Search
  • Follow NativePlanet
Share
» »ಉಡುಪಿಯಲ್ಲಿದೆ ಕಣ್ಮನ ಸೆಳೆಯುವ ಅದ್ಭುತ ಪ್ರವಾಸಿತಾಣಗಳು

ಉಡುಪಿಯಲ್ಲಿದೆ ಕಣ್ಮನ ಸೆಳೆಯುವ ಅದ್ಭುತ ಪ್ರವಾಸಿತಾಣಗಳು

ಉಡುಪಿ ಕರ್ನಾಟಕದ ಪ್ರಸಿದ್ದವಾದ ಜಿಲ್ಲೆ. ಉಡುಪಿ ತನ್ನ ಇತಿಹಾಸದ ಹಾಗೂ ಪೌರಣಿಕ ಪರಂಪರೆಯಿಂದ ಕಂಗೊಳಿಸುತ್ತಿರುವ ತಾಣವಾಗಿದೆ. ಇಲ್ಲಿ ಹಲವಾರು ಪ್ರಸಿದ್ಧವಾದ ದೇವಾಲಯಗಳು, ಬೀಚ್‍ಗಳು, ಪುಣ್ಯಕ್ಷೇತ್ರಗಳು, ಮ್ಯೂಸಿಯಂ, ಜಲಪಾತಗಳನ್ನು ಕಾಣಬಹುದಾಗಿದ

ಉಡುಪಿ ಕರ್ನಾಟಕದ ಪ್ರಸಿದ್ದವಾದ ಜಿಲ್ಲೆ. ಉಡುಪಿ ತನ್ನ ಇತಿಹಾಸದ ಹಾಗೂ ಪೌರಣಿಕ ಪರಂಪರೆಯಿಂದ ಕಂಗೊಳಿಸುತ್ತಿರುವ ತಾಣವಾಗಿದೆ. ಇಲ್ಲಿ ಹಲವಾರು ಪ್ರಸಿದ್ಧವಾದ ದೇವಾಲಯಗಳು, ಬೀಚ್‍ಗಳು, ಪುಣ್ಯಕ್ಷೇತ್ರಗಳು, ಮ್ಯೂಸಿಯಂ, ಜಲಪಾತಗಳನ್ನು ಕಾಣಬಹುದಾಗಿದೆ. ಉಡುಪಿ ಎಂದರೆ ಮೊದಲು ನೆನಪಾಗುವುದೇ ಶ್ರೀ ಕೃಷ್ಣನ ದೇವಾಲಯ. ಗುರು ಮಧ್ವಾಚಾರ್ಯರಿಂದ ಪ್ರತಿಷ್ಟಾಪಿಸಲ್ಪಟ್ಟ ಕೃಷ್ಣ ಮಂದಿರ ಇರುವುದು ಉಡುಪಿಯಲ್ಲಿಯೇ. ಉಡುಪಿಯು ಬೆಂಗಳೂರಿನಿಂದ ಸುಮಾರು 400 ಕಿ,ಮೀ ದೂರದಲ್ಲಿದೆ. ಉಡುಪಿಯ ಶ್ರೀ ಕೃಷ್ಣ ದೇವಾಲಯ ದಕ್ಷಿಣ ಭಾರತದ ಪವಿತ್ರವಾದ ದೇವಾಲಯಗಳಲ್ಲಿ ಒಂದಾಗಿದೆ. ಪ್ರಸುತ್ತ ಲೇಖನದಿಂದ ಉಡುಪಿಯಲ್ಲಿ ಪ್ರಸಿದ್ದವಾದ ಪ್ರವಾಸಿ ತಾಣಗಳ ಬಗ್ಗೆ ತಿಳಿಯಿರಿ. ಒಮ್ಮೆ ಭೇಟಿ ಕೊಟ್ಟು ಬನ್ನಿ.

ಶ್ರೀ ಕೃಷ್ಣ ದೇವಾಲಯ

ಶ್ರೀ ಕೃಷ್ಣ ದೇವಾಲಯ

ಉಡುಪಿಯಲ್ಲಿ ಶ್ರೀ ಕೃಷ್ಣ ದೇವಾಲಯಕ್ಕೆ ಪ್ರಸಿದ್ದಿ. ಉಡುಪಿ ಎಂದರೆ ಶ್ರೀ ಕೃಷ್ಣ, ಶ್ರೀ ಕೃಷ್ಣನೆಂದರೆ ಉಡುಪಿ ಎನ್ನುವಷ್ಟು ಪ್ರಖ್ಯಾತತೆ ಪಡೆದಿದೆ. ಇಲ್ಲಿಗೆ ಹಲವಾರು ಭಕ್ತರು ಕೃಷ್ಣನನ್ನು ದರ್ಶಿಸಲು ಬರುತ್ತಾರೆ. ಈ ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ ಕನಕನ ಕಿಂಡಿ, ಕಿಂಡಿಯಲ್ಲಿರುವ ಒಂಭತ್ತು ರಂಧ್ರಗಳಿಂದ ಶ್ರೀ ಕೃಷ್ಣನ ದರ್ಶನ ಪಡೆಯಬಹುದು. ಈ ಕಿಂಡಿಯಿಂದ ಪರಮಾತ್ಮನ ದರ್ಶನ ಪಡೆದರೆ ಮೋಕ್ಷ, ಪುಣ್ಯ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
PC:Shravan Kamath94

ಶ್ರೀ ಕೃಷ್ಣ ದೇವಾಲಯ

ಶ್ರೀ ಕೃಷ್ಣ ದೇವಾಲಯ

ಇಲ್ಲಿ ಶ್ರೀ ಕೃಷ್ಣನಿಗೆ ಮಾಡುವ ಅಲಂಕಾರ ಅತ್ಯದ್ಭುತವಾಗಿರುತ್ತದೆ. ಈ ದೇವಾಲಯದ ಒಳಭಾಗದಲ್ಲಿ ಹನುಮಂತನ ಹಾಗೂ ಗರುಡ ಮೂರ್ತಿಗಳನ್ನು ಕಾಣಬಹುದಾಗಿದೆ. ಈ ದೇವಾಲಯವನ್ನು ಸುಮಾರು 1,500 ವರ್ಷಗಳ ಇತಿಹಾಸ ಹೊಂದಿರುವ ಪುಣ್ಯ ಕ್ಷೇತ್ರವಾಗಿದೆ.
PC: English Wikivoyage

ಕಾಪು ಬೀಚ್

ಕಾಪು ಬೀಚ್

ಕಾಪು ಎಂಬುದು ತುಳು ಭಾಷೆಯ ಪದವಾಗಿದೆ. ಈ ಕಾಪು ಬೀಚ್ ಉಡುಪಿಯಲ್ಲಿನ ಅತ್ಯಂತ ಸುಂದರ ಪ್ರವಾಸಿ ತಾಣದಲ್ಲಿ ಇದು ಒಂದಾಗಿದೆ. ಈ ಬೀಚ್ ಉಡುಪಿ ಹಾಗೂ ಮಂಗಳೂರಿನ ನಡುವಿನಲ್ಲಿದೆ. ಉಡುಪಿಯಿಂದ 13 ಕಿ,ಮೀ ಯಷ್ಟಿದ್ದರೆ, ಮಂಗಳೂರಿನಿಂದ 40 ಕಿ,ಮೀಯಷ್ಟು ದೂರದಲ್ಲಿ ಈ ಕಾಪು ಬೀಚ್ ಇದೆ. ಲೈಟ್ ಹೌಸ್, ಮೂರು ಮರಿಯಮ್ಮ ದೇವಾಲಯ ಮತ್ತು ಟಿಪ್ಪು ಸುಲ್ತಾನನ ಕೋಟೆ ಇಲ್ಲಿನ ಸಮೀಪವಾದ ಸ್ಥಳಗಳು.
PC:Subhashish Panigrahi

ಕಾಪು ಬೀಚ್

ಕಾಪು ಬೀಚ್

ಈ ಕಾಪು ಬೀಚ್ ಅರೆಬೀಯನ್ ಬೀಚ್ ಎಂದೇ ಪ್ರಖ್ಯಾತಿ ಪಡೆದಿದೆ. ಇಲ್ಲಿ ಹಲವಾರು ಸಿನಿಮಾಗಳ ಶೂಟಿಂಗ್ ಮಾಡಲಾಗುವ ಅದ್ಭುತ ತಾಣ. ಈ ಸುಂದರವಾದ ಬೀಚ್‍ಗೆ ಹಲವಾರು ಪ್ರವಾಸಿಗರು ವಾರಾಂತ್ಯದಲ್ಲಿ ಆನಂದಮಯವಾಗಿರಲು ಭೇಟಿ ನೀಡುತ್ತಾರೆ. ಇಲ್ಲಿನ ಕಾಪು ಲೈಟ್ ಹೌಸ್ 1901 ರಲ್ಲಿ ನಿರ್ಮಿಸಲಾಗಿದೆ.
PC:Subhashish Panigrahi

ಸೈಂಟ್ ಮೇರೀಸ್ ದ್ವೀಪ

ಸೈಂಟ್ ಮೇರೀಸ್ ದ್ವೀಪ

ಉಡುಪಿಯಲ್ಲಿನ ಮತ್ತೊಂದು ಸುಂದರವಾದ ಪ್ರವಾಸಿ ತಾಣ ಈ ಸೈಂಟ್ ಮೇರಿದ್ ದ್ವೀಪ. ಈ ದ್ವೀಪವನ್ನು ಕೊಕೊನಟ್ ಐಲ್ಯಾಂಟ್ ಎಂದು ಸಹ ಕರೆಯುತ್ತಾರೆ. ಈ ದ್ವೀಪವು 4 ಸಮೂಹಗಳನ್ನು ಹೊಂದಿದೆ. ಸೈಂಟ್ ಮೇರಿದ್ ದ್ವೀಪವು ಭಾರತದ 26 ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಇದೂ ಒಂದಾಗಿದೆ ಎಂದು ಭಾರತೀಯ ಭೂ ವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಘೋಷಿಸಿದೆ.
PC:Ashwin06k

ಸೈಂಟ್ ಮೇರೀಸ್ ದ್ವೀಪ

ಸೈಂಟ್ ಮೇರೀಸ್ ದ್ವೀಪ

ಇತಿಹಾಸದ ಪ್ರಕಾರ 1497ರಲ್ಲಿ ಪೋರ್ಚುಗೀಸ್ ಶೋಧಕ ವಾಸ್ಕೋ ಡಿ ಗಾಮ, ತನ್ನ ಯುರೋಪಿನಿಂದ ಭಾರತದ ಈ ದ್ವೀಪದಲ್ಲಿ ಇಳಿದಾಗ ಯೆಸು ಕ್ರಿಸ್ತನ ಕ್ರೊಸ್ ಅನ್ನು ನೆಟ್ಟು ತಾಯಿ ಮೇರಿಗೆ ಸರ್ಮಪಿಸಿ ಈ ತಾಣಕ್ಕೆ ಹೆಸರಿಟ್ಟನು ಎಂದು ನಂಬಲಾಗಿದೆ.
PC:Shravan Kamath94

ಆನೆಗುಡ್ಡೆ ವಿನಾಯಕನ ದೇವಾಲಯ

ಆನೆಗುಡ್ಡೆ ವಿನಾಯಕನ ದೇವಾಲಯ

ಈ ವಿನಾಯಕನ ದೇವಾಲಯವು ಉಡುಪಿಯ ಕುಂದಾಪುರ ತಾಲ್ಲೂಕಿನ ಒಂದು ಸಣ್ಣದಾದ ಹಳ್ಳಿಯಲ್ಲಿದೆ. ಈ ದೇವಾಲಯದ ಮತ್ತೊಂದು ಹೆಸರು ಕುಂಭಾಶಿಯಾಗಿದೆ. ಕುಂಭಾಶಿ ಎಂದರೆ ಕುಂಭಾಸುರ. ಈ ದೇವಾಲಯದ ಪೌರಣಿಕವೆನೆಂದರೆ ಈ ಪ್ರದೇಶದಲ್ಲಿ ಒಮ್ಮೆ ಅಗಸ್ತ್ಯ ಮುನಿ ವರುಣ ದೇವನಿಗೆ ಯಜ್ಞ ಮಾಡುವಾಗ ಕುಂಬಾಸುರನು ಈ ಯಜ್ಞಕ್ಕೆ ಭಂಗ ತರಲು ಯತ್ನಿಸುತ್ತಾನೆ.
PC:Pradeepsomani -

ಆನೆಗುಡ್ಡೆ ವಿನಾಯಕನ ದೇವಾಲಯ

ಆನೆಗುಡ್ಡೆ ವಿನಾಯಕನ ದೇವಾಲಯ

ವಿಘ್ನ ವಿನಾಶಕ ವಿನಾಯಕನು ಪಾಂಡವರಲ್ಲಿ ಅತ್ಯಂತ ಬಲಶಾಲಿಯಾದ ಭೀಮನನ್ನು ಈ ಕುಂಬಾಸುರನ ಸಂಹರಿಸಲು ಹೇಳುತ್ತಾನೆ. ಕೊನೆಗೆ ಕುಂಬಾಸುರನು ಭೀಮನಿಂದ ಸಂಹರಿಸಲ್ಪಡುತ್ತಾನೆ. ಅಂದಿನಿಂದ ಈ ದೇವಾಲಯವು ವಿನಾಯಕನಿಗೆ ಪ್ರಸಿದ್ದಿ ಹೊಂದಿತು ಎಂದು ಪುರಾಣಗಳು ತಿಳಿಸುತ್ತವೆ. ಉಡುಪಿಯಿಂದ ಸುಮಾರು 30 ಕಿ,ಮೀ ಅಂತರದಲ್ಲಿದೆ.
PC:Pratimsinha

ಉಡುಪಿ ಅನಂತೇಶ್ವರ ದೇವಾಲಯ

ಉಡುಪಿ ಅನಂತೇಶ್ವರ ದೇವಾಲಯ

ಈ ಅನಂತೇಶ್ವರ ದೇವಾಲಯವು ಹಿಂದೂಗಳ ಪವಿತ್ರವಾದ ದೇವ ಮಹಾ ಶಿವನ ದೇವಾಲಯವಾಗಿದೆ. ಈ ದೇವಾಲಯವು ಅತ್ಯಂತ ಪುರಾತನವಾದ ದೇವಾಲಯ ಸುಮಾರು 8 ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ದೇವಾಲಯ ಇದಾಗಿದೆ. ಹಿಂದೂ ಧರ್ಮಪ್ರಚಾರಕ ಮಧ್ವಾಚಾರ್ಯರ ಬಗ್ಗೆ ಈ ದೇವಾಲಯದಲ್ಲಿ ಲಿಖಿತ ರೂಪದಲ್ಲಿ ಉಲ್ಲೇಖವಿದೆ. ಈ ಅನಂತೇಶ್ವರ ದೇವಾಲಯವನ್ನು ಉಡುಪಿಯ ಮಹಾ ದೇವ ಎಂದೇ ಕರೆಯಲಾಗುತ್ತದೆ.
PC:SANJAY M S

ಚಂದ್ರಮೌಳೀಶ್ವರ ದೇವಾಲಯ

ಚಂದ್ರಮೌಳೀಶ್ವರ ದೇವಾಲಯ

ಚಂದ್ರಮೌಳೀಶ್ವರ ದೇವಾಲಯವು ಕೂಡ ಮಹಾ ಶಿವನ ದೇವಾಲಯವಾಗಿದ್ದು, ಈ ದೇವಾಲಯವನ್ನು ಉಣಕಲ್ ಚಂದ್ರಮೌಳೀಶ್ವರ ಎಂದೇ ಖ್ಯಾತವಾಗಿದೆ. ಈ ದೇವಾಲಯವು ಚಾಲುಕ್ಯರ ಶೈಲಿಯಲ್ಲಿರುವುದರಿಂದ ಚಾಲುಕ್ಯರೇ ನಿರ್ಮಾಣ ಮಾಡಿದ್ದಾರೆ ಎನ್ನಲಾಗಿದೆ. ಈ ದೇವಾಲಯವು 900 ವರ್ಷಗಳ ಪುರಾತನವಾದ ದೇವಾಲಯವಾಗಿದೆ.
PC:Natesh Ramasamy

ಚಂದ್ರಮೌಳೀಶ್ವರ ದೇವಾಲಯ

ಚಂದ್ರಮೌಳೀಶ್ವರ ದೇವಾಲಯ

ಇಲ್ಲಿ ಶಿವ ಲಿಂಗದ ಮುಂದೆಯು 2 ನಂದಿ ನೆಲೆಸಿದ್ದಾನೆ. ದೇವಾಲಯದ ಗರ್ಭಗುಡಿಯ ಒಳಗೆ ನಾಲ್ಕು ಬಾಗಿಲುಗಳಿರುವುದು ವಿಶೇಷ. ಈ ದೇವಾಲಯದ ವಾಸ್ತು ಶಿಲ್ಪವು ಬಾದಾಮಿ, ಐಹೊಳೆ ಮತ್ತು ಪಟ್ಟದ ಕಲ್ಲು ದೇವಾಲಯದ ಮಾದರಿಯಲ್ಲಿ ಚಂದ್ರಮೌಳೀಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ. ಅತ್ಯಂತ ಸುಂದರವಾಗಿರುವ ಈ ದೇವಾಲಯಕ್ಕೆ ಹಲವಾರು ಪ್ರವಾಸಿಗರು ಬರುತ್ತಿರುತ್ತಾರೆ.
PC:Laya Ross

ಕೋಡಿ ಬೀಚ್

ಕೋಡಿ ಬೀಚ್

ಕರ್ನಾಟಕದ ಅತ್ಯಂತ ಸುಂದರವಾದ ಬೀಚ್ ಈ ಕೋಡಿ ಬೀಚ್. ಕನಕಪುರದಿಂದ ಈ ಬೀಚ್ ಕೇವಲ 6 ಕಿ,ಮೀಯಷ್ಟು ಅಂತರದಲ್ಲಿದೆ. ಈ ಬೀಚ್‍ಗೆ ಹಲವಾರು ಪ್ರವಾಸಿಗರು ದೇಶ ವಿದೇಶಗಳಿಂದ ಭೇಟಿ ನೀಡುತ್ತಾರೆ. ಸುತ್ತಲೂ ನೀರು, ಹಸಿರಾದ ವಾತಾವರಣ, ಅಲೆಗಳ ಆರ್ಭಟ ಇವೆಲ್ಲವೂ ಕೋಡಿ ಬೀಚ್‍ನ ಅದ್ಭುತ ವೈಶಷ್ಟತೆ.
PC:Zahrasrtn

ಕೋಡಿ ಬೀಚ್

ಕೋಡಿ ಬೀಚ್

ಈ ಬೀಚ್ ನಲ್ಲಿ ಹಲವಾರು ಪ್ರವಾಸಿಗರು ವಿರಾಮ ಮಾಡಲು, ಸ್ವಿಮಿಂಗ್ ಮಾಡಲು, ಆಟವಾಡಲು ಇಷ್ಟ ಪಡುತ್ತಾರೆ. ಸೂರ್ಯಾಸ್ತದ ಸಮಯದಲ್ಲಂತೂ ಅತ್ಯಂತ ಸುಂದರವಾದ ಈ ಕೋಡಿ ಬೀಚ್ ಮನೋಹರವಾಗಿ ಕಾಣುತ್ತದೆ.
PC:Raghavendra Nayak Muddur

ಕೂಡ್ಲು ತೀರ್ಥ ಜಲಾಶಾಯ

ಕೂಡ್ಲು ತೀರ್ಥ ಜಲಾಶಾಯ

ಈ ಕೂಡ್ಲು ತೀರ್ಥ ಜಲಾಶಾಯವು ಉಡುಪಿಯಿಂದ ಸುಮಾರು 47 ಕಿ,ಮೀ ಅಂತರದಲ್ಲಿದೆ. ಇದು ದಟ್ಟವಾದ ಅರಣ್ಯ ಸೌಂದರ್ಯವನ್ನು ಹೊಂದಿರುವ ಅಪೂರ್ವ ಜಲಾಶಯ. ಈ ಜಲಾಶಾತಕ್ಕೆ ಹಲವಾರು ಪ್ರವಾಸಿಗರು ಟ್ರೆಕ್ಕಿಂಗ್ ಮಾಡಲು ಬಯಸುತ್ತಾರೆ. ಸುಮಾರು 150 ಅಡಿ ಈ ಕೂಡ್ಲು ತೀರ್ಥ ಜಲಪಾತವಿದೆ.
PC:Kaushik N

ಶ್ರೀ ಬ್ರಹ್ಮಿ ದುರ್ಗ ಪರಮೇಶ್ವರಿ ದೇವಾಲಯ

ಶ್ರೀ ಬ್ರಹ್ಮಿ ದುರ್ಗ ಪರಮೇಶ್ವರಿ ದೇವಾಲಯ

ಈ ಪವಿತ್ರ ದೇವಾಲಯವು ಉಡುಪಿಯಿಂದ ಸುಮಾರು 35 ಕಿ,ಮೀ ಅಂತರದಲ್ಲಿದೆ. ಈ ಪ್ರದೇಶದಲ್ಲಿ ಸುಂದರವಾದ ಅರಣ್ಯವಿದ್ದು ಈ ತಾಯಿಯು ನೆಲೆಸಿದ್ದಾಳೆ. ಈ ದೇವಾಲಯದಲ್ಲಿ ಹಲವಾರು ದೇವತಾ ಮೂರ್ತಿಗಳನ್ನು ಕಾಣಬಹುದಾಗಿದೆ. ಪ್ರತಿದಿನವೂ ಈ ಬ್ರಹ್ಮಿ ದುರ್ಗ ಪರಮೇಶ್ವರಿ ಸಲಾಮ್ ಪೂಜಾ ಮಾಡಲಾಗುತ್ತದೆ.
PC:Rajat Dey

ಕಾಯಿನ್ ಮ್ಯೂಸಿಯಂ ಕಾರ್ಪ್ ಬ್ಯಾಂಕ್

ಕಾಯಿನ್ ಮ್ಯೂಸಿಯಂ ಕಾರ್ಪ್ ಬ್ಯಾಂಕ್

ಕಾಯಿನ್ ಮ್ಯೂಸಿಯಂ ಕಾರ್ಪ್ ಬ್ಯಾಂಕ್ ಅತ್ಯಂತ ಪ್ರಾಚೀನವಾದ ಮ್ಯೂಸಿಯಂ ಆಗಿದೆ. ಇಲ್ಲಿ 1906ರ ಬ್ಯಾಂಕುಗಳ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಲಾಗುತ್ತದೆ. ಇದನ್ನು ಸ್ಥಾಪಿಸಿದವರು ಹಜಿ ಅಬ್‍ದುಲ್ಲ ಸಾಹಿಬ್‍ನವರು ನಂತರ ಇದೊಂದು ಪ್ರಸಿದ್ದವಾದ ಮ್ಯೂಸಿಯಂ ಆಗಿ ಮಾರ್ಪಾಟಾಯಿತು.
PC:Mudassir Hassan

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X