Search
  • Follow NativePlanet
Share
» »ಕೊಡಗಿನ ಪವಿತ್ರ ಸ್ಥಳ ತಲಕಾವೇರಿಗೆ ಒಮ್ಮೆ ಭೇಟಿ ಕೊಡಿ

ಕೊಡಗಿನ ಪವಿತ್ರ ಸ್ಥಳ ತಲಕಾವೇರಿಗೆ ಒಮ್ಮೆ ಭೇಟಿ ಕೊಡಿ

ತಲಕಾವೇರಿ - ಕೂರ್ಗ್

ತಲಕಾವೇರಿಯು ಹಿಂದುಗಳಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಬ್ರಹ್ಮಗಿರಿ ಬೆಟ್ಟದಲ್ಲಿ ನೆಲೆಸಿರುವ ಈ ಸ್ಥಳವು ಕಾವೇರಿಯ ಉಗಮಸ್ಥಾನವೆಂದು ಪರಿಗಣಿಸಲಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1276 ಮೀಟರ್ ಎತ್ತರದಲ್ಲಿದೆ. ಈಗ ಕಾವೇರಿ ಉಗಮವೆಂದು ಹೇಳಲಾಗುವ ಸ್ಥಳದಲ್ಲಿ ಒಂದು ತೊಟ್ಟಿ ತರಹದ ರಚನೆ ಇದೆ ಇಲ್ಲಿ ನದಿಯು ಕಾರಂಜಿ ರೂಪದಲ್ಲಿ ಈ ತೊಟ್ಟಿಗೆ ನೀರು ಪೂರೈಸುತ್ತದೆ ಮತ್ತು ನಂತರ ಈ ನೀರು ಸ್ವಲ್ಪ ದೂರದಲ್ಲಿ ಕಾವೇರಿ ನದಿಯಾಗಿ ಹೊರಹೊಮ್ಮಲು ಭೂಗತವಾಗಿ ಹರಿಯುತ್ತದೆ.

ವಿಶೇಷ ದಿನಗಳಲ್ಲಿ ಸ್ನಾನ ಮಾಡಲು ಈ ತೊಟ್ಟಿಯನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಸಮೀಪದಲ್ಲಿ ಅಗಸ್ತ್ಯೇಶ್ವರನಿಗೆ ಸಮರ್ಪಿತವಾದ ಸಣ್ಣ ದೇವಾಲಯವೂ ಇದೆ ಮತ್ತು ಯಾತ್ರಾರ್ಥಿಗಳು ಆಗಾಗ್ಗೆ ಭೇಟಿ ನೀಡುತ್ತಾರೆ.

tc-1-16-1468652654-1660797724.jpg

ಅಗಸ್ತ್ಯ ಮುನಿಯು ತನ್ನ ಕಮಂಡಲುವಿನಲ್ಲಿ ಕಾವೇರಿಯನ್ನು ಬಂಧಿಸಿ ಇಟ್ಟಿದ್ದರೆಂದೂ ಅಗಸ್ತ್ಯ ಋಷಿ ಧ್ಯಾನ ಮಾಡುತ್ತಿದ್ದಾಗ ಕಾಗೆಯ ರೂಪದಲ್ಲಿ ಬಂದು ಗಣೇಶ ದೇವರು ಈ ಬೆಟ್ಟದ ತುದಿಯಲ್ಲಿದ್ದ ಕಮಂಡಲವನ್ನು ಉರುಳಿಸಿದರು ಎಂದು ದಂತ ಕಥೆಯು ಹೇಳುತ್ತದೆ. ತಲಕಾವೇರಿಯಲ್ಲಿ ಸ್ನಾನ ಮಾಡುವುದನ್ನು ಪವಿತ್ರವೆಂದೂ ಇಲ್ಲಿ ಸ್ನಾನ ಮಾಡಿದಲ್ಲಿ ಎಲ್ಲಾ ಕಷ್ಟ ಪರಿಹಾರವಾಗುತ್ತದೆ ಎಂದೂ ಜನರಲ್ಲಿ ನಂಬಿಕೆಯಿದೆ.

ಇಲ್ಲಿಯ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಭಾಗಮಂಡಲವು ಪ್ರಮುಖವಾದುದಾಗಿದ್ದು, ಇದು ಕಾವೇರಿ ಕನ್ನಿಕೆ ಮತ್ತು ಸುಜ್ಯೋತಿ ಈ ಮೂರು ನದಿಗಳ ಸಂಗಮವಾಗಿದೆ. ತಲಕಾವೇರಿಯಿಂದ ಭಾಗಮಂಡಲಕ್ಕೆ 8 ಕಿ.ಮೀ ದೂರವಿದೆ. ಗಣೇಶ, ಸುಬ್ರಹ್ಮಣ್ಯ, ಮತ್ತು ವಿಷ್ಣು ದೇವರುಗಳಿಗೆ ಅರ್ಪಿತವಾದ ದೇವಾಲಯಗಳನ್ನು ಇದರ ಹತ್ತಿರದಲ್ಲಿ ಕಾಣಬಹುದಾಗಿದೆ. ಪ್ರತಿ ವರ್ಷ ಅಕ್ಟೋಬರ್/ನವೆಂಬರ್ ತಿಂಗಳಿನಲ್ಲಿ ವಾರ್ಷಿಕ ಹಬ್ಬವನ್ನು ಆಚರಿಸಲಾಗುತ್ತದೆ, ನದಿಯು ಪೂರ್ವನಿರ್ಧರಿತ ಕ್ಷಣದಲ್ಲಿ ತೊಟ್ಟಿಯಿಂದ ಕಾರಂಜಿ ರೂಪದಲ್ಲಿ ಹೊರಹೊಮ್ಮುತ್ತದೆ ಈ ದೃಶ್ಯವನ್ನು ವೀಕ್ಷಿಸಲು ಸಾವಿರಾರು ಯಾತ್ರಿಕರು ಇಲ್ಲಿ ಸೇರುತ್ತಾರೆ.

ಈ ಹಬ್ಬದ ಸಮಯದಲ್ಲಿ ಈ ಪ್ರದೇಶ ಹಾಗೂ ದೇವಾಲಯಗಳು ಸಾವಿರಾರು ದೀಪಗಳಿಂದ ಅಲಂಕೃತಗೊಂಡು ನೋಡಲು ಆಕರ್ಷಣೀಯವಾಗಿರುತ್ತದೆ.

Talacauvery.jpg

ಕೇವಲ ಪವಿತ್ರ ಸ್ಥಳವಾಗಿರುವುದು ಮಾತ್ರವಲ್ಲದೆ, ನೀವು ಕೊಡಗಿನಲ್ಲಿರುವಾಗ ತಲಕಾವೇರಿಯು ಭೇಟಿ ಕೊಡಲೇಬೇಕೆನ್ನುವಂತಹ ಸ್ಥಳವಾಗಿದೆ. ಈ ದೇವಾಲಯವು ಬ್ರಹ್ಮಗಿರಿ ಬೆಟ್ಟದ ಮಡಿಲಲ್ಲಿ ಮನಮೋಹಕ ಸ್ಥಳದಲ್ಲಿ ನೆಲೆಸಿದೆ.ಹಸಿರು ಹುಲ್ಲುಗಾವಲು ಪ್ರದೇಶದ ಜೊತೆಗೆ ಬೆಟ್ಟಗಳ ಅಲೆಅಲೆಯಂತೆ ಕಾಣುವ ಪದರಗಳು ದೇವಾಲಯದಿಂದ ನೋಡಲು ಅತ್ಯಂತ ಮನಮೋಹಕ ಹಾಗೂ ಆಕರ್ಷಣೀಯವಾಗಿದೆ.

ವಿರಾಮದ ಸಮಯದಲ್ಲಿ ವಿಶ್ರಾಂತಿ ಪಡೆಯಲು ಈ ಪ್ರವಾಸಿ ಸ್ಥಳವು ಅತ್ಯಂತ ಅದ್ಬುತವಾದುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X