• Follow NativePlanet
Share
» »ಅಂಡಮಾಮ್ ನಿಕೊಬಾರ್‍ನ ಬಗ್ಗೆ ನಿಮಗೆಷ್ಟು ಗೊತ್ತು?

ಅಂಡಮಾಮ್ ನಿಕೊಬಾರ್‍ನ ಬಗ್ಗೆ ನಿಮಗೆಷ್ಟು ಗೊತ್ತು?

Written By:

ಅಂಡಮಾನ್ ಮತ್ತು ನಿಕೊಬಾರ್ ಭಾರತ ದೇಶಕ್ಕೆ ಸೇರಿದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾಗಿದೆ. ಈ ಸುಂದರವಾದ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿವೆ. ಪೋರ್ಟ್ ಬ್ಲೇರ್ ಇದರ ರಾಜಧಾನಿ. ಈ ದ್ವೀಪಗಳು ಇನ್ನೂ 223 ದ್ವೀಪಗಳನ್ನು ಒಳಗೊಂಡಿದೆ. ಇದೊಂದು ಅದ್ಭುತವಾದ ದ್ವೀಪಗಳೆಂದೇ ಹೇಳಬಹುದು. ಬೆಟ್ಟ ಗುಡ್ಡಗಳಿಂದ ಅವೃತ್ತವಾಗಿದ್ದು, ಹವಳದ ದ್ವೀಪದಂತೆ ಕಂಗೊಳಿಸುತ್ತಿರುತ್ತದೆ.

ಇಲ್ಲಿನ ವಾತಾವರಣ ಸಸ್ಯವರ್ಗದಲ್ಲಿ ಪ್ರಧಾನವಾದುದು, ದಟ್ಟವಾದ ಉಷ್ಣವಲಯದ ಕಾಡುಗಳು, ನಿತ್ಯ ಹರಿದ್ವರ್ಣ, ಬೆಟ್ಟಗಳ ಇಳಿಜಾರು, ತಗ್ಗು ಪ್ರದೇಶಗಳಲ್ಲಿ ಅಗಲವಾದ ಕಾಡುಗಳು, ಮ್ಯಾನ್‍ಗ್ರೋವ್ ಕಾಡುಗಳು, ಮೀನುಗಾರಿಕೆ, ವ್ಯವಸಾಯ ಆಹಾ ಬಣ್ಣಿಸಲು ಅಸಾಧ್ಯವಾದುದು. ಇದರ ಸೌಂದರ್ಯವನ್ನು ಕಂಡೇ ಅನುಭವಿಸಬೇಕು.

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ಭಾರತದ ಪ್ರಮುಖವಾದ ಪ್ರವಾಸಿ ತಾಣಗಳಲ್ಲಿ ಅಂಡಮಾನ್ ಮತ್ತು ನಿಕೊಬಾರ್ ಕೂಡ ಒಂದು. ರಜಾ ದಿನಗಳನ್ನು ಕಳೆಯಲು ಅತ್ಯಂತ ಸೂಕ್ತವಾದ ಸ್ಥಳವೆಂದರೆ ಅದು ಇದೇ. ಇದು ಭಾರತದ ದಕ್ಷಿಣ ತುತ್ತತುದಿಯಾಗಿದ್ದು, ಸುಮಾರು 8000 ಚದರ ಕಿ.ಮೀ ಹರಡಿದೆ. ಇದೊಂದು ಸುಂದರವಾದ ತಾಣವಾಗಿದ್ದು ನಿತ್ಯವು ಹರಿದ್ವರ್ಣದಿಂದ ಕಂಗೊಳಿಸುತ್ತಿರುತ್ತದೆ. ಅಂಡಮಾನ್ ಮತ್ತು ನಿಕೋಬಾರ್‍ನ ಹೆಸರು ಅನೇಕ ಮಂದಿ ಕೇಳಿರುತ್ತೀರಾ? ಆದರೆ..


PC:Ankur P

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ಎಂದಿಗೂ ಒಮ್ಮೆ ಭೇಟಿ ನೀಡಬೇಕು ಎಂದು ಅಂದುಕೊಂಡಿರುವುದಿಲ್ಲ. ಹಾಗಾದರೆ ಅಂಡಮಾನ್ ನಿಕೊಬಾರ್‍ನ ಬಗ್ಗೆ ಮಾಹಿತಿಯನ್ನು ಲೇಖನದ ಮುಲಕ ಪಡೆಯಿರಿ. ಅಂಡಮಾನ್ ಮತ್ತು ನಿಕೊಬಾರ್‍ಗಳು 2 ಪ್ರತ್ಯೇಕವಾದ ದ್ವೀಪಗಳೇ ಆಗಿವೆ. ಈ ಸುಂದರರವಾದ ತಾಣಕ್ಕೆ ಭೇಟಿ ನೀಡಲು ವಿಮಾನ ನಿಲ್ದಾಣವು ಕೂಡ ಇದೆ. ಈ ಮೊದಲೇ ಹೇಳಿದಂತೆ ಅಂಡಮಾನ್ ಮತ್ತು ನಿಕೊಬಾರ್‍ನ ರಾಜಧಾನಿ ಪೋರ್ಟ್ ಬ್ಲೇರ್.


PC:Venkatesh Katta

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ಪೋರ್ಟ್ ಬ್ಲೇರ್‍ಗೆ ಚೆನ್ನೈ ಅಥವಾ ಕೋಲ್ಕತ್ತಾದಂತಹ ಭಾರತದ ಪೂರ್ವ ಕರಾವಳಿಯಿಂದ ಕೂಡ ದೋಣಿಯ ಮೂಲಕ ಪ್ರಯಾಣಿಸಬಹುದು. ಈ ದ್ವೀಪವು ಅತ್ಯಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಗರವಾಗಿದೆ. ಇಲ್ಲಿಗೆ ತಲುಪಿದ ನಂತರ ಇತರೆ ಅನೇಕ ಪ್ರವಾಸಿ ಆಕರ್ಷಣೆಗಳಿಗೂ ಕೂಡ ಭೇಟಿ ನೀಡಬಹುದಾಗಿದೆ.

PC:Snap®

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ಇಲ್ಲಿನ ಬೀಚ್‍ಗಳಲ್ಲಿ ಅನೇಕ ಸಮುದ್ರದಾಟವನ್ನು ಆಡಬಹುದು. ಇಲ್ಲಿಗೆ ಭೇಟಿ ನೀಡುವ ಅದೆಷ್ಟೂ ಪ್ರವಾಸಿಗರು ಇಲ್ಲಿನ ಬೀಚ್‍ಗಳಲ್ಲಿ ಕಾಲಕಳೆಯಲು ಇಷ್ಟ ಪಡುತ್ತಾರೆ. ಸ್ಕೂಬಾ ಡ್ರೈವಿಂಗ್ ಹಾಗು ಸಾಗರದ ಆಳದಲ್ಲಿ ಅನ್ವೇಷಣೆ ನಡೆಸುವ ಇನ್ನು ಅನೇಕ ರೋಮಾಂಚನಕಾರಿ ಚಟುವಟಿಕೆಗಳಿಗೆ ಇಲ್ಲಿ ಅವಕಾಶವಿದೆ. ಇಲ್ಲಿ ಕೇವಲ ಬೀಚ್‍ಗಳೇ ಅಲ್ಲದೇ, ವಿವಿಧ ಪ್ರಾಣಿ, ಪಕ್ಷಿಗಳ ಸಂಕುಲವನ್ನು ಒಳಗೊಂಡ ಇಲ್ಲಿನ ಅದ್ಭುತವಾದ ಪ್ರಕೃತಿ ಸೌಂದರ್ಯವು ಪ್ರವಾಸಿಗರಿಗೆ ಮೂಕ ವಿಸ್ಮಿತರನ್ನಾಗಿಸದೇ ಬಿಡದು.

PC:Ana Raquel S. Hernandes

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ನಿಮಗೆ ಗೊತ್ತ? ಅಂಡಮಾನ್ ಮತ್ತು ನಿಕೊಬಾರ್‍ನಲ್ಲಿ ಸುಮಾರು 2200 ಪ್ರಭೇದದ ಸಸ್ಯಗಳು ಕಂಡು ಬರುತ್ತವೆ. ಇವುಗಳಲ್ಲಿ ಸುಮಾರು 1300 ಸಂತತಿಗಳು ಭಾರತದಲ್ಲಿಯೂ ಕೂಡ ಕಾಣಸಿಗುವುದಿಲ್ಲ ಎಂದರೆ ನಿಮಗೆ ಅಚ್ಚರಿಯಾಗದೇ ಇರದು. ಇಲ್ಲಿನ ಸ್ಥಳೀಯರು ಗಿಡ ಮರಗಳ ನಾರು, ಬೇರುಗಳನ್ನು ಬಳಸಿಕೊಂಡು ಕುಟೀರಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ ಪ್ರವಾಸಿಗರು ತಂಗಬಹುದಾಗಿದೆ. ಅಷ್ಟೇ ಅಲ್ಲ ಇಲ್ಲಿ ರಿಸಾರ್ಟ್‍ಗಳು ಸಹ ಲಭ್ಯವಿವೆ.

PC:Indian Navy

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ಇಷ್ಟೊಂದು ಪ್ರಾಕೃತಿಕ ಅದ್ಭುತವನ್ನು ಹೊಂದಿರುವ ಈ ಪ್ರದೇಶವು ಬೇಸಿಗೆ ಸಮಯದಲ್ಲಿ ಭೇಟಿ ನೀಡಲು ಸೂಕ್ತವಾದ ಸಮಯ ಎಂದರೆ ತಪ್ಪಾಗಲಾರದು. ಅಂಡಮಾನ್ ಪ್ರವಾಸ ಎಂದ ಕೂಡಲೇ ಹೆಚ್ಚಿನ ಪ್ರವಾಸಿಗರು ಜಾಲಿ ಬಾಯ್‍ಗೆ ಭೇಟಿ ನೀಡಲೇಬೇಕು ಎಂದು ಅಂದುಕೊಳ್ಳುತ್ತಾರೆ. ಇಲ್ಲಿ ಪ್ರಸಿದ್ಧವಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಸಾಗರ ಉದ್ಯಾನವನ್ನು ನಿರ್ಮಿಸಿದ್ದಾರೆ.

PC:Sanyam Bahga

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ಇಲ್ಲಿನ ಸ್ವಚ್ಛವಾದ ಬೀಚ್‍ಗಳು, ವೈವಿಧ್ಯಮಯವಾದ ಜಲಜೀವಿಗಳನ್ನು ಕೂಡ ಹೊಂದಿದೆ. ಇಲ್ಲಿ ಕಂಡುಬರುವ ಸಸ್ಯ ಮತ್ತು ಪ್ರಾಣಿಗಳಿಗೆ ಸಮಾನವಾಗಿರುವ ಪ್ರದೇಶ ಬೇರೊಂದಿಲ್ಲ ಎಂದೇ ಹೇಳಬಹುದು. ಇಲ್ಲಿ ಭಾರತೀಯರಿಗೆ ಮತ್ತು ವಿದೇಶಿಯರಿಗೆ ಎಂದೇ ಅದ್ಭುತವಾದ ತಾಣಗಳಿವೆ. ಅದರಲ್ಲೂ ಇಲ್ಲಿ ವಿದೇಶಿಯರಿಗೆ ಎಂದೇ ಮೀಸಲಾಗಿರುವ ಕೆಲವು ಪ್ರದೇಶಗಳು ವಿದೇಶಿಯರಿಗೆ ಮತ್ತಷ್ಟು ಆಕರ್ಷಿಸುವುದರಲ್ಲಿ ಅನುಮಾನವೇ ಇಲ್ಲ.

PC:Sankara Subramanian

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ನಿಮಗೆ ತಿಳಿಯದ ಅಂಡಮಾನ್ ಮತ್ತು ನಿಕೊಬಾರ್

ಇಲ್ಲಿ ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಭೂಸೈನ್ಯದ ಸೇನೆಗಳು ಕೂಡ ಇವೆ. ಅಷ್ಟೇ ಅಲ್ಲದೇ ಪೋರ್ಟ್ ಬ್ಲೇರ್ ದ್ವೀಪದಲ್ಲಿ ಕೆಲವು ಮೋಜಿನ ಆಟಗಳಿರುವ ಬೀಚ್‍ಗಳಿದ್ದು, ಯುವಕರಿಗೆ ಹೆಚ್ಚು ಇಷ್ಟವಾಗುವಂತೆ ಮಾಡುತ್ತವೆ. ಹಾಗೆಯೇ ಇಲ್ಲಿ ರಾಷ್ಟ್ರೀಯ ಸಾಗರ ಉದ್ಯಾನವನ ಕೂಡ ಇದೆ. ಸುಮಾರು 8 ಕಿ.ಮೀ ದೂರದಲ್ಲಿರುವ ವೈಪರ್ ಐಲ್ಯಾಂಡ್ ಎಂತಲೂ ಕರೆಯುವ ನಡುಗಡ್ಡೆ ಕೂಡ ಪೋರ್ಟ್ ಬ್ಲೇರ್‍ನಲ್ಲಿದೆ.

PC:Shimjithsr

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ