Search
  • Follow NativePlanet
Share
» »ಪೂರಿ ಜಗನ್ನಾಥನ ದೇವಾಲಯದಲ್ಲಿ 7 ಅದ್ಭುತಗಳು....

ಪೂರಿ ಜಗನ್ನಾಥನ ದೇವಾಲಯದಲ್ಲಿ 7 ಅದ್ಭುತಗಳು....

ಜಗನ್ನಾಥ ಸ್ವಾಮಿ ದೇವಾಲಯವು ಪವಿತ್ರವಾದ ಹಿಂದೂ ದೇವಾಲಯವಾಗಿದೆ. ಇದು ಒಡಿಶಾ ರಾಜ್ಯದ ಪುರಿಯಲ್ಲಿದೆ. ಇದೊಂದು ಪ್ರಾಚೀನವಾದ ದೇವಾಲಯವಾಗಿದ್ದು. 12 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ. ಇದೊಂದು ಪ್ರಮುಖವಾದ ತೀರ್ಥಯಾತ್ರಾ ಸ್ಥಳವಾಗಿದೆ. ಈ ದೇವಾಲಯದಲ್ಲಿ ಅನೇಕ ಹಿಂದೂ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಈ ಸುಂದರವಾದ ದೇವಾಲಯದಲ್ಲಿ ವಿಶೇಷವಾಗಿ ಕೃಷ್ಣ ಮತ್ತು ವಿಷ್ಣು ದೇವರನ್ನು ಆರಾಧಿಸಲಾಗುತ್ತದೆ. ಒಬ್ಬ ಹಿಂದುವು ತನ್ನ ಜೀವಿತಾವಧಿಯಲ್ಲಿ ಭೇಟಿ ನೀಡಲೇಬೇಕಾದ ಪ್ರಮುಖವಾದ ತೀರ್ಥಯಾತ್ರೆಗಳಲ್ಲಿ ಇದು ಕೂಡ ಒಂದಾಗಿದೆ. ಪ್ರತಿ 12 ಅಥವಾ 19 ವರ್ಷಕ್ಕೆ ಒಮ್ಮೆ ಈ ಮರದ ವಿಗ್ರಹಗಳನ್ನು ಶಾಸ್ತ್ರೋಕ್ತವಾಗಿ ಬದಲಿಸಲಾಗುತ್ತದೆ.

ಈ ದೇವಾಲಯವು ರಥೋತ್ಸವಕ್ಕೆ ಹೆಸರುವಾಸಿಯಾಗಿದೆ. ಈ ದೇವಾಲಯದ ಬಗ್ಗೆ ಅನೇಕ ಅದ್ಭುತಗಳು ಇವೆ. ಅವುಗಳು ಯಾವುವು? ಎಂಬುದನ್ನು ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯೋಣ.

1.ಜಗನ್ನಾಥ ಸ್ವಾಮಿ ಮೂರ್ತಿ

1.ಜಗನ್ನಾಥ ಸ್ವಾಮಿ ಮೂರ್ತಿ

PC:Krupasindhu Muduli

ಪ್ರತಿಯೊಂದು ದೇವಾಲಯದ ದೇವತೆಗಳ ವಿಗ್ರಹವನ್ನು ಕಲ್ಲು ಅಥವಾ ಲೋಹಗಳಿಂದ ಮಾಡಲಾಗುತ್ತದೆ. ಆದರೆ ಈ ದೇವಾಲಯದಲ್ಲಿ ಮಾತ್ರ ಜಗನ್ನಾಥ ಸ್ವಾಮಿಯ ವಿಗ್ರಹವನ್ನು ಪ್ರತಿ 12 ವರ್ಷಕ್ಕೊಮ್ಮೆ ಅಥವಾ 19 ವರ್ಷಕ್ಕೆ ಒಮ್ಮೆ ಮರದ ವಿಗ್ರಹವನ್ನು ಶಾಸ್ರ್ತೋಕ್ತವಾಗಿ ಬದಲಿಸಲಾಗುತ್ತದೆ. ಮರದಿಂದ ತಯಾರಿಸಿದ ದೇವತಾ ಮೂರ್ತಿಯನ್ನು ಇಲ್ಲಿ ಶ್ರದ್ಧೆ-ಭಕ್ತಿಯಿಂದ ಆರಾಧಿಸಲಾಗುತ್ತದೆ. ಆ ವಿಗ್ರಹ ಒಂದು ರೋಚಕವಾದ ಪುರಾಣ ಕಥೆಯು ಕೂಡ ಇದೆ.

2.ದೇವಾಲಯದ ಮೇಲಿರುವ ಧ್ವಜ

2.ದೇವಾಲಯದ ಮೇಲಿರುವ ಧ್ವಜ

PC:Amartyabag

ಪುರಿ ಜಗನ್ನಾಥ ದೇವಾಲಯ ಗೋಪುರದ ಮೇಲೆ ಒಂದು ಧ್ವಜವಿದೆ. ಈ ಧ್ವಜವು ಯಾವಾಗಲೂ ದೇವಾಲಯದ ಹಿಂಭಾಗದಲ್ಲಿಯೇ ಹಾರಾಡುಡುವುದು ಇಲ್ಲಿನ ವಿಶೇಷವಾಗಿದೆ. ಈ ದೇಗುಲದ ಪೂಜಾರಿಗಳು ದಿನನಿತ್ಯ ಗೋಪುರದ ಮೇಲ್ಭಾಗದಲ್ಲಿರುವ ಧ್ವಜವನ್ನು ಬದಲಿಸುತ್ತಿರುತ್ತಾರೆ. ಆದರೂ ಕೂಡ ಈ ಧ್ವಜ ಎಂದಿಗೂ ತನ್ನ ದಿಕ್ಕನು ಬದಲಾಯಿಸಿಲ್ಲ.

3.ಗಾಳಿ ಬೀಸುವಿಕೆ

3.ಗಾಳಿ ಬೀಸುವಿಕೆ

PC:BOMBMAN

ಪ್ರಪಂಚದಲ್ಲಿ ಯಾವುದೇ ಸ್ಥಳದಲ್ಲಿಯೂ ಗಾಳಿಯು ಹಿಂಭಾಗದಿಂದ ಬೀಸುತ್ತದೆ. ಆದರೆ ಈ ಪೂರಿ ಪುಣ್ಯ ಸ್ಥಳದಲ್ಲಿ ಗಾಳಿಯು ಮುಂಭಾಗದಲ್ಲಿ ಬೀಸುತ್ತದೆ. ಆಶ್ಚರ್ಯವೆನೆಂದರೆ ಈ ಪುರಿ ಜಗನ್ನಾಥನಿರುವ ಈ ದೇವಾಲಯದ ಮೇಲೆ ಪಕ್ಷಿಯಾಗಲಿ, ವಿಮಾನವಾಗಲಿ ಹಾರಾಡುವುದಿಲ್ಲ. ಇದಕ್ಕೆ ಯಾವುದೇ ರೀತಿಯ ವೈಜ್ಞಾನಿಕವಾದ ಕಾರಣವನ್ನು ಇದುವರೆವಿಗೂ ಯಾರೂ ಕೂಡ ಹಿಡಿದಿಲ್ಲ ಎಂಬುದು ಮತ್ತೊಂದು ವಿಶೇಷ.

4.ಗೋಪುರದ ನೆರಳು

4.ಗೋಪುರದ ನೆರಳು

PC:RJ Rituraj

ಈ ದೇವಾಲಯವನ್ನು ನಿರ್ಮಿಸಿದ ಇಂಜಿನಿಯರ್‍ಗಳು ದೇವಾಲಯದ ಗೋಪುರದ ನೆರಳು ಎಂದಿಗೂ ಕಾಣಿಸುವುದಿಲ್ಲ ಇದು ಆಶ್ಚರ್ಯವಾದರೂ ಸತ್ಯ. ಇದೆಲ್ಲಾ ಆ ಸ್ವಾಮಿಯ ಮಹಿಮೆ ಎಂದೇ ಹೇಳಬಹುದು. ಅಷ್ಟೇ ಅಲ್ಲ, ಜಗನ್ನಾಥನ ದೇವಾಲಯದಲ್ಲಿ ಪ್ರಸಾದವನ್ನು 7 ಮಡಿಕೆಗಳಿಂದ ತಯಾರಿಸಲಾಗುತ್ತದೆ.

5.ಪ್ರಸಾದದ ರಹಸ್ಯ

5.ಪ್ರಸಾದದ ರಹಸ್ಯ

PC:Bpkp

ಈ ದೇವಾಲಯದಲ್ಲಿ ಲಕ್ಷಾಂತರ ಭಕ್ತರು ದಿನನಿತ್ಯ ಭೇಟಿ ಕೊಡುತ್ತಿರುತ್ತಾರೆ. ದೇವಾಲಯದ ಪ್ರಸಾದದ ಕೊರತೆ ಎದುರಾಗಿಲ್ಲ ಹಾಗು ವ್ಯರ್ಥವಾಗಿಲ್ಲ. ಸ್ವಾಧಿಷ್ಟವಾದ ಸ್ವಾಮಿಯ ಪ್ರಸಾದವನ್ನು 7 ಮಡಿಕೆಗಳಲ್ಲಿ ಕಟ್ಟಿಗೆಯನ್ನು ಬಳಸಿ ಓಲೆಯಲ್ಲಿ ಪ್ರಸಾದವನ್ನು ಮಾಡುತ್ತಾರೆ.

6.ಸಮುದ್ರ ರಹಸ್ಯ

6.ಸಮುದ್ರ ರಹಸ್ಯ

PC:Ben30ghosh

ಈ ದೇವಾಲಯದ ಸಮೀಪದಲ್ಲಿ ಒಂದು ಕಡಲ ತೀರವಿದೆ. ದೇವಾಲಯದ ಮುಖ್ಯವಾದ ದ್ವಾರಕ್ಕೆ ಬಂದಾಗ ಅಲ್ಲಿ ಸ್ಪಷ್ಟವಾಗಿ ನದಿಯ ಜುಳು ಜುಳು ಶಬ್ಧವನ್ನು ಕೇಳಿಸಿಕೊಳ್ಳಬಹುದು. ಇವೆಲ್ಲವೂ ಜಗನ್ನಾಥನ ಮಹಿಮೆಯಲ್ಲದೇ ಮತ್ತೇನು?. ವಿಚಿತ್ರ ಏನಪ್ಪ ಎಂದರೆ ದೇವಾಲಯದ ಒಳಭಾಗದಲ್ಲಿ ಸ್ವಲ್ಪ ದೂರ ನಡೆದು ಮತ್ತೆ ಮರಳಿ ದ್ವಾರದ ಹತ್ತಿರ ಬಂದು ಕಿವಿ ಇಟ್ಟು ಕೇಳಿಸಿಕೊಂಡರೆ ಸಮುದ್ರದ ಘೋಷ ಕೇಳಿಸುವುದಿಲ್ಲ.

7.ಸುದರ್ಶನ ಚಕ್ರ

7.ಸುದರ್ಶನ ಚಕ್ರ

PC:Abhishek Barua

ಜಗನ್ನಾಥ ದೇವಾಲಯದ ಗೋಪುರದ ಮೇಲೆ ಒಂದು ದಿವ್ಯವಾದ ಸುದರ್ಶನ ಚಕ್ರವಿದೆ. ಆ ಚಕ್ರವು ಸುಮಾರು 20 ಅಡಿಗಿಂತ ಎತ್ತರದಲ್ಲಿದೆ. ಇಂತಹ ಸುದರ್ಶನ ಚಕ್ರದ ಚಿಹ್ನೆಯನ್ನು ನಗರದ ಹಲವಾರು ಕಡೆಗಳಲ್ಲಿ ಕಾಣಬಹುದು. ಈ ಚಕ್ರವನ್ನು ಹೊಂದುವ ಉದ್ದೇಶವೆನೆಂದರೆ ದುಷ್ಟ ಶಕ್ತಿಗಳಿಂದ ಈ ಚಕ್ರವು ಕಾಪಾಡುತ್ತದೆ ಎಂದೇ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X