Search
  • Follow NativePlanet
Share
» »ಬೇಸಿಗೆ ರಜೆಯನ್ನು ಉತ್ತಮವಾಗಿ ಕಳೆಯಲು ದಕ್ಷಿಣ ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ

ಬೇಸಿಗೆ ರಜೆಯನ್ನು ಉತ್ತಮವಾಗಿ ಕಳೆಯಲು ದಕ್ಷಿಣ ಭಾರತದ ಈ ಸ್ಥಳಗಳಿಗೆ ಭೇಟಿ ನೀಡಿ

ಬೇಸಿಗೆಯ ರಜಾದಿನಗಳ ಜೊತೆಗೆ ಹವಾಮಾನ, ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಪ್ರವಾಸ ಮಾಡಲು ಅತ್ಯಂತ ಹೆಚ್ಚು ಸೂಕ್ತವಾದ ಋತುವಾಗಿದ್ದರಿಂದ ಬೇಸಿಗೆಯಲ್ಲಿ ಬೇರೆಲ್ಲಾ ಋತುಗಳಿಗಿಂತ ಹೆಚ್ಚಾಗಿ ಉತ್ಸುಕರಾಗಿರುತ್ತೇವೆ. ಹೀಗೆ ಇವೆಲ್ಲಾ ಉತ್ಸುಕತೆ ಒಂದೆಡೆಯಾದರೆ ಇನ್ನೊಂದೆಡೆ ಬರುವ ಪ್ರಶ್ನೆಯೆಂದರೆ ಬೇಸಿಗೆಯಲ್ಲಿ ಪ್ರವಾಸವೇ? ಅದು ಎಲ್ಲಿಗೆ? ಎಂಬುದಾಗಿ. ಇಂತಹ ಒಂದು ಸಂಧಿಗ್ದತೆಯಲ್ಲಿ ನೀವಿರುವಿರಾದಲ್ಲಿ, ನಿಮಗಾಗಿ ನಾವು ಸಹಾಯ ಮಾಡುತ್ತೇವೆ. ನಿಮಗಾಗಿ ನಿಮ್ಮ ಆಸೆಗಳನ್ನು ಪೂರೈಸುವುದಕ್ಕಾಗಿ ಬೇಸಿಗೆ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಭೇಟಿ ಕೊಡಬಹುದಾದ ಕೆಲವು ಸ್ಥಳಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಇವುಗಳಲ್ಲಿ ಕಡಿಮೆ ಪ್ರಚಲಿತದಲ್ಲಿರುವ ಸ್ಥಳದಿಂದ ಹೆಸರುವಾಸಿಯಾದ ಸ್ಥಳದವರೆಗೆ, ಗಿರಿಧಾಮಗಳಿಂದ ಕಡಲತೀರಗಳವರೆಗೆ ನಾವು ನಿಮಗಾಗಿ ದಕ್ಷಿಣ ಭಾರತದ ಪ್ರತಿಯೊಂದು ಮೂಲೆಯನ್ನು ಬಹುಮಟ್ಟಿಗೆ ಆವರಿಸಿದ್ದೇವೆ. ಒಮ್ಮೆ ನೋಡಿ!

ಅಲಪ್ಪುಝಾ (ಅಲ್ಲೆಪ್ಪೀ)

ಅಲಪ್ಪುಝಾ (ಅಲ್ಲೆಪ್ಪೀ)

ಸುಂದರವಾದ ಹಿನ್ನೀರಿನ ತಾಣದ ಜೊತೆಗೆ ತೇಲುವ ಹೌಸ್ ಬೋಟ್ ಗಳನ್ನು ಹೊಂದಿರುವ ಅಲೆಪ್ಪಿಯು ದಕ್ಷಿಣ ಭಾರತದಲ್ಲಿ ಭೇಟಿ ಕೊಡಬಹುದಾದ ಅತ್ಯಂತ ಮನಮೋಹಕ ಸ್ಥಳಗಳಲ್ಲೊಂದಾಗಿದೆ. ಕೇರಳದ ಹಿನ್ನೀರಿನ ಅದರಲ್ಲೂ ವಿಶೇಷವಾಗಿ ಮುಸ್ಸಂಜೆಯ ಸಮಯದಲ್ಲಿ ರೋಮಾಂಚನಕಾರಿ ದೃಶ್ಯವಾಗಿದೆ. ಈ ಪ್ರಾಚೀನ ಸ್ಥಳದ ನೀರಿನಲ್ಲಿ ಸರ್ಫ್ ಮಾಡಿ, ಅಥವಾ ಹೌಸ್‌ಬೋಟ್‌ಗಳಲ್ಲಿ ಒಂದರಲ್ಲಿ ಒಂದು ದಿನ ಅಥವಾ ಎರಡು ದಿನಗಳನ್ನು ಕಳೆಯಿರಿ. ಅಥವಾ ತೆಂಗಿನ ಮರಗಳಿಗೆ ಕಟ್ಟಿದ ಉಯ್ಯಾಲೆಯ ಮೇಲೆ ವಿಶ್ರಾಂತಿ ಪಡೆಯಲು ಅವಕಾಶವನ್ನೂ ನೀವು ಇಲ್ಲಿ ಅನುಭವಿಸಬಹುದಾಗಿದೆ.

ಗೋಕರ್ಣಾ

ಗೋಕರ್ಣಾ

ಭಾರತದ ಪಶ್ಚಿಮ ಕರಾವಳಿಯಲ್ಲಿ ನೆಲೆಸಿರುವ ಗೋಕರ್ಣಾವು ಒಂದು ಸಣ್ಣ ಹಳ್ಳಿಯಾಗಿದ್ದು, ಇದು ಇಲ್ಲಿಯ ಸುಂದರವಾದ ಪ್ರಾಚೀನ ಕಡಲತೀರಗಳು, ಮರಳು ಮತ್ತು ಅತ್ಯುತ್ತಮವಾದ ವಿಶ್ರಾಂತಿ ಮತ್ತು ಆನಂದದಾಯಕ ರಜಾ ತಾಣಗಳಿಗಾಗಿ ಪ್ರಸಿದ್ದಿಯನ್ನು ಪಡೆದಿದೆ. ನಿಮ್ಮ ರಜಾದಿನಗಳನ್ನು ಕಡಲ ತೀರಗಳಲ್ಲಿ ಸೂರ್ಯಸ್ನಾನ ಮಾಡುತ್ತಾ ತಂಪು ಪಾನೀಯವನ್ನು ಸವಿಯುತ್ತಾ ನಗರದ ಜಂಜಾಟಗಳಿಂದ ದೂರವಾಗಿ ವಿಶ್ರಾಂತಿ ಪಡೆಯಲು ಬಯಸುತ್ತಿರುವಿರಾದಲ್ಲಿ, ಗೋಕರ್ಣಾವು ನಿಮಗೆ ಸೂಕ್ತವಾದ ಸ್ಥಳವಾಗಿದೆ. ಇದು ಗೋವಾದ ಸಣ್ಣ ರೂಪ ಎನ್ನಬಹುದಾಗಿದ್ದು, ಬೇಸಿಗೆಯಲ್ಲಿ ಭೇಟಿ ನೀಡಲೇ ಬೇಕೆನ್ನುವಂತಹ ಸ್ಥಳವೆನಿಸಿದೆ.

ವರ್ಕಳಾ

ವರ್ಕಳಾ

ಸ್ವತಃ ಒಂದು ಆಹ್ಲಾದಕರ ಅನುಭವವನ್ನು ನೀಡುತ್ತಾ ನಿಮ್ಮ ಇಂದ್ರಿಯಗಳನ್ನು ತಂಪಾದ ಗಾಳಿ ಮತ್ತು ಸಮುದ್ರದ ಅನಂತ ನೋಟದೊಂದಿಗೆ ಸಂತೃಪ್ತಿಗೊಳಿಸುತ್ತಾ ಇದರ ಜೊತೆಗೆ ಉತ್ತಮವಾದ ಆಹಾರವನ್ನು ಆಸ್ವಾದಿಸುತ್ತಾ ನಿಮ್ಮನ್ನು ನೀವು ಸಂತುಷ್ಟಗೊಳಿಸಲು ಬೇಕಾದ ಎಲ್ಲವನ್ನೂ ಈ ಸ್ಥಳದಲ್ಲಿ ಹೊಂದುವಿರಿ. ವರ್ಕಳವು ದಕ್ಷಿಣಭಾರತದ ಅತ್ಯಂತ ಸೂಕ್ತವಾದ ಪ್ರವಾಸಿ ತಾಣವಾಗಿದ್ದು, ಮೀನುಗಾರಿಕೆ, ಕಾರಂಜಿಗಳು, ದೀಪಸ್ತಂಭಗಳು, ಕಡಲತೀರಗಳು, ಸರೋವರಗಳು ಮತ್ತು ಇತ್ಯಾದಿಗಳಿಗಾಗಿ ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿ ಕಾಣಬಹುದಾದ ಜನಾರ್ದನಸ್ವಾಮಿ ದೇವಾಲಯವೆಂದು ಗುರುತಿಸಲ್ಪಟ್ಟಿರುವ ವಿಷ್ಣು ದೇವಾಲಯವು ಎರಡು ಸಹಸ್ರಮಾನಗಳಿಗಿಂತಲೂ ಹಳೆಯದು ಎಂದು ಹೇಳಲಾಗುತ್ತದೆ.

ತೆಕ್ಕಾಡಿ

ತೆಕ್ಕಾಡಿ

ವಿಸ್ತಾರವಾದ ಪೆರಿಯಾರ್ ರಾಷ್ಟ್ರೀಯ ಉದ್ಯಾನವನದ ನೆಲೆಯಾಗಿರುವ ತೆಕ್ಕಾಡಿಯು ಒಂದು ಸುಂದರವಾದ ಹಳ್ಳಿಯಾಗಿದ್ದು, ಇದರ ಸುಂದರವಾದ ವಾತಾವರಣ ಅತ್ತು ಹೇರಳವಾದ ನೈಸರ್ಗಿಕ ಸೌಂದರ್ಯತೆಯು ನಿಮ್ಮ ಹೃದಯವನ್ನು ಗೆಲ್ಲುವುದರಲ್ಲಿ ಸಂಶಯವೇ ಇಲ್ಲ. ದೇಶದ ಅತ್ಯಂತ ವಿಸ್ತಾರವಾದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳು ಮತ್ತು ಇತರ ಕಾಡು ಪ್ರಾಣಿಗಳನ್ನು ಹುಡುಕಬಹುದಾಗಿದೆ ಅಲ್ಲದೆ ಬಿದಿರಿನ ರಾಫ್ಟಿಂಗ್‌ನಂತಹ ಸಾಹಸಮಯ ಕ್ರೀಡೆಯಲ್ಲಿ ಪಾಲ್ಗೊಳ್ಳಿ; ಪೆರಿಯಾರ್ ಸರೋವರದ ಆಕರ್ಷಕ ಪರಿಸರ ಮತ್ತು ಅದರ ಸುತ್ತುವರಿದ ಹಸಿರು ಭೇಟಿ ನೀಡುವವರಿಗೆ ಮುದ ನೀಡುತ್ತದೆ.

ಕೂರ್ಗ್

ಕೂರ್ಗ್

ಕೂರ್ಗ ಅಥವಾ ಕೊಡಗು ಎಂದು ಕರೆಯಲ್ಪಡುವ ಈ ಸ್ಥಳವು ಸುಂದರವಾದ ಗಿರಿಧಾಮಗಳನ್ನು ಹೊಂದಿದ್ದು, ಇದು ಬೆಂಗಳೂರಿನಿಂದ ಸುಮಾರು 260 ಕಿ.ಮೀ ಅಂತರದಲ್ಲಿದೆ. ರಜತ ಬಣ್ಣದಲ್ಲಿರುವ ಮೋಡಗಳು ಹಚ್ಚ ಹಸುರಿನ ಪ್ರದೇಶ ಹಾಗೂ ಪರ್ವತ ಇಳಿಜಾರಿನ ಜೊತೆಗೆ ಸೇರಿದಂತೆ ಕಾಣುವ ಈ ದೃಶ್ಯವು ಬೆಲೆಕಟ್ಟಲಾರದಂತಹ ಅನುಭವವನ್ನು ನೀಡುತ್ತದೆ. ನೀವು ಎಂದಾದರೂ ಜಲಪಾತಗಳಲ್ಲಿ ರಾಪ್ಪೆಲ್ಲಿಂಗ್ ನಡೆಸಿರುವಿರಾ? ಇಲ್ಲವೆಂದಾದಲ್ಲಿ, ಇದು ನಿಮ್ಮ ಸಾಹಸತನಕ್ಕೆ ಒಂದು ಸವಾಲು ಹಾಕಲು ಸರಿಯಾದ ಸಮಯವೆನ್ನಬಹುದು. ಆರ್ದ್ರ ವಾತಾವರಣದಲ್ಲಿ, ಶಕ್ತಿಯುತವಾಗಿ ಕೆಳಗೆ ಹರಿಯುವ ನೀರಿನೊಂದಿಗೆ ಜಯಿಸಲು ಸಿದ್ದರಾಗಿ ಹಾಗೂ ನಿಮ್ಮ ಕಿವಿಯಲ್ಲಿ ನಿಮ್ಮ ಹೃದಯ ಬಡಿತವನ್ನು ಕೇಳಿಸಿಕೊಳ್ಳಿ!

ಕೊಡೈಕೆನಾಲ್

ಕೊಡೈಕೆನಾಲ್

ಆಕರ್ಷಕ ಮೋಡಗಳು ಮತ್ತು ಕೊಡೈಕೆನಾಲ್ ನ ದಟ್ಟವಾದ ಕಾಡಿನಿಂದ ಆವೃತವಾದ ಉರುಳುವ ಬೆಟ್ಟಗಳ ನೈಸರ್ಗಿಕ ಸೌಂದರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ ಇಲ್ಲಿ ಜಲಪಾತಗಳು, ಕೊಳಗಳು, ಹಚ್ಚ ಹಸಿರಿನಿಂದ ಕೂಡಿದ ಪ್ರದೇಶಗಳು ಅಥವಾ ಪಳನಿ ಬೆಟ್ಟಗಳ ಸುಂದರ ನೋಟವಾಗಿರಬಹುದು ಎಲ್ಲವೂ ನಿಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಅಷ್ಟೇ ಅಲ್ಲದೆ ನೀವು ಡಾಲ್ಫಿನ್ಸ್ ನೋಸ್ ಅಥವಾ ಗ್ರೀನ್ ವ್ಯಾಲಿ ವ್ಯೂಗೆ ಚಾರಣ ಮಾಡುವಾಗ ಈ ಪ್ರದೇಶದ ಆರಾಮದಾಯಕ ಹವಾಮಾನವನ್ನು ಆನಂದಿಸಿ, ಅಲ್ಲಿ ನೀವು ಈ ಸುಂದರ ಭೂದೃಶ್ಯದ ಸೌಂದರ್ಯತೆಗೆ ಮಾರುಹೋಗುವುದರಲ್ಲಿ ಸಂಶಯವಿಲ್ಲ. ಅಲ್ಲದೆ ಇಲ್ಲಿಯ ಬೆರ್ಜಾರಿಮ್ ಸರೋವರ ಅಥವಾ ಕೊಡೈ ಸರೋವರದ ಪ್ರಶಾಂತತೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬಹುದು.

ವಾಯನಾಡ್

ವಾಯನಾಡ್

ಪಶ್ಚಿಮ ಘಟ್ಟಗಳ ಬೆಟ್ಟಗಳಲ್ಲಿ ಕಲಾತ್ಮಕ ಪ್ರಸ್ಥಭೂಮಿಯಾಗಿರುವ ವಯನಾಡ್ ಕೇರಳದ ಅತ್ಯಂತ ಸುಂದರವಾದ ಪ್ರದೇಶಗಳಲ್ಲಿ ಒಂದಾಗಿದೆ. ದೊಡ್ಡ ನೀಲಗಿರಿ ಅರಣ್ಯದ ಮೀಸಲು ಪ್ರದೇಶದ ಭಾಗವಾಗಿರುವ ಈ ಸುಂದರ ಪಟ್ಟಣವು ಮೋಡಿಮಾಡುವ ಜಲಪಾತಗಳು, ವಿಶಾಲವಾದ ಮಸಾಲೆ ತೋಟಗಳು, ಐತಿಹಾಸಿಕ ಗುಹೆಗಳು ಮತ್ತು ಆಕರ್ಷಕ ವನ್ಯಜೀವಿಗಳಿಂದ ತುಂಬಿದೆ, ಇದು ಮೋಡಿಮಾಡುವ ಪಶ್ಚಿಮ ಘಟ್ಟಗಳ ನಿಷ್ಕಲ್ಮಶ ಸೌಂದರ್ಯವನ್ನು ಸವಿಯಲು ಬಯಸುವ ಎಲ್ಲರೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ

ಗೋವಾ

ಗೋವಾ

ಗೋವಾವು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇದಲ್ಲದೆ, ಮನರಂಜನೆ, ಸಾಹಸ ಮತ್ತು ಪರಿಸರದ ಉತ್ತಮ ಸಮತೋಲನವನ್ನು ನೀವು ಬಯಸುವಿರಾದಲ್ಲಿ ಇದು ಭೇಟಿ ನೀಡಲು ಸೂಕ್ತವಾದ ಸ್ಥಳವಾಗಿದೆ. ವಿವಿಧ ಕಡಲತೀರಗಳು ಮತ್ತು ಅಪರಿಮಿತ ಸಂಖ್ಯೆಯ ತಿನಿಸುಗಳ ಜೊತೆಗೆ ತಾಜಾ ಸಮುದ್ರಾಹಾರವನ್ನು ಸವಿಯುವುದರೊಂದಿಗೆ ನಿಮ್ಮ ರಜಾದಿನವನ್ನು ಆನಂದವಾಗಿ ಕಳೆಯಬಹುದಲ್ಲವೆ? ಅಲ್ಲದೆ, ಗೋವಾ ಯಾವಾಗಲೂ ಸ್ಥಳೀಯ ಬಾರ್ ಗಳಲ್ಲಿ ಆಹಾರ ಉತ್ಸವಗಳು, ನಿಯಮಿತ ಪ್ರದರ್ಶನಗಳೊಂದಿಗೆ ಹೆಸರುವಾಸಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X