Search
  • Follow NativePlanet
Share
» »ಬ್ರಹ್ಮಶ್ರೀ ನಾರಾಯಣ ಗುರುಗಳು ಹುಟ್ಟಿದ್ದೇಲ್ಲಿ, ಮೋಕ್ಷ ಪಡೆದಿದ್ದೇಲ್ಲಿ?

ಬ್ರಹ್ಮಶ್ರೀ ನಾರಾಯಣ ಗುರುಗಳು ಹುಟ್ಟಿದ್ದೇಲ್ಲಿ, ಮೋಕ್ಷ ಪಡೆದಿದ್ದೇಲ್ಲಿ?

ಕೇರಳದಲ್ಲಿ ಅತಿ ಹೆಚ್ಚು ಬದಲಾವಣೆಗಳನ್ನು ಮಾಡಿದ ವ್ಯಕ್ತಿ ಎಂದರೆ ಅದುವೇ ಬ್ರಹ್ಮಶ್ರೀ ನಾರಾಯಣ ಗುರುಗಳು. ಜಗತ್ತಿನಲ್ಲಿರುವುದು, " ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು," ಎಂಬ ತತ್ವವನ್ನು ಪ್ರತಿಪಾದಿಸಿದವರು. ಕೇರಳದಲ್ಲಿನ ಜಾತಿ, ಮತಗಳನ್ನು ಹೋಗಲಾಡಿಸಿ ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟವರು ನಾರಾಯಣ ಗುರುಗಳು. ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು. ನಾರಾಯಣ ಗುರುಗಳಿಗೆ ಸಂಬಂಧಿಸಿದಂತಹ ಕೇರಳ ಈ ತಾಣಗಳನ್ನು ನೀವೂ ಭೇಟಿ ನೀಡಲೇ ಬೇಕು.

ನಾರಾಯಣ ಗುರುಗಳ ಹುಟ್ಟೂರು ಚೆಂಬಳಂತಿ

ನಾರಾಯಣ ಗುರುಗಳ ಹುಟ್ಟೂರು ಚೆಂಬಳಂತಿ

PC:Ks.mini

ಚೆಂಬಳಂತಿ ತಿರುವನಂತಪುರಂನಿಂದ 12 ಕಿ.ಮೀ ದೂರದಲ್ಲಿದೆ. ಇದು ಮಹಾನ್ ಸಂತ ಮತ್ತು ಸಾಮಾಜಿಕ ಸುಧಾರಕ ಶ್ರೀ ನಾರಾಯಣ ಗುರು ಅವರ ಜನ್ಮಸ್ಥಳವಾಗಿದೆ. ಶ್ರೀ ನಾರಾಯಣ ಗುರು ಸಣ್ಣ ಗುಡಿಸಲಿನಲ್ಲಿ ಜನಿಸಿದರು. ಇಂದಿಗೂ ಆ ಸ್ಥಳವನ್ನು ಕಾಣಬಹುದು. ಹೆಚ್ಚೇನೂ ಬದಲಾವಣೆಗಳನ್ನು ಮಾಡಲಾಗಿಲ್ಲ.

ದಾವಣಗೆರೆಯಲ್ಲಿ ಬೆಣ್ಣೆದೋಸೆ ಮಾತ್ರವಲ್ಲ ಇನ್ನೆನೆಲ್ಲಾ ಫೇಮಸ್ ನೋಡಿ ದಾವಣಗೆರೆಯಲ್ಲಿ ಬೆಣ್ಣೆದೋಸೆ ಮಾತ್ರವಲ್ಲ ಇನ್ನೆನೆಲ್ಲಾ ಫೇಮಸ್ ನೋಡಿ

ವಿದ್ಯಾಭ್ಯಾಸ ಮಾಡಿದ್ದು ಕಾಯಂಕುಲದಲ್ಲಿ

ವಿದ್ಯಾಭ್ಯಾಸ ಮಾಡಿದ್ದು ಕಾಯಂಕುಲದಲ್ಲಿ

PC: Akhil2009

ಕಾಯಂಕುಲಂ ಕೇರಳದ ಅಲಪುಳ ಜಿಲ್ಲೆಯಲ್ಲಿರುವ ಒಂದು ನಗರ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಇದು ಒಂದು ಪ್ರಾಚೀನ ಕಡಲ ವ್ಯಾಪಾರ ಕೇಂದ್ರವಾಗಿದೆ. ಕೇರಳದ ದೊಡ್ಡ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಒಂದಾದ ಎನ್‌ಟಿಪಿಸಿ ನಡೆಸುತ್ತಿರುವ ರಾಜೀವ್ ಗಾಂಧಿ ಕಂಬೈನ್ಡ್ ಸೈಕಲ್ ಪವರ್ ಪ್ಲಾಂಟ್ ಕಾಯಂಕುಲದಲ್ಲಿದೆ. ಕೃಷ್ಣಪುರಂ ಅರಮನೆಯು ಹತ್ತಿರದಲ್ಲೇ ಇದೆ. ಅನೇಕ ಹಳೆಯ ಗೋಡಂಬಿ ಕಾರ್ಖಾನೆಗಳು ಸಹ ಈ ಪ್ರದೇಶದಲ್ಲಿ ಕಂಡುಬರುತ್ತವೆ. ಈ ಊರಲ್ಲೇ ನಾರಾಯಣಗುರು ಉನ್ನತ ಅಭ್ಯಾಸ ನಡೆಸಿದ್ದು.

 ನಾರಾಯಣಗುರುಗಳ ಸಮಾಧಿ ಶಿವಗಿರಿಯಲ್ಲಿದೆ

ನಾರಾಯಣಗುರುಗಳ ಸಮಾಧಿ ಶಿವಗಿರಿಯಲ್ಲಿದೆ

PC:Kalesh

1904ರಲ್ಲಿ ನಾರಾಯಣ ಗುರು ವರ್ಕಳದಲ್ಲಿ ನೆಲೆಸಿದರು. ವರ್ಕಳ ತಿರುವನಂತರಪುರದ ಬಳಿ ಇದೆ. ಅಲ್ಲಿ ಒಂದು ಆಶ್ರಮವನ್ನು ನಿರ್ಮಿಸಿದರು. ಆ ಆಶ್ರಮವನ್ನು ಇಂದು ಶಿವಗಿರಿ ಮಠ ಎಂದು ಕರೆಯಲ್ಪಡುತ್ತದೆ. ಶಿವಗಿರಿಯಲ್ಲಿ ನಾರಾಯಣಗುರುಗಳ ಸಮಾಧಿ ಇದೆ. ಇಲ್ಲೇ ಮೋಕ್ಷವನ್ನು ಪಡೆದಿದ್ದು ಎನ್ನಲಾಗುತ್ತದೆ.

ಅರವಿಪುರದಲ್ಲಿ ನಾರಾಯಣ ಗುರು ಸ್ಥಾಪಿಸಿದ ಮೊದಲ ದೇವಾಲಯ

ಅರವಿಪುರದಲ್ಲಿ ನಾರಾಯಣ ಗುರು ಸ್ಥಾಪಿಸಿದ ಮೊದಲ ದೇವಾಲಯ

PC: wikipedia

ಕೇರಳದ ತಿರುವನಂತಪುರಂನಲ್ಲಿರುವ ಅರವಿಪುರದಲ್ಲಿ ಶಿವನ ಒಂದು ದೇವಾಲಯವಿದೆ. ಇದನ್ನು ನಾರಾಯಣ ಗುರು ಕಟ್ಟಿಸಿದರು. ನಾರಾಯಣ ಗುರು ಸ್ಥಾಪಿಸಿದ ಮೊದಲ ದೇವಾಲಯ ಇದಾಗಿದೆ. ಬ್ರಾಹ್ಮಣರನ್ನು ಹೊರತುಪಡಿಸಿ ದೇವರ ವಿಗ್ರಹವನ್ನು ಪವಿತ್ರಗೊಳಿಸಿದ ಏಕೈಕ ವ್ಯಕ್ರಿ ನಾರಾಯಣ ಗುರುವಾಗಿದ್ದಾರೆ. ಈ ದೇವಾಲಯದಲ್ಲಿ ನವರಾತ್ರಿ ಉತ್ವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಇದು ದೇಶದ ಅತ್ಯಂತ ಡೇಂಜರಸ್ ರಾಜ್ಯ; ಇಲ್ಲಿ ವಿಸ್ಕೀ, ಬಿಯರ್, ರಮ್ ಮಾತ್ರ ಕುಡಿಯಬಹುದುಇದು ದೇಶದ ಅತ್ಯಂತ ಡೇಂಜರಸ್ ರಾಜ್ಯ; ಇಲ್ಲಿ ವಿಸ್ಕೀ, ಬಿಯರ್, ರಮ್ ಮಾತ್ರ ಕುಡಿಯಬಹುದು

ಅದ್ವೈತ ಆಶ್ರಮ ಅಲುವಾದಲ್ಲಿದೆ

ಅದ್ವೈತ ಆಶ್ರಮ ಅಲುವಾದಲ್ಲಿದೆ

PC:Giri1234

ರಾಜ್ಯದ ಪ್ರಮುಖ ಕೈಗಾರಿಕಾ ಕೇಂದ್ರವಾಗಿದೆ. ಇಲ್ಲೇ ನಾರಾಯಣಗುರುಗಳು ಅದ್ವೈತ ಆಶ್ರಮವನ್ನು ಸ್ಥಾಪಿಸಿದ್ದು. ಅಲುವಾ ಎಂಬುದು ಕೇರಳದ ಕೇರಳದ ಪುರಸಭೆ ಮತ್ತು ಕೊಚ್ಚಿಯ ಉತ್ತರ ಭಾಗದ ಉಪನಗರವಾಗಿದೆ. ಪೆರಿಯಾರ್ ನದಿಯ ತೀರದಲ್ಲಿರುವ ಇದು ನಗರ ಕೇಂದ್ರದಿಂದ ಸುಮಾರು 15 ಕಿ.ಮೀ ದೂರದಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X