Search
  • Follow NativePlanet
Share
» »ಮುಸ್ಲಿಂ ರಾಜನಿಂದ ನಾಮಕರಣ ಮಾಡಿಕೊಂಡ "ನೀಲಕಂಠ" ಕ್ಷೇತ್ರವಿದು...

ಮುಸ್ಲಿಂ ರಾಜನಿಂದ ನಾಮಕರಣ ಮಾಡಿಕೊಂಡ "ನೀಲಕಂಠ" ಕ್ಷೇತ್ರವಿದು...

ಜಾತಿ, ಧರ್ಮ ಎಂಬುದು ಮಾನವರು ಕಲ್ಪಿಸಿಕೊಂಡಿರುವ ಕೆಲವು ಕೆಲಸಕ್ಕೆಬಾರದು ಕಟ್ಟುಪಾಡುಗಳು ಮಾತ್ರವೇ. ಆ ದೈವಕ್ಕೆ ಈ ಜಾತಿ, ಧರ್ಮದ ಕಟ್ಟುಪಾಡುಗಳು ಯಾವುವು ಇಲ್ಲ. ಯಾರಾದರೂ ಸರಿ ಆಪತ್ತಿನಲ್ಲಿದ್ದೇನೆ ಎಂದು ಬೇಡಿಕೊಂಡ ತಕ್ಷಣವೇ ಆ ದೈವವು ಅವರಿಗೆ

By Sowmyabhai

ಜಾತಿ, ಧರ್ಮ ಎಂಬುದು ಮಾನವರು ಕಲ್ಪಿಸಿಕೊಂಡಿರುವ ಕೆಲವು ಕೆಲಸಕ್ಕೆಬಾರದು ಕಟ್ಟುಪಾಡುಗಳು ಮಾತ್ರವೇ. ಆ ದೈವಕ್ಕೆ ಈ ಜಾತಿ, ಧರ್ಮದ ಕಟ್ಟುಪಾಡುಗಳು ಯಾವುವು ಇಲ್ಲ. ಯಾರಾದರೂ ಸರಿ ಆಪತ್ತಿನಲ್ಲಿದ್ದೇನೆ ಎಂದು ಬೇಡಿಕೊಂಡ ತಕ್ಷಣವೇ ಆ ದೈವವು ಅವರಿಗೆ ಸಹಾಯವನ್ನು ಮಾಡುತ್ತಾನೆ. ಇದಕ್ಕೆ ನಿದರ್ಶನವೇ ಈ ಪುಣ್ಯಕ್ಷೇತ್ರ.

ಇಲ್ಲಿ ಆ ಪರಮಶಿವನು ಒಬ್ಬ ಮುಸ್ಲಿಂ ರಾಜನ ಆನೆಯ ಖಾಯಿಲೆಯನ್ನು ಕೂಡ ಗುಣಪಡಿಸಿದ ಮಹಿಮಾನ್ವಿತವಾದ ದೈವ. ಇದರಿಂದಾಗಿ ಆ ಮುಸ್ಲಿಂ ರಾಜನು ಇಲ್ಲಿನ ದೇವನಿಗೆ ಒಂದು ನೂತನವಾದ ಹೆಸರನ್ನು ಇಟ್ಟನು. ಇನ್ನು ಈ ಕ್ಷೇತ್ರವನ್ನು ಪರಶುರಾಮ ಕ್ಷೇತ್ರ ಎಂದು ಕೂಡ ಕರೆಯುತ್ತಾರೆ. ಇಲಲಿ ವಿಶೇಷವಾದ ರಾಘವೇಂದ್ರ ಸ್ವಾಮಿಯ ಕಲ್ಲಿನ ವಿಗ್ರಹವನನ್ನು ಕೂಡ ಸಂದರ್ಶಿಸಬಹುದು.

1.ಸಾಗರ ಮಥನಂ

1.ಸಾಗರ ಮಥನಂ

PC:YOUTUBE

ಅಮರತ್ವವನ್ನು ಹೊಂದುವ ಸಲುವಾಗಿ ದಾನವರು ಹಾಗು ದೇವತೆಗಳು ಸಾಗರ ಮಥನದಲ್ಲಿ ಮಾಡುವುದು ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. ಆದರೆ ಈ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ವಿಘ್ನವಿನಾಶಕನಾದ ವಿನಾಯಕನನ್ನು ಪ್ರಾರ್ಥಿಸಬೇಕು ಎಂಬುದು ದೇವತೆಗಳು ಕೂಡ ಮರೆತು ಹೋಗುತ್ತಾರೆ.

2.ಅಲಾಹಲ ಬರುತ್ತದೆ

2.ಅಲಾಹಲ ಬರುತ್ತದೆ

PC:YOUTUBE

ಹೀಗೆ ದೇವ-ದಾನವರು ಸಾಗರ ಮಥನದಲ್ಲಿ ಇರುವಾಗ ಮೊದಲು ಅಮೃತಕ್ಕೆ ಬದಲು ಆಲಾಹಾಲವು ಬರುತ್ತದೆ. ಆ ಕಾಲಕೂಟ ವಿಷವು ಪ್ರಪಂಚವೆಲ್ಲಾ ದಹಿಸುತ್ತದೆ. ಈ ಕಾರಣವಾಗಿ ದಾನವರು ಅದನ್ನು ಯಾವ ಕಾರಣಕ್ಕೂ ಸೇವಿಸುವುದಿಲ್ಲ ಎಂದು ಹೇಳುತ್ತಾರೆ. ಲೋಕ ಕಲ್ಯಾಣಕ್ಕಾಗಿ ಪರಮಶಿವನೇ ಮುಂದೆ ಬಂದು ಆ ಅಲಾಹಲವನ್ನು ಕುಡಿಯಲು ಸಿದ್ಧನಾಗುತ್ತಾನೆ.

3.ಅಲಾಹಲ

3.ಅಲಾಹಲ

PC:YOUTUBE

ಪ್ರಜೆಗಳ ಜೊತೆ-ಜೊತೆಗೆ ಪಶುಗಳು, ಪಕ್ಷಿಗಳು ಆ ವಿಷದ ಸಮುದ್ರದ ತಾಪವನ್ನು ತಡೆದುಕೊಳ್ಳಲಾಗದೇ ಪ್ರಾಣವನ್ನು ಕಳೆದುಕೊಳ್ಳುತ್ತಿರು ವಿಷಯವನ್ನು ಆ ನಾಗಭರಣನು ತಿಳಿದುಕೊಂಡು, ನಾಗಭರಣನು ಅಲಾಹಲವನ್ನು ಸೇವಿಸುತ್ತಾನೆ. ಅಷ್ಟು ಅಲಾಹಲವು ಶರೀರದಲ್ಲಿ ಪ್ರವೇಶಿಸಿದರೆ ಎಂಥಹ ಪರಮಶಿವನು ಕೂಡ ತಡೆದುಕೊಳ್ಳಲಾಗುವುದಿಲ್ಲ ಎಂದು ಭಾವಿಸಿದ ಪಾರ್ವತಿದೇವಿಯು ಶಿವನ ಕಂಠವನ್ನು ಗಟ್ಟಿಯಾಗಿ ಹಿಡಿಯುತ್ತಾಳೆ.

4.ಸ್ವಲ್ಪ ಸಮಯ ವಿಶ್ರಾಂತಿ

4.ಸ್ವಲ್ಪ ಸಮಯ ವಿಶ್ರಾಂತಿ

PC:YOUTUBE

ಇದರಿಂದಾಗಿ ಆ ವಿಷವು ಪರಮಶಿವನು ಕಂಠದಲ್ಲಿಯೇ ಉಳಿದುಬಿಡುತ್ತದೆ. ಈ ಘಟನೆ ನಡೆದ ನಂತರ ಪರಮಶಿವನು ಪ್ರಸ್ತುತ ನಂಜನಗೂಡಿನಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಹಾಗಾಗಿ ಆ ಪ್ರದೇಶವು ಪರಮ ಪವಿತ್ರವಾಗಿ ಮಾರ್ಪಾಟಾಯಿತು ಎಂದು ಹೇಳುತ್ತಾರೆ.

5.ನೀಲಿ ಬಣ್ಣ

5.ನೀಲಿ ಬಣ್ಣ

PC:YOUTUBE

ಇದರಿಂದಾಗಿ ಆ ವಿಷವು ಪರಮಶಿವನು ಕಂಠದಲ್ಲಿಯೇ ಉಳಿದುಬಿಡುತ್ತದೆ. ಈ ಘಟನೆ ನಡೆದ ನಂತರ ಪರಮಶಿವನು ಪ್ರಸ್ತುತ ನಂಜನಗೂಡಿನಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಹಾಗಾಗಿ ಆ ಪ್ರದೇಶವು ಪರಮ ಪವಿತ್ರವಾಗಿ ಮಾರ್ಪಾಟಾಯಿತು ಎಂದು ಹೇಳುತ್ತಾರೆ.

6.ನಂಜನಗೂಡ

6.ನಂಜನಗೂಡ

PC:YOUTUBE

ಕನ್ನಡದಲ್ಲಿ ನಂಜುಂಡ ಎಂಬ ಪದವು ನಂಜ+ಉಂಡ ಎಂಬ 2 ಪದಗಳಿಂದ ಏರ್ಪಟ್ಟಿದೆ. ನಂಜ ಎಂದರೆ ವಿಷ ಎಂದೂ, ಉಂಡ ಎಂದರೆ ನುಂಗಿದ ಎಂಬ ಅರ್ಥ ಬರುತ್ತದೆ. ಹಾಗಾಗಿಯೇ ಈ ಕ್ಷೇತ್ರದಲ್ಲಿ ಪರಮಶಿವನನ್ನು ನಂಜುಂಡೇಶ್ವರ ಎಂದು ಕರೆಯುತ್ತಾರೆ.

7.ನಂಜುಡೇಶ್ವರ

7.ನಂಜುಡೇಶ್ವರ

PC:YOUTUBE

ನಂಜುಡೇಶ್ವರನು ನೆಲೆಸಿರುವುದರಿಂದಲೇ ಈ ಪ್ರದೇಶವನ್ನು ನಂಜನಗೂಡು ಎಂದು ಕರೆಯುತ್ತಾರೆ. ಅಷ್ಟೇ ಅಲ್ಲದೇ, ಶ್ರೀಕಂಠ ಎಂದೂ ಕೂಡ ಪರಮಶಿವನಿಗೆ ಹೆಸರಿದೆ.

8.ರೋಗವನ್ನು ಗುಣ ಮಾಡಿದ ಶಕ್ತಿ

8.ರೋಗವನ್ನು ಗುಣ ಮಾಡಿದ ಶಕ್ತಿ

PC:YOUTUBE

ನಂಜುಡೇಶ್ವರನಿಗೆ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಸ್ಥಳೀಯ ಪ್ರಜೆಗಳ ಪ್ರಬಲವಾದ ವಿಶ್ವಾಸ. ಇದರಿಂದಾಗಿ ಆ ನಂಜುಡೇಶ್ವರನು ನೆಲೆಸಿರುವ ಕುಲದೈವ ದೇವಾಲಯದ ಸಮೀಪದಲ್ಲಿರುವ ನದಿಯಲ್ಲಿ ಮುಳುಗಿ ತಮ್ಮ ರೋಗ ಹಾಗು ಪಾಪಗಳನ್ನು ಅಂದಿನ ಕಾಲದ ಮುನಿಗಳು ಹಾಗು ರಾಜರು ಕಳೆದುಕೊಳ್ಳುತಿದ್ದರಂತೆ.

9.ಟಿಪ್ಪು ಸುಲ್ತಾನ್

9.ಟಿಪ್ಪು ಸುಲ್ತಾನ್

PC:YOUTUBE

ಚಾರಿತ್ರಾತ್ಮಕ ಕಥೆಯ ಪ್ರಕಾರ ಈ ಪ್ರದೇಶವನ್ನು ಆಳ್ವಿಕೆ ಮಾಡುತ್ತಿದ್ದ ಟಿಪ್ಪು ಸುಲ್ತಾನನ ಆನೆಗೆ ಒಮ್ಮೆ ತೀವ್ರವಾದ ಖಾಯಿಲೆಯಿಂದ ನರಳುತ್ತಿತ್ತಂತೆ. ಆಸ್ಥಾನ ಪಂಡಿತರ ಸೂಚನೆಯ ಮೇರೆಗೆ ಟಿಪ್ಪು ಸುಲ್ತಾನನು ನಂಜುಡೇಶ್ವರನ ದರ್ಶನಕ್ಕೆ ಬರುತ್ತಾನಂತೆ.

10.ವೈದ್ಯನು

10.ವೈದ್ಯನು

PC:YOUTUBE

ವಿಚಿತ್ರವಾಗಿ ಆ ಆನೆಗೆ ಇದ್ದ ಖಾಯಿಲೆಯು ಪೂರ್ತಿಯಾಗಿ ಗುಣವಾಯಿತಂತೆ. ಇದರಿಂದಾಗಿ ಟಿಪ್ಪುಸುಲ್ತಾನ್ ಈ ನಂಜುಡೇಶ್ವರನಿಗೆ ಹಾಕಿಮ (ವೈದ್ಯ) ನಂಜುಡ ಎಂದು ಕರೆಯುತ್ತಾ ದೇವಾಲಯದ ಅಭಿವೃದ್ಧಿಗಾಗಿ ಸಾವಿರಾರು ಎಕರೆಯನ್ನು ದಾನವಾಗಿ ನೀಡಿದನಂತೆ. ಈ ವಿಷಯವನ್ನು ತಿಳಿದುಕೊಂಡ ಸುತ್ತ-ಮುತ್ತಲ ರಾಜ್ಯದ ಜನರು ಕೂಡ ತಮಮ್ ವಿವಿಧ ಬಗೆಯ ರೋಗಗಳನ್ನು ಪರಿಹರಿಸಿಕೊಳ್ಳಲು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರಂತೆ.

11.ಉಪ್ಪು, ಬೆಲ್ಲ

11.ಉಪ್ಪು, ಬೆಲ್ಲ

PC:YOUTUBE

ಭಕ್ತರು ತಮ್ಮ ರೋಗಗಳನ್ನು ತ್ವರಿತವಾಗಿ ಗುಣಪಡಿಸಿಕೊಳ್ಳಲು ಉಪ್ಪು ಹಾಗು ಬೆಲ್ಲವನ್ನು ನದಿಯಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಎಂಥಹ ಖಾಯಿಲೆಯಾಗಲಿ ಗುಣವಾಗುತ್ತದೆ ಎಂಬುದೇ ಭಕ್ತರ ಪ್ರಬಲವಾದ ವಿಶ್ವಾಸವಾಗಿದೆ.

12.ಪರಶುರಾಮ ಕ್ಷೇತ್ರ

12.ಪರಶುರಾಮ ಕ್ಷೇತ್ರ

PC:YOUTUBE

ಪುರಾಣಗಳ ಪ್ರಕಾರ ಈ ನಂಜನಗೂಡು ಪರಶುರಾಮ ಕ್ಷೇತ್ರ. ತಂದೆ ಆದೇಶವನ್ನು ಅನುಸರಿಸಿ ತಾಯಿಯನ್ನು ಪರಶುರಾಮನು ಸಂಹರಿಸಿ ಮತ್ತೇ ಬದುಕಿಸಿದ ವಿಷಯ ನಮಗೆಲ್ಲಾ ತಿಳಿದಿರುವುದೇ.

13.ಮಾತೃಹತ್ಯೆಯಿಂದಾಗಿ

13.ಮಾತೃಹತ್ಯೆಯಿಂದಾಗಿ

PC:YOUTUBE

ಮಾತೃಹತ್ಯೆಯಿಂದಾಗಿ ಪರಶುರಾಮನ ಮನಸ್ಸು ಅಲ್ಲೊಲಕಲ್ಲೋಲವಾಗುತ್ತದೆ. ಇದರಿಂದಾಗಿ ಪ್ರಶಾಂತತೆಯನ್ನು ಹೊಂದುವ ಸಲುವಾಗಿ ದೇಶದಲ್ಲಿನ ಅನೇಕ ಪ್ರದೇಶಗಳಿಗೆ ತಿರುಗುತ್ತಾ ಪ್ರಸ್ತುತವಿರುವ ನಂಜನಗೂಡು ಇರುವ ಪ್ರದೇಶಕ್ಕೆ ಬರುತ್ತಾನೆ. ಅಲ್ಲಿನ ಕಪಿಲ ಹಾಗು ಕೌಂಡಿನ್ಯ ನದಿಯ ಸಂಗಮವನ್ನು ಕಂಡು ಮೈ ಮರೆಯುತ್ತಾನೆ. ಅಲ್ಲಿ ತಪಸ್ಸು ಮಾಡಬೇಕು ಎಂದು ಭಾವಿಸುತ್ತಾನೆ.

14.ಶಿವಲಿಂಗದಿಂದ ರಕ್ತ

14.ಶಿವಲಿಂಗದಿಂದ ರಕ್ತ

PC:YOUTUBE

ಸ್ಥಳದ ಹುಡುಕಾಟದಲ್ಲಿದ್ದ ಪರಶುರಾಮನಿಗೆ ಒಂದು ಉತ್ತಮವಾದ ಸ್ಥಳ ದೊರೆಯುತ್ತದೆ. ಆದರೆ ತಪಸ್ಸು ಮಾಡುವ ಸಮಯದಲ್ಲಿ ಒಂದು ದೊಡ್ಡ ಬಂಡೆ ಶಿವಲಿಂಗಕ್ಕೆ ತಗುಲಿ ಮೇಲಿಂದ ರಕ್ತ ಸುರಿಯುತ್ತಿರುತ್ತದೆ. ಇದರಿಂದಾಗಿ ಪರಮಶಿವನು ತೀವ್ರವಾಗಿ ಚಿಂತೆಗೆ ಒಳಗಾಗುತ್ತಾನೆ.

15.ಆತ್ಮಾರರ್ಚನೆಗೆ ಸಿದ್ಧ

15.ಆತ್ಮಾರರ್ಚನೆಗೆ ಸಿದ್ಧ

PC:YOUTUBE

ತಾಯಿಯನ್ನು ಕೊಂಡ ಪಾಪದಿಂದ ನಿವೃತ್ತಿಗಾಗಿ ತಿರುಗುತ್ತಾ ಇರುವ ತನ್ನ ನಿರ್ಲಕ್ಷ್ಯದಿಂದಾಗಿ ಮತ್ತೊಂದು ಅಪರಾಧ ನಡೆಯಿತು ಎಂದು ಭಾದೆಗೊಳ್ಳುತ್ತಾನೆ. ಕೊನೆಗೆ ಅತ್ಮಾರ್ಚನಕ್ಕೆ ಸಿದ್ಧಗೊಳ್ಳುತ್ತಾನೆ.

16.ಪರಮಶಿವನು ಪ್ರತ್ಯಕ್ಷನಾಗುತ್ತಾನೆ

16.ಪರಮಶಿವನು ಪ್ರತ್ಯಕ್ಷನಾಗುತ್ತಾನೆ

PC:YOUTUBE

ಆ ಸಮಯದಲ್ಲಿ ಪರಮಶಿವನು ಪ್ರತ್ಯಕ್ಷನಾಗಿ ಆತನಿಗೆ ದರ್ಶನವನ್ನು ನೀಡುತ್ತಾನೆ. ಇಲ್ಲಿ ಆತನಿಗಾಗಿ ದೇವಾಲಯವನ್ನು ನಿರ್ಮಾಣ ಮಾಡು ಎಂದು ಸೂಚಿಸುತ್ತಾನೆ. ಅಷ್ಟೇ ಅಲ್ಲದೇ, ನಿನಗೂ ಕೂಡ ಒಂದು ದೇವಾಲಯ ಇಲ್ಲಿ ನೆಲೆಸುತ್ತದೆ ಎಂದೂ ಕೂಡ ಹೇಳುತ್ತಾನೆ.

17.ಪರಶುರಾಮ ದೇವಾಲಯ

17.ಪರಶುರಾಮ ದೇವಾಲಯ

PC:YOUTUBE

ತನನ್ನು ಸಂದರ್ಶಿಸಿದವರು ತಪ್ಪದೇ ಪರಶುರಾಮನ ದೇವಾಲಯಕ್ಕೂ ಕೂಡ ಸಂದರ್ಶಿಸಬೇಕು ಎಂದೂ ಇಲ್ಲವಾದರೆ ತೀರ್ಥಕ್ಷೇತ್ರದ ಯಾತ್ರೆ ಪೂರ್ಣಗೊಳ್ಳುವುದಿಲ್ಲ ಎಂದು ಹೇಳುತ್ತಾನೆ. ಹಾಗಾಗಿಯೇ ನಂಜನಗೂಡಿಗೆ ತೆರಳಿದವರು ತಪ್ಪದೇ ಪರಶುರಾಮ ದೇವಾಲಯವನ್ನು ಸಂದರ್ಶಿಸುತ್ತಿರುತ್ತಾರೆ.

18.ಎಲ್ಲಿದೆ?

18.ಎಲ್ಲಿದೆ?

PC:YOUTUBE

ಬೆಂಗಳೂರಿನಿಂದ ಸುಮಾರು 175 ಕಿ.ಮೀ ದೂರದಲ್ಲಿ ನಂಜನಗೂಡು ದೇವಾಲಯವಿದೆ. ಮೈಸೂರಿನಿಂದ ಈ ಕ್ಷೇತ್ರವು ಕೇವಲ 23 ಕಿ.ಮೀ ದೂರದಲ್ಲಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 1 ಗಂಟೆಯವರೆಗೆ, ಹಾಗು ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ದೇವಾಲಯಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X