Search
  • Follow NativePlanet
Share
» »ಮಲೆ ಮಹದೇಶ್ವರ ಬೆಟ್ಟದಲಿ ನೆಲೆಸಿರುವ ಮಹದೇಶ್ವರನ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ

ಮಲೆ ಮಹದೇಶ್ವರ ಬೆಟ್ಟದಲಿ ನೆಲೆಸಿರುವ ಮಹದೇಶ್ವರನ ದೇವಾಲಯಕ್ಕೆ ಒಮ್ಮೆ ಭೇಟಿ ನೀಡಿ

ಮಹದೇಶ್ವರ ದೇವಾಲಯ ಹಾಗೂ ಎಮ್ ಎಮ್ ಬೆಟ್ಟಗಳಿಗೆ ಭೇಟಿ ಕೊಡಿ

ಎಮ್ ಎಮ್ ಬೆಟ್ಟಗಳಿಗೆ ಪ್ರವಾಸ ಮಾಡುವ ಸಮಯದಲ್ಲಿ, ಇಲ್ಲಿಯ ಮಲೆ ಮಹದೇಶ್ವರ ದೇವರಿಗರ್ಪಿತವಾದ ಮಹದೇಶ್ವರ ದೇವಾಲಯಕ್ಕೆ ಭೇಟಿ ಕೊಡಿ. ಈ ದೇವಾಲಯವು ಚಾಮರಾಜನಗರ ಜಿಲ್ಲೆಯ ದಟ್ಟವಾದ ಕಾಡುಗಳ ಮಧ್ಯೆ ನೆಲೆಸಿದೆ. ಈ ದೇವಾಲಯವು ಕಾಡಿನ ಮಧ್ಯೆ ಇರುವುದರಿಂದ ಕೇವಲ ಭಕ್ತರನ್ನು ಮಾತ್ರವಲ್ಲದೆ ಪ್ರಕೃತಿ ಪ್ರೇಮಿಗಳನ್ನೂ ತನ್ನತ್ತ ಸೆಳೆಯುತ್ತದೆ.

ಮಹದೇಶ್ವರ ದೇವಾಲಯವು ಪೂರ್ವ ಘಟ್ಟಗಳಲ್ಲಿ 77 ಬೆಟ್ಟಗಳಿಂದ ಸುತ್ತುವರೆದಿದೆ. ಪುರಾಣಗಳ ಪ್ರಕಾರ, ಭಗವಾನ್ ಶ್ರೀ ಮಲೆ ಮಹದೇಶ್ವರನು ಶಿವನ ಅವತಾರಗಳಲ್ಲಿ ಒಂದಾಗಿದ್ದು, ಸ್ಥಳೀಯರು ಜಾನಪದ ಶೈಲಿಯಲ್ಲಿ ಭಗವಾನ್ ಶ್ರೀ ಮಹದೇಶ್ವರನ ಕಥೆಗಳು ಮತ್ತು ಪವಾಡಗಳ ಬಗ್ಗೆ ಹಾಡುತ್ತಾರೆ.

malemahadeshwaratemple1

ಜನಪದ ಕಥೆಗಳ ಪ್ರಕಾರ ಮಲೆ ಮಹದೇಶ್ವರ ದೇವರು ಹುಲಿ ವಾಹನ ಎಂಬ ಹೆಸರಿನ ಹುಲಿಯ ಮೇಲೆ ಸವಾರಿ ಮಾಡುತ್ತಿದ್ದರೆನ್ನಲಗುತ್ತದೆ. ಆ ಸಮಯದಲ್ಲಿ ಅಲ್ಲಿ ಬೆಟ್ಟಗಳಲ್ಲಿ ವಾಸಿಸುತ್ತಿದ್ದ ಜನರು ಮತ್ತು ಸಂತರನ್ನು ರಕ್ಷಿಸಲು ಹಲವಾರು ಪವಾಡಗಳನ್ನು ಮಾಡಿದನು ಎನ್ನಲಾಗುತ್ತದೆ. ಆದುದರಿಂದ ಇಲ್ಲಿನ ಕಾಡುಕುರುಬರು, ಜೇನು ಕುರುಬರು ಮತ್ತು ಇನ್ನಿತರ ಬುಡಕಟ್ಟು ಜನಾಂಗದವರಿಗೆ ಈ ದೇವರನ್ನು ಕುಲದೇವರೆಂದು ಪರಿಗಣಿಸಲಾಗುತ್ತದೆ.

mmhillsswamy-31

ಐತಿಹಾಸಿಕ ಪುರಾವೆಗಳ ಪ್ರಕಾರ, ಭಗವಾನ್ ಶ್ರೀ ಮಲೆ ಮಹದೇಶ್ವರನು 15 ನೇ ಶತಮಾನದಲ್ಲಿ ಜೀವಿಸಿದ್ದನೆಂದು ನಂಬಲಾಗಿದೆ. ಅವರು ಹರದನಹಳ್ಳಿ ಮಠದ 3 ನೇ ನಾಯಕರಾಗಿದ್ದರು ಎಂದು ಕೆಲವು ಮಾಹಿತಿಗಳು ಹೇಳುತ್ತವೆ. ಈ ಸ್ಥಳಕ್ಕೆ ತಲುಪಿದ ನಂತರ ಪ್ರವಾಸಿಗರು 'ಅಂತರಗಂಗೆ' ಎಂಬ ಹೊಳೆಯಲ್ಲಿ ಪವಿತ್ರ ಸ್ನಾನ ಮಾಡಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X