• Follow NativePlanet
Share
» »ಬೆಂಗಳೂರಿನಿಂದ ಮೈಸೂರಿಗೆ ತೆರಳುವಾಗ ಸಿಗುವ ಪವಿತ್ರ ಕ್ಷೇತ್ರಗಳು....

ಬೆಂಗಳೂರಿನಿಂದ ಮೈಸೂರಿಗೆ ತೆರಳುವಾಗ ಸಿಗುವ ಪವಿತ್ರ ಕ್ಷೇತ್ರಗಳು....

Posted By: Sowmyabhai

ಬೆಂಗಳೂರಿಗೆ ಅನೇಕ ಮಂದಿ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಬೆಂಗಳೂರು ಹಾಗು ಮೈಸೂರು ಸುಂದರವಾದ ನಗರಗಳು. ಇಲ್ಲಿ ಅನೇಕ ಪ್ರವಾಸಿ ತಾಣಗಳು ಇವೆ. ವಾರಾಂತ್ಯದಲ್ಲಿ ಈ ನಗರಗಳಿಗೆ ಭೇಟಿ ನೀಡಲು ಅನೇಕ ಮಂದಿ ಪ್ರವಾಸಿಗರು ತೆರಳುತ್ತಿರುತ್ತಾರೆ.

ಕರ್ನಾಟಕ ಸಾಂಸ್ಕøತಿಕ ರಾಜಧಾನಿ ಎಂದೆ ಬಿಂಬಿತವಾಗಿರುವ ಮೈಸೂರು ವರ್ಷದ ಎಲ್ಲಾ ಸಮಯದಲ್ಲಿಯೂ ಭೇಟಿ ನೀಡಬಹುದಾದ ತಾಣ. ಅಕ್ಟೋಬರ್ ತಿಂಗಳಿನಲ್ಲಿ ಇಲ್ಲಿಗೆ ದೇಶ-ವಿದೇಶದಿಂದ ಪ್ರವಾಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುತ್ತಾರೆ. ಇನ್ನು ಬೆಂಗಳೂರು ಸಹ ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಧಾರ್ಮಿಕ ಪ್ರವಾಸೋದ್ಯಮಕ್ಕೆ ಇಂಬು ನೀಡುವಂತೆ ಅನೇಕ ವಿಶೇಷವಾದ ದೇವಾಲಯಗಳಿವೆ.

ಬೆಂಗಳೂರಿನಿಂದ ಮೈಸೂರು ನಗರಕ್ಕೆ ಸುಮಾರು 150 ಕಿ.ಮೀ ಗಳಷ್ಟು ಅಂತರದಲ್ಲಿದ್ದು, ರೈಲುಗಳು, ಸರ್ಕಾರಿ ಹಾಗು ಖಾಸಗಿ ಬಸ್ಸುಗಳ ಸಂಪರ್ಕವನ್ನು ಹೊಂದಿವೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಪ್ರಯಾಣದಲ್ಲಿ ಯಾವೆಲ್ಲಾ ಪ್ರವಾಸಿ ತಾಣಗಳು ಅಥವಾ ಪುಣ್ಯ ಕ್ಷೇತ್ರಗಳು ಸಿಗುತ್ತವೆ ಎಂಬುದನ್ನು ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿಯೋಣ.

1.ಕೋಟೆ ವೆಂಕಟರಮಣಸ್ವಾಮಿ ದೇವಾಲಯ

1.ಕೋಟೆ ವೆಂಕಟರಮಣಸ್ವಾಮಿ ದೇವಾಲಯ

PC: Omshivaprakash

ಬೆಂಗಳೂರಿನ ಕೆ.ಆರ್ ಮಾರುಕಟ್ಟೆ ಪ್ರದೇಶದಲ್ಲಿ ಈ ದೇವಾಲಯವಿರುವುದನ್ನು ಕಾಣಬಹುದು. ಟಿಪ್ಪು ಸುಲ್ತಾನನ ಅರಮನೆಯ ಪಕ್ಕದಲ್ಲೆ ಕೋಟೆ ವೆಂಕಟರಮಣನ ದೇವಸ್ಥಾನವಿದ್ದು ಸಾಕಷ್ಟು ಭಕ್ತಾದಿಗಳು ದಿನನಿತ್ಯ ಇಲ್ಲಿಗೆ ಭೇಟಿ ನೀಡುತ್ತಾರೆ.

2.ಬೇಗೂರು ನಾಗನಾಥೇಶ್ವರ ದೇವಾಲಯ

2.ಬೇಗೂರು ನಾಗನಾಥೇಶ್ವರ ದೇವಾಲಯ

ಬೇಗೂರು ಬೆಂಗಳೂರಿನ ಹೊಸೂರು ರಸ್ತೆಯಲ್ಲಿ (ಎಲೆಕ್ಟ್ರಾನಿಕ್ ಸಿಟಿಗೆ ಹೋಗುವ ದಾರಿಯಲ್ಲಿ) ನೆಲೆಸಿರುವ ಬೇಗೂರು ಎಂಬ ಹಳ್ಳಿಯಲ್ಲಿ ಈ ದೇವಾಲಯವಿದೆ. ಇದು ಸುಮಾರು 1300 ವರ್ಷಗಳಷ್ಟು ಪುರಾತನವದುದು. ಈ ದೇವಾಲಯವು ಚೋಳ ವಂಶದ ಮೊದಲನೇಯ ಕುಲಾತುಂಗ ರಾಜಾ ಹಾಗು ತಲಕಾಡ್ ಗಂಗಾ ವಂಶದ ರಾಜಸಿಂಹನಂದಿ ಅವರುಗಳಿಂದ ನಿರ್ಮಿಸಲ್ಪಟ್ಟಿದೆ. ಈ ದೇವಾಲಯದಲ್ಲಿ ಐದು ಲಿಂಗಗಳಿರುವುದರಿಂದ ಇದನ್ನು ಪಂಚಲಿಂಗೇಶ್ವರ ದೇವಾಲಯ ಎಂತಲೂ ಕರೆಯಲಾಗುತ್ತದೆ. ಆ ಐದು ಲಿಂಗಗಳೆಂದರೆ ಶ್ರೀ ನಾಗೇಶ್ವರ, ಚೋಳೇಶ್ವರ, ಕಾಲಿ ಕಮಟೇಶ್ವರ, ನಗಾರೇಶ್ವರ ಹಾಗು ಕರಣೇಶ್ವರ. ಅಲ್ಲದೆ ಪಾರ್ವತಿಗೆ ಮೀಸಲಾದ ದೇಗುಲವೂ ಇದ್ದು, ಪಶ್ಚಿಮಕ್ಕೆ ಮುಖ ಮಾಡಿದ ಸೂರ್ಯನ ಮೂರ್ತಿಯನ್ನು ಇಲ್ಲಿ ಕಾಣಬಹುದು. ಪ್ರತಿ ಶಿವರಾತ್ರಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಭೇಟಿ ನೀಡುತ್ತಾರೆ.

3.ಗವಿ ಗಂಗಾಧರೇಶ್ವರ ದೇವಸ್ಥಾನ

3.ಗವಿ ಗಂಗಾಧರೇಶ್ವರ ದೇವಸ್ಥಾನ

PC: Pavithrah

ಗವಿಪುರಂ ಗುಹಾ ದೇವಾಲಯ ಎಂತಲೂ ಕರೆಯಿಸಿಕೊಳ್ಳುವ ಈ ದೇವಸ್ಥಾನವು ಗವಿಪುರಂನ (ಗುಟ್ಟಹಳ್ಳಿ) ಕೆಂಪೇಗೌಡ ನಗರದಲ್ಲಿದ್ದು ಬಸವನಗುಡಿಯಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಭಾರತೀಯ ಶಿಲಾ ಕೆತ್ತನೆ ವಾಸ್ತುಶಿಲ್ಪ (ಇಂಡಿಯನ್ ರಾಕ್ ಕಟ್ ಆರ್ಕಿಟೆಕ್ಚರ್) ಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಈ ದೇವಾಲಯದ ಅತಿ ಆಸಕ್ತಿದಾಯಕ ವಿಷಯವೆಂದರೆ ವರ್ಷದ ಒಂದು ನಿಗದಿತ ಸಮಯ (ಮಕರ ಸಂಕ್ರಾಂತಿ) ದಲ್ಲಿ ಸೂರ್ಯನ ಕಿರಣವು ಇಲ್ಲಿನ ಶಿವಲಿಂಗದ ಮೇಲೆ ಬೀಳುವ ಹಾಗೆ ವಿನ್ಯಾಸಗೊಳಿಸಲ್ಪಟ್ಟಿರುವುದು.

4.ದಕ್ಷಿಣ ನಂದೀಶ್ವರ ತೀರ್ಥ

4.ದಕ್ಷಿಣ ನಂದೀಶ್ವರ ತೀರ್ಥ

PC: Vaikoovery

ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದ ಎದುರಿನಲ್ಲೆ ಅಥವಾ ಸಂಪಿಗೆ ರಸ್ತೆಯ ಸಮಾನಾಂತರದಲ್ಲಿರುವ ರಸ್ತೆಯಲ್ಲೆ ದಕ್ಷಿಣ ನಂದಿ ತೀರ್ಥ ದೇವಾಲಯವಿದೆ. ಇಲ್ಲಿ ಶಿವಲಿಂಗವಿದ್ದು ಅದರ ಮೇಲೆ ಇನ್ನೂ ಗುರುತಿಸಲಾಗದ ನೀರಿನ ಮೂಲವೊಂದರಿಂದ ನೀರು ಬೀಳುತ್ತಲೆ ಇರುತ್ತದೆ. ಆ ನೀರು ನಂದಿಯ ಮುಖದಿಂದ ಬೀಳುತ್ತಿರುವ ಹಾಗೆ ನಂದಿ ವಿಗ್ರಹವನ್ನು ನಿರ್ಮಿಸಲಾಗಿದ್ದು, ಲಿಂಗದ ಎದುರಿಗೆ ಕಲ್ಯಾಣಿಯನ್ನು ಕಾಣಬಹುದು. ಕಲ್ಯಾಣಿಯಲ್ಲಿ ನೀರು ಸದಾ ಲಭ್ಯವಿದ್ದು ಆ ನೀರಿಗೆ ಔಷಧೀಯ ಮಹತ್ವವಿದೆ ಎಂದು ಇಲ್ಲಿರುವ ಹಲವರ ನಂಬಿಕೆ. ಸಾಂದರ್ಭಿಕ ಚಿತ್ರ.

5.ಧರ್ಮರಾಯಸ್ವಾಮಿ ದೇವಸ್ಥಾನ

5.ಧರ್ಮರಾಯಸ್ವಾಮಿ ದೇವಸ್ಥಾನ

PC: Thigala4u

ಬೆಂಗಳೂರಿನ ತಿಗಳರಪೇಟೆಯ ಒ.ಟಿ.ಸಿ ರಸ್ತೆಯಲ್ಲಿರುವ ಧರ್ಮರಾಯ ದೇವಸ್ಥಾನವು ಐತಿಹಾಸಿಕವಾಗಿ ಒಂದು ವಿಶೀಷ್ಟವಾದ ದೇವಸ್ಥಾನವಾಗಿದೆ. ಭಾರತ ದೇಶದಲ್ಲೆ ಪಾಂಡವರಿಗೆ ಸಮರ್ಪಿಸಲಾದ ಅನನ್ಯ ದೇವಾಲಯ ಇದಾಗಿದೆ. ಈ ದೇವಾಲಯವು ಗಂಗ ಅರಸು ಜನಾಂಗದವರಿಂದ ನಿರ್ಮಿಸಲ್ಪಟ್ಟಿದೆ ಎಂದು ತಿಳಿಯಲಾಗಿದೆ. ಇವರು ಮೂಲತಃ ಉತ್ತರ ತಮಿಳುನಾಡಿನಿಂದ ದಕ್ಷಿಣ ಮೈಸೂರು ಪ್ರಾಂತ್ಯಕ್ಕೆ ವಲಸೆ ಬಂದವರಾಗಿದ್ದಾರೆ. ಪುರಾತತ್ವ ಇಲಾಖೆಯು ಈ ದೇಗುಲವು ಸುಮಾರು 800 ವರ್ಷಗಳಷ್ಟು ಪುರಾತನವಾದುದು ಎಂದು ದಾಖಲಿಸಿದೆ. ಈ ದೇವಸ್ಥಾನದಲ್ಲಿ ಆಚರಿಸಲಾಗುವ ಪ್ರಮುಖ ಉತ್ಸವವೆಂದರೆ ಕರಗ. ಈ ಉತ್ಸವ ಬೆಂಗಳೂರು ಕರಗ ಎಂಬ ಪ್ರಸಿದ್ಧಿಯನ್ನು ಪಡೆದಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ