Search
  • Follow NativePlanet
Share
» »ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಭೇಟಿ ಕೊಡಿ

ಸಕ್ರೆಬೈಲು ಆನೆಗಳ ಶಿಬಿರ (ಎಲಿಫೆಂಟ್ ಕ್ಯಾಂಪ್) : ಸಮಯ ಟಿಕೇಟ್ ದರ, ಆಕರ್ಷಣೆಗಳು ಮತ್ತು ತಲುಪುವ ಬಗ್ಗೆ ಮಾಹಿತಿ

ಸಕ್ರೆಬೈಲ್ ಆನೆಗಳ ಶಿಬಿರವು ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ನೆಲೆಸಿದ್ದು ಈ ಅರಣ್ಯ ಪ್ರದೇಶದಿಂದ ಸುತ್ತುವರೆದಿರುವ ಈ ಪ್ರದೇಶಲ್ಲಿರುವ ಶಿಬಿರವು ತುಂಗಾನದಿಯು ಇದರ ಮೂಲಕ ಹರಿಯುತ್ತದೆ. ನೀವು ಈ ಆನೆಗಳಿರುವ ಶಿಬಿರಕ್ಕೆ ರೈಲು, ರಸ್ತೆ ಹಾಗೂ ವಿಮಾನ ಹೀಗೆ ಎಲ್ಲಾ ತರಹದ ಸಾರಿಗೆ ವಿಧಾನದಿಂದಲೂ ಸಂಪರ್ಕಿಸಬಹುದಾಗಿದೆ. ಈ ಸ್ಥಳವು ಒಂದು ವಿಶೇಷ ಸ್ಥಳವಾಗಿದ್ದು, ಇಲ್ಲಿ ನೀವು ಆನೆಗಳ ಜೀವನ ಶೈಲಿಯನ್ನು ಹತ್ತಿರದಿಂದ ಕಾಣಬಹುದಾಗಿದೆ.

ಕರ್ನಾಟಕದ ಶಿವಮೊಗ್ಗದಲ್ಲಿರುವ ಸಕ್ರೆಬೈಲು ಆನೆಗಳ ಶಿಬಿರವು ಅತ್ಯಂತ ಕುತೂಹಲಕಾರಿಯಾದ ಹಾಗೂ ವಿಭಿನ್ನವಾದ ಸ್ಥಳವಾಗಿದ್ದು ಭೇಟಿಗೆ ಯೋಗ್ಯವಾದುದಾಗಿದೆ. ಈ ಸ್ಥಳವು ಪರಿಸರ ಪ್ರವಾಸೋದ್ಯಮವಾಗಿದ್ದು ಪರಿಸರವನ್ನು ಕಾಪಾಡುವುದು ಮತ್ತು ಅದಕ್ಕೆ ಗೌರವ ಕೊಡುವುದು ಮತ್ತು ನೈಸರ್ಗಿಕ ವಸಾಹತುಗಳಿಗೆ ಮತ್ತು ಪರಿಸರಕ್ಕೆ ಯಾವುದೇ ತೊಂದರೆ ಮಾಡದಿರುವುದು ಈ ಪರಿಸರೋದ್ಯಮದ ಮುಖ್ಯ ಉದ್ದೇಶವಾಗಿದೆ.

sakrebailu-elephant-camp-1660375324-1660626649.jpg

ಸಕ್ರೆಬೈಲ್ ಆನೆಗಳ ಕ್ಯಾಂಪ್ ಪ್ರಮುಖ ವಿಶೇಷತೆಗಳಲ್ಲಿ ಮುಖ್ಯವಾದುದೆಂದರೆ ಅದು ಶಿವಮೊಗ್ಗದ ಕಾಡುಗಳ ಮೂಲಕ ಎಲಿಫೆಂಟ್ ಸಫ಼ಾರಿ ಮಾಡುವುದು ಆಗಿದೆ ಈ ಸಫಾರಿಯ ಸಮಯದಲ್ಲಿ, ನೀವು ಸುಮಾರು 15 ಕ್ಕಿಂತಲೂ ಹೆಚ್ಚಿನ ಆನೆಗಳನ್ನು ಒಮ್ಮೆಗೆ ನೋಡುವ ಅವಕಾಶ ಪಡೆಯುವಿರಿ! ಈ ಆನೆಗಳು ಶಿಬಿರದ ಉದ್ಯೋಗಿಗಳಿಂದ ತರಬೇತಿಯನ್ನು ಪಡೆದಿರುತ್ತವೆ. ಹಾಗೂ ಇವರು ಈ ಆನೆಗಳನ್ನು ಸುರಕ್ಷಿತವಾಗಿ ಪಳಗಿಸುವುದು ಹೇಗೆ ಎನ್ನುವುದನ್ನು ತಿಳಿದಿರುತ್ತಾರೆ.

ಸಕ್ರೆಬೈಲ್ ಆನೆಗಳ ಶಿಬಿರದ ಸಮಯಬೆಳಿಗ್ಗೆ 8:30 ರಿಂದ 11ರ ತನಕ (ಪ್ರತೀದಿನ)

ಸಕ್ರೆಬೈಲ್ ಆನೆಗಳ ಶಿಬಿರಕ್ಕೆ ಪ್ರವೇಶ ದರ

ಭಾರತೀಯರಿಗೆ : 30/- 50/-ರೂಪಾಯಿಗಳು

ವಿದೇಶಿಯರಿಗೆ : 100/- 150/- ರೂಪಾಯಿಗಳು

elephants-5781343-1920-1660308084-1660626659.jpg

ಗಮನಿಸಿ: ಸಕ್ರೆಬೈಲು ಆನೆ ಶಿಬಿರದ ಸಮಯ ಮತ್ತು ಶುಲ್ಕಗಳು ಅನುಕೂಲಕ್ಕೆ ತಕ್ಕಂತೆ ಬದಲಾಗಬಹುದು

ಸಕ್ರಬೈಲು ಆನೆ ಶಿಬಿರದ ಆಕರ್ಷಣೆಗಳುಆನೆಗಳು ಸ್ನಾನ ಮಾಡುವುದನ್ನು ನೋಡಬಹುದು

ಆನೆಗಳಿಗೆ ಆಹಾರ ನೀಡುವುದು (ಇಲ್ಲಿ ಆನೆಗಳಿಗೆ ಆಹಾರ ನೀಡಬಹುದು, ಆದರೆ ಹೊರಗಿನ

ಆಹಾರ ತರಲು ಅವಕಾಶವಿಲ್ಲ)

ಆನೆಗಳು ಹೇಗೆ ತಿನ್ನುತ್ತವೆ ಎಂಬುದನ್ನು ನೋಡಿ.

ಆನೆಗಳು ತರಬೇತಿ ಪಡೆಯುವುದನ್ನು ನೋಡಬಹುದು

ಚಿತ್ರಗಳನ್ನು ಕ್ಲಿಕ್ ಮಾಡಿ (ಫ್ಲಾಷ್‌ನೊಂದಿಗೆ ಚಿತ್ರಗಳನ್ನು ಕ್ಲಿಕ್ ಮಾಡುವುದನ್ನು

ಅನುಮತಿಸಲಾಗುವುದಿಲ್ಲ)ಆನೆ ಸವಾರಿಗಳನ್ನು ಆನಂದಿಸಿ

ಕಾಡಿನ ಸುತ್ತಲೂ ಚಾರಣ ಮತ್ತು ಜಾಗರಣೆ

elephant-2426786-1920-1660308109-1660626670.jpg

ಸಕ್ರಬೈಲು ಆನೆ ಶಿಬಿರವನ್ನು ತಲುಪುವುದು ಹೇಗೆ

ರಸ್ತೆಯ ಮೂಲಕ: ಇದು ಬೆಂಗಳೂರಿನಿಂದ 288 ಕಿಮೀ ಮತ್ತು ಶಿವಮೊಗ್ಗದಿಂದ 14 ಕಿಮೀ ದೂರದಲ್ಲಿದೆ.

ರೈಲಿನ ಮೂಲಕ: ಹತ್ತಿರದ ರೈಲು ನಿಲ್ದಾಣ ಶಿವಮೊಗ್ಗ

ವಿಮಾನದ ಮೂಲಕ: ಮಂಗಳೂರು ವಿಮಾನ ನಿಲ್ದಾಣವು ಶಿವಮೊಗ್ಗದಿಂದ ಸುಮಾರು 165 ಕಿಮೀ ದೂರದಲ್ಲಿದೆ.

camp-elephants-2319080-1920-1660308097-1660626680.jpg

ಸಮೀಪದ ಆಕರ್ಷಣೆಗಳು

ಜೋಗ್ ಫಾಲ್ಸ್ ಕೊಡಚಾದ್ರಿ ಟ್ರೆಕ್ ಇಕ್ಕೇರಿ ದಬ್ಬೆ ಫಾಲ್ಸ್ ಸಕ್ರೆಬೈಲು ಆನೆ ಶಿಬಿರ ಗುಡವಿ ಪಕ್ಷಿಧಾಮ ಆಗುಂಬೆ ಭದ್ರಾ ವನ್ಯಜೀವಿ ಅಭಯಾರಣ್ಯ ಕುಂದಾದ್ರಿ ಟ್ರೆಕ್ ತ್ಯಾವರೆಕೊಪ್ಪ ಮಧುಗಿರಿ ಕೋಟೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X