Search
  • Follow NativePlanet
Share
» »ಅಗ್ವಾದ ಕೋಟೆಯಲ್ಲಿ ಒತ್ತಡಗಳು ಮಂಗಮಾಯ

ಅಗ್ವಾದ ಕೋಟೆಯಲ್ಲಿ ಒತ್ತಡಗಳು ಮಂಗಮಾಯ

ಗೋವಾ ಭಾರತದಲ್ಲಿರುವ ಅತ್ಯುತ್ತಮ ಪ್ರವಾಸತಾಣ ಎಂದು ನಿಸ್ಸಂದೇಹವಾಗಿ ಹೇಳಬಹುದು. ಗೋವಾ ಎಂದಾಕ್ಷಣ ಕಡಲ ತೀರದ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ. ಹೌದು, ಸಮುದ್ರ ತೀರಗಳನ್ನು ಬಿಟ್ಟರೆ ಬೇರೆ ಬೇರೆ ಪ್ರವಾಸ ತಾಣಗಳು ಇಲ್ಲಿವೆ.

By Divya

ಗೋವಾ ಭಾರತದಲ್ಲಿರುವ ಅತ್ಯುತ್ತಮ ಪ್ರವಾಸತಾಣ ಎಂದು ನಿಸ್ಸಂದೇಹವಾಗಿ ಹೇಳಬಹುದು. ಗೋವಾ ಎಂದಾಕ್ಷಣ ಕಡಲ ತೀರದ ಚಿತ್ರಣ ಕಣ್ಮುಂದೆ ಬಂದು ನಿಲ್ಲುತ್ತದೆ. ಹೌದು, ಸಮುದ್ರ ತೀರಗಳನ್ನು ಬಿಟ್ಟರೆ ಬೇರೆ ಬೇರೆ ಪ್ರವಾಸ ತಾಣಗಳು ಇಲ್ಲಿವೆ. ಇವು ದೇಶದೆಲ್ಲೆಡೆಯ ಜನರನ್ನು ಆಕರ್ಷಿಸುತ್ತವೆ ಎನ್ನುವುದು ಅಷ್ಟೇ ನಿಜ.

ಇಲ್ಲಿರುವ ಕೋಟೆಗಳು, ಚರ್ಚ್‍ಗಳು ಹಾಗೂ ವಸ್ತು ಸಂಗ್ರಹಾಲಯಗಳು ಪ್ರವಾಸಿಗರ ಕಣ್ಮನ ಸೆಳೆಯುವುದರಲ್ಲಿ ಸಂದೇಹವಿಲ್ಲ. ಕಡಲ ತೀರದಲ್ಲಿ ಧೈರ್ಯದಿಂದ ನಿಂತ ಕೋಟೆಯೆಂದರೆ ಅಗ್ವಾದ ಕೋಟೆ. ಪೋರ್ಚುಗೀಸ್‍ರು ನಿರ್ಮಿಸಿರುವ ಈ ಕೋಟೆ 400 ವರ್ಷಗಳ ಇತಿಹಾಸವನ್ನು ಒಳಗೊಂಡಿದೆ.

Popular Forts in Goa

PC: wikipedia.org

ಅಗ್ವಾದ ಕೋಟೆ ಸ್ಥಳ ವಿವರ
ಗೋವಾದ ಸಿನ್‍ಕ್ವೇರಿಮ್ ಕಡಲ ತೀರದ ಸಿಯೋಲಿಮ್ ರಸ್ತೆ ಮಾರ್ಗದಲ್ಲಿದೆ. ಮಾಂಡೋವಿ ನದಿಯ ದಡದ ಬೆಟ್ಟದ ತುದಿಯಲ್ಲಿದೆ. ಸಿನ್‍ಕ್ವೇರಿಮ್ ಸಮುದ್ರದ ದಾರಿಯಿಂದ ಬಂದರೆ 4 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ 601.5 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ 9 ತಾಸುಗಳ ಪ್ರಯಾಣ ಮಾಡಬೇಕು.

ಕೋಟೆಯ ಇತಿಹಾಸ
ಭಾರತ ಪೋರ್ಚುಗೀಸರ ದಾಳಿಯಿಂದ ನಲುಗುತ್ತಿರುವಾಗ ಈ ಬಂದರು ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿಗೆ ಬರುವ ಹಡಗುಗಳು ಹಾಗೂ ಕಂಟೇನರ್ಸ್‍ಗಳ ಆಗಮನ ಹಾಗೂ ನಿರ್ಗಮನಕ್ಕೆ ಅನುಕೂಲವಾಗಲೆಂದು ಗಡಿಯಾರದ ಗೋಪುರವನ್ನು ಇಲ್ಲಿ ನಿರ್ಮಿಸಲಾಗಿತ್ತು. ಅಗ್ವಾದ ಅಂದರೆ ಪೋರ್ಚುಗೀಸ್ ಭಾಷೆಯಲ್ಲಿ ನೀರು ಎಂದರ್ಥ.

Popular Forts in Goa

PC: wikimedia.org

ಇದೇ ರೀತಿಯ ಮೂರು ಕೋಟೆಗಳನ್ನು ಇಲ್ಲಿ ನಿರ್ಮಿಸಲಾಗಿತ್ತು. ವಿದೇಶಿ ದಾಳಿಗಳಿಂದಾಗಿ ಉಳಿದ ಕೋಟೆಗಳು ಅವನತಿ ಹೊಂದಿದವು. ಅದರಲ್ಲಿ ಅಗ್ವಾದ ಕೋಟೆಯೊಂದೇ ಇಂದಿಗೂ ಜೀವಂತವಾಗಿದೆ. ಡಚ್ಚರು ಮತ್ತು ಮರಾಠರ ದಾಳಿಯಿಂದ ಈ ಕೋಟೆಯನ್ನು ಪೋರ್ಚುಗೀಸರು ರಕ್ಷಿಸಿದ್ದರು ಎನ್ನಲಾಗುತ್ತದೆ.

ಕೋಟೆಯ ವಿಶೇಷ ಆಕರ್ಷಣೆ
ಈ ಕೋಟೆಯಲ್ಲಿ ಇರುವ ವಿಶೇಷತೆಗಳನ್ನು ಒಮ್ಮೆ ನೋಡಲೇ ಬೇಕು. ಗಡಿಯಾರದ ಗೋಪುರ ಕೋಟೆಯ ಸುಂದರ ಆಕರ್ಷಣೆ. ಇಲ್ಲಿರುವ ಲೈಟ್ ಹೌಸ್ ಏಷ್ಯಾದಲ್ಲಿಯೇ ಅತ್ಯಂತ ಹಳೆಯದ್ದು. ಇಲ್ಲಿ ನಿಂತು ಸುತ್ತಲ ಪರಿಸರ ನೋಡಿದರೆ, ರಮ್ಯ ಮನೋಹರವಾಗಿ ಕಾಣುತ್ತದೆ. ಪ್ರಕೃತಿಯ ಚಿತ್ರವನ್ನು ಸೆರೆ ಹಿಡಿಯಲು ಇದೊಂದು ಸೂಕ್ತ ಸ್ಥಳ. ಹಡಗುಗಳಿಗೆ ಸುರಕ್ಷಿತ ಬಂದರು ಇದು.

Popular Forts in Goa

PC: wikimedia.org

ಈ ಕೋಟೆಯಲ್ಲಿ ಒಂದು ಕಾರಾಗೃಹವಿದೆ. ಇದು ಕೋಟೆಯ ಇನ್ನೊಂದು ವಿಶೇಷ ಆಕರ್ಷಣೆ. ವ್ಯಾಪಾರದ ಸಂದರ್ಭದಲ್ಲಿ ಹಾಗೂ ಸರಕುಗಳ ಸಾಗಾಣಿಕೆಯಲ್ಲಿ ತಪ್ಪು ಮಾಡಿದವರಿಗೆ, ಮಾದಕ ವಸ್ತು, ಔಷಧಿ ಹಾಗೂ ಇನ್ನಿತರ ವಸ್ತುಗಳನ್ನು ಕಾನೂನು ಬಾಹಿರವಾಗಿ ಸಾಗಾಟ ನಡೆಸುತ್ತಿದ್ದವರಿಗೆ ಇಲ್ಲಿ ಬಂಧಿಸಿಡಲಾಗುತ್ತಿತ್ತು ಎನ್ನಲಾಗುತ್ತದೆ.

ಅದ್ಭುತ ಅನುಭವ
ಆಗಾಗ ಅಲೆಗಳು ಬಂದು ಕೋಟೆಗೆ ಅಪ್ಪಳಿಸುವುದು, ಕೋಟೆಯ ಮೇಲೆ ನಿಂತು ತಂಪಾದ ಗಾಳಿಯ ಅನುಭವ ಪಡೆಯುವುದು ಒಂದು ರೋಮಾಂಚಕ. ವಾರದ ರಜೆಯಲ್ಲಿ ಇಲ್ಲಿಗೊಮ್ಮೆ ಬಂದರೆ ಕೋಟೆಯ ಸಿರಿ ಹಾಗೂ ಕಡಲ ಖುಷಿಯನ್ನು ಅನುಭವಿಸಿ ಹೋಗಬಹುದು.

Read more about: goa travel india fort
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X