Search
  • Follow NativePlanet
Share
» »ಟಿಪ್ಪು ಸುಲ್ತಾನ್ ನಿರ್ಮಾಣ ಮಾಡಿದ ನಕ್ಷತ್ರಾಕಾರದ ಕೋಟೆ ಎಲ್ಲಿದೆ ಗೊತ್ತ?

ಟಿಪ್ಪು ಸುಲ್ತಾನ್ ನಿರ್ಮಾಣ ಮಾಡಿದ ನಕ್ಷತ್ರಾಕಾರದ ಕೋಟೆ ಎಲ್ಲಿದೆ ಗೊತ್ತ?

ನಮ್ಮ ಭಾರತ ದೇಶದಲ್ಲಿ ಅನೇಕ ಸುಂದರವಾದ, ಭವ್ಯವಾದ ಕೋಟೆಗಳು ಇವೆ. ಅವುಗಳೆಲ್ಲಾ ತನ್ನದೇ ಆದ ಐತಿಹಾಸಿಕ ಚರಿತ್ರೆಯನ್ನು ಹೊಂದಿರುವ ಅದ್ಭುತವಾದ ಕೋಟೆಗಳು. ಭಾರತವು ಶ್ರೀಮಂತವಾದ, ಸಾಂಸ್ಕøತಿಕ ಪರಂಪರೆಯನ್ನು ಮತ್ತು ಇತಿಹಾಸವನ್ನು ಹೊಂದಿದೆ. ಕೋಟೆಗ

ನಮ್ಮ ಭಾರತ ದೇಶದಲ್ಲಿ ಅನೇಕ ಸುಂದರವಾದ, ಭವ್ಯವಾದ ಕೋಟೆಗಳು ಇವೆ. ಅವುಗಳೆಲ್ಲಾ ತನ್ನದೇ ಆದ ಐತಿಹಾಸಿಕ ಚರಿತ್ರೆಯನ್ನು ಹೊಂದಿರುವ ಅದ್ಭುತವಾದ ಕೋಟೆಗಳು. ಭಾರತವು ಶ್ರೀಮಂತವಾದ, ಸಾಂಸ್ಕøತಿಕ ಪರಂಪರೆಯನ್ನು ಮತ್ತು ಇತಿಹಾಸವನ್ನು ಹೊಂದಿದೆ. ಕೋಟೆಗಳು ಎಂದರೆ ಚಿಕ್ಕ ಮಕ್ಕಳಿಗೇ ಅಲ್ಲದೇ ದೊಡ್ಡವರ ತನಕವು ಕುತೂಹಲ ಕೆರೆಳಿಸುತ್ತವೆ. ಕೋಟೆಗಳು ಅನೇಕ ರಾಜರ ಆಡಳಿತ, ಯುದ್ಧಗಳು, ಅವರ ಅಭಿರುಚಿಗೆ ತಕ್ಕಂತೆ ನಿರ್ಮಾಣ ಮಾಡಿದ ವಾಸ್ತುಶಿಲ್ಪಗಳನ್ನು ನೋಡುವುದು ಅಥವಾ ಅದರ ಬಗ್ಗೆ ತಿಳಿದುಕೊಳ್ಳುವುದೇ ಒಂದು ಸುಂದರವಾದ ಅನುಭೂತಿಯನ್ನು ಉಂಟು ಮಾಡುವಂತಹುದು. ಅನೇಕ ರಾಜರ ಆಳ್ವಿಕೆಯನ್ನು ಕಂಡಿರುವ ಪುಣ್ಯ ಭೂಮಿಗಳಲ್ಲಿ ನಮ್ಮ ಕರ್ನಾಟಕವು ಒಂದು. ನಮ್ಮ ಕರ್ನಾಟಕದಲ್ಲಿಯೂ ಅನೇಕ ವೀರರು ಭದ್ರವಾದ ಕೋಟೆಗಳನ್ನು ನಿರ್ಮಾಣ ಮಾಡಿದ್ದಾರೆ.

ಅವರಲ್ಲಿ "ಮೈಸೂರಿನ ಹುಲಿ" ಎಂದೇ ಪ್ರಸಿದ್ಧವಾಗಿದ್ದ ಟಿಪ್ಪು ಸುಲ್ತಾನ್ ಕೂಡ ಒಬ್ಬ. ಟಿಪ್ಪು ವಿಭಿನ್ನವಾಗಿ ನಕ್ಷಾತ್ರಾಕಾರದ ಕೋಟೆಯನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ನಿರ್ಮಾಣ ಮಾಡಿದ್ದಾರೆ. ಹಾಗಾದರೆ ಬನ್ನಿ ಆ ಕೋಟೆ ಎಲ್ಲಿದೆ ಎಂಬುದನ್ನು ಲೇಖನದ ಮೂಲಕ ತಿಳಿದುಕೊಳ್ಳೊಣ.

ಯಾವುದು ಆ ಕೋಟೆ?

ಯಾವುದು ಆ ಕೋಟೆ?

ಆ ಕೋಟೆಯೇ ಮಂಜರಾಬಾದ್ ಕೋಟೆ. ಇದು ಬೆಂಗಳೂರು - ಮಂಗಳೂರು ಹೆದ್ದಾರಿಯಲ್ಲಿದೆ. ಹಾಸನ ಜಿಲ್ಲೆಯ ಸಕಲೇಶ್ವರಪುರದಿಂದ ಕೇವಲ 5 ಕಿ.ಮೀ ದೂರದಲ್ಲಿರುವ ದೋಣಿಗಾಲ್ ಎಂಬ ಗ್ರಾಮದಲ್ಲಿನ ಸಣ್ಣ ಗುಡ್ಡದ ಮೇಲೆ ನಕ್ಷಾತ್ರಾಕಾರದ ಕೋಟೆ ಇದೆ. ಈ ಸುಂದರವಾದ ಕೋಟೆಯನ್ನು "ಮೈಸೂರಿನ ಹುಲಿ" ಟಿಪ್ಪು ಸುಲ್ತಾನ್ ನಿರ್ಮಾಣ ಮಾಡಿದರು.

PC:YOUTUBE

ಯಾವಾಗ ನಿರ್ಮಾಣ ಮಾಡಿದನು?

ಯಾವಾಗ ನಿರ್ಮಾಣ ಮಾಡಿದನು?

ಮಂಜರಾಬಾದ್ ಕೋಟೆಯನ್ನು ಟಿಪ್ಪು ಸುಲ್ತಾನ್ 1785-1792 ರ ಮಧ್ಯ ಭಾಗದಲ್ಲಿ ನಿರ್ಮಾಣ ಮಾಡಿದನು. ಈ ಕೋಟೆಯನ್ನು ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಬಳಸಲಾಯಿತು. ಶ್ರೀರಂಗಪಟ್ಟಣದ ಪತನದ ನಂತರ ಬ್ರೀಟಿಷರು ಈ ಕೋಟೆಯನ್ನು ತನ್ನ ವಶಕ್ಕೆ ತೆಗೆದುಕೊಂಡರು. ಅವರು ವಶಪಡಿಸಿಕೊಂಡ ನಂತರ ಕೆಲವು ಭಾಗಗಳನ್ನು ನಾಶ ಮಾಡಿದರು ಎನ್ನಲಾಗಿದೆ.

PC: NATIVE PLANET

ನಕ್ಷಾತ್ರಾಕಾರದ ಕೋಟೆ

ನಕ್ಷಾತ್ರಾಕಾರದ ಕೋಟೆ

ಅನೇಕ ವಿಭಿನ್ನವಾದ ಕೋಟೆಗಳನ್ನು ನೀವು ನೋಡಿದ್ದೀರಾ, ಆದರೆ ಅದ್ಭುತವಾದ ನಕ್ಷತ್ರಾಕಾರದ ಕೋಟೆಯನ್ನು ನೋಡಿದ್ದೀರಾ? ಹಾಗಾದರೆ ಒಮ್ಮೆ ಸಕಲೇಶ್ವರದ ಮಂಜರಾಬಾದ್ ಕೋಟೆಗೆ ಭೇಟಿ ನೀಡಿ. ಈ ಕೋಟೆಗೆ ತೆರಳಲು 250 ಮೆಟ್ಟಿಲುಗಳನ್ನು ಏರಿ ಹೋಗಬೇಕು. ಈ ಕೋಟೆಯು ಅತ್ಯಂತ ಆಕರ್ಷಕವಾಗಿದ್ದು, ಅನೇಕ ಪ್ರವಾಸಿಗರು ವಾರಾಂತ್ಯದ ಸಮಯದಲ್ಲಿ ಭೇಟಿ ನೀಡುತ್ತಿರುತ್ತಾರೆ.

PC:Benson Martin

ಎಂಟು ಕೋನವನ್ನು ಹೊಂದಿರುವ ಕೋಟೆ

ಎಂಟು ಕೋನವನ್ನು ಹೊಂದಿರುವ ಕೋಟೆ

ಈ ಸುಂದರವಾದ ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 3240 ಅಡಿ ಎತ್ತರದಲ್ಲಿದ್ದು, ಸುಮಾರು 5 ಎಕರೆ ಪ್ರದೇಶದಲ್ಲಿ ಎಂಟು ಕೋನದ ನಕ್ಷಾತ್ರಾಕಾರದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಕೋಟೆಯನ್ನು ಇಸ್ಲಾಮಿಕ್ ವಾಸ್ತು ಶಿಲ್ಪ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.

PC:YOUTUBE

ಕೋಟೆಯಲ್ಲಿ ಏನಿದೆ?

ಕೋಟೆಯಲ್ಲಿ ಏನಿದೆ?

ಈ ಕೋಟೆಯನ್ನು 5 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಿದ್ದಾರೆ. ಹಾಗಾದರೆ ಈ ಕೋಟೆಯಲ್ಲಿ ಏನೆನಿದೆ? ಕೋಟೆಯ ಒಳಗಡೆ ನೀರಿನ ಕೊಳ, ಮದ್ದು ಗುಂಡು ಸಂಗ್ರಹಿಸುವ ಸ್ಥಳ, ಊಟದ ಗೃಹ, ಸ್ನಾನದ ಗೃಹ, ಶಯನ ಗೃಹ ಹಾಗು ಶೌಚಾಲಯಗಳು ಕೂಡ ಇವೆ. ಅಷ್ಟೇ ಅಲ್ಲ ಈ ಕೋಟೆಯಲ್ಲಿ ಒಂದು ಸುರಂಗ ಮಾರ್ಗಗಳು ಇವೆ ಎಂದು ಹೇಳಲಾಗುತ್ತಿದೆ. ಆ ಸುರಂಗಗಳು ನೇರವಾಗಿ ಶ್ರೀರಂಗಪಟ್ಟಣಕ್ಕೆ ಸಂಪರ್ಕ ಹೊಂದಿದೆ ಎಂದು ನಂಬಲಾಗಿದೆ.

PC:Chandu6119

ಸಕಲೇಶ್ವರ ದೇವಾಲಯ

ಸಕಲೇಶ್ವರ ದೇವಾಲಯ

ಈ ಕೋಟೆಯ ಸಮೀಪದಲ್ಲಿ ಒಂದು ಪವಿತ್ರವಾದ ದೇವಾಲಯವಿದೆ. ಆ ದೇವಾಲಯವೇ ಸಕಲೇಶ್ವರ ದೇವಾಲಯ. ಇದೊಂದು ಪುರಾತನವಾದ ಶಿವಾಲಯವಾಗಿದ್ದು, ಹೊಯ್ಸಳ ವಂಶಸ್ಥರು ಹೊಯ್ಸಳ ವಾಸ್ತುಶೈಲಿಯಲ್ಲಿ ನಿರ್ಮಣ ಮಾಡಿದ್ದಾರೆ ಎಂದು ನಂಬಲಾಗಿದೆ. ಸಕಲೇಶ್ವರಪುರದಲ್ಲಿ ಈ ಸುಂದರವಾದ ವಾಸ್ತುಶಿಲ್ಪವು ಪ್ರಮುಖ ಆಕರ್ಷಣೆಯಾಗಿದೆ.


PC:Rahul Nair

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X