Search
  • Follow NativePlanet
Share
» »ಗುರುವಾಯೂರಪ್ಪನ ಸನ್ನಿಧಿಯಲ್ಲಿನ ಆನೆಗಳನ್ನೊಮ್ಮೆ ನೋಡಿದ್ದೀರಾ?

ಗುರುವಾಯೂರಪ್ಪನ ಸನ್ನಿಧಿಯಲ್ಲಿನ ಆನೆಗಳನ್ನೊಮ್ಮೆ ನೋಡಿದ್ದೀರಾ?

ಸಾಮಾನ್ಯವಾಗಿ ಆನೆ ಎಂದರೆ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಇಷ್ಟವಾಗುತ್ತದೆ. ಯಾವಾಗಲೋ ಅಪರೂಪಕ್ಕೆ ನಮ್ಮ ಮನೆಯ ಮುಂದೆ ಆನೆ ಬಂದಾಗ ಅದನ್ನು ನೋಡಲು ಓಡೋಡಿ ಬರುತ್ತೇವೆ. ಅದಕ್ಕೆ ತಿನ್ನಲು ಬಾಳೆಹಣ್ಣು, ತೆಂಗಿನಕಾಯಿ ನೀಡುತ್ತೇವೆ. ಅದೇ ದೇವಸ್ಥಾನದಲ್ಲಿ ಆನೆಯಿದ್ದರೆ ಅದರ ಬಳಿ ಹೋಗಿ ಆಶೀರ್ವಾದ ಪಡೆಯುತ್ತೇವೆ. ಮಕ್ಕಳಿಗಂತೂ ಆನೆ ಅಚ್ಚುಮೆಚ್ಚು. ಅದಕ್ಕಾಗಿ ಅವರನ್ನು ಆನೆಗಳ ಕ್ಯಾಂಪ್‌ಗೆ ಕರೆದುಕೊಂಡು ಹೋಗಬಹುದು ಆದರೆ ಅಲ್ಲಿ ಮಕ್ಕಳಿಗೇನೋ ಮಜಾ ಆಗುತ್ತದೆ. ಆದರೆ ಹೆತ್ತವರಿಗೆ ಬೋರ್ ಆಗೋದಂತೂ ಖಂಡಿತ. ಹೀಗಿರುವಾಗ ನೀವು ಕೇರಳದ ಗುರುವಾಯೂರಿಗೆ ಹೋಗಬಹುದು. ಅಲ್ಲಿ ಗುರುವಾಯೂರಪ್ಪನ ದರ್ಶನವೂ ಆಗುತ್ತದೆ. ಹಾಗೆಯೇ ಆನೆಗಳ ಕ್ಯಾಂಪ್‌ನ್ನು ನೋಡಿದಾಗೆ ಆಗುತ್ತದೆ.

ಗುರುವಾಯೂರು

ಗುರುವಾಯೂರು

PC:Kuttix

ಗುರುವಾಯೂರು ಒಂದು ಧಾರ್ಮೀಕ ಕೇಂದ್ರದ ಜೊತೆಗೆ ಒಂದು ಪ್ರವಾಸಿ ತಾಣವೂ ಹೌದು. ಇಲ್ಲಿ ದೇಶದ ದೊಡ್ಡ ಆನೆ ಕ್ಯಾಂಪ್ ಇದೆ. ಈ ಸ್ಥಳವು ಪುನ್ನತ್ತೂರು ರಾಜವಂಶಸ್ಥರಿಗೆ ಸೇರಿದ್ದು. 10 ಎಕರೆ ವಿಶಾಲವಾದ ಪ್ರದೇಶದಲ್ಲಿ ಈ ಆನೆಕ್ಯಾಂಪ್ ಇದ್ದು ಇಲ್ಲಿ ಸುಮಾರು 60 ಆನೆಗಳು ಇವೆ. ಇದು ಗುರುವಾಯೂರು ದೇವಸ್ಥಾನದಿಂದ 3 ಕಿ.ಮೀ ಉತ್ತರಕ್ಕಿದೆ.

ಗುರುವಾಯೂರಪ್ಪ

ಗುರುವಾಯೂರಪ್ಪ

ಗುರುವಾಯೂರು ದೇವಸ್ಥಾನದಲ್ಲಿ ನಡೆಯುವ ಜಾತ್ರೆ , ಉತ್ಸವದಂದು ಈ ಆನೆಗಳು ದೇವರ ಮೂರ್ತಿಯನ್ನು ಹೊತ್ತು ಸಾಗುತ್ತವೆ. ಇಲ್ಲಿನ ಆನೆಗಳಿಗೆ ಓಟದ ಸ್ಪರ್ಧೇಯನ್ನೂ ಆಯೋಜಿಸಲಾಗುತ್ತದೆ. ವಿಜೇತ ಆನೆಗೆ ವಿಶೇಷ ಗೌರವವನ್ನು ನೀಡಲಾಗುತ್ತದೆ.

ಮಮ್ಮಿಯೂರ್ ಮಹದೇವನ್

ಮಮ್ಮಿಯೂರ್ ಮಹದೇವನ್

ಕೇರಳದ ತ್ರಿಶೂರದಲ್ಲಿರುವ ಮಮ್ಮಿಯೂರ್ ಮಹದೇವನ್ ದೇವಸ್ಥಾನವು ಶಿವನ ದೇವಾಲಯವಾಗಿದ್ದು, ಇದು ಗುರುವಾಯೂರಿನಲ್ಲಿದೆ. ಅದ್ಭುತವಾದ ಮೂರ್ತಿಗಳಿಂದ ಅಲಂಕೃತವಾದ ಈ ದೇವಸ್ಥಾನದಲ್ಲಿ ಮಹಾಸವಿಶ್ವರ ಮಹಿಳಾ ಅವತಾರವಾದ ಮೊಹಿನಿ ಚಿತ್ರಕಥೆಗಳನ್ನು ಚಿತ್ರಿಸಲಾಗಿದೆ. ಮಾಮ್ಮಿಯೂರ್ ಮಹದೇವ ದೇವಸ್ಥಾನಕ್ಕೆ ಭೇಟಿ ನೀಡದೆ ಗುರುವಾಯೂರಿನ ಪ್ರವಾಸ ಪೂರ್ಣವಾಗುವುದಿಲ್ಲ ಎನ್ನಲಾಗುತ್ತದೆ.

ಉಮಾಮಹೇಶ್ವರ

ಉಮಾಮಹೇಶ್ವರ

ಆದ್ದರಿಂದ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಶಿವನನ್ನು ಉಮಾಮಹೇಶ್ವರ ರೂಪದಲ್ಲಿ ಪೂಜಿಸಲಾಗುತ್ತದೆ. ಈ ಶಿವನ ದೇವಸ್ಥಾನದ ಗರ್ಭಗುಡಿಯಲ್ಲಿ ಶಿವನ ಮೂರ್ತಿಯ ಬಳಿಯಲ್ಲಿ ವಿಷ್ಣುವಿನ ಮೂರ್ತಿಯನ್ನೂ ಅಳವಡಿಸಲಾಗಿದೆ.

ಹಿಂದೂಗಳಿಗಷ್ಟೇ ಅನುಮತಿ

ಹಿಂದೂಗಳಿಗಷ್ಟೇ ಅನುಮತಿ

PC:Arjun.theone

ಗಣಪತಿ, ಸುಬ್ರಮಣ್ಯರ್, ಐಯ್ಯಪ್ಪ , ಭಗವತಿ, ನಾಗರಾಜ ಮುಂತಾದ ದೇವತೆಯನ್ನು ಇಲ್ಲಿ ಪೂಜಿಸಲಾಗುತ್ತದೆ. ಗುರುವಾಯೂರು ಹಾಗೂ ಮಮ್ಮಿಯೂರಯ ದೇವಸ್ಥಾನದ ಒಳಗೆ ಹಿಂದೂಗಳಿಗಲ್ಲದೆ ಅನ್ಯಧರ್ಮಿಯರಿಗೆ ಅವಕಾಶವಿಲ್ಲ.

 ಪಾರ್ಥಸಾರಥಿ ದೇವಸ್ಥಾನ

ಪಾರ್ಥಸಾರಥಿ ದೇವಸ್ಥಾನ

ಪಾರ್ಥಸಾರಥಿ ದೇವಸ್ಥಾನವು ಗುರುವಾಯೂರಿನ ಮತ್ತೊಂದು ಆಕರ್ಷಣೆಗಳಲ್ಲಿ ಒಂದು. ಇದು ಗುರುವಾಯೂರು ಹಾಗೂ ಗುರುವಾಯೂರು ರೈಲ್ವೆ ನಿಲ್ದಾಣದ ಮಧ್ಯದಲ್ಲಿದೆ. ಕೃಷ್ಣನ ಇನ್ನೊಂದು ಹೆಸರೇ ಪಾರ್ಥಸಾರಥಿ. ಮಹಾಭಾರತದಲ್ಲಿ ಕೃಷ್ಣ ಅರ್ಜುನನ ರಥಚ ಚಾಲಕನಾಗಿದ್ದ ಕಾರಣ ಈ ಹೆಸರು ಬಂದಿದೆ. ಈ ದೇವಸ್ಥಾನವು ಭರ್ಜರಿಯಾದ ಕಲಾಕೃತಿಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷೀಸುತ್ತದೆ. ಈ ದೇವಸ್ಥಾನದ ಸುರುಳಿಗಳಲ್ಲಿ ಸೂಕ್ಷ್ಮ ಶಿಲ್ಪ ಕೆಲಸದೃಶ್ಯಗಳು ಕಾಣಿಸುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X