Search
  • Follow NativePlanet
Share
» »22 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಅದ್ಭುತವಾದ ಕೋಟೆ ಎಲ್ಲಿದೆ ಗೊತ್ತ?

22 ಎಕರೆಗಳಲ್ಲಿ ನಿರ್ಮಾಣ ಮಾಡಿರುವ ಅದ್ಭುತವಾದ ಕೋಟೆ ಎಲ್ಲಿದೆ ಗೊತ್ತ?

ಆ ಕಾಲದ ರಾಜ ವೈಭವಕ್ಕೆ ಹಾಗು ಯುದ್ಧ ತಂತ್ರಕ್ಕೆ ಪ್ರತ್ಯಕ್ಷವಾದ ನಿದರ್ಶನಗಳಲ್ಲಿ ಕೋಟೆಗಳು ಪ್ರಮುಖವಾದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ. ಅಂತಹ ಕೋಟೆಗಳಲ್ಲಿ ಪ್ರಪಂಚ ಪ್ರಸಿದ್ಧಿ ಹೊಂದಿರುವ ಕೋಟೆಗಳು ನಮ್ಮ ಭಾರತ ದೇಶದಲ್ಲಿ ಹಲವಾರು ಇವೆ.

By Sowmyabhai

ಆ ಕಾಲದ ರಾಜ ವೈಭವಕ್ಕೆ ಹಾಗು ಯುದ್ಧ ತಂತ್ರಕ್ಕೆ ಪ್ರತ್ಯಕ್ಷವಾದ ನಿದರ್ಶನಗಳಲ್ಲಿ ಕೋಟೆಗಳು ಪ್ರಮುಖವಾದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ. ಅಂತಹ ಕೋಟೆಗಳಲ್ಲಿ ಪ್ರಪಂಚ ಪ್ರಸಿದ್ಧಿ ಹೊಂದಿರುವ ಕೋಟೆಗಳು ನಮ್ಮ ಭಾರತ ದೇಶದಲ್ಲಿ ಹಲವಾರು ಇವೆ. ಅವುಗಳಲ್ಲಿ ಮುಂಬೈನಿಂದ ಕೇವಲ 158 ಕಿಲೋಮೀಟರ್ ದೂರದಲ್ಲಿ ಅರೇಬಿಯಾ ಸಮುದ್ರ ತೀರದಲ್ಲಿರುವ ಕೋಟೆ ಅತ್ಯಂತ ವಿಶಿಷ್ಟತೆಯನ್ನು ಹೊಂದಿದೆ. ಶತಮಾನಗಳಿಂದ ಸಮುದ್ರದ ಅಲೆಗಳನ್ನು ತಡೆದುಕೊಳ್ಳುತ್ತಾ ಭದ್ರವಾಗಿರುವ ಕೋಟೆ ಎಂದರೆ ಅದು ಜಂಜಿರಾ ಕೋಟೆ. ಈ ಸುಂದರವಾದ ಕೋಟೆಗೆ ಕೇವಲ ದೇಶದಿಂದಲೇ ಅಲ್ಲದೇ ವಿದೇಶದಿಂದಲೂ ಕೂಡ ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇದು ಸಂಪೂರ್ಣವಾಗಿ ಅರಬ್ಬೀ ಸಮುದ್ರದಿಂದ ಅವೃತ್ತವಾಗಿರುವ ಭದ್ರ ಕೋಟೆ. ಇದೊಂದು ರೋಮಾಂಚನಕಾರಿ ಅನುಭೂತಿಯನ್ನು ಉಂಟು ಮಾಡುವ ಪ್ರವಾಸಿ ತಾಣ ಎಂದರೆ ತಪ್ಪಾಗಲಾರದು.

1.ಅರಬ್ಬೀ ಸಮುದ್ರ

1.ಅರಬ್ಬೀ ಸಮುದ್ರ

PC:YOUTUBE

ಅರಬ್ಬೀ ಸಮುದ್ರದ ತೀರದಲ್ಲಿರುವ ಚಾರಿತ್ರಾತ್ಮಕ ಪ್ರದೇಶಗಳಲ್ಲಿ ಈ ಜಂಜೀರಾ ಕೋಟೆಯು ಒಂದು. ಶತಮಾನಗಳಿಂದಲೂ ಸಮುದ್ರದ ಅಲೆಗಳಿಗೆ ಮೈ ಒಡ್ಡಿ ಭದ್ರವಾಗಿ ನೆಲೆ ನಿಂತಿರುವ ಕೋಟೆ ಇದಾಗಿದೆ. ಈ ಕೋಟೆಯು ಸಮುದ್ರ ತೀರದ ಅದ್ಭುತವಾದ ನೋಟವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಒಂದು ಕಾಲದಲ್ಲಿ ರಾಜರ ಕೋಟೆಯಾಗಿದ್ದು ಇಂದು ಪ್ರಮುಖ ಪ್ರವಾಸಿ ಕೇಂದ್ರವಾಗಿ ಮಾರ್ಪಾಟಾಗಿದೆ. ಆ ಕಾಲದ ಯುದ್ಧ ತಂತ್ರ ನೈಪುಣ್ಯಕ್ಕೆ ಪ್ರತ್ಯಕ್ಷವಾದ ನಿದರ್ಶನವೇ ಈ ಕೋಟೆ.

2.ಕೋಟೆ ಎಲ್ಲಿದೆ?

2.ಕೋಟೆ ಎಲ್ಲಿದೆ?

PC:YOUTUBE

ಈ ಮುರುಡ್ ಜಂಜೀರಾ ಮಹಾರಾಷ್ಟ್ರ ರಾಜ್ಯದ ರಾಯಗಡ ಜಿಲ್ಲೆಯ ಸಮುದ್ರ ತೀರದ ಒಂದು ಹಳ್ಳಿಯಲ್ಲಿ ಸಮುದ್ರ ಮಧ್ಯೆಯಲ್ಲಿ ದ್ವೀಪದಂತಹ ಐತಿಹಾಸಿಕ ಕೋಟೆ ಇದೆ. ಈ ಕೋಟೆ ದಕ್ಷಿಣ ಮುಂಬೈನಿಂದ ಸುಮಾರು 165 ಕಿ,ಮೀ ದೂರವಿರುವ ಮುರಾಡ್ ನಗರದ ಬಳಿ ಇರುವ ಅರಬ್ಬೀ ಸಮುದ್ರದ ಎತ್ತರ ಪ್ರದೇಶದಲ್ಲಿ ಕೋಟೆ ನಿರ್ಮಿಸಲಾಗಿದೆ.

3.ಶತ್ರುಗಳ ದಾಳಿ

3.ಶತ್ರುಗಳ ದಾಳಿ

PC:YOUTUBE

ಜಂಜೀರಾ ಕೋಟೆಯನ್ನು ಸಮುದ್ರದಿಂದ ಅವೃತ್ತವಾಗಿದ್ದು, ಶತ್ರುಗಳ ದಾಳಿ ಕೇವಲ ಜಲ ಮಾರ್ಗದ ಮೂಲಕ ಅಥವಾ ವೈಮಾನಿಕವಾಗಿ ಮಾಡಬಹುದಾಗಿತ್ತು. ಈ ಕೋಟೆಗೆ ದಾಳಿ ಮಾಡಬೇಕಾದರೆ ಅದು ಜಲ ಮಾರ್ಗದ ಮೂಲಕ ಮಾತ್ರ ಸಾಧ್ಯವಾಗುತ್ತಿತ್ತು. ಈ ಕೋಟೆಯನ್ನು ಹತ್ತಲು ಸಾಧ್ಯವಾಗದಷ್ಟು ಎತ್ತರವಾಗಿ ಕೋಟೆಯನ್ನು ಕಟ್ಟಲಾಗಿದೆ. ಸುಮಾರು 12 ಮೀಟರ್‍ನಷ್ಟು ಎತ್ತರವಾಗಿ ಈ ಕೋಟೆಯನ್ನು ಕಟ್ಟಲಾಗಿದೆ. ಇದೊಂದು ಅದ್ಭುತವಾದ ವಾಸ್ತುಶಿಲ್ಪವನ್ನು ಹೊಂದಿರುವ ಕೋಟೆ. ಜಂಜೀರಾ ಕೋಟೆಯ ಮುಖ್ಯ ದ್ವಾರದಲ್ಲಿ ಸಿಂಹವೊಂದು 5 ಆನೆಗಳ ಮೇಲೆ ಎರಗಿರುವಂತೆ ಚಿತ್ರಿಸಲಾಗಿದೆ. ಈ ಕೋಟೆಯಲ್ಲಿ ಗುಪ್ತ ಸುರಂಗ ಮಾರ್ಗವಿದ್ದು, ನೀರಿನ ಕೆಳಗೆ ಸುರಂಗ ಸಾಗುವುದಾಗಿದೆ.

4.22 ಎಕರೆಗಳು

4.22 ಎಕರೆಗಳು

PC:YOUTUBE

ಅವುಗಳಲ್ಲಿ ಹಲವಾರು ನಾವು ಇಂದಿಗೂ ಕಾಣಬಹುದು. ಈ ಅದ್ಭುತವಾದ ಕೋಟೆಯನ್ನು 22 ಎಕರೆಗಳಲ್ಲಿ ನಿರ್ಮಿಸಾಲಾಗಿದೆ. ಕೋಟೆಯ ಮೇಲೆ ಒಟ್ಟು 557 ಫಿರಂಗಿಗಳು ಕೂಡ ಇದ್ದವು. ಪ್ರಸ್ತುತ ಈ ಫಿರಂಗಿಗಳ ಸಂಖ್ಯೆಯನ್ನು ಬೆರಳುಗಳಲ್ಲಿ ಲೆಕ್ಕ ಹಾಕಬಹುದು. ಅವುಗಳಲ್ಲಿ ಕಲಾಲ್ ಭಾಂಗ್ ಡಿ ಫಿರಂಗಿ ಪ್ರತ್ಯೇಕವಾದುದು. ನಮ್ಮ ಭಾರತ ದೇಶದಲ್ಲಿಯೇ ಎರಡು ಅತಿ ದೊಡ್ಡ ಫಿರಂಗಿಯಾಗಿ ಹೆಸರುವಾಸಿ ಪಡೆದಿದೆ. 18 ಅಡಿ ಉದ್ದ, 20 ಟನ್ನುಗಳಷ್ಟು ಭಾರವಿದೆ. ಇನ್ನು ಈ ಕೋಟೆಯಲ್ಲಿ ಸುರಲ್ ಖಾನ್ ಫ್ಯಾಲೆಸ್, ಕುಡಿತುವ ನೀರಿನ ಬಾವಿ, ಸಸ್ ಮಹಲ್, ಮಸೀದಿ ಮೊದಲಾದವು.

5.ಭದ್ರವಾದ ಕೋಟೆ

5.ಭದ್ರವಾದ ಕೋಟೆ

PC:YOUTUBE

ಕೋಟೆಯ ಗೋಡೆಯ ನಿರ್ಮಾಣಕ್ಕೆ ಕಲ್ಲಿನ ಮಧ್ಯೆ ಪಾದರಸ, ಸಿಸ, ಬೆಲ್ಲದ ಮಿಶ್ರಣವನ್ನು ಉಪಯೋಗಿಸಿದ್ದಾರೆ. ಅದ್ದರಿಂದಲೇ ಶತಮಾನಗಳಿಂದಲೂ ಈ ಕೋಟೆಯು ಭದ್ರವಾಗಿದೆ. ಸೂರ್ಯಾಸ್ತದ ಸಮಯದಲ್ಲಿ ಈ ಕೋಟೆಯು ಪ್ರವಾಸಿಗರಿಗೆ ಮರೆಯಲಾಗದ ಅನುಭೂತಿಯನ್ನು ಉಂಟು ಮಾಡುವುದರಲ್ಲಿ ಅನುಮಾನವೇ ಇಲ್ಲ. ಈ ಜಂಜೀರಾ ಕೋಟೆಯನ್ನು ತಲುಪಲು ಅತ್ಯಂತ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಮುಂಬೈನ ಛತ್ರಪತಿ ಶಿವಾಜಿ ಇಂಟರ್ ನ್ಯಾಷನಲ್ ಏರ್‍ಪೋರ್ಟ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X