Search
  • Follow NativePlanet
Share
» »ಶಬರಿಮಲೈನ "ಮಕರ ಜ್ಯೋತಿ" ಯ ರಹಸ್ಯ ಬಯಲು..

ಶಬರಿಮಲೈನ "ಮಕರ ಜ್ಯೋತಿ" ಯ ರಹಸ್ಯ ಬಯಲು..

ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯವು ಅತ್ಯಂತ ಪವಿತ್ರವಾದುದು. ಇದೊಂದು ದಕ್ಷಿಣ ಭಾರತದ ಪವಿತ್ರವಾದ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಈ ಪುಣ್ಯಕ್ಷೇತ್ರಕ್ಕೆ ಕೇವಲ ದೇಶದ ಮೂಲೆ-ಮೂಲೆಯಿಂದಲೇ ಅಲ್ಲದೇ ವಿದೇಶಗಳಿಂದಲೂ ಸಾವಿರಾರು ಭಕ್ತರು ಭೇಟಿ ನ

ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯವು ಅತ್ಯಂತ ಪವಿತ್ರವಾದುದು. ಇದೊಂದು ದಕ್ಷಿಣ ಭಾರತದ ಪವಿತ್ರವಾದ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಈ ಪುಣ್ಯಕ್ಷೇತ್ರಕ್ಕೆ ಕೇವಲ ದೇಶದ ಮೂಲೆ-ಮೂಲೆಯಿಂದಲೇ ಅಲ್ಲದೇ ವಿದೇಶಗಳಿಂದಲೂ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಈ ಕ್ಷೇತ್ರವು ಕೇರಳ ರಾಜ್ಯದ ಪರುನಾಥ್ ಗ್ರಾಮ ಪಂಚಾಯತ್‍ನ ಪಥನಂತಿಟ್ಟ ಜಿಲ್ಲೆಯ ಪಶ್ಚಿಮ ಘಾಟ್ ಪರ್ವತ ಶ್ರೇಣಿಗಳ ಪೆರಿಯಾರ್ ಟೈಗರ್ ರಿಸರ್ವ್‍ನಲ್ಲಿರುವ ಯಾತ್ರಾ ಕೆಂದ್ರವಾಗಿದೆ. ಈ ದೇವಾಲಯವು ಕೂಡ ಅಪಾರ ಭಕ್ತರನ್ನು ಹೊಂದಿರುವ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಪ್ರತಿವರ್ಷ ಸುಮಾರು 45 ರಿಂದ 50 ಮಿಲಿಯನ್ ಭಕ್ತರು ಭೇಟಿ ನೀಡುತ್ತಾರೆ ಎಂದು ಅಂದಾಜು ಮಾಡಲಾಗಿದೆ.

ಈ ದೇವಾಲಯದಲ್ಲಿ ಒಂದು ವಿಸ್ಮಯ ನಡೆಯುವುದು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. ಅದೇನೆಂದರೆ "ಮಕರ ಜ್ಯೋತಿ". ಈ ವಿಸ್ಮಯವನ್ನು ಕಾಣಲು ದೇಶ-ವಿದೇಶಗಳಿಂದ ಭಕ್ತರು ಭೇಟಿ ನೀಡಿ ದರ್ಶನ ಮಾಡಿ ಪುನೀತರಾಗುತ್ತಾರೆ. ಈ ಮಕರ ಜ್ಯೋತಿಯ ಬಗ್ಗೆ ವಿಭಿನ್ನವಾದ ಅಭಿಪ್ರಾಯಗಳಿವೆ. ಒಬ್ಬರು ಇದು ವಿಸ್ಮಯ ಎಂದರೆ ಮತ್ತೆ ಕೆಲವರು ಇದೆಲ್ಲಾ ಮೋಸ ಎಂದೂ ವಾದಿಸುತ್ತಾರೆ. ಇದಕ್ಕೆ ಉತ್ತರವನ್ನು ದೇವಾಲಯದ ಕಮಿಟಿಯವರು ನೀಡಿದ್ದಾರೆ ಆ ಉತ್ತರ ಯಾವುದು ಎಂಬುದನ್ನು ಲೇಖನದ ಮೂಲಕ ತಿಳಿಯೋಣ.

1.ಶಬರಿಮಲೆ ದೇವಾಲಯದ ರಹಸ್ಯ ಬಯಲು

1.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: Saisumanth532

ಅಯ್ಯಪ್ಪ ದೇವಾಲಯವು ಒಂದು ತೀರ್ಥಯಾತ್ರೆಯಾಗಿದ್ದು, ಸ್ವಾಮಿ ಅಯ್ಯಪ್ಪನು 18 ಬೆಟ್ಟಗಳ ಮಧ್ಯದಲ್ಲಿ ನೆಲೆಸಿದ್ದಾನೆ. ಈ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 1260 ಮೀ (4,133 ಅಡಿ) ಎತ್ತರದಲ್ಲಿ ನೆಲೆಸಿದೆ. ಈ ಸುಂದರವಾದ ದೇವಾಲಯವು ಭವ್ಯವಾದ ಬೆಟ್ಟಗಳು ಹಾಗು ದಟ್ಟವಾದ ಅರಣ್ಯಹಗಳಿಂದ ಅವೃತವಾಗಿದೆ. ಈ ದೇವಾಲಯದ ಸುತ್ತ-ಮುತ್ತ ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ನೀಡುತ್ತದೆ.

2.ಶಬರಿಮಲೆ ದೇವಾಲಯದ ರಹಸ್ಯ ಬಯಲು

2.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: ragesh ev

ಶಬರಿಮಲೆ ದೇವಾಲಯವು ಅತ್ಯಂತ ಪುರಾತನವಾದ ದೇವಾಲಯವಾಗಿದ್ದು, 12 ನೇ ಶತಮಾನದಲ್ಲಿ ಪಂಢಲಂ ಎಂಬ ರಾಜವಂಶದ ರಾಜಕುಮಾರನಾದ ಮಣಿಕಂಟನನ ದೇವಾಲಯವಾಗಿದೆ. ಇದನ್ನು ಸಸ್ತ ಮತ್ತು ಧರ್ಮಸಸ್ತ ಎಂದು ಕರೆಯುತ್ತಾರೆ. ಶಬರಿಮಲೆಯ ಬಗ್ಗೆ ಸಾಕಷ್ಟು ಮಾಹಿತಿ ನಿಮಗೆ ತಿಳಿದೇ ಇರುತ್ತದೆ.

3.ಶಬರಿಮಲೆ ದೇವಾಲಯದ ರಹಸ್ಯ ಬಯಲು

3.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: Ranjithsiji

ಮಹಿಷಿ ಎಂಬುವವಳು ತನ್ನ ಸಹೋದರನಾದ ಮಹಿಷಾಸುರನ ಸಾವಿಗೆ ದೇವತೆಗಳೇ ಕಾರಣ ಎಂದು ಕೊಂಡು, ದೇವತೆಗಳ ಮೇಲೆ ದ್ವೇಷ ಸಾಧಿಸುವ ಸಲುವಾಗಿ ಘೋರವಾದ ತಪಸ್ಸು ಮಾಡುತ್ತಾಳೆ. ಆಕೆಯ ತಪಸ್ಸಿಗೆ ಫಲಿತವಾಗಿ ಬ್ರಹ್ಮದೇವನಿಂದ ಆನೇಕ ವರಗಳನ್ನು ಪಡೆಯುತ್ತಾಳೆ. ತನಗೆ ಮರಣವು ಬಾರದಂತೆ ವರವನ್ನು ಪಡೆಯುತ್ತಾಳೆ. ಆ ವರವನ್ನು ಪಡೆದ ನಂತರ ಆಕೆಯು ಅತ್ಯಂತ ಅಹಂಕಾರದಿಂದ ದೇವತೆಗಳಿಗೆ, ಋಷಿಮುನಿಗಳಿಗೆ ಹಿಂಸಿಸುತ್ತಿರುತ್ತಾಳೆ. ಇದರಿಂದ ಕಂಗಾಲದ ದೇವತೆಗಳು ಹರಿ-ಹರರನ್ನು ಪ್ರಾರ್ಥನೆ ಮಾಡುತ್ತಾರೆ.

4.ಶಬರಿಮಲೆ ದೇವಾಲಯದ ರಹಸ್ಯ ಬಯಲು

4.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: Sailesh

ಇದಕ್ಕೆ ಹರಿಹರರು ಸಂಗಮವಾಗಿ ಒಂದು ಮಗುವನ್ನು ಸೃಷ್ಟಿ ಮಾಡುತ್ತಾರೆ. ಆ ಮಗುವನ್ನು ಕಾಡಿನಲ್ಲಿ ಕಂಡ ಒಬ್ಬ ರಾಜನು ತನ್ನ ಸ್ವತಂ ಮಗನ ರೀತಿಯಲ್ಲಿ ಸಾಕಿ ಸಲುಹುತ್ತಾನೆ. ಆತನೇ ಮಣಿಕಂಠ. ಆತ ದೊಡ್ಡವನಾದ ನಂತರ ಮಹಿಷಿಯನ್ನು ಸಂಹಾರ ಮಾಡುತ್ತಾನೆ. ತದನಂತರ ಆತನು ಪಥನಂತಿಟ್ಟ ಜಿಲ್ಲೆಯ ಪಶ್ಚಿಮ ಘಾಟ್ ಪರ್ವತ ಶ್ರೇಣಿಗಳಲ್ಲಿ ನೆಲೆಸುತ್ತಾನೆ.

5.ಶಬರಿಮಲೆ ದೇವಾಲಯದ ರಹಸ್ಯ ಬಯಲು

5.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: Sailesh

1991 ರಲ್ಲಿ ಕೇರಳ ಹೈಕೋರ್ಟ್ 10 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 50 ವಯಸ್ಸಿಕ್ಕಿಂತ ಕಡಿಮೆ ಇರುವ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಿತ್ತು. ಭಾರತದ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪನ್ನು ಪರಿಶೀಲನೆ ಮಾಡಿ ಈಗ ಮಹಿಳೆಯರಿಗೂ ಕೂಡ ಪ್ರವೇಶವನ್ನು ನೀಡುವುದರ ಕುರಿತು ಚಿಂತನೆ ಮಾಡುತ್ತಿದೆ.

6.ಶಬರಿಮಲೆ ದೇವಾಲಯದ ರಹಸ್ಯ ಬಯಲು

6.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: Abhilash Pattathil

ಈ ದೇವಾಲಯವು ಮಂಡಲ ಪೂಜಾ (ನವೆಂಬರ್ 15 ರಿಂದ 26 ಡಿಸೆಂಬರ್) ಮಕರ ಸಂಕ್ರಾಂತಿ (14 ಜನವರಿ) ಮತ್ತು ಮಹಾ ವಿಷ್ವಾ ಸಂಕ್ರಾತಿ (14 ಏಪ್ರಿಲ್) ನಲ್ಲಿ ತೆರೆದಿರುತ್ತದೆ. ಹಾಗೆಯೇ ಮಲಯಾಳಂ ತಿಂಗಳ ಮೊದಲ 5 ದಿನಗಳ ಪೂಜೆಗೆ ತೆರೆದಿರುತ್ತಾರೆ. ಮಕರ ಸಂಕ್ರಾತಿಯನ್ನು ಕೇರಳದಲ್ಲಿ ಮಕರವಿಲಕ್ಕು ಎಂದು ಕೂಡ ಕರೆಯುತ್ತಾರೆ.

7.ಶಬರಿಮಲೆ ದೇವಾಲಯದ ರಹಸ್ಯ ಬಯಲು

7.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: Saisumanth532

ದಕ್ಷಿಣ ಭಾರತದಲ್ಲಿ ಆನೇಕ ಶಾಸ್ತ್ರಗಳನ್ನು ಹೊಂದಿರುವ ದೇವಾಲಯಗಳಿವೆ. ಈ ದೇವಾಲಯದ ಇತಿಹಾಸದ ಪ್ರಕಾರ, ಶಬರಿಮಲೆಯಲ್ಲಿರುವ ಶಾಸ್ತ ದೇವಾಲಯವಾಗಿದ್ದು, ಪರಶುರಾಮನಿಂದ ಸ್ಥಾಪಿಸಲ್ಪಟ್ಟ 5 ನೇ ಶಾಸ್ತದಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ. ಇಲ್ಲಿ ಅಯ್ಯಪ್ಪ ಸ್ವಾಮಿಯು ಬಾಲಕನ ವೇಷಧಾರಿಯಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾನೆ.

8.ಶಬರಿಮಲೆ ದೇವಾಲಯದ ರಹಸ್ಯ ಬಯಲು

8.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: Sailesh

ಶಬರಿಮಲೆ ಎಂಬ ಹೆಸರು ಕೇಳಿದ ತಕ್ಷಣ ಸಾಧಾರಣವಾಗಿ ನಮಗೆ ನೆನೆಪಿಗೆ ಬರುವುದು "ಮಕರ ಜ್ಯೋತಿ". ಮಕರ ಸಂಕ್ರಾತಿಯ ದಿನದಂದು ಅಯ್ಯಪ್ಪ ಜ್ಯೋತಿಯನ್ನು ಕಾಣಲು ಲಕ್ಷ-ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಆ ಮಕರ ಜ್ಯೋತಿಯನ್ನು ಅಯ್ಯಪ್ಪನ ಸ್ವರೂಪವೇ ಎಂದು ಭಕ್ತರು ನಂಬುತ್ತಾರೆ.

9.ಶಬರಿಮಲೆ ದೇವಾಲಯದ ರಹಸ್ಯ ಬಯಲು

9.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: Challiyan

ಆದರೆ ಕೆಲವರು ಮಾತ್ರ ಮಕರ ಜ್ಯೋತಿ ಮೂಢ ನಂಬಿಕೆ ಎಂದೂ, ಭಕ್ತರನ್ನು ಮೋಸ ಮಾಡುವುದಕ್ಕೆ ಮನುಷ್ಯರೇ ಮಾಡುತ್ತಿದ್ದಾರೆ ಎಂದು ವಾದಿಸುತ್ತಾರೆ. ಆದರೆ ವಿವಾದಕ್ಕೆ ಉತ್ತರವೇನು? ಎಂಬ ಪ್ರೆಶ್ನೆಗೆ ದೇವಾಲಯದ ಕಮಿಟಿಯವರು ಏನು ಹೇಳುತ್ತಿರುವ ಆಶ್ಚರ್ಯಕರವಾದ ವಿಷಯವಾದರು ಏನು ಎಂಬುದಕ್ಕೆ ಉತ್ತರ ಇಲ್ಲಿದೆ.

10.ಶಬರಿಮಲೆ ದೇವಾಲಯದ ರಹಸ್ಯ ಬಯಲು

10.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: Aruna

ಸ್ವಾಮಿ ನೆಲೆಸಿದ ಮಕರ ಸಂಕ್ರಾತಿಯ ದಿನದಂದು ಆಯ್ಯಪ್ಪ ಸ್ವಾಮಿಯು ಜ್ಯೋತಿ ರೂಪದಲ್ಲಿ ದರ್ಶನವನ್ನು ನೀಡುತ್ತಾನೆ ಎಂದು ಭಕ್ತರು ನಂಬುತ್ತಾರೆ. 1999 ರಲ್ಲಿ ಮತ್ತು 2010 ರಲ್ಲಿ ನಡೆದು ನೂಕುನುಗ್ಗಲಿನಲ್ಲಿ ಆನೇಕ ಮಂದಿ ಮರಣ ಹಾಗು ಗಾಯಗೊಂಡರು. ಈ ಘಟನೆಯ ನಂತರ ಕೆಲವರು ಮಾತ್ರ ತಮ್ಮ ಸ್ವಾರ್ಥದ ದೃಷ್ಟಿಯಿಂದ ಸೃಷ್ಟಿಸಿದ ಮೂಢ ನಂಬಿಕೆ ಎಂದು ದೃಡವಾಗಿ ವಾದಿಸುತ್ತಿದ್ದಾರೆ.

11.ಶಬರಿಮಲೆ ದೇವಾಲಯದ ರಹಸ್ಯ ಬಯಲು

11.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: Tonynirappathu

ಹೀಗಾಗಿ ಕೇರಳ ಹೈಕೋರ್ಟ್ ಈ ವಿವಾದಕ್ಕೆ ಸಂಬಂಧಿಸಿದಂತೆ ದೇವಾಲಯದ ಕಮಿಟಿಗೆ ವಿವರಣೆಯನ್ನು ಕೇಳಿದರು. ಕೆಲವು ಪತ್ರಿಕೆಯವರು ದೇವಾಲಯದ ಕಮಿಟಿ ನೀಡಿದ ವಿವರಣೆಗಳನ್ನು ತೆಗೆದುಕೊಂಡಿತು. ಅದನೆಂದರೆ ದೇವಾಲಯದ ಪೂರ್ವದಿಕ್ಕಿನಲ್ಲಿರುವ ಒಂದು ಬೆಟ್ಟದ ಮೇಲೆ ಗಿರಿಜನರು ಹಬ್ಬವನ್ನು ಮಾಡಿಕೊಳ್ಳುತ್ತಾರೆ.

12.ಶಬರಿಮಲೆ ದೇವಾಲಯದ ರಹಸ್ಯ ಬಯಲು

12.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: Chitra sivakumar

ಅಯ್ಯಪ್ಪ ಸ್ವಾಮಿ ಮಹಿಷಿಯನ್ನು ಕೊಂದು, ಆ ಗಿರಿಜನರನ್ನು ಕಾಪಾಡಿದ ಸಲುವಾಗಿ ಆ ಬೆಟ್ಟದ ಮೇಲೆ ದೊಡ್ಡದಾದ ಒಂದು ಜ್ಯೋತಿಯನ್ನು ಬೆಳಗಿ ಆ ರಾತ್ರಿಯನ್ನು ಮಾಡುತ್ತಿದ್ದರು. ಆ ಜ್ಯೋತಿಯನ್ನು ಕಂಡ ನಂತರವೇ ಪಂಢಲ ರಾಜ ವಂಶಸ್ಥರು ಅಯ್ಯಪ್ಪ ಸ್ವಾಮಿಗೆ ಬಂಗಾರ ಅಭರಣವನ್ನು ಕಳುಹಿಸುತ್ತಿದ್ದರು ಎಂದು ಹೇಳುತ್ತಾರೆ.

13.ಶಬರಿಮಲೆ ದೇವಾಲಯದ ರಹಸ್ಯ ಬಯಲು

13.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: Chitra sivakumar

ಇದು ನೂರರೂ ವರ್ಷಗಳಿಂದಲೂ ನಡೆಸಿಕೊಂಡು ಬರುತ್ತಿರುವ ಆಚಾರ ಎಂದು ಹೇಳಿದರು. ಹೀಗಾಗಿಯೇ ಆ ಕಾರ್ಯವನ್ನು ದೇವಾಲಯದ ಕಮಿಟಿ ಮತ್ತು ಧರ್ಮಧಿಕಾರಿಗಳು ಆ ಆಚಾರವನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ದೇವಾಲಯದ ಪ್ರಧಾನವಾದ ಪೂಜಾರಿಯು ತಿಳಿಸಿದರು.

14.ಶಬರಿಮಲೆ ದೇವಾಲಯದ ರಹಸ್ಯ ಬಯಲು

14.ಶಬರಿಮಲೆ ದೇವಾಲಯದ ರಹಸ್ಯ ಬಯಲು

PC: YOUTUBE

ಇದನ್ನೇ "ಅಯ್ಯಪ್ಪ ಸ್ವಾಮಿ ಜ್ಯೋತಿ" ಅಥವಾ "ಮರಕ ಜ್ಯೋತಿ" ಎಂದು ಹೇಳುತ್ತಾರೆ. ಇದನ್ನು ಟ್ರಾವೆನ್ ಕೋಡ್ ದೇವಾಲಯದವರು ಮತ್ತು ಪಂಢಲ ರಾಜವಂಶಸ್ಥರು ಕೂಡ ಸರ್ಮಥನೆ ನೀಡಿದ್ದಾರಂತೆ. ಅದೆನೇ ಇರಲಿ ಮಕರ ಜ್ಯೋತಿ ಎಂಬುದು ಭಕ್ತಿ-ಭಾವದಿಂದ ಕೂಡಿರುವ ಒಂದು ಸಂಪ್ರದಾಯವಾಗಿದೆ. ಅಂಥಹ ಸಂಪ್ರದಾಯಗಳಿಗೆ ಯಾವುದೇ ರೀತಿಯ ಅಡ್ಡಿ-ಆತಂಕಗಳು ಬಾರದೇ ಇರುವ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಲಿ ಎಂದು ಆಶಿಸೋಣ.

15.ತೆರಳುವ ಬಗೆ ಹೇಗೆ?

15.ತೆರಳುವ ಬಗೆ ಹೇಗೆ?

ರೈಲ್ವೆ ಮಾರ್ಗದ ಮೂಲಕ

PC: Arian Zwegers

ಶಬರಿಮಲೈನ ರೈಲ್ವೆ ಲೈನ್ ಚೆಂಗಣ್ಣೂರ್‍ನಿಂದ ಸುಮಾರು 82 ಕಿ.ಮೀ, ಕಯಾಮುಕುಲಂ ಜಂಕ್ಷನ್‍ನಿಂದ 102 ಕಿ.ಮೀ, ಸಸ್ತಮ್ಕೊಟ್ಟಾದಿಂದ 120 ಕಿ.ಮೀ ಮತ್ತು ಕೊಲ್ಲಂ ಜಂಕ್ಷನ್‍ನಿಂದ 129 ಕಿ.ಮೀ ದೂರದಲ್ಲಿ ರೈಲ್ವೆ ನಿಲ್ದಾಣಗಳಿವೆ.

16.ವಿಮಾನ ಮಾರ್ಗದ ಮೂಲಕ

16.ವಿಮಾನ ಮಾರ್ಗದ ಮೂಲಕ

PC: AnjanaMenon

ಈ ಪುಣ್ಯಕ್ಷೇತ್ರಕ್ಕೆ ತೆರಳಲು ಸಮೀಪದ ವಿಮಾನ ನಿಲ್ದಾಣವು ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ 170 ಕಿ.ಮೀ ದೂರದಲ್ಲಿದೆ. ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 160 ಕಿ.ಮೀ ದೂರದಲ್ಲಿದೆ. ಇಲ್ಲಿಂದ ಸುಲಭವಾಗಿ ದೇವಾಲಯಕ್ಕೆ ತೆರಳಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X