Search
  • Follow NativePlanet
Share
» » ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಶಿವಲಿಂಗ ಎಂದರೆ ಎಷ್ಟೋ ಶೈವ ಪುರಾಣಗಳು ಹಾಗು ಪಾಶ್ಚಿಮಾತ್ಯ ಸಿದ್ಧಾಂತಗಳ ಪ್ರಕಾರ ಈ ಭೂಮಿಯ ಮೇಲೆ ಮೊಟ್ಟ ಮೊದಲನೇ ಬಾರಿಗೆ ದೇವತೆಗಳು ಹಾಗು ಮಾನವರು ಪೂಜಿಸಿದ ಸ್ವಯಂ ಭೂ ಶಕ್ತಿ. ಕೇವಲ ಭಕ್ತರ ನಂಬಿಕೆಯನ್ನು ವಶ ಮಾಡಿಕೊಳ್ಳಬೇಕು ಎಂಬ ದುರಾಲೋಚನೆಯ

ಶಿವಲಿಂಗ ಎಂದರೆ ಎಷ್ಟೋ ಶೈವ ಪುರಾಣಗಳು ಹಾಗು ಪಾಶ್ಚಿಮಾತ್ಯ ಸಿದ್ಧಾಂತಗಳ ಪ್ರಕಾರ ಈ ಭೂಮಿಯ ಮೇಲೆ ಮೊಟ್ಟ ಮೊದಲನೇ ಬಾರಿಗೆ ದೇವತೆಗಳು ಹಾಗು ಮಾನವರು ಪೂಜಿಸಿದ ಸ್ವಯಂ ಭೂ ಶಕ್ತಿ. ಕೇವಲ ಭಕ್ತರ ನಂಬಿಕೆಯನ್ನು ವಶ ಮಾಡಿಕೊಳ್ಳಬೇಕು ಎಂಬ ದುರಾಲೋಚನೆಯಿಂದ ಬೀದಿಗೆ ಒಂದು ಶಿವಾಲಯವನ್ನು ಸ್ಥಾಪನೆ ಮಾಡುತ್ತಿರುವ ಇಂದಿನ ಕಲಿಯುಗದಲ್ಲಿ ಸಾಕ್ಷಾತ್ ಆ ಮಹಾಶಿವನೇ ಯುಗಾಂತ್ಯವಾಗುವ ಸೂಚನೆಯನ್ನು ನೀಡುವ ಪ್ರಸಿದ್ಧವಾದ ಹಾಗು ಗುಪ್ತವಾದ ಸ್ಥಳ ನಮ್ಮ ಭಾರತ ದೇಶದಲ್ಲಿದೆ.

ನಮ್ಮ ಭಾರತ ದೇಶದಲ್ಲಿ ಅನೇಕ ಪವಿತ್ರವಾದ ಶಿವಲಿಂಗಗಳಿವೆ. ಅವುಗಳಿಗೆ ಅವುಗಳದೇ ಆದ ವೈಶಿಷ್ಟತೆಗಳಿವೆ. ಅದ್ದರಿಂದಲೇ ಭಾರತ ದೇಶದಾದಂತ್ಯ ಶಿವ ನಾಮಸ್ಮರಣೆಯಿಂದ ಭಕ್ತರು ಸುಖ ಸಮೃದ್ಧಿಯಿಂದ ಜೀವನ ನಡೆಸುತ್ತಿದ್ದಾರೆ. ಅನೇಕ ವಿದ್ವಾಂಸರು, ತಿಳಿದವರು ಯಾಗಾಂತ್ಯವಾಗಲಿದೆ ಎಂದು ಭವಿಷ್ಯ ನುಡಿದವರು, ನುಡಿಯುತ್ತಿರುವವರು ಇದ್ದಾರೆ. ಆದರೆ ಖಚಿತವಾಗಿ ಹೇಳುವವರು ಯಾರು ಇಲ್ಲ. ಆದರೆ ಇಲ್ಲಿರುವ ಶಿವಲಿಂಗ ಮಾತ್ರ ಆ ಎಲ್ಲಾ ಪ್ರಶ್ನೆಗೆ ಉತ್ತರವನ್ನು ನೀಡುತ್ತಿದೆ. ಹಾಗಾದರೆ ಆ ದೇವಾಲಯ ಯಾವುದು ಎಂಬುದನ್ನು ಸಂಕ್ಷೀಪ್ತವಾಗಿ ನೇಟಿವ್ ಪ್ಲಾನೆಟ್‍ನ ಮೂಲಕ ತಿಳಿದುಕೊಳ್ಳಿ.

 ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಆದಿ ಅಂತ್ಯ ಎನ್ನುವುದು ಪ್ರತಿಯೊಂದು ಜೀವಿಗೂ ಇರುತ್ತದೆ. ಸೂಕ್ಷ್ಮ ಜೀವಿಯಿಂದ ಹಿಡಿದು ಸಮಸ್ತ ಸೃಷ್ಠಿಯು ಈ ನಿಯಮಕ್ಕೆ ಒಳಪಡುತ್ತದೆ. ಅಂತ ಸಮೀಪವಾಗುವ ಮುಂಚೆ ಈ ಸೃಷ್ಟಿಯು ನಮಗೆ ತಿಳಿಯುವ ಹಾಗೆ ಕೆಲವು ಸಂಕೇತಗಳನ್ನು ತೋರಿಸುತ್ತದೆ. ನಮ್ಮ ಹಿಂದೂ ಪುರಾಣಗಳ ಪ್ರಕಾರ ಭೂಮಿ ಎಲ್ಲಾ ಕಾಲಾಮಾನವನ್ನು 4 ಯುಗಗಳಾಗಿ ವಿಂಗಡಿಸಿದ್ದಾರೆ. ಅವುಗಳೇ ಕೃತ ಯುಗ, ತ್ರೇತ ಯುಗ, ದ್ವಾಪರ ಯುಗ ಹಾಗೂ ಕಲಿಯುಗ.

PC:rohit gowaikar

 ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಹರಿಶ್ಚಂದ್ರಶ್ವರ ದೇವಸ್ಥಾನದ ಬಲಕ್ಕೆ, ಕೇದಾರೇಶ್ವರದ ದೊಡ್ಡ ಗುಹೆ ಇದೆ. ಇದರಲ್ಲಿ ದೊಡ್ಡ ಶಿವಲಿಂಗವಿದೆ, ಅದು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿದೆ. ಶಿವಲಿಂಗವನ್ನು ತಲುಪಲು ಕಷ್ಟವೇನಲ್ಲ ಏಕೆಂದರೆ ನೀರಿನಿಂದ ತಣ್ಣಗಿರುತ್ತದೆ. ಗುಹೆಯಲ್ಲಿ ಕೆತ್ತಿದ ಶಿಲ್ಪಗಳಿವೆ. ಮಾನ್ಸೂನ್ ನಲ್ಲಿ ಈ ಗುಹೆಯನ್ನು ತಲುಪಲು ಸಾಧ್ಯವಿಲ್ಲ.

 ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಕೇದಾರನಾಥ ಶಿವಲಿಂಗ ನೆಲೆಸಿರುವ ಈ ದೇವಾಲಯದಲ್ಲಿ 4 ಸ್ತಂಭಗಳಿವೆ. ಒಂದೊಂದು ಸ್ತಂಭ ಒಂದೊಂದು ಯುಗವನ್ನು ಬಿಂಬಿಸುತ್ತದೆ. ಅವುಗಳೆಂದರೆ ಕೃತ ಯುಗ, ತ್ರೇತ ಯುಗ, ದ್ವಾಪರ ಯುಗ ಹಾಗೂ ಕಲಿಯುಗಕ್ಕೆ ಸರಿಸಮವಾಗಿದೆ.ನಾಲ್ಕು ಸ್ತಂಭಗಳಲ್ಲಿ ಕೇವಲ ಒಂದೇ ಸ್ತಂಭವಿದೆ. ಈ ಸ್ತಂಭವೇ ಕಲಿಯುಗದ ಅಂತ್ಯವನ್ನು ತಿಳಿಸುತ್ತದೆ. ಕಾಲಾಕ್ರಮೇಣ ಯುಗಗಳಲ್ಲಿ ಧರ್ಮವು ನಾಶವಾದ ಕಾರಣ ಮೂರು ಸ್ತಂಭಗಳು ಉರುಳಿವೆ. ಇರುವುದು ಒಂದೇ ಸ್ತಂಭ.ಉಳಿದಿರುವ ಕೊನೆಯ ಸ್ತಂಭ ಉರುಳಿದರೆ ಪ್ರಪಂಚವೇ ಉರುಳಿದಂತೆ. ಅಂದರೆ ಸೃಷ್ಟಿ ನಿಯಮದ ಪ್ರಕಾರ ಕಲಿಯುಗ ಅಂತ್ಯವಾದಂತೆ. ಶಿವನ ಲಿಂಗದ ಮೇಲಿರುವ ಸ್ತಂಭ ಉರುಳಿದರೆ ಗುಹೆಯೇ ಲಿಂಗದ ಮೇಲೆ ಬೀಳುವುದರಿಂದ ಸೃಷ್ಟಿಗೆ ಕೇಡಾಗುತ್ತದೆ ಎಂದು ತಿಳಿಸುತ್ತಾರೆ.

 ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಈ ರಹಸ್ಯಮಯವಾದ ಈ ದೇವಾಲಯವು ಮಹಾರಾಷ್ಟ್ರದ ಅಹಮದಾ ನಗರ ಜಿಲ್ಲೆಯ ಹರಿಶ್ಚಂದ್ರ ಘಡ್‍ನ ಕೋಟೆಯಲ್ಲಿದೆ. ಈ ದೇವಾಲಯವು ಬೆಟ್ಟದ ಮೇಲೆ ಬೋಲಾ ಶಂಕರನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಗುಹೆಗಳು ಅತ್ಯಂತ ಸುಂದರವಾಗಿದ್ದು ಸುಮಾರು 11 ನೇ ಶತಮಾನದಲ್ಲಿ ಗುಹೆಗಳು ತನ್ನ ಅಪೂರ್ವ ಸೊಬಗನ್ನು ವೃದ್ಧಿಸಿಕೊಳ್ಳಲು ಡೊಂಕಾಗಿವೆ. ಈ ಗುಹೆಯಲ್ಲಿ ಮೊದಲಿಗೆ ಮಹಾ ವಿಷ್ಣುವಿನ ಮೂರ್ತಿ ಇತ್ತು. ಚಂಗದೇವ ಎಂಬ ಸನ್ಯಾಸಿಯು 14 ನೇ ಶತಮಾನದಲ್ಲಿ ಈ ಗುಹೆಯಲ್ಲಿ ತಪಸ್ಸನ್ನು ಆಚರಿಸುತ್ತಿದ್ದನು.

 ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ದೇವಾಲಯದ ಪೂರ್ವ ದಿಕ್ಕಿಗೆ "ಸಪ್ತತೀರ್ಥ" ಎಂಬ ಸುಂದರವಾದ ಸರೋವರವಿದೆ. ಅದರ ಸುತ್ತಲೂ ದೇವಾಲಯಗಳಿವೆ. ಅವುಗಳಲ್ಲಿ ವಿಷ್ಣುವಿನ ವಿಗ್ರಹಗಳು ಕೂಡ ಇವೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‍ನಂತಹ ತ್ಯಾಜ್ಯ ವಸ್ತುಗಳನ್ನು ಬಳಸಿ ಸರೋವರದಲ್ಲಿ ಎಸೆಯುತ್ತಿರುವುದರಿಂದ ನೀರೆಲ್ಲಾ ಮಲೀನವಾಗುತ್ತಿದೆ.

PC: Bajirao

 ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ಕೇದಾರೇಶ್ವರ ಸ್ವಾಮಿ ಹೇಳ್ತಾನಂತೆ ಕಲಿಯುಗ ಅಂತ್ಯದ ಭವಿಷ್ಯ....

ತರಾಮಂಚಿ ಎಂದು ಕರೆಯುವ ಅರಾಮತಿ ಶಿಖರವು ಅತ್ಯಂತ ಸುಂದರವಾದ ನೋಟವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಈ ಶಿಖರದ ಮೇಲೆ ಚಿರತೆಗಳನ್ನು ಕಂಡು ಬರುತ್ತವೆ. ಈ ತಾರಾಮತಿ ಶಿಖರದಿಂದ ದಕ್ಷಿಣದಲ್ಲಿರುವ ಭೀಮಾಶಂಕರದ ಸಿದ್ಧಘಡ್‍ನವರೆವಿಗೂ ಕೋಟೆಗಳಿರುವುದು ಕಾಣಬಹುದಾಗಿದೆ. ಇಲ್ಲಿ ಮುಖ್ಯವಾಗಿ ಅವಳಿ ಶಿಖರಗಳು, ಘೋಡಿಶೇಪ್, ಅಜೋಬಾ, ಕುಲಾಂಗ್ ಕೋಟೆ ಇನ್ನು ಅನೇಕ ಪ್ರವಾಸಿ ತಾಣಗಳನ್ನು ಕಣ್ಣುತುಂಬಿಕೊಳ್ಳಬಹುದು.

PC: Bajirao

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X