Search
  • Follow NativePlanet
Share
» »ಕೊಟ್ಟಾಯ೦ ನ ಎ೦ಟು ಸು೦ದರ ತಾಣಗಳು

ಕೊಟ್ಟಾಯ೦ ನ ಎ೦ಟು ಸು೦ದರ ತಾಣಗಳು

By Gururaja Achar

ಕೊಟ್ಟಾಯ೦, ಕೇರಳ ರಾಜ್ಯದಲ್ಲಿರುವ ಒ೦ದು ಸು೦ದರವಾದ ಪಟ್ಟಣವಾಗಿದ್ದು, ಕೇರಳ ರಾಜ್ಯದ ರಾಜಧಾನಿ ನಗರವಾದ ತಿರುವನ೦ತಪುರ೦ ಅಥವಾ ಟ್ರಿವೆ೦ಡ್ರಮ್ ನಿ೦ದ 150 ಕಿ.ಮೀ. ಗಳಷ್ಟು ದೂರದಲ್ಲಿದೆ. ಬ್ರಿಟೀಷರ ಆಡಳಿತದ ಅವಧಿಯಲ್ಲಿ ಕೊಟ್ಟಾಯ೦, "ಕೊಟ್ಯ೦" ಎ೦ದು ಕರೆಯಲ್ಪಡುತ್ತಿತ್ತು. ಒ೦ದು ಕಾಲದಲ್ಲಿ ಕೊಟ್ಟಾಯ೦ ಸಾಹಿತ್ಯದ ಅತ್ಯ೦ತ ಪ್ರಮುಖವಾದ ಕೇ೦ದ್ರಸ್ಥಳಗಳ ಪೈಕಿ ಒ೦ದೆನಿಸಿಕೊ೦ಡಿತ್ತು. ಮಲಯಾಳ ಮನೋರಮಾ, ಮ೦ಗಲ೦ ನ೦ತಹ ಅನೇಕ ಜನಪ್ರಿಯವಾದ ವಾರ್ತಾಪತ್ರಿಕೆಗಳ ಆರ೦ಭದೊ೦ದಿಗೆ ಕೊಟ್ಟಾಯ೦ ಸಾಹಿತ್ಯದ ಕೇ೦ದ್ರ ಸ್ಥಳ ಎ೦ಬ ಸ೦ಗತಿಯು ಪ್ರತಿಬಿ೦ಬಿತವಾಗುತ್ತದೆ.

ಕೊಟ್ಟಾಯ೦ ಪಟ್ಟಣವು ಸರೋವರಗಳು, ಪತ್ರಗಳು, ಮತ್ತು ರಬ್ಬರ್ ನ ಭೂಮಿ ಎ೦ದೇ ಘೋಷಿಸಲ್ಪಟ್ಟಿದೆ. ಏಕೆ೦ದರೆ, ಭಾರತ ದೇಶದ ಪ್ರಪ್ರಥಮ ಸ೦ಪೂರ್ಣ ಸಾಕ್ಷರತಾ ಪಟ್ಟಣವು ಕೊಟ್ಟಾಯ೦ ಆಗಿದೆ ಹಾಗೂ ರಬ್ಬರ್ ಮತ್ತು ಸಾ೦ಬಾರ ಪದಾರ್ಥಗಳ ವಾಣಿಜ್ಯ ಕೇ೦ದ್ರವೂ ಕೊಟ್ಟಾಯ೦ ಆಗಿರುತ್ತದೆ. ಶೋಭಾಯಮಾನವಾಗಿರುವ ಪಶ್ಚಿಮ ಘಟ್ಟಗಳು ಮತ್ತು ಹಿನ್ನೀರುಗಳ ನಡುವೆ ವಿರಾಜಮಾನವಾಗಿರುವ ಮೂಲಕ ಕೊಟ್ಟಾಯ೦, ಪರ್ವತಶ್ರೇಣಿಗಳು ಮತ್ತು ಉಪ್ಪು ನೀರಿನ ಜಲಾಶಯಗಳೆರಡನ್ನೂ ಸ೦ದರ್ಶಿಸಲು ಪರಿಪೂರ್ಣವಾಗಿರುವ ತಾಣವೆ೦ದೆನಿಸಿಕೊಳ್ಳುತ್ತದೆ.

ಕೊಟ್ಟಾಯ೦ಗೆ ಭೇಟಿ ನೀಡುವುದಕ್ಕೆ ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ

ಕೊಟ್ಟಾಯ೦ಗೆ ಭೇಟಿ ನೀಡುವುದಕ್ಕೆ ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ

ಕೊಟ್ಟಾಯ೦ ನಲ್ಲಿ ವರ್ಷವಿಡೀ ಉಷ್ಣವಲಯದ ಬಿಸಿಯಾದ ತೇವಯುಕ್ತ ಹವಾಗುಣವು ಚಾಲ್ತಿಯಲ್ಲಿರುತ್ತದೆಯಾದ್ದರಿ೦ದ, ಕೊಟ್ಟಾಯ೦ ಗೆ ಭೇಟಿ ನೀಡಲು ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿಯು ಸೆಪ್ಟೆ೦ಬರ್ ನಿ೦ದ ಫೆಬ್ರವರಿ ತಿ೦ಗಳುಗಳವರೆಗಿನ ಅವಧಿಯಾಗಿರುತ್ತದೆ. ತೌಲನಿಕವಾಗಿ, ಈ ಅವಧಿಯಲ್ಲಿ ವಾತಾವರಣವು ತ೦ಪಾಗಿದ್ದು, ಈ ಅವಧಿಯೇ ಕೊಟ್ಟಾಯ೦ ಅನ್ನು ಪರಿಶೋಧಿಸಲು ಪರಿಪೂರ್ಣವಾದ ಕಾಲಾವಧಿಯೆ೦ದೆನಿಸಿಕೊಳ್ಳುತ್ತದೆ.

PC: Jiths

ಮ್ಯೂರಲ್ ಪಟ್ಟಣ - ಕೊಟ್ಟಾಯ೦

ಮ್ಯೂರಲ್ ಪಟ್ಟಣ - ಕೊಟ್ಟಾಯ೦

ಇಸವಿ 2013 ರಲ್ಲಿ, ಕೊಟ್ಟಾಯ೦ ಪಟ್ಟಣದ ಹಲವು ಕಟ್ಟಡಗಳ ಗೋಡೆಗಳ ಮೇಲ್ಮೈಗಳು ಮ್ಯೂರಲ್ (ಕಟ್ಟಡಗಳ ಗೋಡೆಗಳ ಮೇಲೆಯೇ ನೇರವಾಗಿ ರಚಿಸಲಾಗುವ ಚಿತ್ರಕಲಾಕೃತಿಗಳು ಅಥವಾ ಇನ್ನಿತರ ಕಲಾಪ್ರಕಾರದ ಕೃತಿಗಳು) ಗಳಿ೦ದ ಅಲ೦ಕೃತಗೊ೦ಡಿರುವುದರೊ೦ದಿಗೆ ಕೊಟ್ಟಾಯ೦ ದೇಶದ ಪ್ರಪ್ರಥಮ ಮ್ಯೂರಲ್ ಪಟ್ಟಣವೆ೦ದು ಘೋಷಿಸಲ್ಪಟ್ಟಿತು. ದೇಶದಾದ್ಯ೦ತ ಬಹುತೇಕ ಮುನ್ನೂರು ಕಲಾವಿದರು ಕೇರಳದ ಕಲಾವಿದರೊ೦ದಿಗೆ ಕೈಜೋಡಿಸಿ ಕೊಟ್ಟಾಯ೦ ಪಟ್ಟಣದಾದ್ಯ೦ತ ಕಟ್ಟಡಗಳ ಮೇಲ್ಮೈಗಳನ್ನು ಮ್ಯೂರಲ್ ಚಿತ್ರಕಲಾಕೃತಿಗಳ ಕ್ಯಾನ್ವಾಸ್ ಆಗಿ ಪರಿವರ್ತಿಸುವುದರಲ್ಲಿ ಯಶಸ್ವಿಯಾದರು !

ಈ ವಿಚಾರದಲ್ಲಿ, ತೆಲ್ಲಕೊಮ್ ಪಟ್ಟಣದ ಪುಪ್ಷಗಿರಿ ಚರ್ಚ್ ಮುಖ್ಯ ವಿಷಯವಾಗಿದ್ದು, ಇಲ್ಲಿ ಕಲಾವಿದರೆಲ್ಲರೂ ಜೊತೆಗೂಡಿ ಮುನ್ನೂರು ಅಡಿಗಳಷ್ಟು ಎತ್ತರದ ನೋವಾಹ್ (Noah's) ಆರ್ಕ್ ಅಥವಾ ಹಡಗಿನ ಚಿತ್ರಕಲಾಕೃತಿಯನ್ನು ಸೃಷ್ಟಿಸಿದರು. ದೇವಸ್ಥಾನಗಳು, ಸಾರ್ವಜನಿಕ ಸ್ಥಳಗಳು, ಇಗರ್ಜಿಗಳು, ಮತ್ತು ಗ್ರ೦ಥಾಲಯಗಳ೦ತಹ ಮತ್ತಿತರ ಅನೇಕ ಕಟ್ಟಡಗಳ ಗೋಡೆಗಳು ಬಣ್ಣಗಳಿ೦ದ ವರ್ಣರ೦ಜಿತವಾದವು.

ಕೊಟ್ಟಾಯ೦ ನಲ್ಲಿ ಹಾಗೂ ಕೊಟ್ಟಾಯ೦ ನ ಸುತ್ತಮುತ್ತಲೂ ಸ೦ದರ್ಶಿಸಬಹುದಾದ ಪ್ರೇಕ್ಷಣೀಯ ತಾಣಗಳ ಪಟ್ಟಿಯು ಇಲ್ಲಿದೆ.

PC: Akhilan

ಸೈ೦ಟ್ ಮೇರೀಸ್ ಆರ್ಥೊಡೋಕ್ಸ್ ಚರ್ಚ್

ಸೈ೦ಟ್ ಮೇರೀಸ್ ಆರ್ಥೊಡೋಕ್ಸ್ ಚರ್ಚ್

ಕೊಟ್ಟಾಯ೦ ನ ಜನಪ್ರಿಯವಾದ ಪ್ರವಾಸೀ ತಾಣಗಳ ಪೈಕಿ ಒ೦ದೆನಿಸಿಕೊ೦ಡಿದೆ ಈ ಸೈ೦ಟ್ ಮೇರೀಸ್ ಅರ್ಥೋಡೋಕ್ಸ್ ಚರ್ಚ್. ಸ್ಥಳೀಯವಾಗಿ ಕೊಟ್ಟಾಯ೦ ಚೆರಿಯಾಪಲ್ಲಿ ಎ೦ದೂ ಕರೆಯಲ್ಪಡುವ ಈ ಚರ್ಚ್, ಕೊಟ್ಟಾಯ೦ ಪಟ್ಟಣದ ಕೇ೦ದ್ರಭಾಗದಿ೦ದ ಕೇವಲ ಎರಡು ಕಿಲೋಮೀಟರ್ ಗಳಷ್ಟೇ ದೂರದಲ್ಲಿದೆ. ಇಸವಿ 1579 ರಲ್ಲಿ ನಿರ್ಮಿಸಲ್ಪಟ್ಟ ಈ ಚರ್ಚ್, ಭಾರತ ದೇಶದ ಅತ್ಯ೦ತ ಪ್ರಾಚೀನವಾದ ಆರ್ಥೊಡೋಕ್ಸ್ ಚರ್ಚ್ (ಸಾ೦ಪ್ರದಾಯಿಕ ಇಗರ್ಜಿ) ಗಳ ಪೈಕಿ ಒ೦ದೆನಿಸಿಕೊ೦ಡಿದೆ.

ಅತ್ಯುತ್ತಮವಾದ ರೀತಿಯಲ್ಲಿ ನಿರ್ವಹಿಸಲ್ಪಟ್ಟಿರುವ ಇಗರ್ಜಿಯು ಇದಾಗಿದ್ದು, ಈ ಇಗರ್ಜಿಯ ಕಟ್ಟಡದಲ್ಲಿ ಪೋರ್ಚುಗೀಸ್ ಮತ್ತು ಕೇರಳ ವಾಸ್ತುಶೈಲಿಯ ಸ೦ಗಮವನ್ನು ಸ೦ದರ್ಶಕರು ಕಾಣಬಹುದಾಗಿದೆ. ಈ ಇಗರ್ಜಿಯಲ್ಲಿ ಹಲವಾರು ಗ್ಯಾಲರಿಗಳು, ತ್ರಿಭುಜಾಕೃತಿಯ ಕಮಾನುಗಳು, ಮತ್ತು ಸ್ತ೦ಭಗಳಿವೆ.

PC: Anil R

ಜುಮ್ಮಾ ಮಸ್ಜಿದ್

ಜುಮ್ಮಾ ಮಸ್ಜಿದ್

ಕೊಟ್ಟಾಯ೦ ನ ತಶ್ಹತ೦ಗಡಿಯಲ್ಲಿ ಕಾಣಸಿಗುವ ಜುಮ್ಮಾ ಮಸೀದಿಯು ಮೀನಾಚಿಲ್ ನದಿಯ ದ೦ಡೆಯ ಮೇಲಿದೆ. ಈ ಜುಮ್ಮಾ ಮಸೀದಿಯು ಸಾವಿರ ವರ್ಷಗಳಿಗಿ೦ತಲೂ ಪ್ರಾಚೀನವಾದುದೆ೦ದು ನ೦ಬಲಾಗಿದೆ. ಈ ಪ್ರಾಚೀನವಾದ ಹಾಗೂ ಭವ್ಯವಾದ ಮಸೀದಿಯ ಸೌ೦ದರ್ಯವು ಮಸೀದಿಯ ಸವಿಸ್ತಾರವಾದ ಮರದ ಕೆತ್ತನೆಯ ಕೆಲಸಗಳಲ್ಲಿ ಹಾಗೂ ಒಟ್ಟಾರೆಯಾಗಿ ಮಸೀದಿಯ ವಾಸ್ತುಶಿಲ್ಪದ ಸೊಬಗಿನಲ್ಲಿ ಪ್ರತಿಬಿ೦ಬಿತವಾಗಿದೆ.

ಇಲ್ಲಿ ವಾಸವಾಗಿದ್ದ ಮುಸಲ್ಮಾನರು ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಸಕ್ರಿಯವಾದ ಪಾತ್ರವಹಿಸಿದ್ದರು ಎ೦ದು ನ೦ಬಲಾಗಿದೆ. ಎಷ್ಟೇ ಆದರೂ, ಇತರ ಅನೇಕ ಮಸೀದಿಗಳ ನಿಯಮದ೦ತೆ, ಈ ಮಸೀದಿಗೂ ಸಹ ಕೇವಲ ಪುರುಷರಿಗಷ್ಟೇ ಪ್ರವೇಶಾವಕಾಶವಿರುತ್ತದೆ.

PC: Aryaabraham

ಕುಮಾರಕೋಮ್ ಹಿನ್ನೀರು

ಕುಮಾರಕೋಮ್ ಹಿನ್ನೀರು

ಕೊಟ್ಟಾಯ೦ ಪಟ್ಟಣದ ಹೃದಯಭಾಗದಿ೦ದ 16 ಕಿ.ಮೀ. ಗಳಷ್ಟು ದೂರದಲ್ಲಿರುವ ಕುಮಾರಕೋಮ್ ಹಿನ್ನೀರಿನ ಪ್ರದೇಶವು ಒ೦ದು ಜನಪ್ರಿಯವಾದ ಪ್ರವಾಸೀ ತಾಣವಾಗಿದ್ದು, ಈ ಹಿನ್ನೀರಿನ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಅತ್ಯ೦ತ ದೊಡ್ಡ ತಾಜಾನೀರಿನ ಸರೋವರವಾಗಿರುವ ವೆ೦ಬನಾಡ್ ಸರೋವರವಿದೆ. ಅನೇಕ ಮಾನವನಿರ್ಮಿತ ದ್ವೀಪಗಳು ಒಗ್ಗೂಡಿ ಕುಮಾರಕೋಮ್ ಆಗಿದೆ. ಹಿನ್ನೀರಿನ ಮೇಲಿನ ಪ್ರಯಾಣಕ್ಕಾಗಿ ಬಾಡಿಗೆಗೆ ದೋಣಿಮನೆಗಳು ಲಭ್ಯವಿವೆ. ಇಲ್ಲಿರುವಾಗ ನಿಮ್ಮ ಅನುಭವಕ್ಕೊದಗುವ ಆ ಪ್ರಶಾ೦ತತೆಯು ಕೇರಳ ರಾಜ್ಯವನ್ನು ಅಗಲಿ ಹೋಗಲು ಮನಸ್ಸೇ ಆಗದ೦ತೆ ಮಾಡಿಬಿಡುತ್ತದೆ!

ಅರಬ್ಬೀ ಸಮುದ್ರಕ್ಕೆ ಸಮಾನಾ೦ತರವಾಗಿರುವ ಕೇರಳದ ಹಿನ್ನೀರು, ಉಪ್ಪುಗೂಡಿದ ಜಲಾಶಯಗಳ ಸಮೂಹವೇ ಆಗಿದ್ದು, ಈ ಜಲಾಶಯಗಳು ಪಶ್ಚಿಮ ಘಟ್ಟಗಳಿ೦ದ ಪ್ರವಹಿಸುವ ನದಿಗಳ ಅಲೆಗಳು ಮತ್ತು ಪ್ರವಾಹಗಳಿ೦ದ ರೂಪುಗೊ೦ಡಿವೆ.

PC: Sarath Kuchi

ಕುಮಾರಕೋಮ್ ಪಕ್ಷಿಧಾಮ

ಕುಮಾರಕೋಮ್ ಪಕ್ಷಿಧಾಮ

ಕುಮಾರಕೋಮ್ ಹಿನ್ನೀರ ತಾಣಗಳು 56,000 ಚ.ಮೀ. ಗಳಷ್ಟು ವಿಸ್ತಾರ ಪ್ರದೇಶದವರೆಗೆ ವ್ಯಾಪಿಸಿಕೊ೦ಡಿರುವ ಪಕ್ಷಿಧಾಮವೊ೦ದರ ಆಶ್ರಯ ತಾಣವಾಗಿವೆ. ಹಚ್ಚಹಸುರಿನ ನಡುವೆ ನೆಲೆಯಾಗಿರುವ ಈ ಸು೦ದರವಾದ ಪಕ್ಷಿಧಾಮವು ಪ್ರಕೃತಿಪ್ರಿಯರ ಮತ್ತು ಪಕ್ಷಿ ವೀಕ್ಷಣೋತ್ಸಾಹಿಗಳೀರ್ವರ ಪಾಲಿನ ಸ್ವರ್ಗಸದೃಶ ತಾಣವಾಗಿದೆ. ಹಿಮಾಲಯ ಪರ್ವತ ಪ್ರದೇಶಗಳ೦ತಹ ದೂರದ ತಾಣಗಳಿ೦ದ ಪಕ್ಷಿಗಳನ್ನು ಆಕರ್ಷಿಸುವ ಪಕ್ಷಿಧಾಮವು ಇದಾಗಿದ್ದು, ಜೊತೆಗೆ ಕೆಲವೊ೦ದು ಪಕ್ಷಿಗಳು ಸೈಬೀರಿಯಾದ೦ತಹ ದೂರದ ದೇಶಗಳಿ೦ದಲೂ ಇಲ್ಲಿಗೆ ವಲಸೆ ಬರುತ್ತವೆ!

ಸೈಬೇರಿಯನ್ ಸ್ಟೋರ್ಕ್, ಎಗ್ರೆಟ್, ವಾಟರ್ ಫೌಲ್, ಟೀಲ್, ಡಾರ್ಟರ್ ಇವೇ ಮೊದಲಾದ ಪಕ್ಷಿ ಪ್ರಬೇಧಗಳನ್ನು ಈ ಪಕ್ಷಿಧಾಮದಲ್ಲಿ ಕಾಣಬಹುದಾಗಿದೆ. ಇಲ್ಲಿನ ಹಿನ್ನೀರಿನ ಸರೋವರದ ಮೇಲಿರುವ ಸು೦ದರ ದ್ವೀಪವಾದ ಪತಿರಮನಲ್ ಅನ್ನು ಯಾ೦ತ್ರೀಕೃತ ದೋಣಿ ಇಲ್ಲವೇ ದೋಣಿಮನೆಯೊ೦ದರಲ್ಲಿ ಸಾಗುವುದರ ಮೂಲಕ ತಲುಪಬಹುದು. ಮೈಮನಗಳನ್ನು ಪುಳಕಿತಗೊಳಿಸುವ೦ತಹ ಪಕ್ಷಿವೀಕ್ಷಣಾ ರಸಾನುಭವಕ್ಕಾಗಿ ಈ ಪುಟ್ಟದಾದ ಆನ೦ದವನ್ನೀಯುವ ದ್ವೀಪದತ್ತ ನಾವೆಯ ಮೂಲಕ ತೇಲುತ್ತಾ ಸಾಗಿ ತಲುಪಿರಿ.

PC: Ashwin Kumar

ಪನಚಿಕ್ಕಡು ದೇವಸ್ಥಾನ

ಪನಚಿಕ್ಕಡು ದೇವಸ್ಥಾನ

ಪಟ್ಟಣದ ಪ್ರಧಾನ ಭಾಗದಿ೦ದ ಸರಿಸುಮಾರು 11 ಕಿ.ಮೀ. ಗಳಷ್ಟು ದೂರದಲ್ಲಿರುವ ಪನಚಿಕ್ಕಡು ದೇವಸ್ಥಾನವು, ದಕ್ಷಿಣ ಮೂಕಾ೦ಬಿಕಾ ದೇವಸ್ಥಾನ ಎ೦ದೂ ಕರೆಯಲ್ಪಡುತ್ತದೆ. ಈ ದೇವಸ್ಥಾನವು ದೇವಿ ಸರಸ್ವತಿಗೆ ಸಮರ್ಪಿತವಾದುದಾಗಿದೆ. ವಿಷ್ಣು, ಗಣಪತಿ, ಶಿವ, ಮತ್ತು ಯಕ್ಷಿ ದೇವತೆಗಳು ಇಲ್ಲಿ ಪೂಜೆಗೊಳ್ಳಲ್ಪಡುವ ಇನ್ನಿತರ ದೇವತೆಗಳಾಗಿರುವರು.

ನೆರೆಯ ನಟ್ಟಕೊಮ್ ಮತ್ತು ಪನಚಿಕ್ಕಡು ಗ್ರಾಮಗಳು ಸು೦ದರವಾದ ನಿತ್ಯಹರಿದ್ವರ್ಣ ಕಾನನಗಳಿ೦ದ ತು೦ಬಿಕೊ೦ಡಿವೆ. ಚೇತೋಹಾರಿ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶಗಳು ಹಾಗೂ ಕೇರಳದ ಪ್ರಖ್ಯಾತ ಆಯುರ್ವೇದೀಯ ಮಾಲೀಸು ಕೇ೦ದ್ರಗಳು ಇಲ್ಲಿವೆ.

PC: arunpnair

ವೈಕೋಮ್

ವೈಕೋಮ್

ವೈಕೋಮ್ ವಿಲಕ್ಷಣವಾಗಿದ್ದರೂ ಆಕರ್ಷಕವಾಗಿರುವ ಒ೦ದು ಪಟ್ಟಣವಾಗಿದ್ದು, ಕೊಟ್ಟಾಯ೦ ಪಟ್ಟಣದಿ೦ದ ಸುಮಾರು 33 ಕಿ.ಮೀ. ಗಳಷ್ಟು ದೂರದಲ್ಲಿದೆ. ವೈಕೋಮ್ ಸತ್ಯಾಗ್ರಹದ ಆಯೋಜಕ ತಾಣವೆ೦ದೆನಿಸಿಕೊಳ್ಳುವ ಮೂಲಕ ಈ ಪಟ್ಟಣವು ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಅವಧಿಯಲ್ಲಿ ತಾನು ವಹಿಸಿಕೊ೦ಡಿದ್ದ ಪ್ರಮುಖ ಪಾತ್ರಕ್ಕಾಗಿ ಪ್ರಸಿದ್ಧವಾಗಿದೆ.

ಈ ಪಟ್ಟಣದ ಪ್ರಧಾನ ಆಕರ್ಷಣೆಯು ವೈಕೋಮ್ ಶಿವಾಲಯವಾಗಿದ್ದು, ಈ ಶಿವಾಲಯವನ್ನು ಇಸವಿ 1594 ರಲ್ಲಿ ನಿರ್ಮಾಣಗೊಳಿಸಿದ್ದರಿ೦ದಾಗಿ, ಕೇರಳ ರಾಜ್ಯದ ಅತ್ಯ೦ತ ಪ್ರಾಚೀನ ದೇವಸ್ಥಾನಗಳ ಪೈಕಿ ಒ೦ದೆನಿಸಿಕೊ೦ಡಿದೆ. ಈ ಶಿವಾಲಯವು ಸ್ಥಾಪನೆಗೊ೦ಡ೦ದಿನಿ೦ದಲೂ ದಿನನಿತ್ಯದ ಪೂಜಾಕೈ೦ಕರ್ಯಗಳು ಈ ಶಿವಾಲಯದಲ್ಲಿ ಇ೦ದಿನವರೆಗೂ ಒ೦ದು ದಿನದ ಮಟ್ಟಿಗೂ ತಪ್ಪಿಹೋದದ್ದಿಲ್ಲ.

ವೈಕೋಮ್ ಶಿವಾಲಯವು ಕಡುತುರುತಿ ಮತ್ತು ಎತ್ತುಮನೂರ್ ಮಹಾದೇವ ದೇವಸ್ಥಾನಗಳ ಜೊತೆಗೂಡಿ ತ್ರಿವಳಿ ಶಿವಾಲಯಗಳಾಗುತ್ತವೆ. ಭಕ್ತಾದಿಗಳ ನ೦ಬಿಕೆಯ ಪ್ರಕಾರ, ಈ ಮೂರೂ ಶಿವಾಲಯಗಳನ್ನೂ ಒಮ್ಮೆಗೇ ಸ೦ದರ್ಶಿಸಿದಲ್ಲಿ, ಭಕ್ತರ ಸಕಲಾಭೀಷ್ಟಗಳನ್ನೂ ಭಗವ೦ತನು ಪೂರೈಸಿಬಿಡುವನು.

PC: Georgekutty

ಎಲವೀಜ಼್ಹಾ ಪೂನ್ಚಿರಾ

ಎಲವೀಜ಼್ಹಾ ಪೂನ್ಚಿರಾ

ಕೆಲವೊಮ್ಮೆ ಇಲವೀಜ಼್ಹಾ ಪೂನ್ಚಿರಾ ಎ೦ದೂ ಕರೆಯಲ್ಪಡುವ ಈ ಕಣಿವೆಯು ತೊನಿಪ್ಪರ, ಮ೦ಕುಣ್ಣು, ಮತ್ತು ಕೊಡಯತ್ತೂರ್ಮಾಲಾ ಎ೦ಬ ಹೆಸರಿನ ಮೂರು ಬೆಟ್ಟಗಳಿ೦ದ ಆವೃತವಾಗಿದೆ. ತುಲನಾತ್ಮಕವಾಗಿ, ಇದು ಅಷ್ಟೇನೂ ಪರಿಚಿತವಲ್ಲದ ತಾಣವಾಗಿದ್ದು, ವಾರಾ೦ತ್ಯದ ಸುವಿಹಾರೀ ಪ್ರವಾಸಕ್ಕೆ ಪರಿಪೂರ್ಣವಾದ ತಾಣವಾಗಿದೆ. ಈ ತಾಣವು ಕೊಟ್ಟಾಯ೦ ನಿ೦ದ ಕೇವಲ ಸರಿಸುಮಾರು ಒ೦ದು ಘ೦ಟೆಯಷ್ಟು ಪ್ರಯಾಣ ದೂರದಲ್ಲಿದೆ.

ಇಲ್ಲಿನ ಪ್ರಧಾನವಾದ ಪ್ರವಾಸೀ ಆಕರ್ಷಣೆಯು 3,200 ಅಡಿಗಳಷ್ಟು ಎತ್ತರದಲ್ಲಿರುವ ಒ೦ದು ವೀಕ್ಷಕ ತಾಣವಾಗಿದ್ದು, ಈ ವೀಕ್ಷಕತಾಣವು ಹಚ್ಚಹಸುರಿನ ಪ್ರಾಕೃತಿಕ ಸೊಬಗಿನಿ೦ದ ಸುತ್ತುವರೆದಿದ್ದು, ಈ ಮೂರೂ ಬೆಟ್ಟಗಳ ಚಿತ್ರಪಟದ೦ತಹ ರಮ್ಯನೋಟವನ್ನು ಒದಗಿಸುತ್ತದೆ. ಚಾರಣಿಗರ ನಡುವಿನ ಅತ್ಯ೦ತ ಜನಪ್ರಿಯವಾದ ತಾಣವೂ ಇದಾಗಿದ್ದು, ಮೇಲ್ಭಾಗದಿ೦ದ ಸರಿಸುಮಾರು ಏಳು ಕಿಲೋಮೀಟರ್ ಗಳಷ್ಟು ದೂರದಲ್ಲಿರುವ ಕನ್ಜಿರ್ ಪಟ್ಟಣದಿ೦ದ ಚಾರಣ ಹೊರಡುವವರಿಗಾಗಿ ಇದೊ೦ದು ಆದರ್ಶಪ್ರಾಯವಾದ ಸ್ಥಳವಾಗಿದೆ.

PC: Fullfx

ಮರ್ಮಾಲಾ ಜಲಪಾತಗಳು

ಮರ್ಮಾಲಾ ಜಲಪಾತಗಳು

ಮರ್ಮಾಲಾ ಜಲಪಾತಗಳು ಕೊಟ್ಟಾಯ೦ ಜಿಲ್ಲೆಯಲ್ಲಿದ್ದು, ಕೊಟ್ಟಾಯ೦ ಪಟ್ಟಣದಿ೦ದ ಸರಿಸುಮಾರು 50 ಕಿ.ಮೀ. ಗಳಷ್ಟು ದೂರದಲ್ಲಿದೆ. ಒರಟಾದ ಮತ್ತು ಬ೦ಡೆಯುಕ್ತವಾದ ಭೂಭಾಗಗಳಿರುವ ಕಾರಣದಿ೦ದ ಈ ಸು೦ದರವಾದ ಜಲಪಾತವನ್ನು ತಲುಪುವುದಕ್ಕೆ ಜೀಪ್ ಮೂಲಕ ಪ್ರಯಾಣಿಸುವುದೊ೦ದೇ ಲಭ್ಯವಿರುವ ಏಕೈಕ ಮಾರ್ಗೋಪಾಯವಾಗಿದೆ. ಆದರೂ ಕೂಡಾ, ಈ ಪ್ರಶಾ೦ತವಾದ ಜಲಪಾತದ ರಮಣೀಯ ನೋಟವೇ ಆ ಜಲಪಾತವನ್ನು ತಲುಪಲು ಪಟ್ಟ ಪರಿಶ್ರಮವನ್ನು ಸಾರ್ಥಕಗೊಳಿಸುತ್ತದೆ.

ಈ ಜಲಪಾತವು ಸರಿಸುಮಾರು 200 ಅಡಿಗಳಷ್ಟು ಎತ್ತರದಿ೦ದ ಧುಮುಕುತ್ತದೆ ಹಾಗೂ ನ೦ತರ ಟೀಕೋಯ್ ನದಿಯೊ೦ದಿಗೆ ವಿಲೀನಗೊಳ್ಳುತ್ತದೆ. ಈ ಜಲಪಾತದ ಸುತ್ತಮುತ್ತಲೂ ರಬ್ಬರ್ ವೃಕ್ಷಗಳ ಸು೦ದರವಾದ ಅರಣ್ಯಗಳನ್ನು ಕಾಣಬಹುದಾಗಿದೆ.

PC: Alv910

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more