• Follow NativePlanet
Share
Menu
» »ಗೋವಾದಲ್ಲಿಯೂ ಇದೆ ಅದ್ಭುತವಾದ ಅಭಯಾರಣ್ಯ...

ಗೋವಾದಲ್ಲಿಯೂ ಇದೆ ಅದ್ಭುತವಾದ ಅಭಯಾರಣ್ಯ...

Written By:

ಗೋವಾ ಎಂದ ಕೂಡಲೇ ಮೊದಲಿಗೆ ನೆನಪಾಗುವುದೇ ಸುಂದರವಾದ ವಾತಾವರಣ, ಅದ್ಭುತವಾದ ಬೀಚ್‍ಗಳು, ಪಾರ್ಟಿಗಳು, ದೊಡ್ಡ ದೊಡ್ಡ ಹೋಟೆಲ್‍ಗಳು, ಎಲ್ಲಿ ನೋಡಿದರು ದೇಶಿಯ ಹಾಗು ವಿದೇಶಿಯ ಜನರಿಂದ ತುಂಬಿ ತುಳುಕುತ್ತಿರುವ ಷಾಪಿಂಗ್ ಪ್ರದೇಶಗಳು ಇನ್ನು ಇತ್ಯಾದಿ. ಗೋವಾದಲ್ಲಿಯೂ ಕೂಡ ಹಲವಾರು ಅದ್ಭುತವಾದ ಕೋಟೆಗಳು, ಸ್ಮಾರಕಗಳು ಇವೆ. ಇವುಗಳ ಮಧ್ಯೆ ಒಂದು ಅಭಯಾರಣ್ಯವು ಇದೆ ಎಂಬುದನ್ನು ನಾವು ಮರೆಯಲೇಬಾರದು. ಗೋವಾದಲ್ಲಿನ ಅಭಯಾರಣ್ಯದ ಬಗ್ಗೆ ಸಾಕಷ್ಟು ಪ್ರವಾಸಿಗರಿಗೆ ತಿಳಿಯದೇ ಇರಬಹುದು.

ಆದರೆ ಆ ಅಭಯಾರಣ್ಯವು ಪ್ರತಿಯೊಬ್ಬ ಪ್ರವಾಸಿಗನಿಗೆ ಮನೋಹರವಾದ ಅನುಭವವನ್ನು ಉಂಟು ಮಾಡದೇ ಇರದು. ಪ್ರಾಣಿ, ಪಕ್ಷಿಗಳನ್ನು ಕಣ್ಣಾರೆ ಕಂಡು ಅಸ್ವಾಧಿಸುವುದರಲ್ಲಿ ಅದೇನೂ ಸುಖವಿದೆ. ಮುಖ್ಯವಾಗಿ ಅಳಿವಿನಂಚಿನಲ್ಲಿರುವ ಹಲವಾರು ಪ್ರಾಣಿ, ಪಕ್ಷಿ ಪ್ರಭೇದಗಳನ್ನು ಗೋವಾವನ್ನು ಕಳೆಯಬೇಕು ಎಂದು ಅಂದುಕೊಂಡಿರುವವರಿಗೆ ಗೋವಾದ ಈ ಸುಂದರವಾದ ಅಭಯಾರಣ್ಯಕ್ಕೆ ಒಮ್ಮೆ ಭೇಟಿ ನೀಡಿ ಬನ್ನಿ.

ಪ್ರಸ್ತುತ ಲೇಖನದಲ್ಲಿ ಗೋವಾದಲ್ಲಿರುವ ಒಂದು ಅದ್ಭುತವಾದ ಅಭಯಾರಣ್ಯದ ಬಗ್ಗೆ ಮಾಹಿತಿಯನ್ನು ತಿಳಿಯೋಣ.

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ

ಅಸಲಿಗೆ ಗೋವಾದಲ್ಲಿರುವ ಆ ಸುಂದರವಾದ ಅಭಯಾರಣ್ಯವೆಂದರೆ ಅದೇ ಭಗವಾನ್ ಮಹಾವೀರ್ ಅಭಯಾರಣ್ಯ ಮತ್ತು ಮೊಲೆಮ್ ನ್ಯಾಷನಲ್ ಪಾರ್ಕ್ ಆಗಿದೆ. ಇದು ದಕ್ಷಿಣ ಪಶ್ಚಿಮ ಘಟ್ಟದಲ್ಲಿರುವ ಹಾಗು 240 ಚದರ ಕಿ.ಮೀ ಅಂದರೆ 93 ಚದರ ಮೈಲಿ ಇರುವ ರಕ್ಷಿತವಾದ ಪ್ರದೇಶವಾಗಿದೆ. ಈ ಅಭಯಾರಣ್ಯವು ಗೋವಾದ ಸಾಂಗಮ್ ತಾಲ್ಲೂಕಿನಲ್ಲಿದೆ.

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ

ಹೇಗೆ ಸಾಗಬೇಕು?
ಈ ಅಭಯಾರಣ್ಯವು ಗೋವಾದ ರಾಜಧಾನಿಯಾದ ಪಣಜಿಯಿಂದ ಪೂರ್ವಕ್ಕೆ 57 ಕಿ.ಮೀ, ಮೊಲೆಮ್ ಪಟ್ಟಣದಿಂದ ಸುಮಾರು 35 ಕಿ.ಮೀ ದೂರದಲ್ಲಿದೆ. ಮೊರ್ಮುಗೊ ಹಾಗು ಲೊಂಡ ರೈಲು ಮಾರ್ಗವು ಈ ಪ್ರದೇಶದ ಮೂಲಕ ಹಾದುಹೋಗುತ್ತದೆ. ಹಾಗೆಯೇ ಇಲ್ಲಿ ಪ್ರಸಿದ್ಧವಾದ ದೂಧ್‍ಸಾಗರ್ ಜಲಪಾತವನ್ನು ಮತ್ತು ಹಲವಾರು ದೇವಾಲಯವನ್ನು ಕೂಡ ಕಾಣಬಹುದಾಗಿದೆ.

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ

ಈ ಪ್ರದೇಶವನ್ನು ಮೊದಲು ಮೊಲೆಮ್ ಗೇಮ್ ಅಭಯಾರಣ್ಯ ಎಂದು ಕರೆಯಲಾಗುತ್ತಿತ್ತು. ಇದನ್ನು 1969ರಲ್ಲಿ ವನ್ಯ ಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು. ಇದನ್ನು ಭಗವಾನ್ ಮಹಾವೀರ್ ಅಭಯಾರಣ್ಯ ಎಂದು ಮರು ನಾಮಕರಣ ಮಾಡಲಾಯಿತು. 41 ಚದರ ಮೈಲಿಯನ್ನು ಒಳಗೊಂಡಿರುವ ಅಭಯಾರಣ್ಯವು ಪ್ರಮುಖ ಪ್ರದೇಶವನ್ನು 1978 ರಲ್ಲಿ ಮೊಲೆಮ್ ನ್ಯಾಷನಲ್ ಪಾರ್ಕ್ ಎಂದು ಘೋಷಿಸಲಾಯಿತು.

Dinesh Valke

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ

ಇಲ್ಲಿನ ಕಾಡುಗಳನ್ನು ಮೂರು ಭಾಗಗಳಾಗಿ ವಿಭಾಗಿಸಲಾಗಿದೆ. ಇದು ನಿತ್ಯಹರಿದ್ವರ್ಣ ಕಾಡುಗಳಿಂದ ಶ್ರೀಮಂತವಾಗಿದೆ. ಇಲ್ಲಿ ಹಲವಾರು ಜಾತಿಯ ಪ್ರಾಣಿ ಸಂಕುಲವನ್ನು ಹಾಗು ಪಕ್ಷಿ ಪ್ರಪಂಚವನ್ನು ಕಾಣಬಹುದಾಗಿದೆ. ಇಲ್ಲಿ ನೀರಿನ ಅಂಶ ಹೆಚ್ಚಾಗಿದ್ದು ಯಾವುದೇ ಪ್ರಾಣಿ, ಪಕ್ಷಿಗಳಿಗೆ ನೀರಿನ ಕೊರತೆ ಕಂಡು ಬರುವುದಿಲ್ಲ.

Mike Prince

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 722 ಹೂವು ಬಿಡುವ ಸಸ್ಯಗಳು ಇವೆ ಎಂದು ಗುರುತಿಸಲಾಗಿದೆ. ಈ ಅಭಯಾರಣ್ಯದಲ್ಲಿ ಬಾರ್ಕಿಂಗ್ ಜಿಂಕೆ, ಬೆಂಗಾಲ್ ಟೈಗರ್, ಹಾರುವ ಅಳಿಲು, ಮಲಬಾರ್ ಅಳಿಲು, ಕಪ್ಪು ಚಿರತೆ, ಸಾಂಬಾರ್, ಮಚ್ಚೆಯುಳ್ಳ ಜಿಂಕೆ, ಕಾಡು ಹಂದಿ ಮತ್ತು ಕಾಡು ನಾಯಿಗಳನ್ನು ಇಲ್ಲಿ ಕಾಣಬಹುದಾಗಿದೆ.

bm.iphone

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ

ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನವನ

ಇಲ್ಲಿ ಹಲವಾರು ಬಗೆ ಬಗೆಯ ಚಿಟ್ಟೆಗಳು ಕೂಡ ಇವೆ. ಮುಖ್ಯವಾಗಿ ಇಲ್ಲಿ ಹಾವುಗಳನ್ನು ಕಾಣಬಹುದು. ಕಿಂಗ್ ಕೋಬ್ರಾವನ್ನು ಕೂಡ ಇಲ್ಲಿ ಕಂಡು ರೋಮಾಂಚನವಾಗಿಸಿಕೊಳ್ಳಬಹುದು.

ತಂಬದಿ ಸುರ್ಲಾ ದೇವಾಲಯ

ತಂಬದಿ ಸುರ್ಲಾ ದೇವಾಲಯ

ಇಲ್ಲಿ 12 ನೇ ಶತಮಾನದ ಅತ್ಯಂತ ಹಳೆಯದಾದ ಶಿವಾಲಯವಿದೆ. ಆ ಶಿವಾಲಯಕ್ಕೆ ತಂಬದಿ ಸುರ್ಲಾ ದೇವಾಲಯ ಎಂದು ಕರೆಯುತ್ತಾರೆ. ಈ ದೇವಾಲಯವು ಅತ್ಯಂತ ಸುಂದರವಾಗಿದ್ದು, ಶಿಲ್ಪಕಲೆಗಳಿಂದ ಮನೋಹರವಾಗಿದೆ. ಬೊಲ್ಕಾರ್ನೆಮ್ ಗ್ರಾಮದ ಪೂರ್ವಕ್ಕೆ ಕೇವಲ 13 ಕಿ.ಮೀ ದೂರದಲ್ಲಿದೆ. ಸೂಕ್ಷ್ಮವಾದ ಕೆತ್ತನೆಗಳನ್ನು ಹೊಂದಿರುವ ಈ ದೇವಾಲಯವು ಅತ್ಯಂತ ಶ್ರೀಮಂತವಾಗಿ ಕಂಗೊಳಿಸುತ್ತಿದೆ.

AshLin

ದೂಧ್‍ಸಾಗರ್ ಜಲಪಾತ

ದೂಧ್‍ಸಾಗರ್ ಜಲಪಾತ

ದೂಧ್‍ಸಾಗರ್ ಜಲಪಾತವು ಕೊಲೊಮ್ ಗ್ರಾಮದಿಂದ ಕೇವಲ 10 ಕಿ.ಮೀ ದೂರದಲ್ಲಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 310 ಮೀಟರ್ ಎತ್ತರದಲ್ಲಿದೆ. ಇದು ಭಾರತದ 5 ನೇ ಅತಿ ಎತ್ತರದ ಜಲಪಾತ ಎಂಬ ಪ್ರಖ್ಯಾತಿಯನ್ನು ಗಳಿಸಿಕೊಂಡಿದೆ. ಈ ದುಧ್‍ಸಾಗರ್ ಜಲಪಾತವು ಪ್ರಪಂಚದಲ್ಲಿ 227 ನೇ ಸ್ಥಾನವನ್ನು ಗಳಿಸಿದೆ. ಈ ಸುಂದರವಾದ ಸ್ಥಳಕ್ಕೆ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಅಂದರೆ ಮಾನ್ಸೂನ್ ಸಮಯದಲ್ಲಿ ಭೇಟಿ ನೀಡುವುದು ಅಪಾಯಕಾರಿ ಎಂದೇ ಹೇಳಬಹುದು.

Samson Joseph

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ