Search
  • Follow NativePlanet
Share
» »ಅದಕ್ಕೆ ಅಮಿತಾ ಷಾ ಈ ಕ್ಷೇತ್ರಕ್ಕೆ ತೆರಳಿದರೇ?

ಅದಕ್ಕೆ ಅಮಿತಾ ಷಾ ಈ ಕ್ಷೇತ್ರಕ್ಕೆ ತೆರಳಿದರೇ?

ಅಪಜಯಗಳು ಎದುರಾಗುತ್ತಿರುವ ಸಮಯದಲ್ಲಿ ದೋಷ ನಿವಾರಣೆ ಪೂಜೆಗಳು ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬುದು ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ಬರುತ್ತಿರುವ ಆಚಾರ. ರಾಜಕೀಯವಾಗಿ ಕೆಲವು ಎದುರೇಟು ತಿಂದ ಅಮಿತಾ ಷಾ ಅವುಗಳಿಂದ ಉಪಶಮನ ಹೊಂದಲು ಕ

By Sowmyabhai

ಅಪಜಯಗಳು ಎದುರಾಗುತ್ತಿರುವ ಸಮಯದಲ್ಲಿ ದೋಷ ನಿವಾರಣೆ ಪೂಜೆಗಳು ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬುದು ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ಬರುತ್ತಿರುವ ಆಚಾರ. ರಾಜಕೀಯವಾಗಿ ಕೆಲವು ಎದುರೇಟು ತಿಂದ ಅಮಿತಾ ಷಾ ಅವುಗಳಿಂದ ಉಪಶಮನ ಹೊಂದಲು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ದರ್ಶಿಸಿದ ಹಾಗೆ ಸಮಾಚರವು ಪ್ರಚಾರದಲ್ಲಿದೆ. ಇಲ್ಲಿ ಆಶ್ಲೇಷ ಬಲಿ ಪೂಜೆ ಅಥವಾ ಕಾಳಸರ್ಪ ದೋಷ ನಿವಾರಣೆ ಪೂಜೆಗಳು ಮಾಡುವುದರಿಂದ ಶುಭವಾಗುತ್ತದೆ ಎಂದು ನಂಬಲಾಗಿದೆ.

ಈ 2 ಕೆಲಸ ಮಾಡದೇ ಇದ್ದರು ಕೂಡ ಕನಿಷ್ಟ ಸ್ವಾಮಿಯನ್ನು ದರ್ಶಿಸಿಕೊಂಡು ಪೂಜೆಗಳನ್ನು ಮಾಡಿದರೆ ಸಕಲ ದೋಷಗಳು ತೊಲಗಿ ಹೋಗುತ್ತದೆ ಎಂದು ಹಿಂದೂ ಪುರಾಣಗಳು ಹೇಳುತ್ತವೆ. ಬಿಜೆಬಿಯ ಮೇಲೆ ದೇಶದಲ್ಲಿ ಕೆಲವು ವ್ಯತಿರೇಕ ಹೊಂದುತ್ತಿದೆ. ತ್ವರಿತವಾಗಿ ಕರ್ನಾಟಕದಲ್ಲಿ ಚುಣಾವಣೆಗಳು ಬರುತ್ತಿವೆ. ಇದರಿಂದಾಗಿ ಎಲ್ಲಾ ದೋಷಗಳು ಹೋಗುವುದಕ್ಕೆ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯನ್ನು ದರ್ಶಿಸಿಕೊಂಡು ಪೂಜೆಗಳು ಮಾಡಿದರು ಎಂದು ಹೇಳುತ್ತಾರೆ.

1.ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

1.ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ

Image source

ನಮ್ಮ ದೇಶದಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅತ್ಯಂತ ಪುರಾತನವಾದ ಕ್ಷೇತ್ರವೇ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ. ಕರ್ನಾಟಕ ರಾಜ್ಯದಲ್ಲಿನ ಮಂಗಳೂರು ಜಿಲ್ಲೆಯಲ್ಲಿನ ಈ ಕ್ಷೇತ್ರವು ಬೆಂಗಳೂರಿನಿಂದ ಸುಮಾರು 400 ಕಿ.ಮೀ ದೂರದಲ್ಲಿದೆ. ಪೂರ್ವದಲ್ಲಿ ಈ ಕ್ಷೇತ್ರವನ್ನು ಕುಕ್ಕೆ ಎಂದು ಕರೆಯುತ್ತಿದ್ದರು. ಕುಕ್ಕೆ ಎಂದರೆ ಗುಹೆ ಎಂಬರ್ಥವಾಗಿದೆ. ಈ ಕ್ಷೇತ್ರ ಕುಕ್ಕೆ ಲಿಂಗವಾಗಿ, ಕುಕ್ಕೆ ಪುರಕ್ಕೆ ತದನಂತರ ಕ್ಕುಕ್ಕೆ ಸುಬ್ರಹ್ಮಣ್ಯ ಎಂದು ಹೆಸರು ರೂಪಾಂತರವಾಯಿತು.

2.ಕುಮಾರ ಸ್ವಾಮಿಯ ವಿವಾಹ

2.ಕುಮಾರ ಸ್ವಾಮಿಯ ವಿವಾಹ

Image source

ಸ್ಕಂಧಪುರಾಣನುಸಾರ ಷಣ್ಮುಖನು ತಾರಕ ಮತ್ತು ಶೂರಪದ್ಮಸುರ ಎಂಬ ರಾಕ್ಷಸರನ್ನು ಸಂಹಾರಿಸಿ ಕುಮಾರ ಪರ್ವತವನ್ನು ಸೇರಿಕೊಳ್ಳುತ್ತಾನೆ. ಇಂದ್ರನು ಕುಮಾರಸ್ವಾಮಿಗೆ ಇಲ್ಲಿ ವಿಜೃಂಬಣೆಯಿಂದ ಸನ್ಮಾನಿಸುವುದೇ ಅಲ್ಲದೇ ತನ್ನ ಕುಮಾರಿಯಾದ ದೇವಸೇನೆಯನ್ನು ವಿವಾಹ ಮಾಡಿಕೊಡು ಎಂದು ಕೋರಿಕೊಳ್ಳುತ್ತಾನೆ. ಇದಕ್ಕೆ ಷಣ್ಮುಖನು ಸಂತೋಷವಾಗಿ ಅಂಗೀಕರಿಸುತ್ತಾನೆ.

3.ಕುಮಾರಧಾರ ನದಿ

3.ಕುಮಾರಧಾರ ನದಿ

Image source

ಇನ್ನು ಕುಮಾರಸ್ವಾಮಿ ವಿವಾಹವು ಇದೇ ಪರ್ವತದ ಮೇಲೆ ಮೃಗಶಿರ ಮಾಸ ಶುದ್ಧ ಷಷ್ಟಿಯಂದು ನಡೆಯಿತು. ಆ ವಿವಾಹದ ಸಮಯದಲ್ಲಿ ಷಣ್ಮುಖನು ದಂಪತಿಗಳನ್ನು ತ್ರಿಮೂರ್ತಿಗಳ ಜೊತೆ ವಿವಿಧ ದೇವಗಣಗಳು ದೇಶದ ಮೂಲೆ-ಮೂಲೆಗಳಿಂದ ಕರೆದುಕೊಂಡು ಬಂದು ಪುಣ್ಯನದಿಯಾದ ಜಲದಿಂದ ಸ್ನಾನ ಮಾಡುತ್ತಾರೆ. ಆ ನದಿ ಜಲವೇ ಪ್ರಸ್ತುತ ದೇವಾಲಯ ಸಮೀಪದಲ್ಲಿರುವ ಕುಮಾರಧಾರ ನದಿ ಎಂದು ಹೇಳುತ್ತಿರುತ್ತಾರೆ.

4.ರೋಗಗಳು ನಯವಾಗುತ್ತದೆ

4.ರೋಗಗಳು ನಯವಾಗುತ್ತದೆ

Image source

ಇನ್ನು ಮತ್ತೊಂದು ಕಥೆಯ ಪ್ರಕಾರ ತಾರಕಾಸುರ ವಧೆಯ ನಂತರ ಕುಮಾರಸ್ವಾಮಿ ತನ್ನ ಶಕ್ತಿ ಆಯುಧವನ್ನು ಇಲ್ಲಿ (ಈ ಕುಮಾರಧಾರೆಯಲ್ಲಿ) ತೊಳೆದಿದ್ದರಿಂದ ಈ ನೀರಿಗೆ ವಿಶೇಷವಾದ ಮಹಿಮೆಗಳು ಬಂದವು ಎಂದು ಹೇಳುತ್ತಾರೆ. ಹಾಗಾಗಿಯೇ ಚರ್ಮ ರೋಗಗಳಿಂದ ಬಾಧೆಪಡುತ್ತಿರುವವರು ಈ ನದಿಯಲ್ಲಿ ಸ್ನಾನ ಮಾಡಿದರೆ ಅವರ ರೋಗಗಳು ನಯವಾಗುತ್ತದೆ ಎಂದು ಪ್ರತೀತಿ.

5.ಸರ್ಪ ರಾಜನಾದ ವಾಸುಕಿ

5.ಸರ್ಪ ರಾಜನಾದ ವಾಸುಕಿ

Image source

ಗರುಡ ದೇವನ ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸರ್ಪ ರಾಜನಾದ ವಾಸುಕಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿನ ಬಿಲದ್ವಾರ ಗುಹೆಯಲ್ಲಿ ಶಿವನಿಗಾಗಿ ತಪಸ್ಸು ಮಾಡುತ್ತಿರುತ್ತಾನೆ. ವಾಸುಕಿಯ ತಪಸ್ಸಿಗೆ ಮೆಚ್ಚಿದ ಶಿವನು, ಷಣ್ಮುಖನಿಗೆ ಯಾವಾಗಲೂ ತನ್ನ ಪ್ರಿಯ ಭಕ್ತನಾದ ವಾಸುಕಿಗೆ ಬೆಂಬಲವಾಗಿ ಇರು ಎಂದು ಹೇಳುತ್ತಾನೆ. ಹಾಗಾಗಿಯೇ ಷಣ್ಮುಖನು ಇಲ್ಲಿ ನೆಲೆಸಿದ್ದಾನೆ ಎಂದು ಪ್ರತೀತಿ.

6.ಆದಿಶೇಷನು

6.ಆದಿಶೇಷನು

Image source

ಸಾಧಾರಣವಾಗಿ ಗರ್ಭಗುಡಿಗೆ ಮುಂದೆ ಭಾಗದಿಂದ ಭಕ್ತರು ತೆರಳಿ ದೇವರಿಗೆ ದರ್ಶನವನ್ನು ಮಾಡಿಕೊಳ್ಳುತ್ತಾರೆ. ಆದರೆ ಇಲ್ಲಿ ದೇವಸ್ಥಾನದ ಹಿಂದೆಯ ಬಾಗಿಲ ಮೂಖಾಂತರ ದೇವಾಲಯದ ಪ್ರಾಂಗಣವನ್ನು ಸೇರಿಕೊಂಡು ಮೂಲವಿರಾಟದ ಸುತ್ತ ಪ್ರದಕ್ಷಿಣೆಯನ್ನು ಮಾಡುತ್ತಾರೆ. ಇನ್ನು ಗರ್ಭಗುಡಿಗೆ ಸರಿಯಾಗಿ ಮಧ್ಯದಲ್ಲಿ ಪೀಠವಿದೆ, ಈ ಪೀಠದ ಮೇಲಿನ ಭಾಗದಲ್ಲಿ ಷಣ್ಮುಗನು ಮಯೂರ ವಾಹನದ ಮೇಲೆ ದರ್ಶನವನ್ನು ನೀಡುತ್ತಾನೆ. ಅದರ ಕೆಳಗೆ ಸರ್ಪರಾಜ ವಾಸುಕಿ ದರ್ಶನ ನೀಡುತ್ತಾನೆ. ಸ್ವಾಮಿಯ ಮೇಲೆ ಆದಿಶೇಷನು ಕೂಡ ಇರುತ್ತಾನೆ.

7.ಗರುಡ ಸ್ತಂಭವನ್ನು ಪ್ರತಿಷ್ಟಾಪಿಸಿದ್ದಾರೆ

7.ಗರುಡ ಸ್ತಂಭವನ್ನು ಪ್ರತಿಷ್ಟಾಪಿಸಿದ್ದಾರೆ

Image source

ಮೂಲವಿರಾಟನಿಗೆ ಪ್ರಧಾನ ದ್ವಾರಕ್ಕೆ ಮಧ್ಯದಲ್ಲಿ ಬೆಳ್ಳಿಯ ಶೀಟ್ ಹಾಕಿಸಿದ ಗರುಡಸ್ತಂಭವಿರುತ್ತದೆ. ಈ ಗರುಡ ಸ್ತಂಭದಲ್ಲಿ ವಾಸುಕಿ ಎಂಬ ಮಹಾಸರ್ಪ ಇರುತ್ತವೆ. ಈ ಸರ್ಪವು ಬಿಡುವ ವಿಷ ವಾಯುವಿನಿಂದಾಗಿ ಕಾಪಾಡುವ ಸಲುವಾಗಿ ಗರುಡ ಸ್ತಂಭವನ್ನು ಪ್ರತಿಷ್ಟಾಪಿಸಿದ್ದಾರೆ ಎಂದು ಸ್ಥಳ ಪುರಾಣವು ತಿಳಿಸುತ್ತದೆ.

8.ಹಾಗಾಗಿಯೇ ಆ ಪೂಜೆಗಳು

8.ಹಾಗಾಗಿಯೇ ಆ ಪೂಜೆಗಳು

Image source

ಈ ದೇವಾಲಯದಲ್ಲಿ ಅನೇಕ ದೋಷಗಳು ತೊಲಗಿ ಹೋಗಲು ಆಶ್ಲೇಷ ಬಲಿ ಪೂಜೆಗಳು, ಕಾಳಸರ್ಪ ದೋಷ ನಿವಾರಣ ಪೂಜೆಗಳನ್ನು ಪ್ರತ್ಯೇಕವಾಗಿ ನಿರ್ವಹಿಸುತ್ತಾರೆ. ಈ ಪೂಜೆಗಳನ್ನು ಮಾಡಿಸಿಕೊಳ್ಳುವ ಸಲುವಾಗಿ ದೇಶದಲ್ಲಿನ ಅನೇಕ ಮಂದಿ ಪ್ರದೇಶಗಳಿಂದ ಇಲ್ಲಿಗೆ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.

9.ಎಲ್ಲಿದೆ?

9.ಎಲ್ಲಿದೆ?

Image source

ಕರ್ನಾಟಕ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪಶ್ಚಿಮ ದಿಕ್ಕಿಗೆ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯವಿದೆ. ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಸೇರಿಕೊಳ್ಳಬೇಕು ಎಂದರೆ ಸುಮಾರು 105 ಕಿ.ಮೀ ದೂರ ಪ್ರಯಾಣ ಮಾಡಬೇಕಾಗುತ್ತದೆ. ಇನ್ನು ಬೆಂಗಳೂರಿನಿಂದ ಈ ಕ್ಷೇತ್ರಕ್ಕೆ 271 ಕಿ.ಮೀ ದೂರ, ಅಂದರೆ ಸುಮಾರು 6 ಗಂಟೆಗಳ ಸತತ ಪ್ರಯಾಣ ಮಾಡಬೇಕಾಗುತ್ತದೆ.

10.ನೋಡಬೇಕಾಗಿರುವ ಪ್ರದೇಶಗಳು

10.ನೋಡಬೇಕಾಗಿರುವ ಪ್ರದೇಶಗಳು

Image source

ಈ ಕ್ಷೇತ್ರಕ್ಕೆ ಸಮೀಪದಲ್ಲಿಯೇ ಅನೇಕ ಪ್ರವಾಸಿ ತಾಣಗಳು ಇವೆ. ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಡಬೇಕಾಗಿರುವ ಅನೇಕ ಪ್ರವಾಸಿ ಪ್ರದೇಶಗಳು ಇವೆ. ಅವುಗಳಲ್ಲಿ ಓಂ ಬೀಚ್, ಗೋಕರ್ಣ ದೇವಾಲಯ, ಮಂಗಳಾದೇವಿ ದೇವಾಲಯವ ಇನ್ನು ಅನೇಕ ಪ್ರವಾಸಿ ತಾಣಗಳನ್ನು ಇಲ್ಲಿ ಕಾಣಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X