Search
  • Follow NativePlanet
Share
» »ಇದು ಛತ್ರಪತಿ ಶಿವಾಜಿಯ ಭ್ಯವ ಕೋಟೆ.....

ಇದು ಛತ್ರಪತಿ ಶಿವಾಜಿಯ ಭ್ಯವ ಕೋಟೆ.....

ಮಹಾರಾಷ್ಟ್ರದ ಪ್ರವಾಸದ ಯೋಜನೆಯಲ್ಲಿದ್ದರೆ ಅಲ್ಲಿ ನೋಡಬೇಕಾಗಿರುವ ಹಲವಾರು ಸ್ಥಳಗಳಿವೆ. ಅವೆಲ್ಲವನ್ನು ಕಂಡು ಆನಂದಿಸಬಹುದಾಗಿದೆ. ಆ ತಾಣಗಳಲ್ಲಿ ಒಂದು ಭ್ಯವವಾದ ಕೋಟೆಯು ಒಂದು. ಆ ಕೋಟೆ ಯಾವ

ಮಹಾರಾಷ್ಟ್ರದಲ್ಲಿ ಹಲವಾರು ಕುತೂಹಲಕಾರಿಯಾದ ಪ್ರದೇಶಗಳು ಇವೆ. ಅವುಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ಪ್ರಳಯವನ್ನು ಸೂಚಿಸುವ ಮಾಹಿಮಾನ್ವಿತ ಗುಹಾ ದೇವಾಲಯವಾದ ಹರಿಶ್ಚಂದ್ರಘಡ್, ಉಲ್ಕಾಪಾತದಿಂದ ಉಂಟಾದ ಬೃಹತ್ ಉಲ್ಕಾ ಗುಂಡಿಯ ಕೆರೆಗಳು, ವಾಹನಗಳ ಓಡಾಟವೇ ಇರದ ಮಾಥೇರಾನ್ ಎಂಬ ಗಮ್ಯ ಗಿರಿಧಾಮವಿರಲಿ, ಮಂಡಪೇಶ್ವರ ಗುಹೆಗಳು, ಮಾಹಿಮಾನ್ವಿತವಾದ ದೇವಾಲಯಗಳು, ಕೋಟೆಗಳು ಹೀಗೆ ಇನ್ನೂ ಹಲವಾರು ಆಕರ್ಷಣೆಗಳು ಪ್ರವಾಸಿಗರಲ್ಲಿ ಆಸಕ್ತಿಯನ್ನು ಕೆರಳಿಸುತ್ತದೆ.

ಮಹಾರಾಷ್ಟ್ರದ ಪ್ರವಾಸದ ಯೋಜನೆಯಲ್ಲಿದ್ದರೆ ಅಲ್ಲಿ ನೋಡಬೇಕಾಗಿರುವ ಹಲವಾರು ಸ್ಥಳಗಳಿವೆ. ಅವೆಲ್ಲವನ್ನು ಕಂಡು ಆನಂದಿಸಬಹುದಾಗಿದೆ. ಆ ತಾಣಗಳಲ್ಲಿ ಒಂದು ಭ್ಯವವಾದ ಕೋಟೆಯು ಒಂದು. ಆ ಕೋಟೆ ಯಾವುದೆಂದರೆ ಒಂದು ಕಾಲದಲ್ಲಿ ಛತ್ರಪತಿ ಶಿವಾಜಿಯ ವಾಸವಿದ್ದ ಕೋಟೆಯೇ ಅಗಿದೆ. ಹಾಗಾದರೆ ಆ ಕೋಟೆಯ ವಿಶೇಷತೆಗಳನ್ನು ತಿಳಿಯಲೇಬೇಕು ಅಲ್ಲವೇ?. ಪ್ರಸ್ತುತ ಲೇಖನದಲ್ಲಿ ಅಂತಹ ಸುಂದರವಾದ ಕೋಟೆಯ ಬಗ್ಗೆ ಮಾಹಿತಿಯನ್ನು ಪಡೆಯೋಣ.

ರಾಯ್‍ಘಡ್ ಕೋಟೆ

ರಾಯ್‍ಘಡ್ ಕೋಟೆ

ಟ್ರೆಕ್ಕಿಂಗ್ ಎಂಬ ಸಾಹಸ ಕಾರ್ಯವನ್ನು ಮಾಡಲು ಬಯಸುವವರಿಗೆ ಈ ಸ್ಥಳ ಒಂದು ಸ್ವರ್ಗವೇ ಸರಿ. ಒಂದಕ್ಕಿಂತ ಒಂದು ಟ್ರೆಕ್ಕಿಂಗ್ ಸ್ಥಳಗಳನ್ನು ಇಲ್ಲಿ ಆನಂದಿಸಬಹುದಾಗಿದೆ. ಕೆಲವು ಕೋಟೆಗಳು ತನ್ನ ವೈಭವವನ್ನು ಹೆಚ್ಚಿಸಲು ಪ್ರಕೃತಿಯ ಮಡಿಲಲ್ಲಿ ಇದ್ದರೆ, ಇನ್ನು ಕೆಲವು ಪ್ರಸಿದ್ಧವಾದ ಸ್ಥಳದಲ್ಲಿ ಇರುವುದನ್ನು ಕಾಣಬಹುದಾಗಿದೆ.

rohit gowaikar

ರಾಯ್‍ಘಡ್ ಕೋಟೆ

ರಾಯ್‍ಘಡ್ ಕೋಟೆ

ಪರ್ವತದ ಮೇಲೆ ಇರುವ ಕೋಟೆಗಳಿಗೆ ಅತ್ಯಂತ ಜಾಗರೂಕತೆಯಿಂದ ತೆರಳಬೇಕಾಗುತ್ತದೆ. ಇಲ್ಲಿನ ಕೋಟೆಗಳು ತನ್ನ ಪುರಾತನವಾದ ಇತಿಹಾಸವನ್ನು ವಿವರಿಸುತ್ತದೆ. ನಿರ್ಜನವಾದ ಇಂತಹ ಸ್ಥಳಗಳಲ್ಲಿ ಏರುವ ಚಟುವಟಿಕೆಯು ಸಾಕಷ್ಟು ಸಹಸಮಯವಾಗಿರುತ್ತದೆ. ಪ್ರತಿ ಚಾರಣಿಗನಿಗೂ ಸವಾಲೆಸದಂತೆ ಇರುತ್ತದೆ.

Sanket Suresh Rane

ರಾಯ್‍ಘಡ್ ಕೋಟೆ

ರಾಯ್‍ಘಡ್ ಕೋಟೆ

ಅಂತಹ ಟ್ರೆಕ್ಕ್ ಮಾಡಲು ಬಯಸುವವರಿಗೆ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಮಹಾಡ್ ಎಂಬಲ್ಲಿರುವ ರಾಯಗಡ್ ಕೋಟೆಯು ಸಹ ಒಂದಾಗಿದೆ. ಈ ಕೋಟೆಯ ವಿಶೇಷವೆನೆಂದರೆ ಮರಾಠ ದೊರೆ ಛತ್ರಪತಿ ಶಿವಾಜಿಯು ಈ ಕೋಟೆಯನ್ನು ತನ್ನ ರಾಜಧಾನಿ ಕೇಂದ್ರವನ್ನಾಗಿ ಮಾಡಿಕೊಂಡು ಸಾಕಷ್ಟು ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದನು.

rohit gowaikar

ರಾಯ್‍ಘಡ್ ಕೋಟೆ

ರಾಯ್‍ಘಡ್ ಕೋಟೆ

ಈ ಕೋಟೆಗೆ ಸುಮಾರು 1737 ಮೆಟ್ಟಿಲುಗಳು ಇವೆ. ಕೋಟೆಯನ್ನು ಸಹ್ಯಾದ್ರಿ ಪರ್ವತ ಶ್ರೇಣಿಗಳ ಒಂದು ಬೆಟ್ಟದ ತುದಿಯಲ್ಲಿ ನಿರ್ಮಾಣ ಮಾಡಿದ್ದರಿಂದ ಶತ್ರು ಸೈನ್ಯಗಳು ಕೋಟೆಯ ಒಳಪ್ರವೇಶ ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಇದೊಂದು ಅತ್ಯಂತ ಕಠಿಣಕರವಾದ ಮಾರ್ಗವಾಗಿತ್ತು.

Sunilbhar

ರಾಯ್‍ಘಡ್ ಕೋಟೆ

ರಾಯ್‍ಘಡ್ ಕೋಟೆ

ಪ್ರಸ್ತುತ ಈ ತಾಣವು ಒಂದು ಉತ್ತಮವಾದ ಪ್ರವಾಸಿ ಆಕರ್ಷಣೆಯಾಗಿದ್ದು, ಸಾಕಷ್ಟು ಪ್ರವಾಸಿಗರು ಅದರಲ್ಲೂ ಟ್ರೆಕ್ಕಿಂಗ್ ಮಾಡಲು ಬಯಸುವವರು ಈ ಸ್ಥಳಕ್ಕೆ ತಪ್ಪದೇ ಭೇಟಿ ಮಾಡುತ್ತಾರೆ. ಇಲ್ಲಿನ ವಿಶೇಷವೆನೆಂದರೆ ಮಳೆಗಾಲದ ಸಂದರ್ಭದಲ್ಲಿ ಟ್ರೆಕ್ಕಿಂಕ್ ಮಾಡುವುದು ಮತ್ತಷ್ಟು ರೋಮಾಂಚನಕಾರಿ ಅನುಭೂತಿ ಉಂಟು ಮಾಡುತ್ತದೆ.

ರಾಯ್‍ಘಡ್ ಕೋಟೆ

ರಾಯ್‍ಘಡ್ ಕೋಟೆ

ಆದರೆ ಆ ಸಂದರ್ಭದಲ್ಲಿ ಜಾಗರೂಕತೆಯಾಗಿರುವುದು ಅತ್ಯವಶ್ಯಕವಾದುದು. ಈ ಟ್ರೆಕ್ಕಿಂಗ್ ಮಾಡುವಾಗ ಸಹ್ಯಾದ್ರಿ ಪರ್ವತಗಳ ಅದ್ಭುತ ನೋಟವನ್ನು ಕಂಡು ಅಸ್ವಾಧಿಸಬಹುದು. ಟ್ರೆಕ್ಕಿಂಗ್, ಪ್ರಕೃತಿಯ ಜೊತೆ ಜೊತೆಗೆ ಕೋಟೆಯ ಒಳಭಾಗದಲ್ಲಿ ಛತ್ರಪತಿ ಶಿವಾಜಿಯ ಪ್ರತಿಮೆಯನ್ನು ಕೂಡ ಕಾಣಬಹುದಾಗಿದೆ.

Cj.samson

ರಾಯ್‍ಘಡ್ ಕೋಟೆ

ರಾಯ್‍ಘಡ್ ಕೋಟೆ

ಇಲ್ಲಿನ ಅಪೂರ್ವವಾದ ವಾತಾವರಣ ಕಾರಣ ಈ ಕೋಟೆಯ ಪ್ರಕೃತಿಯನ್ನು ಅಸ್ವಾಧಿಸಲು ಹಿರಿಯರಿಗೆ ಕಷ್ಟವಾಗಬಹುದು. ಹಿರಿಯರು ಅಷ್ಟೊಂದು ಮೆಟ್ಟಿಲುಗಳನ್ನು ಏರಿ ಬರುವುದಕ್ಕೆ ಕಷ್ಟವಾಗುವುದರಿಂದ ರೋಪ್ ವೇ (ಕೇಬಲ್ ಕಾರುಗಳು) ಗಳ ಸೇವೆಗಳನ್ನು ಕಲ್ಪಿಸಲಾಗಿದೆ. ಇದು ಹಿರಿಯರಿಗೆ ಹಾಗು ದೇಹ ಸಾಮಾಥ್ರ್ಯದ ಕೊರತೆ ಇರುವವರಿಗೆ ಇದು ಬಳಸಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X