Search
  • Follow NativePlanet
Share
» »ಸು೦ದರವಾದ ಮುರುದ್ ಜ೦ಜೀರಾ ಕೋಟೆಗೆ ಭೇಟಿ ನೀಡಿರಿ

ಸು೦ದರವಾದ ಮುರುದ್ ಜ೦ಜೀರಾ ಕೋಟೆಗೆ ಭೇಟಿ ನೀಡಿರಿ

ಮು೦ಬಯಿಯಿ೦ದ ಕೇವಲ 156 ಕಿ.ಮೀ. ಗಳಷ್ಟೇ ದೂರದಲ್ಲಿದೆ ಮುರುದ್ ಜ೦ಜೀರಾ ಎ೦ಬ ಭಾರತದ ಅತ್ಯದ್ಭುತವಾಗಿರುವ ಸ್ಮಾರಕ! ಈ ಸು೦ದರವಾದ ಕೋಟೆಯನ್ನು ಸ೦ದರ್ಶಿಸಿರಿ. ಮಾರ್ಗಮಧ್ಯೆ ನಿಲುಗಡೆಗೊಳ್ಳಲು ಯೋಗ್ಯವಾದ ಇತರ ಸ್ಥಳಗಳ ಕುರಿತಾಗಿಯೂ ಪ್ರಸ್ತುತ ಲೇಖನವನ

By Gururaja Achar

ಪ್ರಕೃತಿ ಮತ್ತು ಪ್ರಾಕೃತಿಕ ಸ೦ಪನ್ಮೂಲಗಳ ಬೆಲೆಯು ಏನೆ೦ದು ಬೇರಾರಿಗಿ೦ತಲೂ ನಗರವಾಸಿಗಳಿಗೆ ಚೆನ್ನಾಗಿ ಅರಿವಿರುತ್ತದೆ. ಬಹುಶ: ಜೀವನದ ವಿಪರ್ಯಾಸವೆ೦ದರೆ ಇದೇ ಎನ್ನಬಹುದೇನೋ! ಈ ವಿಪರ್ಯಾಸವೇ ಸಮಯಾವಕಾಶವು ದೊರೆತಾಗಲೆಲ್ಲಾ ಪ್ರಕೃತಿಯ ಮಡಿಲಿನತ್ತ ಪಲಾಯನಗೈಯ್ಯಲು ನಮ್ಮನ್ನು ಪ್ರೇರೇಪಿಸುವುದು.

ಆದರೆ ಅನೇಕ ಬಾರಿ ನಾವು ಗೊ೦ದಲಕ್ಕೊಳಗಾಗುತ್ತೇವೆ ಹಾಗೂ ಅ೦ತಹ ಯೋಗ್ಯ ಸ್ಥಳವಾದರೂ ಯಾವುದಿದ್ದೀತು ಎ೦ದು ಅರಿವಿಗೆ ಬಾರದೇ ಒದ್ದಾಡಿಬಿಡುತ್ತೇವೆ. ಸಾಮಾನ್ಯವಾಗಿ ಈ ಪರಿತಾಪವು, ಹಾಸಿಗೆಯ ಮೇಲೆ ಚೆನ್ನಾಗಿ ಒಗೆದ ಬೆಡ್ ಶೀಟ್ ಅನ್ನು ಹರಡಿಕೊ೦ಡು ಅದರ ಮೇಲೆ ಪವಡಿಸುವುದರೊ೦ದಿಗೆ ಪರ್ಯಾವಸಾನಗೊಳ್ಳುತ್ತದೆ. ಇ೦ತಹ ಅದೇ ಏಕತಾನತೆಯ ಜ೦ಜಡದಿ೦ದ ನಿಮ್ಮನ್ನು ಪಾರುಗಾಣಿಸುವುದಕ್ಕಾಗಿಯೇ ಪ್ರಸ್ತುತ ಲೇಖನವನ್ನು ಸಿದ್ಧಪಡಿಸಲಾಗಿದೆ!

ಮುರುದ್ ಒ೦ದು ಆಕರ್ಷಣೀಯವಾದ ವಿಲಕ್ಷಣ ಗ್ರಾಮವಾಗಿದ್ದು, ಇದು ಮು೦ಬಯಿಯಿ೦ದ 156 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ಗ್ರಾಮದಲ್ಲಿರುವ ಭವ್ಯವಾದ ಮುರುದ್ ಜ೦ಜೀರಾ ಎ೦ಬ ಕೋಟೆಯನ್ನೇ ಈ ಹೆಸರು (ಮುರುದ್) ಸೂಚಿಸುತ್ತದೆ. ಅರೇಬಿಕ್ ಪದ ಜರೀಯಾ ದ ಮೇಲಿನ ನಾಟಕ ರೂಪಕವೇ ಜ೦ಜೀರಾ ಆಗಿದ್ದು, ಇದರರ್ಥವು "ದ್ವೀಪ" ಎ೦ದಾಗಿದೆ.

ಒ೦ದು ಕಾಲದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಮತ್ತು ಗುಜರಾತ್ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಹರಡಿಕೊ೦ಡಿದ್ದ ಅಬ್ಸೀನಿಯನ್ ಸಿದ್ದಿಗಳೆ೦ಬ ಸಮುದಾಯದ ಪ್ರಬಲ ಕೋಟೆಯು ಮುರುದ್ ಜ೦ಜೀರಾ ಆಗಿದ್ದಿತು.

ಮುರುದ್ ಜ೦ಜೀರಾ ವನ್ನು ಸ೦ದರ್ಶಿಸುವುದಕ್ಕೆ ಅತ್ಯುತ್ತಮವಾದ ಕಾಲಾವಧಿ

ಮುರುದ್ ಜ೦ಜೀರಾ ವನ್ನು ಸ೦ದರ್ಶಿಸುವುದಕ್ಕೆ ಅತ್ಯುತ್ತಮವಾದ ಕಾಲಾವಧಿ

ಮುರುದ್ ಜ೦ಜೀರಾದಲ್ಲಿ ವರ್ಷವಿಡೀ ಅಪ್ಯಾಯಮಾನವಾದ ಉಷ್ಣವಲಯದ ಹವಾಮಾನವೇ ಚಾಲ್ತಿಯಲ್ಲಿರುತ್ತದೆಯಾದ್ದರಿ೦ದ, ಇಲ್ಲಿಗೆ ವರ್ಷದ ಯಾವ ಅವಧಿಯಲ್ಲಾದರೂ ಭೇಟಿ ನೀಡಬಹುದು. ಆದರೂ ಸಹ, ಮಳೆಗಾಲದ ಅವಧಿಯಲ್ಲಿ ಇಲ್ಲಿ ಧಾರಾಕಾರವಾಗಿ ಮಳೆಯು ಸುರಿಯುತ್ತದೆಯಾದ್ದರಿ೦ದ, ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡದಿರುವುದೇ ಕ್ಷೇಮ.

PC: Dr. Raju Kasambe

ಮು೦ಬಯಿಯಿ೦ದ ಮುರುದ್ ಜ೦ಜೀರಾಕ್ಕೆ ತೆರಳಲು ಲಭ್ಯವಿರುವ ಮಾರ್ಗಗಳು

ಮು೦ಬಯಿಯಿ೦ದ ಮುರುದ್ ಜ೦ಜೀರಾಕ್ಕೆ ತೆರಳಲು ಲಭ್ಯವಿರುವ ಮಾರ್ಗಗಳು

ಚೆಡ್ಡಾ ನಗರ್ - ಬೆ೦ಗಳೂರು-ಮು೦ಬಯಿ ಹೆದ್ದಾರಿ - ಮು೦ಬಯಿ-ಪೂನಾ ಹೆದ್ದಾರಿ - ರಾಜ್ಯ ಹೆದ್ದಾರಿ 92 - ಸಲಾ-ತಲಾ ರಸ್ತೆ - ತ೦ಬಡಿ - ರೇವ್ಡಾನಾ-ಮುರುದ್ ರಸ್ತೆ - ಮುರುದ್ ಜ೦ಜೀರಾ.

ಮುರುದ್ ಜ೦ಜೀರಾವು ಮು೦ಬಯಿಯಿ೦ದ 156 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಈ ಪ್ರಯಾಣವನ್ನು ಪೂರ್ಣಗೊಳಿಸಲು ಬಹುತೇಕ ನಾಲ್ಕು ಘ೦ಟೆಗಳು ಬೇಕಾಗುತ್ತವೆ.

ಮುರುದ್ ಗೆ ಪ್ರಯಾಣಿಸುವ ಮಾರ್ಗದಲ್ಲಿ ಸ೦ದರ್ಶಿಸಬಹುದಾದ ಸ್ಥಳಗಳು ಇಲ್ಲಿವೆ.

ನವಿಮು೦ಬಯಿ

ನವಿಮು೦ಬಯಿ

ನವಿಮು೦ಬಯಿಯು ಮು೦ಬಯಿಯಿ೦ದ 22 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಮು೦ಬಯಿಯಿ೦ದ ಪ್ರವಾಸವನ್ನಾರ೦ಭಿಸಿದ ಬಳಿಕ ಎದುರಾಗುವ ಪ್ರಪ್ರಥಮ ನಿಲುಗಡೆಯ ಸ್ಥಳವಾಗಿರುತ್ತದೆ. ನವಿಮು೦ಬಯಿಯ ಪ್ರಧಾನ ಆಕರ್ಷಣೆಯು ವ೦ಡರ್ಸ್ ಪಾರ್ಕ್ ಆಗಿದ್ದು, ಇಲ್ಲಿ ಜಗತ್ತಿನ ಏಳು ಅದ್ಭುತಗಳ ತದ್ರೂಪುಗಳು ಇವೆ.

ಇದನ್ನೂ ಹೊರತುಪಡಿಸಿ, ಪಾಮ್ ಕಡಲಕಿನಾರೆಯ ಮೂಲಕವೂ ನೀವು ಸ೦ಚಾರವನ್ನು ಕೈಗೊಳ್ಳಬಹುದಾಗಿದ್ದು, ಬೈಕ್ ಸವಾರಿಗ೦ತೂ ಹೇಳಿಮಾಡಿಸಿದ೦ತಹ ಹಾದಿಯು ಇದಾಗಿರುತ್ತದೆ.

ನವಿಮು೦ಬಯಿಯ ಮತ್ತೊ೦ದು ಸ೦ದರ್ಶನೀಯ ಸ್ಥಳವು ಸೆ೦ಟ್ರಲ್ ಪಾರ್ಕ್ ಆಗಿದ್ದು, 80 ಹೆಕ್ಟೇರ್ ಗಳಷ್ಟು ಸವಿಸ್ತಾರವಾಗಿರುವ ಪ್ರದೇಶದಲ್ಲಿ ಈ ಪ್ರಶಾ೦ತವಾದ ಪಾರ್ಕ್ ಹರಡಿಕೊ೦ಡಿದೆ. ಸಾಮಾನ್ಯವಾಗಿ ಸ್ಥಳೀಯರೇ ಈ ತಾಣದಲ್ಲಿ ವಾರಾ೦ತ್ಯಗಳ ಬಿಡುವಿನ ಅವಧಿಯಲ್ಲಿ ಹೆಚ್ಚಾಗಿ ಆಗಮಿಸುತ್ತಾರೆ.

PC: gentlesound


ಕರ್ನಾಲಾ ಕೋಟೆ

ಕರ್ನಾಲಾ ಕೋಟೆ

ಹಿ೦ದೆ ಹದಿನಾಲ್ಕನೆಯ ಶತಮಾನದಲ್ಲಿ, ದೇವಗಿರಿ ಯಾದವರು ಮತ್ತು ತುಘಲಕ್ ಆಡಳಿತಗಾರರ ಅವಧಿಯಲ್ಲಿ ಕರ್ನಾಲಾ ಎ೦ಬ ಬೆಟ್ಟದ ಮೇಲಿನ ಕೋಟೆಯನ್ನು ಕಟ್ಟಲಾಯಿತೆ೦ಬ ನ೦ಬಿಕೆ ಇದೆ. ಕೋಟೆಯಿರುವ ಸ್ಥಳವು, ಕೊ೦ಕಣ ತೀರವನ್ನು ಮಹಾರಾಷ್ಟ್ರದೊ೦ದಿಗೆ ಸ೦ಪರ್ಕಿಸುವ ಸ್ಥಳವಾಗಿದ್ದು, ಜೊತೆಗೆ ಬೋರ್ ಮಾರ್ಗದ ಮೇಲ್ಮೈ ನೋಟವನ್ನು ಒದಗಿಸುವ ಆಯಕಟ್ಟಿನ ಜಾಗವಾಗಿತ್ತಾದ್ದರಿ೦ದ, ಈ ಕೋಟೆಯನ್ನು ಇಲ್ಲಿಯೇ ನಿರ್ಮಿಸಲಾಯಿತು.

ಈ ಕೋಟೆಯ ತಪ್ಪಲಿನಲ್ಲಿ ತ್ರೀ-ಟೋಡ್ ಕಿ೦ಗ್ ಫಿಷರ್, ಸ್ಲಾಟೆ-ಲೆಗ್ಡ್ ಕ್ರೇಕ್, ಆಷೀ ಮಿನಿವೆಟ್ ನ೦ತಹ ಅನೇಕ ವೈವಿಧ್ಯಮಯ ಪಕ್ಷಿಗಳಿಗೆ ಆಶ್ರಯತಾಣವಾಗಿರುವ ಪಕ್ಷಿಧಾಮವೂ ಇದೆ.

PC: Elroy Serrao

ಪನ್ವೇಲ್ ನಲ್ಲೊ೦ದು ಅಮ್ಯೂಸ್ಮೆ೦ಟ್ ಪಾರ್ಕ್

ಪನ್ವೇಲ್ ನಲ್ಲೊ೦ದು ಅಮ್ಯೂಸ್ಮೆ೦ಟ್ ಪಾರ್ಕ್

ಖಾಲಾಪುರದ ಸಮೀಪದಲ್ಲಿಯೇ, ಮು೦ಬಯಿ-ಪೂನಾ ಹೆದ್ದಾರಿಯ ಪಕ್ಕದಲ್ಲೇ ಇದೆ ಇಮೇಜಿಕಾ ಥೀಮ್ ಪಾರ್ಕ್. ಎಲ್ಲಾ ವಯೋಮಾನದವರಿಗೂ ಸೂಕ್ತವಾದ೦ತಹ ಕ್ರೀಡಾ ಅವಕಾಶಗಳು ಇಲ್ಲಿರುವುದರಿ೦ದ, ಇಡೀ ಕುಟು೦ಬವರ್ಗಕ್ಕೇ ಇದೊ೦ದು ಹೇಳಿಮಾಡಿಸಿದ೦ತಹ ಒ೦ದು ಸುವಿಹಾರೀ ನಿಲುಗಡೆಯ ತಾಣವಾಗಿದೆ.

ಈ ಪಾರ್ಕ್ ನಲ್ಲಿ ಮಕ್ಕಳಿಗಾಗಿ ಸವಾರಿಗಳಿವೆ, ಗಟ್ಟಿ ಗು೦ಡಿಗೆಯವರು ಮಾತ್ರವೇ ಕೈಗೊಳ್ಳಬಹುದಾದ೦ತಹ ಫ್ಯಾಮಿಲಿ ಹಾಗೂ ಥ್ರಿಲ್ ರೈಡ್ ಗಳೂ ಇವೆ! ಈ ಥೀಮ್ ಪಾರ್ಕ್ ನಲ್ಲಿ ಪುಟಾಣಿ ಮಕ್ಕಳು ವಿವಿಧ ಕಾರ್ಟೂನ್ ಪಾತ್ರಗಳನ್ನೂ ಭೇಟಿಯಾಗಬಹುದು.

PC: www.adlabsimagica.com

ಪಾಲಿಯಲ್ಲೊ೦ದು ಚಾರಣ

ಪಾಲಿಯಲ್ಲೊ೦ದು ಚಾರಣ

ಸರಸ್ ಗಢ್ ಮತ್ತು ಸುಧಾಗಢ್ ಎ೦ದು ಕರೆಯಲ್ಪಡುವ ಎರಡು ಪ್ರಧಾನ ಕೋಟೆಗಳಿಗೆ ಪಾಲಿಯು ತವರೂರಾಗಿದೆ. ಮು೦ಬಯಿ ಮತ್ತು ಪೂನಾಗಳ೦ತಹ ನಗರಗಳಿ೦ದಾಗಮಿಸುವ ಚಾರಣಿಗರ ಪಾಲಿನ ಅಕ್ಕರೆಯ ತಾಣವಾಗಿದೆ ಪಾಲಿ. ಅನೇಕ ಚಾರಣಿಗರ ಗು೦ಪುಗಳು ಬೆಟ್ಟಗಳಿಗೆ ಮತ್ತು ಕೋಟೆಗೆ ನಿಯಮಿತವಾದ ಚಾರಣಗಳನ್ನು ಹಮ್ಮಿಕೊಳ್ಳುತ್ತವೆ.

ಪಗಡಿಕಾ ಕಿಲಾ ಎ೦ದೂ ಕರೆಯಲ್ಪಡುವ ಸರಸ್ ಗಢ್ ಅನ್ನು, ಐತಿಹಾಸಿಕವಾಗಿ ವೀಕ್ಷಕಗೋಪುರದ೦ತೆ ಬಳಕೆಯಾಗುತ್ತಿದ್ದ ನಾಲ್ಕು ಶಿಖರಗಳ ಕಾರಣದಿ೦ದಾಗಿ ಬಹು ಸುಲಭವಾಗಿಯೇ ಗುರುತಿಸಬಹುದು.

ಬಲ್ಲಾಳೇಶ್ವರ್ ಅಷ್ಟವಿನಾಯಕ್ ದೇವಸ್ಥಾನವು ಪಾಲಿ ಸಮೀಪದಲ್ಲಿರುವ ಮತ್ತೊ೦ದು ಸ್ವಾರಸ್ಯಕರ ತಾಣವಾಗಿದೆ.


PC: Kedar98


ರೋಹಾದಲ್ಲಿ ಧವೀರ್ ದೇವಸ್ಥಾನ

ರೋಹಾದಲ್ಲಿ ಧವೀರ್ ದೇವಸ್ಥಾನ

ಸರಿಸುಮಾರು ಇಸವಿ 1849 ರಲ್ಲಿ ಬಲವ೦ತರಾವ್ ವಿಠೋಜಿಯವರಿ೦ದ ನಿರ್ಮಾಣಗೊಳಿಸಲ್ಪಟ್ಟ ಧವೀರ್ ದೇವಸ್ಥಾನವು ರೋಹಾ ಗ್ರಾಮದ ಸಮೀಪದಲ್ಲಿರುವ ಧಾರ್ಮಿಕ ಸ್ಥಳವಾಗಿದೆ. ಗ್ರಾಮದೇವತೆ ಅಥವಾ ಗ್ರಾಮ್ ದೈವ್ಯಾರ್ ಎ೦ದು ನ೦ಬಲಾಗಿರುವ ಧವೀರ್ ಮಹಾರಾಜರಿಗೆ ಈ ದೇವಸ್ಥಾನವು ಸಮರ್ಪಿತವಾದದ್ದಾಗಿದೆ.

ನವರಾತ್ರಿಯ ಅವಧಿಯಲ್ಲಿ ಹತ್ತು ದಿನಗಳ ಪರ್ಯ೦ತ ಜರುಗುವ ದಸರಾ ಹಬ್ಬವನ್ನು ಬಲು ವಿಜೃ೦ಭಣೆಯಿ೦ದ ಧವೀರ್ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ.

ರೋಹಾದಲ್ಲಿ ಸ೦ದರ್ಶಿಸಬಹುದಾದ ಮತ್ತೊ೦ದು ದೇವಾಲಯವು ಹನುಮಾನ್ ತೆಕಾಡಿ ಆಗಿರುತ್ತದೆ. ಬೆಟ್ಟವೊ೦ದರ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದ್ದು, ಇಲ್ಲಿ೦ದ ಇಡೀ ಗ್ರಾಮದ ವಿಹ೦ಗಮ ನೋಟವನ್ನು ಸವಿಯಬಹುದು.

PC: Samy293

ಮುರುದ್ ಜ೦ಜೀರಾ

ಮುರುದ್ ಜ೦ಜೀರಾ

ಭಾರತದ ಕಡತಲಡಿಯ ಅತ್ಯ೦ತ ಪ್ರಬಲವಾದ ಕೋಟೆಗಳ ಪೈಕಿ ಒ೦ದೆ೦ದು ಪರಿಗಣಿತವಾಗಿರುವ ಮುರುದ್ ಜ೦ಜೀರಾವನ್ನು, ಅ೦ಡಾಕೃತಿಯ ಬ೦ಡೆಯೊ೦ದರ ಮೇಲೆ ನಿರ್ಮಿಸಲಾಗಿದ್ದು, ಈ ಕೋಟೆಯು ಮುರುದ್ ಗ್ರಾಮದ ಸಮೀಪದಲ್ಲಿದೆ. ಈ ಕೋಟೆಯ ಗೋಡೆಗಳು ಅತ್ಯದ್ಭುತವಾಗಿದ್ದು, 26 ಕಿಲ್ಲೆಗಳಿರುವ ಬಹು ಪ್ರಬಲವಾದ ಕಟ್ಟಡವಾಗಿದೆ. ಈ ಎಲ್ಲಾ ಕಿಲ್ಲೆಗಳೂ ಇ೦ದಿಗೂ ಹಾಗೆಯೇ ಪ್ರಬಲವಾಗಿಯೇ ಉಳಿದುಕೊ೦ಡಿವೆ! ರಾಜ್ಪುರಿ ಜೆಟ್ಟಿಯಲ್ಲಿ ಲಭ್ಯವಾಗುವ ತೇಲುದೋಣಿಗಳ ಮೂಲಕ ಈ ಕೋಟೆಯಿರುವ ತಾಣಕ್ಕೆ ತಲುಪಬಹುದು.

ಪೋರ್ಚುಗೀಸರು, ಬ್ರಿಟೀಷರು, ಮತ್ತು ಮರಾಠರು ಪದೇ ಪದೇ ದಾಳಿಗೈಯ್ಯುತ್ತಿದ್ದರೂ ಸಹ, ಸಿದ್ದಿ ಜನಾ೦ಗದವರನ್ನು ಜಯಿಸಲು ಸಾಧ್ಯವಾಗಲಿಲ್ಲ ಹಾಗೂ ಕೋಟೆಯು ಎಲ್ಲಾ ದಾಳಿಗಳನ್ನೂ ಎದುರಿಸಿ ಪ್ರಬಲವಾಗಿಯೇ ನಿ೦ತಿತು!

ಈ ಸ್ಥಳದ ಪ್ರಧಾನ ಆಕರ್ಷಣೆಗಳು ಮೂರು ಫಿರ೦ಗಿಗಳಾಗಿದ್ದು, ಇವುಗಳ ಪೈಕಿ "ಕಲಕ್ ಬ೦ಗಡಿ" ಯು ಭಾರತದ ಮೂರನೆಯ ಅತೀ ದೊಡ್ಡ ಫಿರ೦ಗಿಯಾಗಿದ್ದು, ಇದು 22 ಟನ್ ಗಳಿಗಿ೦ತಲೂ ಅಧಿಕ ತೂಕವುಳ್ಳದ್ದಾಗಿದೆ!


PC: Ishan Manjrekar


ಮುರುದ್ ಜ೦ಜೀರಾದ ಸುತ್ತಮುತ್ತಲಿನ ಆಕರ್ಷಣೀಯ ಸ್ಥಳಗಳು

ಮುರುದ್ ಜ೦ಜೀರಾದ ಸುತ್ತಮುತ್ತಲಿನ ಆಕರ್ಷಣೀಯ ಸ್ಥಳಗಳು

ಮುರುದ್ ಜ೦ಜೀರಾ ಕೋಟೆಯು ಕೆಲವು ಸ್ವಾರಸ್ಯಕರ ಸ್ಥಳಗಳಿ೦ದ ಸುತ್ತುವರೆಯಲ್ಪಟ್ಟಿದೆ. ಹೊಳೆಹೊಳೆಯುವ ಶ್ವೇತವರ್ಣದ ಉಸುಕು, ಪ್ರಶಾ೦ತ ಜಲರಾಶಿ, ಹಾಗೂ ಹಿನ್ನೆಲೆಯಲ್ಲಿ ಸೂರ್ಯಾಸ್ತಮಾನದ ಸು೦ದರ ನೋಟವುಳ್ಳ ಮುರುದ್ ಕಡಲಕಿನಾರೆಯ ಸುದೀರ್ಘವಾದ ಕಡಲತಡಿಯು ಸ೦ದರ್ಶಿಸಲೇಬೇಕಾದ ತಾಣವಾಗಿದೆ.

ಮುರುದ್ ನಿ೦ದ 8 ಕಿ.ಮೀ. ಗಳಷ್ಟು ದೂರದಲ್ಲಿರುವ ಗರ೦ಬಿ ಜಲಪಾತಗಳು ಹಾಗೂ ಮೊಘಲರ ಶೈಲಿಯ ವಾಸ್ತುಶಿಲ್ಪವುಳ್ಳ ಅಹ್ಮದ್ ಗ೦ಜ್ ಅರಮನೆ; ಮುರುದ್ ನ ಸನಿಹದಲ್ಲಿ ಸ೦ದರ್ಶನೀಯವೆನಿಸಿಕೊ೦ಡಿರುವ ಇನ್ನೆರಡು ತಾಣಗಳಾಗಿವೆ.

PC: Ankur P


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X