Search
  • Follow NativePlanet
Share
» »ಮಹಾಭಾರತದ ಘಟನೆಗಳು ಪತ್ತೆಯಾದ ಪ್ರದೇಶಗಳು...!

ಮಹಾಭಾರತದ ಘಟನೆಗಳು ಪತ್ತೆಯಾದ ಪ್ರದೇಶಗಳು...!

ಚರಿತ್ರೆಯ ಮೇರೆಗೆ ಈ ಪ್ರದೇಶವು ಜನಪ್ರಿಯವಾದ ಅಥವಾ ಪುರಾತನವಾದ ರಾಜ್ಯಕ್ಕೆ ರಾಜಧಾನಿಯಾಗಿತ್ತು. 5 ನೇ ಶತಮಾನಕ್ಕೆ ಸೇರಿದ ರಾಜರು ಇದನ್ನು ಆಳ್ವಿಕೆ ಮಾಡುತ್ತಿದ್ದರು, ತದನಂತರದ ಕಾಲದಲ್ಲಿ ಮೌರ್ಯರ ರಾಜ್ಯದಲ್ಲಿ ಒಂದು ಭಾಗವಾಗಿತ್ತು. ಇಲ್ಲಿ ಪ್ರವ

By Sowmyabhai

ಚರಿತ್ರೆಯ ಮೇರೆಗೆ ಈ ಪ್ರದೇಶವು ಜನಪ್ರಿಯವಾದ ಅಥವಾ ಪುರಾತನವಾದ ರಾಜ್ಯಕ್ಕೆ ರಾಜಧಾನಿಯಾಗಿತ್ತು. 5 ನೇ ಶತಮಾನಕ್ಕೆ ಸೇರಿದ ರಾಜರು ಇದನ್ನು ಆಳ್ವಿಕೆ ಮಾಡುತ್ತಿದ್ದರು, ತದನಂತರದ ಕಾಲದಲ್ಲಿ ಮೌರ್ಯರ ರಾಜ್ಯದಲ್ಲಿ ಒಂದು ಭಾಗವಾಗಿತ್ತು. ಇಲ್ಲಿ ಪ್ರವಾಸಿಗರು ಅಶೋಕನ ಶಿಲಾ ಶಾಸನಗಳನ್ನು ನೋಡುತ್ತಾರೆ. ಮೌರ್ಯ ರಾಜರು ಇಲ್ಲಿ ತನ್ನ ರಾಜ್ಯದ ಆಳ್ವಿಕೆಗೆ ಸಂಬಂಧಿಸಿದ ಕಟ್ಟಡಗಳು, ಪ್ರಕಟನೆಗಳಂತಹ ಶಿಲಾ ಶಾಸನಗಳನ್ನು ಕೆತ್ತನೆ ಮಾಡಿದ್ದಾರೆ. ಇಲ್ಲಿ ನೋಡಬೇಕಾಗಿರುವ ಪ್ರವಾಸಿ ತಾಣಗಳ ಸಾಕಷ್ಟಿವೆ.

ವಿರಾಟ ನಗರ ಪ್ರದೇಶವು ರಾಜಸ್ಥಾನದಲ್ಲಿನ ಪಿಂಕ್ ಸಿಟಿ ಜೈಪೂರ್‍ನಿಂದ ಕೇವಲ 53 ಕಿ.ಮೀ ದೂರದಲ್ಲಿದೆ. ಈ ಪಟ್ಟಣವು ಪ್ರಸ್ತುತವಿರುವ ಒಂದು ಆಕರ್ಷಣೀಯವಾದ ಪ್ರದೇಶವಾಗಿ ಮಾರ್ಪಟಾಗಿದೆ. ಈ ಪ್ರದೇಶವನ್ನು ಅನೇಕ ಮಂದಿ ಭೈರಾತ್ ಎಂದು ಕೂಡ ಕರೆಯುತ್ತಾರೆ. ಇದರ ಸಮೀಪದಲ್ಲಿ ಸರಿಸ್ಕಾ, ಶಿಲಿಸೇರ್, ಅಹಬ್ ಘರ್-ಭಂಗ್ರಾ ಮತ್ತು ಆಲ್ವಾರ್ ನಂತಹ ಇತರ ಪ್ರವಾಸಿ ತಾಣಗಳು ಕೂಡ ಇವೆ.

ವಿರಾಟ ನಗರದ ಹೆಸರು ನಮ್ಮ ಇತಿಹಾಸವಾದ ಮಹಾಭಾರತದಲ್ಲಿಯೂ ಕೂಡ ಹೇಳಲಾಗಿದೆ. ಪುರಾಣ ಇತಿಹಾಸದ ಮೇರೆಗೆ ಈ ಪ್ರದೇಶವನ್ನು ರಾಜ ವಿರಾಟನು ಆಳಿದನು. ಪಾಂಡವರು ತಮ್ಮ ಅರಣ್ಯ ವಾಸದ ಸಮಯದಲ್ಲಿ ಇತನ ರಾಜ್ಯದಲ್ಲಿಯೇ ಕೆಲವು ಕಾಲ ಇದ್ದರೆಂದು ಹೇಳಲಾಗುತ್ತದೆ.

1.ಅಶೋಕ ಶಿಲಾಲೇಖ

1.ಅಶೋಕ ಶಿಲಾಲೇಖ

PC:Giridharmamidi

ಅಶೋಕಾ ಶಿಲಾಲೇಖವನ್ನು ಮೌರ್ಯ ಚಕ್ರವರ್ತಿ ಅಶೋಕನು ರಚಿಸಿದನು. ಇವು ಮೆಯನ್ ರೋಡ್‍ನಿಂದ ಸುಮಾರು 100 ಮೀಟರ್ ದೂರದಲ್ಲಿದೆ. ಇದರ ಸುತ್ತಮುತ್ತ ಅನೇಕ ಸುಂದರವಾದ ದೃಶ್ಯಗಳು ಕೂಡ ನೋಡಿ ಆನಂದಿಸಬಹುದು. ಅಶೋಕನು ಭಾರತ ದೇಶವನ್ನು ಕ್ರಿ.ಪೂ 269 ರಿಂದ ಕ್ರಿ.ಪೂ 232 ರವರೆಗೆ ಆಳ್ವಿಕೆ ಮಾಡಿದ್ದಾನೆ. ಭಾರತದಲ್ಲಿನ ವಿವಿಧ ಪ್ರದೇಶದಲ್ಲಿ ತನ್ನ ಆಳ್ವಿಕೆಕಾರರಿಗೆ ಸಂಬಂಧಿಸಿದ ಕಾನೂನನ್ನು ಶಿಲಾ ಶಾಸನವನ್ನು ಲಿಖಿಸಿದ್ದಾನೆ.

2.ಜೈನ ದೇವಾಲಯ

2.ಜೈನ ದೇವಾಲಯ

PC:India Journeys

ಜೈನ ದೇವಾಲಯ ಪ್ರಸಿದ್ಧ ಹೊಂದಿರುವ ಆಕರ್ಷಣೆಯಾಗಿದೆ. ಈ ದೇವಾಲಯದಲ್ಲಿ ಒಂದು ಬಯಲು ಪ್ರಾಂಗಣವಿದೆ. ಸುತ್ತಲೂ ಗೋಡೆಯಿಂದ ಆವೃತ್ತವಾಗಿದೆ. ದೇವಾಲಯದ ಪ್ರವೇಶದಲ್ಲಿ ಸ್ತಂಭಗಳು ಅತ್ಯಂತ ಸುಂದರವಾಗಿ ಕಾಣುತ್ತದೆ. ಅಲ್ಲಿನ ದೇವಾಲಯ ಕಲ್ಲಿನ ಫಲಕದ ಮೇಲೆ ಕೆಲವು ಧರ್ಮದ ಶಾಸನಗಳನ್ನು ಕಾಣಬಹುದಾಗಿದೆ. ಈ ದೇವಾಲಯದಲ್ಲಿ ಜೈನ ತೀರ್ಥಂಕರರ ಚಿತ್ರಗಳು ಕೂಡ ಇವೆ. ಪಾಶ್ವನಾಥ, ಚಂದ್ರ ಪ್ರಭ ಮೂರ್ತಿಗಳು ಕೂಡ ಇವೆ. ಜೈನ ಧರ್ಮದಲ್ಲಿನ 24 ತೀರ್ಥಂಕರರಲ್ಲಿ ಮೊದಲನೆಯವನು ರಿಷಭ ದೇವ ಚಿತ್ರ ಕೂಡ ಕಾಣಬಹುದು.

3.ಭೀಮ್-ಕಿ-ಡುಂಗರಿ

3.ಭೀಮ್-ಕಿ-ಡುಂಗರಿ

Photo Courtesy: indian citizen

ಭಿಮ್-ಕಿ-ಡುಂಗರಿ ಒಂದು ದೊಡ್ಡದಾದ ಗುಹೆ. ಇದು ವಾರಾಟ್ ಎಂಬ ನಗರದಲ್ಲಿದೆ. ಕೌರವರಿಗೆ ಎಲ್ಲವೂ ನೀಡಿ ಪಾಂಡವರು 12 ವರ್ಷಗಳ ಅರಣ್ಯವಾಸ ಮಾಡಿ ಒಂದು ವರ್ಷ ಅಜ್ಞಾತ ವಾಸ ಮಾಡುತ್ತಾ ಕಳೆಯುತ್ತಾರೆ, 13 ನೇ ವರ್ಷದಲ್ಲಿ ವಿರಾಟನ ಸ್ಥಳದಲ್ಲಿ ಸೇರಿಕೊಂಡರು. ಪಾಂಡವರಲ್ಲಿ ಅತ್ಯಂತ ಬಲಶಾಲಿಯಾದ ಭೀಮನು ತನ್ನ ನಿವಾಸವಾಗಿ ಒಂದು ಬೆಟ್ಟವನ್ನು ಆಯ್ಕೆ ಮಾಡಿಕೊಂಡ. ಅದೇ ಭೀಮ್ ಕಿ ಡುಂಗಾರಿ ಎಂದು ಪ್ರಸಿದ್ಧಿಯಾಯಿತು. ಈ ಬೆಟ್ಟದ ಮೇಲೆಯೇ ಭೀಮನು ವಾಸಿಸುತ್ತಿದ್ದನು ಎಂದು ಪುರಾಣಗಳು ಹೇಳುತ್ತವೆ.

4.ಗಣೇಶ್ ಗಿರಿ ದೇವಾಲಯ ಮತ್ತು ಮ್ಯೂಸಿಯಂ

4.ಗಣೇಶ್ ಗಿರಿ ದೇವಾಲಯ ಮತ್ತು ಮ್ಯೂಸಿಯಂ

Photo Courtesy: indian museum

ಗಣೇಶ ಗಿರಿ ದೇವಾಲಯವನ್ನು ವರ್ಷವೆಲ್ಲಾ ಭಕ್ತರು ಅಧಿಕ ಸಂಖ್ಯೆಯಲ್ಲಿ ದರ್ಶಿಸುತ್ತಾರೆ. ಇಲ್ಲಿ ಒಂದು ಚಿಕ್ಕದಾದ ಮ್ಯೂಸಿಯಂ ಇದೆ. ಈ ಮ್ಯೂಸಿಯಂ ಸುಮಾರು 170 ಶಿಲ್ಪಶೈಲಿ ಕಥೆ ವಿವರಿಸುತ್ತದೆ.

5.ಬಿಜಕ್ ಕಿ ಪಹಾರಿ

5.ಬಿಜಕ್ ಕಿ ಪಹಾರಿ

Photo Courtesy: Giridharmamidi

ಬಿಜಕ್ ಕಿ ಪಹಾರಿ ಪ್ರದೇಶದಲ್ಲಿ ಎರಡು ಬೌದ್ಧ ಆರಾಮಗಳು ಚರಿತ್ರೆಯಲ್ಲಿನ ಸುವರ್ಣಯುಗ. ಈ ವಿಧವಾದ ಬೌದ್ಧ ಆರಾಮಗಳು ಸುಮಾರು 8 ಇವೆ ಎಂದು ಹೇಳುತ್ತಾರೆ. ಕ್ರಿ.ಶ 634 ರಲ್ಲಿ ಹ್ಯೂಯನ್ ಸಾಂಗ್ ವಿರಾಟ್ ನಗರಕ್ಕೆ ಭೇಟಿ ನೀಡಬಹುದು. ಇತನ ಭೇಟಿ ಅಶೋಕ ಚಕ್ರವರ್ತಿ ಆಳ್ವಿಕೆಯ ನಂತರ 900 ವರ್ಷಗಳಿಗೆ ಮೊದಲನೇ ಬಾರಿಗೆ ನಡೆಯಿತು. ಈ ಬೌದ್ಧ ಆರಾಮಗಳು ಗುಂಡಾಕಾರದಲ್ಲಿದ್ದು, ಅತಿ ಪುರಾತನವಾದುದು ಎಂದು ಹೇಳಲಾಗಿದೆ. ದೇವಾಲಯದ ಹೊರ ಗೋಡೆಯ ಮೇಲೆ ಬೌದ್ಧ ಶಿಲಾ ಶಾಸನಗಳನ್ನು ಅಶೋಕನ ಕಾಲದ ಬ್ರಾಹ್ಮಿ ಲಿಪಿಯಲ್ಲಿ ಲಿಖಿಸಲಾಗಿದೆ ಎನ್ನಲಾಗಿದೆ.

6.ಜೈನ ನಾಸಿಯಾ

6.ಜೈನ ನಾಸಿಯಾ

Photo Courtesy: viratnagar.co.in

ಜೈನ ನಾಸಿಯಾ ವಿರಾಟ ನಗರದಲ್ಲಿನ ಮೊಘಲ್ ಗೇಟ್ ಎದುರಿನಲ್ಲಿದೆ. ಪ್ರವಾಸಿಗರು ಇಲ್ಲಿ ಆ ಕಾಲದ ಅನೇಕ ನೀರಿನ ಪರದೆಗಳು ಮತ್ತು ಚಿಕ್ಕದಾದ ತೋಟಗಳನ್ನು ಕೂಡ ನೋಡಬಹುದು. ಇಲ್ಲಿ ಒಂದು ಚಿಕ್ಕಮಕ್ಕಳಿಗಾಗಿಯೇ ಆಟದ ಸ್ಥಳಗಳು ಕೂಡ ಇದೆ.

7.ವಿರಾಟ ನಗರಕ್ಕೆ ಸೇರಿಕೊಳ್ಳುವ ಬಗೆ ಹೇಗೆ?

7.ವಿರಾಟ ನಗರಕ್ಕೆ ಸೇರಿಕೊಳ್ಳುವ ಬಗೆ ಹೇಗೆ?

Photo Courtesy: Rakesh Gupta 1

ವಿಮಾನ ಪ್ರಯಾಣ
ಜೈಪೂರ್‍ದಲ್ಲಿನ ಸಂಗನೇರ್ ವಿಮಾನ ನಿಲ್ದಾಣವು ನಗರಕ್ಕೆ ಸಮೀಪದಲ್ಲಿಯೇ ಇದೆ. ಸಂಗನೇರ್‍ನಿಂದ ಮುಂಬೈ, ದೆಹಲಿ, ಔರಂಗಾಬಾದ್, ಉದಯಪೂರ್ ಮತ್ತು ಜೋಧ ಪೂರ್‍ಕ್ಕೆ ನೇರ ವಿಮಾನ ಪ್ರಯಾಣದ ಮೂಲಕ ಸೇರಿಕೊಳ್ಳಬಹುದು. ಅಂತಾರಾಷ್ಟ್ರೀಯ ಪ್ರವಾಸಿಗರು ನವದೆಹಲಿಯಲ್ಲಿನ ಇಂದಿರಾ ಗಾಂಧಿ ಸಂಗನೇರಕ್ಕೆ ಸೇರಿಕೊಳ್ಳಬಹುದು.

ರೈಲ್ವೆ ಪ್ರಯಾಣ
ವಿರಾಟ ನಗರಕ್ಕೆ ಜೈಪುರ್ ರೈಲ್ವೆ ನಿಲ್ದಾಣವು ಸಮೀಪದ ರೈಲ್ವೆ ನಿಲ್ದಾಣವೇ ಆಗಿದೆ. ಈ ಪ್ರದೇಶಕ್ಕೆ ಸಾಧಾರಣವಾದ ರೈಲುಗಳು ಮಾತ್ರವೇ ಅಲ್ಲದೇ, ಪ್ಯಾಲೆಸ್ ಎಂಬ ವಿಲ್ಸ್‍ನಂತಹ ಲಗ್ಜರಿ ರೈಲು ಕೂಡ ಇವೆ. ದೆಹಲಿಯಿಂದ ಈ ರೈಲಿನ ಮೇಲೆ ಜೈಪೂರ್, ಅಲ್ವಾರ್, ಉದಯಪೂರ್ ಪಟ್ಟಣಗಳಿಗೆ ಸೇರಿಕೊಂಡು ಅಲ್ಲಿಂದ ವಿರಾಟ ನಗರ ಕ್ಯಾಬ್‍ನ ಮೂಲಕ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X