Search
  • Follow NativePlanet
Share
» »ಎಡಕಲ್ಲು ಗುಡ್ಡ ಸಿನಿಮಾದ ಶೂಟಿಂಗ್ ನಡೆದ ಎಡಕಲ್ಲು ಗುಹೆಗೆ ಹೋಗಿದ್ದೀರಾ?

ಎಡಕಲ್ಲು ಗುಡ್ಡ ಸಿನಿಮಾದ ಶೂಟಿಂಗ್ ನಡೆದ ಎಡಕಲ್ಲು ಗುಹೆಗೆ ಹೋಗಿದ್ದೀರಾ?

ಎಡಕಲ್ಲು ಎಂದ ತಕ್ಷಣ ನಿಮಗೆಲ್ಲಾ ನೆನಪಾಗೋದು ಎಡಕಲ್ಲು ಗುಡ್ಡ ಸಿನಿಮಾ. 1973ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಎಡಕಲ್ಲು ಗುಡ್ಡ ಸಿನಿಮಾ ಎಷ್ಟೊಂದು ಹಿಟ್ ಆಗಿತ್ತೆಂದರೆ ಆ ನಂತರ ಎಡಕಲ್ಲು ಗುಡ್ಡ ಸಾಕಷ್ಟು ಫೇಮಸ್ ಅಯಿತು. ಆ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಎಡಕಲ್ಲು ಗುಡ್ಡಕ್ಕೆ ಹೋಗಬೇಕು ಎಂದು ಅನಿಸಿದ್ದು ಸುಳ್ಳಲ್ಲ.

ಎಡಕಲ್ಲು ಗುಡ್ಡ ಶೂಟಿಂಗ್

ಎಡಕಲ್ಲು ಗುಡ್ಡ ಶೂಟಿಂಗ್

PC: Arav

ಆ ಸಿನಿಮಾದಲ್ಲಿ ಎಡಕಲ್ಲು ಗುಹೆಯಲ್ಲಿ ಚಂದ್ರಶೇಖರ್ ಹಾಗು ಜಯಂತಿ ನಟನೆಯಂತೂ ಎಂದಿಗೂ ಅಚ್ಚಳಿಯದೇ ಉಳಿದಿದೆ. ಎಡಕಲ್ಲು ಗುಹೆಯು ಕೇರಳದ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಂದಿಗೂ ಈ ತಾಣವನ್ನು ಎಡಕಲ್ಲು ಗುಡ್ಡ ಸಿನಿಮಾದಿಂದಲೇ ಗುರುತಿಸುತ್ತಾರೆ. ಸಿನಿಮಾದ ಸಂತೋಷ...ಉಲ್ಲಾಸ ಹಾಡು ಶೂಟಿಂಗ್ ನಡೆದಿದ್ದು ಅಲ್ಲೇ.

ಈ ಮಂದಿರದೊಳಗಿದ್ದಾಳೆ ಮುಸ್ಲಿಂ ದೇವಿ, ವಿದೇಶಕ್ಕೆ ಹೋಗ್ಬೇಕಾದ್ರೆ ಇಲ್ಲಿ ಕೈ ಮುಗಿಯಿರಿಈ ಮಂದಿರದೊಳಗಿದ್ದಾಳೆ ಮುಸ್ಲಿಂ ದೇವಿ, ವಿದೇಶಕ್ಕೆ ಹೋಗ್ಬೇಕಾದ್ರೆ ಇಲ್ಲಿ ಕೈ ಮುಗಿಯಿರಿ

ವಯನಾಡ್ ಜಿಲ್ಲೆಯಲ್ಲಿದೆ

ವಯನಾಡ್ ಜಿಲ್ಲೆಯಲ್ಲಿದೆ

PC: Asif K Karim

ಇನ್ನು ಎಡಕಲ್ಲು ಗುಹೆಯ ಬಗ್ಗೆ ಹೇಳುವುದಾದರೆ ಇದು ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದಿಂದ 25 ಕಿಮೀ ದೂರದಲ್ಲಿರುವ ಎಡಕಲ್‌ನಲ್ಲಿ ಎರಡು ನೈಸರ್ಗಿಕ ಗುಹೆಗಳಿವೆ. ಇದು ಸಮುದ್ರ ಮಟ್ಟಕ್ಕಿಂತ ಸುಮಾರು 1200 ಕಿ.ಮೀ ದೂರದಲ್ಲಿದೆ.

ಎಡಕಲ್ಲು ಗುಹೆ

ಎಡಕಲ್ಲು ಗುಹೆ

PC:Drajay1976

ಇದೊಂದು ಗುಹೆಯಲ್ಲ ಬದಲಾಗಿ ಪ್ರಕೃತಿಯೇ ಕಟ್ಟಿದ ಎರಡು ಕಲ್ಲುಗಳ ಕೊರಕಲಾಗಿದೆ. ಆ ಕಲ್ಲುಗಳು ಇರುವ ಬಗೆಯನ್ನು ನೋಡಿದಾಗ ಅದೊಂದು ಗುಹೆಯಂತೆ ಕಾಣಿಸುತ್ತದೆ. ಈ ಗುಹೆಯ ಪ್ರವೇಶ ದ್ವಾರದ ಒಳಗೆ ಹೋದರೆ ನಿಮಗೆ ಒಂದು ಸಣ್ಣ ಕೋಣೆಯಂತೆ ಸಿಗುತ್ತದೆ. ಅಲ್ಲಿಂದ ಕಬ್ಬಿಣದ ಮೆಟ್ಟಲಿಲುಗಳಿವೆ. ಅವುಗಳನ್ನು ಹತ್ತಿ ಹೋದಾಗ 96ಅಡಿ ಉದ್ದ, 22ಅಡಿ ಅಗಲ ಹಾಗೂ 30 ಅಡಿ ಆಳದ ಒಂದು ಪ್ರದೇಶ ಸಿಗುತ್ತದೆ.

ಶಾಪಿಂಗ್ ಮಾಡೋಕೆ ಚೀಪ್ & ಬೆಸ್ಟ್ ಶಾಪಿಂಗ್‌ ಮಾರ್ಕೇಟ್ ಇಲ್ಲಿದೆಶಾಪಿಂಗ್ ಮಾಡೋಕೆ ಚೀಪ್ & ಬೆಸ್ಟ್ ಶಾಪಿಂಗ್‌ ಮಾರ್ಕೇಟ್ ಇಲ್ಲಿದೆ

ಶೂರ್ಪಣಕಿ ಸಂಹಾರ ಇಲ್ಲೇ

ಶೂರ್ಪಣಕಿ ಸಂಹಾರ ಇಲ್ಲೇ

PC: Shareef Taliparamba

ಮೇಲಕ್ಕೆ ಹೋಗುತ್ತಿದ್ದಂತೆ ಕಲ್ಲುಗಳೂ ಒತ್ತಾಗಿದ್ದರೂ ಗುಹೆಯೊಳಗೆ ಬೆಳಕು ಕಲ್ಲಿನ ಎಡೆಯಿಂದ ಬರುತ್ತದೆ. ಇದು ಗುಹೆಯನ್ನು ಬೆಳಗಿಸುತ್ತದೆ. ಇನ್ನು ಶ್ರೀರಾಮ ಶೂರ್ಪಣಕಿಯನ್ನು ಕೊಂದಿದ್ದು ಇಲ್ಲೇ ಎಂದು ಪುರಾಣಗಳು ಹೇಳುತ್ತವೆ.

ಸಿಂಧೂ ಕಣಿವೆ ನಾಗರಿಕತೆ

ಸಿಂಧೂ ಕಣಿವೆ ನಾಗರಿಕತೆ

PC: Shekure

ಇಲ್ಲಿನ ಗುಹೆಯ ಗೋಡೆಯ ಮೇಲೆ ಅನೇಕ ಕೆತ್ತನೆಗಳು ಕಲಾಕೃತಿಯನ್ನು ಕಾಣುವುದು. ಇದು 8000 ವರ್ಷ ಹಳೆಯದು ಎನ್ನಲಾಗುತ್ತದೆ. ಇವುಗಳು ಸಿಂಧೂ ಕಣಿವೆ ನಾಗರಿಕತೆಗೆ ಸಂಬಂಧಿಸಿದ್ದು, ಆ ಪ್ರದೇಶದಲ್ಲಿ ಹರಪ್ಪ ನಾಗರೀಕತೆಯು ಸಕ್ರೀಯವಾಗಿತ್ತು ಎನ್ನವುದಕ್ಕೆ ಅವು ಸಾಕ್ಷ್ಯಗಳಾಗಿವೆ.

ಬೆಂಗಳೂರಿನಲ್ಲಿದ್ದು ಕೊಮ್ಮಗಟ್ಟಾ ಸರೋವರ ನೋಡ್ಲಿಲ್ವಾ?ಬೆಂಗಳೂರಿನಲ್ಲಿದ್ದು ಕೊಮ್ಮಗಟ್ಟಾ ಸರೋವರ ನೋಡ್ಲಿಲ್ವಾ?

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Amalshaji27

ಕೇರಳದ ವಯನಾಡಿನಲ್ಲಿರುವ ಈ ಗುಹೆಗೆ ಹೋಗಬೇಕಾದರೆ ಕೇರಳದ ವಯನಾಡಿನ ಅಂಬಾಲಾವಾಯಲ್‌ಗೆ ಬಂದರೆ ಅಲ್ಲಿಂದ ಕೇವಲ 5ಕಿ.ಮೀ ದೂರದಲ್ಲಿದೆ ಎಡಕಲ್ಲು ಗುಹೆ. ಸುಲ್ತಾನ್‌ ಬತ್ತೇರಿಯಿಂದ ಖಾಸಗಿ ಬಸ್‌ನಲ್ಲಿ ನೀವು ಅಂಬಾಲಾವಾಯಲ್ ತಲುಪಬಹುದು. ನಂತರ ಅಲ್ಲಿಂದ ಬೇಕಾದಷ್ಟು ಆಟೋ ರಿಕ್ಷಾಗಳು ಸಿಗುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X