Search
  • Follow NativePlanet
Share
» »ಉಡುಪಿಯ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ಕೊಡಿ

ಉಡುಪಿಯ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ಕೊಡಿ

ಕೃಷ್ಣ ದೇವಾಲಯ, ಉಡುಪಿ

ಉಡುಪಿಯ ಕೃಷ್ಣ ದೇವಾಲಯವು ಅತ್ಯಂತ ಹೆಸರುವಾಸಿಯಾದ ದಕ್ಷಿಣ ಭಾರತದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಸಾವಿರಾರು ಜನ ಭಕ್ತರು ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗಲು ಅವರ ಒಂದು ದರ್ಶನಕ್ಕಾಗಿ ಈ ದೇವಾಲಯವನ್ನು ಭೇಟಿ ಕೊಡುತ್ತಾರೆ.

ಈ ದೇವಾಲಯದ ಒಂದು ವೈಶಿಷ್ಟ್ಯತೆ ಎಂದರೆ ಶ್ರೀಕೃಷ್ಣದ ವಿಗ್ರಹವನ್ನು ಒಂಬತ್ತು ರಂಧ್ರಗಳಿರುವ ಕಿಟಕಿಯ ಮೂಲಕ ನೋಡಬೇಕಾಗುತ್ತದೆ. ಒಂಬತ್ತು ರಂಧ್ರಗಳ ಮೂಲಕ ಭಗವಂತನ ದರ್ಶನ ಮಾಡಿದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿದೆ.

26-dwarkadheesh-temple1-1659955730.jpg

ಶ್ರೀಕೃಷ್ಣನ ಅಲಂಕಾರವು ಕಣ್ಮನ ಸೆಳೆಯುವಂತೆ ಮಾಡುತ್ತದೆ. ಕೆಲವು ಸಲ ಕೃಷ್ಣನ ವಿಗ್ರಹವನ್ನು ಬಂಗಾರದ ಆಭರಣಗಳಿಂದ ಅಲಂಕಾರ ಮಾಡಿದರೆ, ಇನ್ನೊಂದು ಸಲ ವಜ್ಯಖಚಿತ ಆಭರಣಗಳಿಂದ ಅಲಂಕಾರ ಮಾಡುತ್ತಾರೆ. ದೇವಾಲಯದಲ್ಲಿ ಗರುಡ ಮತ್ತು ಹನುಮಂತನಿಗೆ ಬಲಿಪೀಠಗಳಿವೆ. ಈ ದೇವಾಲಯವು 1500 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವನ್ನು ಹೊಂದಿದ್ದೆ ಹಾಗೂ ಇದು ಭಾರತದ ಈ ಭಾಗದಲ್ಲಿರುವ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ.

udupitemple-1535695145-1659955740.jpg

ರಾಮ ನವಮಿ ಮತ್ತು ಯುಗಾದಿಯಂತಹ ಕೆಲವು ಹಬ್ಬಗಳನ್ನೂ ಈ ದೇವಾಲಯದಲ್ಲಿ ವೈಭವದಿಂದ ಆಚರಿಸಲಾಗುತ್ತದೆ. ಈ ದೇವಾಲಯವು ಮುಖ್ಯ ಬಸ್ ನಿಲ್ದಾಣದಿಂದ ಪೂರ್ವಕ್ಕೆ 1 ಕಿಮೀ ದೂರದಲ್ಲಿದೆ ಮತ್ತು ರೈಲ್ವೆ ನಿಲ್ದಾಣದಿಂದ ಪಶ್ಚಿಮಕ್ಕೆ 3 ಕಿಮೀ ದೂರದಲ್ಲಿದೆ. ಬಸ್ ನಿಲ್ದಾಣದಿಂದ ಆಟೋದಲ್ಲಿ 10 ರೂ., ರೈಲ್ವೇ ನಿಲ್ದಾಣದಿಂದ 25 ರೂ ಆಗಿದ್ದು, ಇಲ್ಲಿಯ ಭೇಟಿ ಸಮಯ: ಬೆಳಗ್ಗೆ 5 ರಿಂದ ರಾತ್ರಿ 9:30 ರವರೆಗೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X