Search
  • Follow NativePlanet
Share
» »ಕರ್ನಾಟಕದ ಮನಮೋಹಕ ಸೌಂದರ್ಯವನ್ನು ಹೊಂದಿರುವ ಅತ್ಯಂತ ಪ್ರಾಚೀನ ದೇವಾಲಯಗಳಿಗೆ ಭೇಟಿ ನೀಡಿ

ಕರ್ನಾಟಕದ ಮನಮೋಹಕ ಸೌಂದರ್ಯವನ್ನು ಹೊಂದಿರುವ ಅತ್ಯಂತ ಪ್ರಾಚೀನ ದೇವಾಲಯಗಳಿಗೆ ಭೇಟಿ ನೀಡಿ

ಭಾರತವು ಭವ್ಯ ಹಾಗೂ ಪುರಾತನ ಇತಿಹಾಸವನ್ನು ಹೊಂದಿರುವ ಹೆಮ್ಮೆಯ ಭೂಮಿಯಾಗಿದೆ. ಭಾರತದಲ್ಲಿತಿವ ಪುರಾತನ ದೇವಾಲಯಗಳು ಸಹಿಷ್ಣುತೆ ಮತ್ತು ಸೌಂದರ್ಯತೆಗಳನ್ನು ಚಿತ್ರಿಸುತ್ತಾ ದೃಢವಾಗಿ ನಿಂತಿದ್ದು, ಇವುಗಳು ಭಾರತದ ಭವ್ಯ ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ. ಭಾರತದ ಪ್ರತಿಯೊಂದೂ ರಾಜ್ಯಗಳೂ ಪ್ರಾಚೀನ ಕಾಲದ ಸುಂದರವದ ಕೋಟೆಗಳು, ಅರಮನೆಗಳು ಮತ್ತು ದೇವಾಲಯಗಳನ್ನು ಹೊಂದಿದೆ.

ಅನೇಕ ಯುದ್ದಗಳು ಅವುಗಳ ನಂತರ ಅಭಿವೃದ್ದಿ ಹಾಗೂ ಅತ್ಯಾಧುನಿಕತೆಯ ಮೂಲಕ ಪ್ರಗತಿಯನ್ನು ಕಂಡ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು ಇಂತಹ ರಾಜ್ಯದಲ್ಲಿರುವ ಪ್ರಾಚೀನ ಇತಿಹಾಸಗಳ ವಿಸ್ತಾರ ವಿವರಣೆಗಳನ್ನು ಸಾರುವ ದೇವಾಲಯಗಳಿಗೆ ಭೇಟಿ ನೀಡಬಾರದೇಕೆ? ಇಂತಹ ಭವ್ಯತೆಗಳನ್ನು ಸಾರುವ ಈ ದೇವಾಲಯಗಳಿಗೆ ಭೇಟಿ ನೀಡಿ.

beluru channakeshava temple

ಚೆನ್ನಕೇಶವ ದೇವಾಲಯ

ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನ ಚೆನ್ನಕೇಶವ ದೇವಾಲಯವು ತನ್ನ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವಗಳಿಂದಾಗಿ ನಗರದ ಅತ್ಯಂತ ಪ್ರಮುಖ ದೇವಾಲಯಗಳಲ್ಲಿ ಒಂದೆನಿಸಿದೆ. ಕ್ರಿಶ 1117ರಲ್ಲಿ ರಾಜ ವಿಷ್ಣುವರ್ಧನನ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾದ ಈ ದೇವಾಲಯದ ಉತ್ಕೃಷ್ಟವಾದ ವಾಸ್ತುಶಿಲ್ಪದ ರಚನೆಯು ಪೂರ್ಣಗೊಳ್ಳಲು ಅಂದಾಜು 103 ವರ್ಷಗಳ ಸಮಯವನ್ನು ತೆಗೆದುಕೊಂಡಿತ್ತು ಎಂದು ಹೇಳಲಾಗುತ್ತದೆ. ವೈಷ್ಣವ ಧರ್ಮದ ಅತ್ಯಂತ ಪ್ರಮುಖವಾದ ಯಾತ್ರಾಸ್ಥಳವಾಗಿರುವ ಚೆನ್ನಕೇಶವ ದೇವಾಲಯವು ಪ್ರತೀವರ್ಷ ಲಕ್ಷಾಂತರ ಪ್ರವಾಸಿಗರು ಮತ್ತು ಹಿಂದು ಭಕ್ತರನ್ನು ಆಕರ್ಷಿಸುತ್ತದೆ.

ಈ ದೇವಾಲಯದ ಮುಖ್ಯ ವಿಶೇಷತೆಯು ಇದರ ಭವ್ಯವಾದ ದೊಡ್ಡ ಹಜಾರಗಳು ಮತ್ತು ಆವರಣಗಳು ಮತ್ತು ಅಲಂಕೃತವಾದ ಗೋಡೆಗಳು ಮತ್ತು ಕಂಬಳಲ್ಲಿ ಅಡಗಿದ್ದು, ಇವುಗಳಲ್ಲಿ ಸುಂದರವಾದ ಕಲ್ಲಿನಿಂದ ಕೆತ್ತಲ್ಪಟ್ಟ ಕಲಾಕೃತಿಗಳನ್ನು ಮತ್ತು ಅವುಗಳ ಸುಂದರವಾದ ಕೆತ್ತನೆಯ ಶೈಲಿಯನ್ನು ಕಾಣಬಹುದಾಗಿದೆ. ಕರ್ನಾಟಕದ ಈ ಪ್ರಾಚೀನ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿಯ ಅನುಭವ ಪಡೆದರೆ ಹೇಗಿರಬಹುದು?

Hampi virupakashappa temple

ವಿರೂಪಾಕ್ಷ ದೇವಾಲಯ -ಹಂಪೆ

ಪುರಾತನ ಸ್ಮಾರಕಗಳು ಮತ್ತು ದೇವಾಲಯಗಳ ವಿಷಯ ಮಾತಾಡುವಾಗ ಹಂಪೆಯ ಅವಶೇಷಗಳ ಬಗ್ಗೆ ಹೇಳದೇ ಇರಲು ಸಾಧ್ಯವೇ ಇಲ್ಲ. ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿರುವ ಹಂಪೆಯಲ್ಲಿ ಅನೇಕ ಐತಿಹಾಸಿಕ ತಾಣಗಳಲ್ಲಿ ದೇವಾಲಯಗಳನ್ನು ಮತ್ತು ಹಲವಾರು ಕಟ್ಟಡಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಶಿವ ದೇವರಿಗೆ ಅರ್ಪಿತವಾದ ವಿರೂಪಾಕ್ಷ ದೇವಾಲಯವೂ ಒಂದಾಗಿದೆ.

ಹಂಪೆಯ ಬಯಲಿನ ನಡುವೆ ಸ್ಥಾಪಿತವಾದ ಹಾಗೂ 7ನೇ ಶತಮಾನದಷ್ಟು ಹಿಂದಿನ ಇತಿಹಾಸವಿರುವ ಈ ದೇವಾಲಯವು ಚಾಲುಕ್ಯರ ಕಾಲದ್ದಾಗಿದೆ.ಪ್ರಮುಖ ಯಾತ್ರಾಸ್ಥಳವಾಗಿರುವ ಈ ದೇವಾಲಯವು ಸಾವಿರಾರು ಪ್ರವಾಸಿಗರು ಮತ್ತು ಹಿಂದೂ ಭಕ್ತರನ್ನು ಪ್ರತೀ ತಿಂಗಳಲ್ಲಿಯೂ ಆಕರ್ಷಿಸುತ್ತದೆ. ಇಲ್ಲಿಗೆ ಬರುವ ಭಕ್ತರು ದೇವರಿಗೆ ಪೂಜೆಗಳನ್ನು ಸಲ್ಲಿಸುತ್ತಾ ಇಲ್ಲಿಯ ಸೌಂದರ್ಯತೆಯನ್ನು ಸವಿಯುತ್ತಾರೆ. ತುಂಗಭದ್ರಾ ನದಿಯ ಪಕ್ಕದಲ್ಲಿ ನಿರ್ಮಿಸಲಾದ ಈ ದೇವಾಲಯವು ಅದ್ಭುತವಾದ ವಿನ್ಯಾಸಗಳು ಮತ್ತು ಕಲಾಕೃತಿಗಳ ಮಾದರಿಗಳನ್ನು ತನ್ನಲ್ಲಿ ಹೊಂದಿದೆ.

Haoysala temple

ಹೊಯ್ಸಳೇಶ್ವರ ದೇವಾಲಯ

ಹಳೆಬೀಡು ಎಂದು ಕರೆಯಲ್ಪಡುವ ಹೊಯ್ಸಳೇಶ್ವರ ದೇವಾಲಯವು 12ನೇ ಶತಮಾನದಲ್ಲಿ ಸುಮಾರು ಕ್ರಿ.ಶ.1121ರ ಆಸುಪಾಸಿನಲ್ಲಿ ನಿರ್ಮಿಸಲ್ಪಟ್ಟಿದ್ದು, ಇದು ಹೊಯ್ಸಳ ಶೈಲಿಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುತ್ತದೆ. ಇದು ಶೈವ ಪಂಥದ ಪ್ರಮುಖ ದೇವಾಲಯವಾಗಿದ್ದರೂ ಸಹ ಇದರ ಸಂಕೀರ್ಣದ ಒಳಗೆ ವೈಷ್ಣವ ,ಮತ್ತು ಜೈನ ಧರ್ಮಕ್ಕೆ ಸಂಬಂಧಪಟ್ಟ ಕೆಲವು ಭಾವಚಿತ್ರಗಳನ್ನು ಕಾಣಬಹುದಾಗಿದೆ. ಸುಂದರವಾದ ಉದ್ಯಾನವನಗಳಿಂದ ಸುತ್ತುವರೆದಿರುವ ಸುಂದರವಾದ ಹೊಯ್ಸಳೇಶ್ವರ ದೇವಾಲಯದಲ್ಲಿಯ ಪ್ರತಿಯೊಂದು ಕಲ್ಲುಗಳೂ ಹಿಂದು ಧರ್ಮದ ದಂತಕತೆಗಳನ್ನು ವಿವರಿಸುವುದನ್ನು ಕಾಣಬಹುದಾಗಿದೆ.

ಸಾಂಪ್ರದಾಯಿಕ ದೇವಾಲಯಗಳಿಗೆ ಭೇಟಿ ನೀಡಿ ಬೇಸರವೆನಿಸಿದ್ದಲ್ಲಿ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಈ ಋತುವಿನಲ್ಲಿ ನಿಸ್ಸಂದೇಹವಾಗಿ ಭೇಟಿ ನೀಡಲು ಯೋಗ್ಯವಾದ ತಾಣವಾಗಿದೆ. ಹಾಗಿದ್ದಲ್ಲಿ ಇಲ್ಲಿಗೆ ಈ ಸ್ಥಳಕ್ಕೆ ಭೇಟಿ ನೀಡಿ, ಇಲ್ಲಿಯ ಸೌಂದರ್ಯತೆ ಮತ್ತು ಭವ್ಯತೆಯ ಅನುಭವವನ್ನು ಪಡೆಯಬಾರದೇಕೆ?

ಐಹೊಳೆಯ ದುರ್ಗಾ ದೇವಾಲಯ

12ನೇ ಶತಮಾನದಲ್ಲಿ ನಿರ್ಮಿತವಾದ ಐಹೊಳೆಯ ದುರ್ಗಾ ದೇವಾಲಯವು ಚಾಲುಕ್ಯ ವಾಸ್ತುಶಿಲ್ಪದ ಭವ್ಯತೆಯನ್ನು ಸಾರುವ ಮತ್ತೊಂದು ಕಲಾಕೃತಿಯಾಗಿದೆ. ದೇವಾಲಯವು ದುರ್ಗೆಯ ಹೆಸರಲ್ಲಿ ಕರೆಯಲಾಗುತ್ತದೆಯಾದರೂ ದೇವಾಲಯದ ಸಂಕೀರ್ಣದಲ್ಲಿ ವಿಷ್ಣು ಮತ್ತು ಶಿವ ದೇವರಿಗೆ ಸಂಬಂಧಿಸಿದ ಶಿಲ್ಪಗಳು ಮತ್ತು ಚಿತ್ರಗಳೇ ಹೆಚ್ಚಿನ ಮಟ್ಟದಲ್ಲಿ ಕಾಣಸಿಗುತ್ತವೆ ಆದುದರಿಂದ ಈ ದೇವಾಲಯದಲ್ಲಿ ವಿಷ್ಣು ಮತ್ತು ಶಿವ ದೇವರನ್ನು ಪೂಜಿಸಲಾಗುತ್ತಿತ್ತು ಎಂದು ನಂಬಲಾಗುತ್ತದೆ

ದೇವಾಲಯದ ಮೇಲ್ಛಾವಣಿಯು ಹಲವಾರು ಕಂಬಗಳ ಆಧಾರದಿಂದ ನಿಂತಿದ್ದು, ಈ ದೇವಾಲಯವು ಐಹೊಳೆಯ ಅತ್ಯಂತ ಸುಂದರ ಸ್ಮಾರಕಗಳಲ್ಲಿ ಒಂದೆನಿಸಿದೆ. ಅಲ್ಲದೆ ಪ್ರತೀದಿನ ಹಲವಾರು ಸಂದರ್ಶಕರನ್ನು ಆಕರ್ಷಿಸುತ್ತದೆ. ಐಹೊಳೆಯ ಐತಿಹಾಸಿಕ ಸ್ಮಾರಕಗಳು ಮತ್ತು ಸುಂದರ ಪ್ರಾಚೀನ ದೇವಾಲಯಗಳಿಗೆ ಭೇಟಿ ಕೊಟ್ಟು, ವೀಕ್ಷಿಸಿ ಇವುಗಳ ಸೌಂದರ್ಯತೆಯನ್ನು ಆನಂದಿಸಿ.

badami caves

ಬಾದಾಮಿಯ ಗುಹಾಂತರ ದೇವಾಲಯಗಳು

ಕಲ್ಲಿನಲ್ಲಿ ಕೆತ್ತಿದ ವಾಸ್ತು ಶಿಲ್ಪಕ್ಕೆ ಉತ್ತಮ ಉದಾಹರಣೆಯೆಂದರೆ ಬಾದಾಮಿಯ ಗುಹಾಂತರ ದೇವಾಲಯಗಳು. ಈ ದೇವಾಲಯಗಳು ಭಾರತದ ಅತ್ಯಂತ ಹಳೇಯ ದೇವಾಲಯಗಳಲ್ಲಿ ಒಂದೆನಿಸಿದ್ದು ಈ ದೇವಾಲಯಗಳನ್ನು 6ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಮರಳುಗಲ್ಲುಗಳಲ್ಲಿ ನಿರ್ಮಿತವಾಗಿರುವ ಈ ದೇವಾಲಯಗಳು ಬಾದಾಮಿ ಮತ್ತು ಚಾಲುಕ್ಯರ ವಾಸ್ತುಶಿಲ್ಪದ ಪರಿಪೂರ್ಣ ಮಿಶ್ರಣವಾಗಿದೆ. ಆರು ಗುಹಾಂತರ ದೇವಾಲಯಗಳನ್ನು ಒಳಗೊಂಡಿರುವ ಕರ್ನಾಟಕದ ಬಾದಾಮಿಯ ದೇವಾಲಯಗಳ ಸಂಕೀರ್ಣವು ಇತಿಹಾಸಕಾರರು ಮತ್ತು ಇತಿಹಾಸಪ್ರಿಯರು ಹೆಚ್ಚಾಗಿ ಭೇಟಿ ನೀಡುವ ಕೇಂದ್ರಗಳಲ್ಲಿ ಒಂದಾಗಿದೆ.

ದೇವಾಲಯಗಳ ಗೋಡೆಗಳ ಮೇಲೆ ಚಿತ್ರಣಗಳ ಹಲವಾರು ವಿನ್ಯಾಸಗಳು ಮತ್ತು ಹಿಂದು ದೇವರುಗಳ ವಿವಿಧ ಮಾದರಿಯ ಚಿತ್ರಗಳನ್ನು ಕೆತ್ತಲಾಗಿದ್ದು ಇವುಗಳು

ಈ ಸ್ಥಳದ ಸೌಂದರ್ಯತೆಗೆ ಇನ್ನಷ್ಟು ಮೆರುಗನ್ನು ನೀಡುತ್ತದೆ. ನೀವೇನಾದರೂ ಎಂದೂ ಗುಹಾಂತರ ದೇವಾಲಯಗಳಿಗೆ ಭೇಟಿ ನೀಡದೇ ಇದ್ದಲ್ಲಿ, ಬಾದಾಮಿಯ ಈ ದೇವಾಲಯಗಳು ನಿಮ್ಮನ್ನು ಈ ಋತುವಿನಲ್ಲಿ ಕೈಬೀಸಿ ಕರೆಯುತ್ತದೆ.

ಬ್ರಹ್ಮ ಜಿನಾಲಯ ದೇವಾಲಯ, ಲಕ್ಕುಂಡಿ

ಕರ್ನಾಟಕದ ಗದಗದಲ್ಲಿ ಜಿಲ್ಲೆಯಲ್ಲಿರುವ ಲಕ್ಕುಂಡಿಯಲ್ಲಿ ಸುಂದರವಾದ ಬ್ರಹ್ಮ ಜಿನಾಲಯ ದೇವಾಲಯವು ಜೈನ ದೇವಾಲಯವಾಗಿದ್ದು, ಇದನ್ನುಕಲ್ಯಾಣಿ ಚಾಲುಕ್ಯರ ಆಳ್ವಿಕೆಯಲ್ಲಿ 11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಬ್ರಹ್ಮ ಜಿನಾಲಯ ದೇವಾಲಯದಲ್ಲಿ ಭಗವಾನ್ ಮಹಾವೀರನನ್ನು ಪೂಜಿಸಲಾಗುತ್ತಿದ್ದು, ಈ ದೇವಾಲಯವು ಜೈನರ ಅತ್ಯಂತ ಹಳೆಯ ದೇವಾಲಯ ಮತ್ತು ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಇದನ್ನು ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ತೆರೆದ ಸಭಾಂಗಣಗಳಿಗೆ ಸಂಪರ್ಕ ಹೊಂದಿದ್ದು ಈ ದೇವಾಲಯಗಳಿಗೆ ಸೋಪ್ ಸ್ಟೋನ್ ಅನ್ನು ಕಚ್ಚಾ ವಸ್ತುವಾಗಿ ಬಳಸಲಾಗಿದೆ.

ನೀವು ಜೈನ ಧರ್ಮದ ಇತಿಹಾಸವನ್ನು ಅನ್ವೇಷಿಸಲು ಬಯಸಿದರೆ, ಲಕ್ಕುಂಡಿಯಲ್ಲಿರುವ ಜೈನ ದೇವಾಲಯವು ನಿಮಗೆ ಸೂಕ್ತವಾದ ತಾಣವಾಗಿದೆ. ಇಂದು, ಇದು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಆರೈಕೆಯಲ್ಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X