Search
  • Follow NativePlanet
Share
» »2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕರ್ನಾಟಕದ ಈ ಹೆಸರಾಂತ ಕೃಷ್ಣ ದೇವಾಲಯಗಳಿಗೆ ಭೇಟಿ ಕೊಡಿ

2022ರ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕರ್ನಾಟಕದ ಈ ಹೆಸರಾಂತ ಕೃಷ್ಣ ದೇವಾಲಯಗಳಿಗೆ ಭೇಟಿ ಕೊಡಿ

ಹಿಂದುಗಳ ಅತ್ಯಂತ ಪ್ರಮುಖ ಮತ್ತು ಪವಿತ್ರ ಹಬ್ಬಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯೂ ಒಂದಾಗಿದ್ದು ಈ ವರ್ಷ ಆಗಷ್ಟ್ 18 ರಂದು ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಜಗತ್ತಿನಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ವಿಷ್ಣುದೇವರ ಒಂದು ಅವತಾರ ಸ್ವರೂಪವಾದ ಶ್ರೀಕೃಷ್ಣ ಭಗವಂತನು ಜನಿಸಿದ್ದು, ಶ್ರೀಕೃಷ್ಣನ ಜನ್ಮದಿನವನ್ನು ಬಹಳ ಅದ್ದೂರಿಯಿಂದ ಹಿಂದುಗಳು ಆಚರಿಸುತ್ತಾರೆ ಅದರಲ್ಲೂ ವೈಷ್ಣವರಿಗೆ ಇದು ಪ್ರಮುಖ ಹಬ್ಬವಾಗಿದೆ. ಈ ಪವಿತ್ರ ದಿನದಂದು ಜನರು ದೇವಾಲಯಗಳಿಗೆ ಹೋಗಿ ತಮ್ಮ ಪ್ರೀತಿಯ ದೇವರಾದ ಶ್ರೀಕೃಷ್ಣನ ಮೂರ್ತಿಗೆ ಪೂಜೆಯನ್ನು ಸಲ್ಲಿಸುತ್ತಾ ಹಲವಾರು ಭಕ್ಷ್ಯಗಳನ್ನು ಅರ್ಪಿಸುತ್ತಾರೆ. ಆದ್ದರಿಂದ ನೀವು ಈ ದಿನದಂದು ಈ ಹಬ್ಬವನ್ನು ಹೇಗೆ ಆಚರಿಸಬೇಕೆಂದು ಯೋಚನೆ ಮಾಡಿರುವಿರಿ?

ಇನ್ನೂ ಯಾವುದೇ ಯೋಜನೆ ಮಾಡಿಲ್ಲವಾದಲ್ಲಿ, ನೀವು ಶ್ರೀಕೃಷ್ಣ ದೇವರಿಗೆ ಅರ್ಪಿತವಾದ ಈ ಕೆಳಗಿನ ಕೆಲವು ದೇವಾಲಯಗಳಿಗೆ ಭೇಟಿ ಕೊಡುವುದು ಹೆಚ್ಚು ಸೂಕ್ತವಾಗಿದ್ದು ಅದರಂತೆ ನಿಮ್ಮ ಪ್ರವಾಸವನ್ನು ಆಯೋಜಿಸಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಈ ದೇವಾಲಯಗಳಲ್ಲಿ ಅತ್ಯಂತ ಉತ್ಸಾಹ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿಯ ಕೆಲವು ದೇವಾಲಯಗಳು ಹಲವಾರು ಶತಮಾನಗಳಿಗಿಂತಲೂ ಹಿಂದಿನದಾಗಿದ್ದು ಐತಿಹಾಸಿಕ ಮಹತ್ವಗಳನ್ನೂ ಹೊಂದಿವೆ. ಹಾಗಿದ್ದಲ್ಲಿ, ಈ ಕೃಷ್ಣ ದೇವಾಲಯಗಳ ಬಗ್ಗೆ ಇನ್ನಷ್ಟು ತಿಳಿಯಲು ಬಯಸುವಿರ? ಹೌದು ಎಂದಾದಲ್ಲಿ ಈ ಲೇಖನವನ್ನು ಓದಿ ಮಾಹಿತಿ ಪಡೆಯಿರಿ.

ಉಡುಪಿಯ ಶ್ರೀಕೃಷ್ಣ ಮಠ

ಉಡುಪಿಯ ಶ್ರೀಕೃಷ್ಣ ಮಠ

ನಿಸ್ಸಂದೇಹವಾಗಿಯೂ, ದಕ್ಷಿಣ ಭಾರತದ ಅತ್ಯಂತ ಪ್ರಸಿದ್ದ ಕೃಷ್ಣ ದೇವಾಲಯಗಳಲ್ಲಿ ಒಂದಾಗಿರುವ ಶ್ರೀಕೃಷ್ಣ ಮಠವು ಕೃಷ್ಣ ದೇವರಿಗೆ ಸಮರ್ಪಿತವಾದ ಸುಂದರ ದೇವಾಲಯ ಸಂಕೀರ್ಣವಾಗಿದ್ದು ಇದು ಸದಾ ಉತ್ಸಾಹದಿಂದ ಕೂಡಿದ ಉಡುಪಿಯಲ್ಲಿದೆ. ದಾಖಲೆಗಳ ಪ್ರಕಾರ, ಈ ದೇವಾಲಯವನ್ನು 13 ನೇ ಶತಮಾನದಲ್ಲಿ ವೈಷ್ಣವ ಸಂತರಾದ ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ, ಅವರು ತಮ್ಮ ಇಡೀ ಜೀವನವನ್ನು ಈ ದೇವರಿಗೆ ಮುಡುಪಾಗಿಟ್ಟು ಲೋಕ ಕಲ್ಯಾಣಕ್ಕಾಗಿ ಕೆಲಸ ಮಾಡಿದರು.

ಇಂದು, ಈ ದೇವಾಲಯವು ಹಿಂದು ಭಕ್ತರಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದು, ಪ್ರತೀ ವರ್ಷ ಲಕ್ಷಗಟ್ಟಲೆ ಜನರಿಂದ ಭೇಟಿ ನೀಡಲ್ಪಡುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಈ ದೇವಾಲವನ್ನು ವರ್ಣರಂಜಿತ ದೀಪಗಳಿಂದ ಅಲಂಕರಿಸಲಾಗುತ್ತದೆ ಮತ್ತು ಇಲ್ಲಿಯ ಇಡೀ ವಾತಾವರಣವು ಹಬ್ಬದ ಉತ್ಸಾಹದಲ್ಲಿ ಮುಳುಗಿರುವುದು ಕಂಡು ಬರುತ್ತದೆ.

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಬಂಗಾರದ ರಥವಿರುವ ವಿಷಯ ನಿಮಗೆ ಗೊತ್ತಿದೆಯೇ? ಎಂದಾದರೂ ನೋಡ ಬಯಸುವಿರಾ? ಹೌದು ಎಂದಾದಲ್ಲಿ, ಉಡುಪಿಗೆ ಈ ಕೂಡಲೇ ಪ್ರವಾಸ ಆಯೋಜಿಸಿರಿ. ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಡುವ ಸಮಯದಲ್ಲಿ ಅದರ ಸಮೀಪದಲ್ಲಿರುವ 1000 ಕ್ಕಿಂತಲೂ ಹಳೆಯದಾದ ಅನಂತೇಶ್ವರ ದೇವಾಲಯವನ್ನೂ ನೋಡಬಹುದಾಗಿದೆ.

ಇಸ್ಕಾನ್ ದೇವಾಲಯ, ಬೆಂಗಳೂರು

ಇಸ್ಕಾನ್ ದೇವಾಲಯ, ಬೆಂಗಳೂರು

ಆಧುನಿಕ ಯುಗದ ಸುಂದರ ದೇವಾಲಯಗಳ ಬಗ್ಗೆ ಚರ್ಚೆ ಮಾಡುವಾಗ ಬರುವ ಮೊದಲ ದೇವಾಲಯವೆಂದರೆ ಅದು ಇಸ್ಕಾನ್ ದೇವಾಲಯಗಳು. ಸುಂದರವಾದ ಉದ್ಯಾನವನಗಳು ಮತ್ತು ಶ್ಲಾಘನೀಯ ವಾಸ್ತುಶಿಲ್ಪದ ಹೆಗ್ಗಳಿಕೆಯಿಂದ ಸುತ್ತುವರೆದಿರುವ ಈ ದೇವಾಲಯಗಳು ತಮ್ಮ ಸಂದರ್ಶಕರನ್ನು ಬೆರಗುಗೊಳಿಸುವುದನ್ನು ನಿಲ್ಲಿಸುವುದಿಲ್ಲ ಮತ್ತು ಬೆಂಗಳೂರಿನಲ್ಲಿರುವ ದೇವಾಲಯವು ಇದಕ್ಕೆ ಹೊರತಾಗಿಲ್ಲ.

ಬೆಂಗಳೂರಿನಲ್ಲಿ ನೆಲೆಸಿರುವ ಇಸ್ಕಾನ್ ದೇವಾಲಯವೂ ಕೂಡ ಕರ್ನಾಟಕದ ಅತ್ಯಂಟ ಪ್ರಸಿದ್ದ ಕೃಷ್ಣ ದೇವಾಲಯಗಳಲ್ಲಿ ಒಂದಾಗಿದ್ದು, ದೇಶದಾದ್ಯಂತದ ಜನರಿಂದ ಭೇಟಿ ನೀಡಲ್ಪಡುತ್ತದೆ. ಈ ದೇವಾಲಯವು 1997ರಲ್ಲಿ ನಿರ್ಮಿಸಲ್ಪಟ್ಟಿದ್ದು, ಅಂದಿನಿಂದ ಇಂದಿನವರೆಗೂ ಬೆಂಗಳೂರಿನ ಅತ್ಯಂತ ಹೆಚ್ಚು ಭೇಟಿ ಕೊಡಲ್ಪಡುವ ಪ್ರವಾಸಿ ತಾಣಗಳಲ್ಲಿ ಒಂದೆನಿಸಿದೆ.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಇಡೀ ಸಂಕೀರ್ಣವು ಮಿನುಗುವ ದೀಪಗಳಿಂದ ಅಲಂಕರಿಸಲ್ಪಟ್ಟಾಗ ದೇವಾಲಯದ ಅದ್ಭುತ ನೋಟಗಳು ಖಂಡಿತವಾಗಿಯೂ ಅತ್ಯಂತ ರಮಣೀಯವಾಗಿ ಕಾಣುತ್ತವೆ. ಆದ್ದರಿಂದ, ನೀವು ಬೆಂಗಳೂರು ಮತ್ತು ಸುತ್ತಮುತ್ತ ಇರುವಾಗ ಈ ಮಂತ್ರಮುಗ್ಧಗೊಳಿಸುವ ದೇವಾಲಯಕ್ಕೆ ಭೇಟಿ ನೀಡಬೇಕು.

ವೇಣುಗೋಪಾಲ ಸ್ವಾಮಿ ದೇವಾಲಯ

ವೇಣುಗೋಪಾಲ ಸ್ವಾಮಿ ದೇವಾಲಯ

ಸಾವಿರಾರು ಹಿಂದು ಭಕ್ತರು ಮತ್ತು ಪ್ರವಾಸಿಗರ ಗಮನ ಸೆಳೆಯುವ ಅತ್ಯಂತ ಸುಂದರ ಕೃಷ್ಣ ದೇವಾಲಯಗಳಲ್ಲಿ ಮೈಸೂರಿನಲ್ಲಿ ನೆಲೆಸಿರುವ ಹಾಗೂ 12ನೇ ಶತಮಾನಗಳಲ್ಲಿ ನಿರ್ಮಿಸಲ್ಪಟ್ಟ ವೇಣುಗೋಪಾಲ ದೇವಾಲಯವೂ ಒಂದಾಗಿದ್ದು, ಇದು ಈ ಪ್ರಾಂತ್ಯದ ಅತ್ಯಂತ ಹಳೆಯ ದೇವಾಲಯಗಳಲ್ಲೊಂದಾಗಿದೆ. ಕೆ.ಆರ್ ಎಸ್ ಜಲಾಶಯದ ದಡದಲ್ಲಿ ನಿರ್ಮಿಸಲಾಗಿರುವ ಈ ಸುಂದರವಾದ ದೇವಾಲಯವು ಇಲ್ಲಿಗೆ ಭೇಟಿ ಕೊಡುವವರಿಗೆ ಆಹ್ಲಾದಕರವಾದ ಮತ್ತು ಪುನಶ್ಚೇತನಗೊಳಿಸುವಂತಹ ವಾತಾವರಣವನ್ನು ಒದಗಿಸುತ್ತದೆ.

ನೀವು ಮೈಸೂರು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿದ್ದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಬೇಕೆಂದಿದ್ದಲ್ಲಿ, ಇಲ್ಲಿಯ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಇಲ್ಲಿ ದೇವಾಲಯಕ್ಕೆ ಭೇಟಿ ಕೊಡುವ ಸಮಯದಲ್ಲಿ ಹತ್ತಿರದ ಬೃಂದಾವನ ಉದ್ಯಾನವನದ ಸೌಂದರ್ಯವನ್ನೂ ಸಹ ಅನ್ವೇಷಿಸಬಹುದು ಮತ್ತು ಅದರ ವರ್ಣರಂಜಿತ ವಾತಾವರಣದ ನಡುವೆ ದೈವತ್ವದ ಸಾರವನ್ನು ಅನುಭವಿಸಬಹುದು.

ಶ್ರೀ ಗೋಪಾಲಕೃಷ್ಣ ದೇವಾಲಯ, ಮಂಗಳೂರು

ಶ್ರೀ ಗೋಪಾಲಕೃಷ್ಣ ದೇವಾಲಯ, ಮಂಗಳೂರು

ಗೋಪಾಲಕೃಷ್ಣ ದೇವಾಲಯವು ಮಂಗಳೂರಿನ ಅತ್ಯಂತ ಪ್ರಸಿದ್ದ ದೇವಾಲಯವಾಗಿದ್ದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಸೂಕ್ತವಾದ ಸ್ಥಳವಾಗಿದೆ. ಈ ಹಬ್ಬದ ಸಮಯದಲ್ಲಿ, ದೇವಾಲಯವು ಪ್ರವಾಸಿಗರು ಮತ್ತು ಹಿಂದೂಗಳಿಂದ ತುಂಬಿ ತುಳುಕುತ್ತಿರುತ್ತದೆ. ಹಾಗೂ ಉತ್ಸಾಹಭರಿತ ಭಕ್ತರೊಂದಿಗೆ ಇಡೀ ವಾತಾವರಣವು ಉತ್ಸಾಹದಿಂದ ಕೂಡಿರುತ್ತದೆ.

ಈ ದೇವಾಲಯಕ್ಕೆ ನಗರ ಮತ್ತು ಹತ್ತಿರದ ಪಟ್ಟಣಗಳಿಂದ ಜನರು ಸದಾ ಭೇಟಿ ನೀಡುತ್ತಿರುತ್ತಾರೆ. ಈ ಪವಿತ್ರ ಸೌಂದರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತಾ ದೈವಿಕತೆಯ ಸಾರವನ್ನು ಅನುಭವಿಸಿದರೆ ಹೇಗಿರಬಹುದು?

ಬಾಲಕೃಷ್ಣ ದೇವಾಲಯ, ಹಂಪೆ

ಬಾಲಕೃಷ್ಣ ದೇವಾಲಯ, ಹಂಪೆ

ಐತಿಹಾಸಿಕ ಮಹತ್ವದಿಂದಾಗಿ ಪ್ರಸಿದ್ದಿಯನ್ನು ಹೊಂದಿರುವ ಕರ್ನಾಟಕದ ಕೆಲವೇ ಕೆಲವು ಹೆಸರಾಂತ ದೇವಾಲಯಗಳಲ್ಲಿ ಬಾಲಕೃಷ್ಣ ದೇವಾಲಯವೂ ಒಂದಾಗಿದ್ದು, 15ನೇ ಶತಮಾನದ ಸಮಯದಲ್ಲಿ ಈ ಪ್ರಾಂತ್ಯವು ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಆಳಲ್ಪಡುತ್ತಿದ್ದ ಸಮಯದಲ್ಲಿ ಈ ದೇವಾಲಯವು ನಿರ್ಮಿಸಲ್ಪಟ್ಟಿದೆ ಎಂದು ನಂಬಲಾಗುತ್ತದೆ. ಇದನ್ನು ಹೆಚ್ಚಾಗಿ ಇತಿಹಾಸ ಪ್ರೇಮಿಗಳು ಮತ್ತು ಸ್ಥಳೀಯ ಪ್ರವಾಸಿಗರು ಭೇಟಿ ನೀಡಿದ್ದರೂ ಸಹ, ಇದು ಧಾರ್ಮಿಕ ತಾಣವಾಗಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಅನ್ವೇಷಿಸ ಬೇಕಾಗಿದೆ.

ಈ ಕೃಷ್ಣ ಜನ್ಮಾಷ್ಟಮಿಯಂದು, ನೀವು ಹಂಪಿಯ ಪ್ರವಾಸವನ್ನು ಯೋಜಿಸಬಹುದು ಮತ್ತು ಭಗವಾನ್ ಕೃಷ್ಣನಿಗೆ ಅರ್ಪಿತವಾದ ಈ ದೇವಾಲಯಕ್ಕೆ ಭೇಟಿ ಕೊಡಬಹುದು ಹಾಗೂ ಹಂಪೆಯಲ್ಲಿಯ ಕೃಷ್ಣ ಭಗವಂತನಿದೆ ಸಂಬಂಧಿಸಿರುವ ಪಾಳುಬಿದ್ದರೂ ಕೂಡಾ ತನ್ನ ಸೌಂದರ್ಯತೆಯನ್ನು ಇನ್ನೂ ಉಳಿಸಿಕೊಂಡಿರುವಂತಹ ಸುಂದರವಾದ ಸ್ಥಳಗಳನ್ನು ಅನ್ವೇಷಿಸಬಹುದು. ಒಂದು ಕಾಲದಲ್ಲಿ ದೇವಾಲಯದ ಸೌಂದರ್ಯವನ್ನು ಹೆಚ್ಚಿಸಿದ ಶ್ರೀಕೃಷ್ಣನ ವಿಗ್ರಹವನ್ನು ವಿಜಯನಗರ ಸಾಮ್ರಾಜ್ಯದ ದೊರೆ ಕೃಷ್ಣದೇವರಾಯನು ಯುದ್ಧದಿಂದ ತಂದನೆಂದು ಹೇಳಲಾಗುತ್ತದೆ. ಪ್ರಸ್ತುತ, ಈ ವಿಗ್ರಹವನ್ನು ಚೆನ್ನೈನ ರಾಜ್ಯ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X