Search
  • Follow NativePlanet
Share
» »ಕೇರಳದ ಶ್ರೀಮಂತಿಕೆಯಿಂದ ಕಂಗೊಳಿಸುತ್ತಿರುವ ಪದ್ಮನಾಭ ಪ್ಯಾಲೆಸ್

ಕೇರಳದ ಶ್ರೀಮಂತಿಕೆಯಿಂದ ಕಂಗೊಳಿಸುತ್ತಿರುವ ಪದ್ಮನಾಭ ಪ್ಯಾಲೆಸ್

ಪದ್ಮನಾಭ ಪ್ಯಾಲೆಸ್ ಅತ್ಯಂತ ಪ್ರಸಿದ್ದವಾದ ಪ್ರೇಕ್ಷಣೀಯ ಸ್ಥಳವಾಗಿದೆ. ಈ ಪ್ಯಾಲೆಸ್ ತಮಿಳುನಾಡು ರಾಜ್ಯದ ಪ್ರಖ್ಯಾತ ಪಟ್ಟಣ ಕನ್ಯಾಕುಮಾರಿಯ ಪದ್ಮನಾಭಪುರಂನಲ್ಲಿದೆ. ಈ ಪ್ಯಾಲೆಸ್ ಕೇರಳ ಹಾಗೂ ತಿರುವನಂತಪುರಕ್ಕೆ ಸಮೀಪವಾಗಿದೆ.

ಪದ್ಮನಾಭ ಪ್ಯಾಲೆಸ್ ಅತ್ಯಂತ ಪ್ರಸಿದ್ದವಾದ ಪ್ರೇಕ್ಷಣೀಯ ಸ್ಥಳವಾಗಿದೆ. ಈ ಪ್ಯಾಲೆಸ್ ತಮಿಳುನಾಡು ರಾಜ್ಯದ ಪ್ರಖ್ಯಾತ ಪಟ್ಟಣ ಕನ್ಯಾಕುಮಾರಿಯ ಪದ್ಮನಾಭಪುರಂನಲ್ಲಿದೆ. ಈ ಪ್ಯಾಲೆಸ್ ಕೇರಳ ಹಾಗೂ ತಿರುವನಂತಪುರಕ್ಕೆ ಸಮೀಪವಾಗಿದೆ. ಈ ಪ್ಯಾಲೆಸ್ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡುತ್ತದೆ. ಈ ಪ್ಯಾಲೆಸ್‍ನ ವಾಸ್ತು ಶಿಲ್ಪವು ಸಂಪೂರ್ಣವಾಗಿ ಕೇರಳದ ಮಾದರಿಯಂತೆ ನಿರ್ಮಿಸಲಾಗಿದೆ.

ಕೇರಳ ಶೈಲಿಯ ಪದ್ಮನಾಭ ಪ್ಯಾಲೆಸ್

PC: Aviatorjk

ಪದ್ಮನಾಭ ಪ್ಯಾಲೆಸ್‍ನ್ನು 1601ರಲ್ಲಿ ಟ್ರವಾನ್ ಕೋರ್ ಚಕ್ರವರ್ತಿ ಇರಾವಿ ವರ್ಮ ಕುಲಶೇಖರ ಪೆರುಮಾಳ್ ನಿರ್ಮಿಸಿದನು. ನಂತರ ಆಧುನಿಕ ಟ್ರವಾನ್ ಕೋರ್ ರಾಜನಾದ ಅನಿಜಾಮ್ ತಿರುನಾಳ್ ಮಾರ್ತಾಂಡ ವರ್ಮನು ಪದ್ಮನಾಭ ಪ್ಯಾಲೆಸ್‍ನ್ನು 1750 ರಲ್ಲಿ ಪುನರ್ ಸ್ಥಾಪಿಸಿದರು. ಮಾರ್ತಾಂಡ ವರ್ಮನು ಈ ಪ್ಯಾಲೆಸ್‍ನ್ನು ತನ್ನ ಮನೆದೇವರದ ವಿಷ್ಣು ಸ್ವರೂಪಿ ಶ್ರೀ ಪದ್ಮನಾಭನನ್ನು ಆರಾಧಿಸಲು ಮುಡಿಪಾಗಿಟ್ಟಿದ್ದನು. ಅದಿನಿಂದ ಈ ಪಟ್ಟಣಕ್ಕೆ ಪದ್ಮನಾಭಪುರಂ ಎಂದು ಕರೆಯಲ್ಪಟ್ಟಿತ್ತು. 18ನೇ ಶತಮಾನದಲ್ಲಿ ರಾಜಧಾನಿ ಟ್ರವನ್‍ಕೋರ್‍ನ್ನು ತಿರುವನಂತಪುರ್‍ಗೆ ವರ್ಗಯಿಸಲಾಯಿತು. ಈ ಪದ್ಮನಾಭ ಪ್ಯಾಲೆಸ್ ಕೇರಳದ ವಾಸ್ತು ಶಿಲ್ಪದಿಂದ ಕಂಗೊಳಿಸುತ್ತಿದೆ. ಈ ಪ್ಯಾಲೆಸ್‍ನ್ನು ಕೇರಳದ ಪುರಾತತ್ತ್ವ ಇಲಾಖೆಯು ನಿರ್ವಹಿಸುತ್ತಿದೆ.

ನಾಟಕಶಾಲ

PC: Aviatorjk

ಪದ್ಮನಾಭ ಪ್ಯಾಲೆಸ್‍ನಲ್ಲಿ ಎನಿದೆ?
ಈ ರಮಣೀಯವಾದ ಪ್ಯಾಲೆಸ್‍ನ ಕಟ್ಟಡದ ರಚನೆಗಳು ವಿಶಿಷ್ಟವಾಗಿದೆ. ಮಂತ್ರಶಾಲ, ಇದು ರಾಜನ ಕೌನ್‍ಸಿಲ್ ಚೆಂಬರ್ ಆಗಿತ್ತು, ಕೊಟ್ಟರಾಂ ಪ್ಯಾಲೆಸ್, ನಾಟಕಶಾಲ, ಟೀಕೆ ಕೊಟ್ಟರಾಂ ಪ್ಯಾಲೆಸ್

ಮಂತ್ರಶಾಲ (ಮಂತ್ರಲೋಚನೆ ಕೊಠಡಿ)
ಈ ಮಂತ್ರಶಾಲ ಅತ್ಯಂತ ಆಕರ್ಷಣಿಯವಾದುದು. ಇದು ರಾಜನ ಮಂತ್ರಲೋಚನೆಯ ಕೊಠಡಿಯಾಗಿತ್ತು. ಇಲ್ಲಿ ರಾಜನು ತನ್ನ ವೈಯಕ್ತಿಕ ಸಭೆಯನ್ನು ನಡೆಸುತ್ತಿದ್ದು, ಇಡೀ ಪದ್ಮನಾಭ ಪ್ಯಾಲೆಸ್‍ಗೆ ಒಂದು ಅತ್ಯಂತ ಆಕರ್ಷಣಿಯವಾದ ಕೊಠಯಾಗಿತ್ತು. ಈ ಮಂತ್ರಶಾಲದಲ್ಲಿ ಬಣ್ಣಗಳಿಂದ ಕೂಡಿದ ಅಭ್ರಕ ಮತ್ತು ಗವಾಕ್ಷಿಗಳಿದ್ದು ಅತ್ಯಂತ ತಂಪು ಹಾಗೂ ಕತ್ತಲೆ ಇಂದ ಕೂಡಿದೆ. ಇಲ್ಲಿನ ಗವಾಕ್ಷಿಗಳು ಮಂತ್ರಶಾಲದಲ್ಲಿನ ಉಷ್ಣತೆಯನ್ನು ಹೊರಹಾಕಲು ಹಾಗೂ ಧೂಳನ್ನು ಹೊರಹಾಕಲು ಸಹಾಯಕವಾಗಿದ್ದವು. ಪ್ಯಾಲೆಸ್‍ನ ಮಹಡಿಯು ಉನ್ನತವಾಗಿ ಕಟ್ಟಲಾಗಿತ್ತು ಇಂತಹ ಪ್ಯಾಲೆಸ್ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸದೇ ಇರದು.

ಕೊಟ್ಟರಂ (ರಾಣಿಯ ತಾಯಿಯ ಪ್ಯಾಲೆಸ್)
ಕೊಟ್ಟರಂ ರಾಣಿಯ ತಾಯಿಗೆ ಮೀಸಲಾದ ಅರಮನೆಯಾಗಿತ್ತು. ಇದು ಅತ್ಯಂತ ಹಳೆಯದಾದ ಕೇರಳದ ವಾಸ್ತುಶಿಲ್ಪವನ್ನು ಹೊಂದಿರುವ ಪ್ಯಾಲೆಸ್. ಈ ಕೊಟ್ಟರಂ ಪ್ಯಾಲೆಸ್‍ನಲ್ಲಿ ಏಕಂತ ಮಂಟಪಂ ಎಂದು ಒಂದು ಏಕಾಂತ ಕೊಠಡಿ ಇದೆ. ಈ ಅರಮನೆಯು ವೈಭವಯುತವಾಗಿದೆ.

ಪದ್ಮನಾಭ ಪ್ಯಾಲೆಸ್

PC: Aviatorjk

ನಾಟಕಶಾಲ
ನಾಟಕಶಾಲ ಅಥವಾ ಪ್ರದರ್ಶನ ಸಭಾಂಗಣ ಇದು ಪದ್ಮನಾಭ್ ಪ್ಯಾಲೆಸ್‍ನ ಮತ್ತೊಂದು ಆಕರ್ಷಣಿಯವಾದುದಾಗಿದೆ. ಇದು ಅತ್ಯಂತ ಆಧುನಿಕವಾದ ಕಟ್ಟಡವಾಗಿದ್ದು, ಈ ಕಟ್ಟಡವನ್ನು ಖ್ಯಾತ ಕರ್ನಾಟಕ ಸಂಗೀತಕಾರ ಹಾಗೂ ನೃತ್ಯಕಾರನಾದ ಮಹಾರಾಜ ಸ್ವಾತಿ ತಿರುನಾಳ್ ರವರ ಸೂಚನೆಯಂತೆ ನಿರ್ಮಿಸಲಾಯಿತು. ಈ ನಾಟಕಶಾಲವು ಗ್ರಾನೈಟ್‍ಗಳಿಂದ ನಿರ್ಮಿತವಾದ ಸ್ತಂಭಗಳು ಹಾಗೂ ಹುಳಪುಳ್ಳ ಕಪ್ಪು ನೆಲಹಾಸುವನ್ನು ಒಳಗೊಂಡಿದೆ.

ಕೇಂದ್ರ ಮಹಲ್
ಈ ಕೇಂದ್ರ ಮಹಲ್‍ನಲ್ಲಿ ರಾಜ ಖಜಾನೆಗಳು, ರಾಜನ ಪ್ರತ್ಯೇಕ ಕೊಠಡಿ, ಆರಾಧನ ಕೊಠಡಿ ಇನ್ನೂ ಮುಂತಾದವುಗಳನ್ನು ಈ ಕೊಠಡಿಯಲ್ಲಿ ಶೇಕರಿಸಿ ಇಡಲಾಗುತ್ತಿತ್ತು.

ಪದ್ಮನಾಭ ಪ್ಯಾಲೆಸ್ ತೆರೆಯುವ ಅವಧಿ
ಈ ಪ್ಯಾಲೆಸ್ ಸೋಮವಾರ ಹಾಗೂ ರಾಷ್ಟ್ರೀಯ ರಾಜಾದಿನಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆವಿಗೂ ತೆರೆದಿರಲಾಗಿರುತ್ತದೆ.

ಪ್ರವೇಶ ಟಿಕೆಟ್
ಭಾರತದ ನಿವಾಸಿಗಳಿಗೆ 25 ರೂಗಳು ಹಾಗೂ ವಿದೇಶಿಯರಿಗೆ 200 ರೂಗಳ ಪ್ರವೇಶ ಟಿಕೆಟ್ ಸೌಲಭ್ಯವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X