ

ಭೇಟಿ ನೀಡುವವರ ಮಾಹಿತಿ ಬರೆದಿಡಲಾಗುತ್ತದೆ

ಅಪರಾಧಿಗಳನ್ನು ಓರ್ವ ಉತ್ತಮ ನಾಗರೀಕರನ್ನಾಗಿ ಮಾಡುವ ಉದ್ದೇಶದಿಂದ ಈ ಕಾರ್ಯಕ್ಕೆ ಕೈ ಹಾಕಲಾಗಿದೆ. ಇನ್ನು ಅವರ ಪರಿವಾರದವರ ರಕ್ಷಣೆಗಾಗಿ ಮೂರು ಗಾರ್ಡ್‌ಗಳನ್ನು ನೇಮಿಸಲಾಗಿದೆ. ಅವರು ಇಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರ ದಾಖಲೆಗಳನ್ನು ರೆಕಾರ್ಡ್ ಮಾಡುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X