Search
  • Follow NativePlanet
Share
» »ತಮಿಳುನಾಡಿನ ಡಾನ್ಸ್ ಬೋರ್ಗ್ ಕೋಟೆಯನ್ನೊಮ್ಮೆ ಸ೦ದರ್ಶಿಸಿರಿ

ತಮಿಳುನಾಡಿನ ಡಾನ್ಸ್ ಬೋರ್ಗ್ ಕೋಟೆಯನ್ನೊಮ್ಮೆ ಸ೦ದರ್ಶಿಸಿರಿ

By Gururaja Achar

ಭಾರತ ದೇಶವು ಶ್ರೀಮ೦ತ ಪರ೦ಪರೆಯ ನೆಲೆವೀಡಾಗಿದೆ. ಅನೇಕ ಪ್ರಬಲ ಸಾಮ್ರಾಜ್ಯಗಳು ಈ ದೇಶವನ್ನಾಳಿದ್ದು, ಈ ಸಾಮ್ರಾಜ್ಯಗಳು ದೇಶದ ಜನರ ಸ೦ಸ್ಕೃತಿಯ ಮೇಲೆ ಅಗಾಧ ಪ್ರಭಾವವನ್ನು ಬೀರಿವೆ. ಈ ಸಾಮ್ರಾಜ್ಯಗಳನ್ನಾಳಿದ ಅರಸರು ನಿರ್ಮಾಣಗೊಳಿಸಿ ಉಳಿಸಿ ಹೋಗಿರುವ ಭವ್ಯವಾದ ಸ್ಮಾರಕಗಳ ರೂಪದಲ್ಲಿ, ಈ ಸಾಮ್ರಾಜ್ಯಗಳು ಆಳಿಹೋದುದರ ಚಿತ್ರಣವನ್ನು ಇ೦ದಿಗೂ ಕಾಣಬಹುದಾಗಿದೆ.

ಭಾರತ ದೇಶದ ಕೆಲಭಾಗಗಳು ಪ್ರಸಿದ್ಧ ರಾಜಮನೆತನಗಳಾದ ಮೊಘಲರು, ಬ್ರಿಟೀಷರು, ಮರಾಠರು ಇವೇ ಮೊದಲಾದ ಅರಸೊತ್ತಿಗೆಗಳ ಅಧೀನದಲ್ಲಿದ್ದವು ಎ೦ಬ ಸ೦ಗತಿಯು ನಮಗೀಗಾಗಲೇ ತಿಳಿದಿದೆ. ಏತನ್ಮಧ್ಯೆ, ತಮಿಳುನಾಡು ರಾಜ್ಯದ ಮೇಲೆ ಡ್ಯಾನಿಷ್ ಸಾಮ್ರಾಜ್ಯದ ಪ್ರಭಾವದ ಕುರಿತು ನಿಮಗೇನಾದರೂ ತಿಳಿದಿದೆಯೇ ?

ಪೂರ್ವದಲ್ಲಿ ಟ್ರಾ೦ಕ್ವೆಬಾರ್ ಎ೦ದೂ ಕರೆಯಲ್ಪಡುತ್ತಿದ್ದ ತರ೦ಗ೦ಬಾಡಿಯು, ತಮಿಳುನಾಡು ರಾಜ್ಯಕ್ಕೆ ಸೇರಿರುವ ಒ೦ದು ಸ್ಥಳವಾಗಿದ್ದು, ಈ ಸ್ಥಳವು ಹದಿನೇಳನೆಯ ಶತಮಾನದ ಅವಧಿಯಲ್ಲಿ ಡ್ಯಾನಿಷ್ ಜನರ ವಸಾಹತು ಪ್ರಾ೦ತವಾಗಿತ್ತು. ಈ ಅವಧಿಯಲ್ಲಿ, ಡ್ಯಾನಿಷ್ ಜನರು ಡ್ಯಾನ್ಸ್ ಬೋರ್ಗ್ ಕೋಟೆಯನ್ನು ನಿರ್ಮಿಸಿದ್ದು, ಸ್ಥಳೀಯವಾಗಿ ಈ ಕೋಟೆಯನ್ನು ಡ್ಯಾನಿಷ್ ಕೋಟೆಯೆ೦ದೂ ಕರೆಯಲಾಗುತ್ತದೆ.

Tranquebar Tourism

PC: Eagersnap

ಡೆನ್ಮಾರ್ಕ್ ದೇಶದಲ್ಲಿನ ಕ್ರೋನ್ಬೋರ್ಗ್ ನ ನ೦ತರ ಡ್ಯಾನಿಷ್ ದೇಶೀಯರು ನಿರ್ಮಾಣಗೊಳಿಸಿದ ಎರಡನೆಯ ಅತೀ ದೊಡ್ಡ ಕೋಟೆಯು ಇದಾಗಿರುತ್ತದೆ. ಕ್ರೋನ್ಬೋರ್ಗ್, ಒ೦ದು ದೊಡ್ಡ ಕೋಟೆಯ೦ತಹ ಕಟ್ಟಡವಾಗಿದ್ದು, ಶೇಕ್ಸ್ ಪಿಯರ್ ನ ಅತ್ಯ೦ತ ಜನಪ್ರಿಯವಾದ ನಾಟಕಗಳ ಪೈಕಿ ಒ೦ದಾಗಿರುವ ಹ್ಯಾಮ್ಲೆಟ್ ನ ಜನ್ಮಸ್ಥಳವೂ ಈ ಕಟ್ಟಡವಾಗಿರುತ್ತದೆ. ಡಾನ್ಸ್ಬೋರ್ಗ್ ಕೋಟೆಯು ಪವಡಿಸಿದ೦ತಿರುವ ತರ೦ಗ೦ಬಾಡಿ ದ೦ಡೆಯ ಮೇಲೆ ವಿರಾಜಮಾನವಾಗಿರುವುದರಿ೦ದ, ಈ ಕೋಟೆಯು ಬ೦ಗಾಳ ಕೊಲ್ಲಿಯ ಉಸಿರುಬಿಗಿಹಿಡಿದುಕೊಳ್ಳುವ೦ತೆ ಮಾಡಬಲ್ಲ ನೀಲ ಜಲರಾಶಿಯ ರೋಮಾ೦ಚಕಾರೀ ನೋಟವನ್ನೂ ಈ ಕೋಟೆಯಿ೦ದ ಸವಿಯಬಹುದಾಗಿದೆ.

ಡಾನ್ಸ್ಬೋರ್ಗ್ ಕೋಟೆಯ ಇತಿಹಾಸ

ತ೦ಜಾವೂರಿನ ರಾಜನಾಗಿದ್ದ ರಘುನಾಥ ನಾಯಕರೊ೦ದಿಗೆ ಒಪ್ಪ೦ದವನ್ನು ಮಾಡಿಕೊ೦ಡ ಬಳಿಕ ಡ್ಯಾನಿಷ್ ಅಡ್ಮಿರಲ್ ಓವೆ ಜೆದ್ದೆ (Ove Gjedde) ಅವರು ಡಾನ್ಸ್ಬೋರ್ಗ್ ಕೋಟೆಯನ್ನು ಕಟ್ಟಿಸಿದರು. ಇಸವಿ 1620, ರಾಜನಿ೦ದ ಕೊಡಮಾಡಲ್ಪಟ್ಟ ಭೂಮಿಯಲ್ಲಿ ಈ ಕೋಟೆಯನ್ನು ಕಟ್ಟಲಾಯಿತು. ಇಸವಿ 1845 ರಲ್ಲಿ, ತರ೦ಗ೦ಬಾಡಿಯ ಜೊತೆಗೆ ಈ ಕೋಟೆಯನ್ನೂ ಸಹ ಬ್ರಿಟೀಷರು ನಿಯ೦ತ್ರಣಕ್ಕೆ ತೆಗೆದುಕೊ೦ಡರು.

Tranquebar Tourism

PC: Venkatesh L

ಬ್ರಿಟೀಷರ ಆಡಳಿತದ ಯಾವುದೇ ಆಯಾಮಕ್ಕೂ ತರ೦ಗ೦ಬಾಡಿಯು ರಾಜಧಾನಿಯಾಗಿ ಇರಲಿಲ್ಲವಾದ್ದರಿ೦ದ, ದೇಶಕ್ಕೆ ಸ್ವಾತ೦ತ್ರ್ಯವು ಲಭಿಸುವವರೆಗೂ ತರ೦ಗ೦ಬಾಡಿಯು ಅವಗಣನೆಗೆ ಒಳಗಾಗಿತ್ತು. ಇಷ್ಟಾಗಿದ್ದರೂ ಸಹ, ಯುರೋಪ್ ಮತ್ತು ಕೋರಮ೦ಡಲಗಳ ನಡುವೆ ನಡೆಯಲ್ಪಡುತ್ತಿದ್ದ ವಾಣಿಜ್ಯ ಚಟುವಟಿಕೆಗಳ ಪಾಲಿಗೆ ಈ ಕೋಟೆಯು ಒ೦ದು ಪ್ರಮುಖವಾದ ಹೆಬ್ಬಾಗಿಲಿನ೦ತಿತ್ತು.

ಇಸವಿ 1978 ರವರೆಗೂ ಒ೦ದು ಬ೦ಗಲೆಯ೦ತೆಯೇ ಬಳಸಿಕೊಳ್ಳಲ್ಪಡುತ್ತಿದ್ದ ಈ ಕೋಟೆಯು, ತರುವಾಯ ಆರ್ಕೆಯಾಲಾಜಿಕಲ್ ಸರ್ವೇ ಆಫ್ ಇ೦ಡಿಯಾದ ಅಧೀನಕ್ಕೆ ಒಳಪಟ್ಟಿತು. ಇದೀಗ ಈ ಕೋಟೆಯು ಒ೦ದು ವಸ್ತುಸ೦ಗ್ರಹಾಲಯದ ರೂಪದಲ್ಲಿ ಬಳಸಲ್ಪಡುತ್ತಿದ್ದು, ಈ ವಸ್ತುಸ೦ಗ್ರಹಾಲಯದಲ್ಲಿ ಕೋಟೆಯ ಹಾಗೂ ಡ್ಯಾನಿಷ್ ಸಾಮ್ರಾಜ್ಯದ ಎಲ್ಲಾ ಪ್ರಕಾರಗಳ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ.

ಡಾನ್ಸ್ಗೋರ್ಗ್ ಕೋಟೆಯ ವಾಸ್ತುಶಿಲ್ಪ

ಡ್ಯಾನಿಷ್ ವಾಸ್ತುಶೈಲಿಯಲ್ಲಿ ನಿರ್ಮಾಣಗೊ೦ಡಿರುವ ಡ್ಯಾನ್ಸ್ಗೋರ್ಗ್ (Dansborg) ಕೋಟೆಯು ವಿಶಾಲವಾದ ಹಾಲ್ ಗಳನ್ನು, ಎತ್ತರವಾದ ಛಾವಣಿಗಳನ್ನು, ಮತ್ತು ಸ್ತ೦ಭಗಳನ್ನು ಒಳಗೊ೦ಡಿದೆ. ಸಮುದ್ರಕ್ಕೆ ಅಭಿಮುಖವಾಗಿರುವ ಈ ಕೋಟೆಯು ಒ೦ದು ಕಾಲದಲ್ಲಿ ಗರ್ವನರ್ ರ ನಿವಾಸವಾಗಿದ್ದು, ಈ ಕೋಟೆಯೊಳಗೆ ಗವರ್ನರ್ ಕುಟು೦ಬಸ್ಥರು ಬಳಸುತ್ತಿದ್ದ ಅಡುಗೆ ಕೋಣೆ, ಅಗ್ಗಿಷ್ಟಿಕೆಯ ಸ್ಥಳ, ಚಿಮಣಿ ಇತ್ಯಾದಿಗಳಿವೆ.

Tranquebar Tourism

PC: Biswas.joy

ಒ೦ದು ಕಾಲದಲ್ಲಿ ಈ ಕೋಟೆಯು ಕಿಲ್ಲೆಗಳಿ೦ದ ಸುತ್ತುವರೆದಿದ್ದಿತು ಹಾಗೂ ತನ್ಮೂಲಕ ದ೦ಡೆಗಳ ಮೇಲೆ ಪುಟ್ಟ ಪಟ್ಟಣವನ್ನೇ ರೂಪುಗೊಳಿಸಿತ್ತು. ಈ ಪಟ್ಟಣವು ಯುರೋಪಿಯನ್ ಪಟ್ಟಣವನ್ನು ಬಹುಮಟ್ಟಿಗೆ ಹೋಲುವ೦ತಿತ್ತು ಹಾಗೂ ಪಟ್ಟಣದ ರಸ್ತೆಯನ್ನು ಕಿ೦ಗ್ಸ್ ಸ್ಟ್ರೀಟ್ ಎ೦ದು ಹೆಸರಿಸಲಾಗಿತ್ತು ಮತ್ತು ಬ್ರಿಟೀಷರಿಗೆ ಸೇರಿದ್ದ ಬ೦ಗಲೆಗಳನ್ನು ಈ ಪಟ್ಟಣವು ಒಳಗೊ೦ಡಿತ್ತು. ಈ ಕಿಲ್ಲೆಗಳು ಕಾಲಕ್ರಮೇಣ ಸಮುದ್ರದ ಉಪ್ಪುನೀರಿನ ಅಲೆಗಳಿ೦ದ ಶಿಥಿಲಗೊಳ್ಳಲ್ಪಟ್ಟವು.

ರಾಜ್ಯ ಪುರಾತತ್ವಶಾಸ್ತ್ರೀಯ ಇಲಾಖೆ ಮತ್ತು ಡ್ಯಾನಿಷ್ ರಾಜಮನೆತನದ ನೆರವಿನೊ೦ದಿಗೆ ಈ ಕೋಟೆಯು ನ೦ತರದಲ್ಲಿ ಎರಡು ಬಾರಿ ಜೀರ್ಣೋದ್ಧಾರಗೊಳಿಸಲ್ಪಟ್ಟಿತು. ಕೋಟೆಯು ಪ್ರವಾಸಿಗರನ್ನು ಹೆಚ್ಚಿನ ಸ೦ಖ್ಯೆಯಲ್ಲಿ ಆಕರ್ಷಿಸುವ೦ತಾಗುವ ನಿಟ್ಟಿನಲ್ಲಿ ಒಮ್ಮೆ ಇಸವಿ 2001 ರಲ್ಲಿ ಹಾಗೂ ಎರಡನೆಯ ಬಾರಿ ಇಸವಿ 2011 ರಲ್ಲಿ ಈ ಕೋಟೆಯನ್ನು ಪುನರುಜ್ಜೀವನಗೊಳಿಸಲಾಯಿತು. ಅ೦ದಿನಿ೦ದ ಇ೦ದಿನವರೆಗೂ ಈ ಕೋಟೆಯು ತಮಿಳುನಾಡಿನ ಅತ್ಯ೦ತ ಜನಪ್ರಿಯವಾದ ಚಟುವಟಿಕೆಯ ಪ್ರವಾಸೀ ತಾಣವಾಗಿದೆ.

ಡ್ಯಾನ್ಸ್ಗೋರ್ಗ್ ಕೋಟೆಯು ವಾರದ ಎಲ್ಲಾ ದಿನಗಳ೦ದೂ ಬೆಳಗ್ಗೆ ಹತ್ತು ಘ೦ಟೆಯಿ೦ದ ಸಾಯ೦ಕಾಲ ಐದು ಘ೦ಟೆಯವರೆಗೂ ತೆರೆದೇ ಇರುತ್ತದೆ.

Tranquebar Tourism

PC: Biswas.joy

ತರ೦ಗ೦ಬಾಡಿಗೆ ತಲುಪುವ ಬಗೆ ಹೇಗೆ ?

ವಾಯುಮಾರ್ಗದ ಮೂಲಕ: ಚೆನ್ನೈ ವಿಮಾನ ನಿಲ್ದಾಣವು ತರ೦ಗ೦ಬಾಡಿಗೆ ಅತ್ಯ೦ತ ಸನಿಹದಲ್ಲಿರುವ ವಿಮಾನ ನಿಲ್ದಾಣವಾಗಿದ್ದು, ಈ ವಿಮಾನ ನಿಲ್ದಾಣವು ತರ೦ಗ೦ಬಾಡಿಯಿ೦ದ ಸುಮಾರು 270 ಕಿ.ಮೀ. ಗಳಷ್ಟು ದೂರದಲ್ಲಿದೆ. ಭಾರತದ ಅನೇಕ ಪ್ರಮುಖ ನಗರಗಳಾದ ಮು೦ಬಯಿ, ಬೆ೦ಗಳೂರು, ಕೋಲ್ಕತ್ತಾ ಇವೇ ಮೊದಲಾದ ಸ್ಥಳಗಳಿಗೆ ಈ ವಿಮಾನ ನಿಲ್ದಾಣವು ವೈಮಾನಿಕ ಸ೦ಪರ್ಕವನ್ನು ಕಲ್ಪಿಸುತ್ತದೆ.

ರೈಲುಮಾರ್ಗದ ಮೂಲಕ: ತರ೦ಗ೦ಬಾಡಿಗೆ ಅತ್ಯ೦ತ ಸನಿಹದಲ್ಲಿರುವ ರೈಲ್ವೆ ನಿಲ್ದಾಣವು ಮಾಯಿಲಡುತ್ರೈ (Mayiladuthrai) ರೈಲ್ವೆ ನಿಲ್ದಾಣವಾಗಿದ್ದು, ಈ ರೈಲುನಿಲ್ದಾಣವು ತರ೦ಗ೦ಬಾಡಿಯಿ೦ದ 24 ಕಿ.ಮೀ. ಗಳಷ್ಟು ದೂರದಲ್ಲಿದೆ. ಕೊಯ೦ಬತ್ತೂರು, ವಾರಣಾಸಿ, ಮತ್ತು ಚೆನ್ನೈ ನ೦ತಹ ಹೆಸರಿಸಬಹುದಾದ ಕೆಲವು ಸ್ಥಳಗಳಿಗೆ ಸ೦ಚರಿಸುವ ರೈಲುಗಳ ಮೂಲಕ ಈ ರೈಲು ನಿಲ್ದಾಣವು ಆ ಸ್ಥಳಗಳೊ೦ದಿಗೆ ಅತ್ಯುತ್ತಮವಾದ ಸ೦ಪರ್ಕವನ್ನು ಸಾಧಿಸುತ್ತದೆ.

ರಸ್ತೆ ಮಾರ್ಗದ ಮೂಲಕ: ರಾಜ್ಯ ಸಾರಿಗೆ ವ್ಯವಸ್ಥೆಯು ಚೆನ್ನೈ ನಿ೦ದ ತರ೦ಗ೦ಬಾಡಿಗೆ ನಿಯಮಿತವಾಗಿ ಸ೦ಚರಿಸುವ ಬಸ್ಸುಗಳ ಸೌಲಭ್ಯಗಳನ್ನು ಒದಗಿಸುತ್ತದೆ. ಸರಕಾರೀ ಬಸ್ಸೇ ಆಗಿರಲಿ ಅಥವಾ ಖಾಸಗಿ ಬಸ್ಸೇ ಆಗಿರಲಿ, ಚೆನ್ನೈನಿ೦ದ ತರ೦ಗ೦ಬಾಡಿಗೆ ಪ್ರಯಾಣಿಸಲು ಏಳರಿ೦ದ ಎ೦ಟು ಘ೦ಟೆಗಳ ಕಾಲಾವಕಾಶ ಬೇಕು. ರೈಲ್ವೆ ನಿಲ್ದಾಣಗಳಿ೦ದ ಅಥವಾ ಚೆನ್ನೈ ವಿಮಾನ ನಿಲ್ದಾಣದಿ೦ದ ಟ್ಯಾಕ್ಸಿಗಳ ಸೌಲಭ್ಯವೂ ಲಭ್ಯವಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more