Search
  • Follow NativePlanet
Share
» »ಗೋಕರ್ಣಕ್ಕೆ ಭೇಟಿ-ಕಡಲತೀರಗಳು ಮತ್ತು ದೇವಾಲಯಗಳ ಸಂಗಮ!

ಗೋಕರ್ಣಕ್ಕೆ ಭೇಟಿ-ಕಡಲತೀರಗಳು ಮತ್ತು ದೇವಾಲಯಗಳ ಸಂಗಮ!

ಗೋಕರ್ಣ ಕರ್ನಾಟಕದ ಕಾರವಾರ ತೀರದಲ್ಲಿ ನೆಲೆಗೊಂಡ ಸಣ್ಣ ಪಟ್ಟಣ.ಈ ಪಟ್ಟಣದಲ್ಲಿ ಹಲವಾರು ದೇವಾಲಯಗಳನ್ನು ಹೊಂದಿರುವುದರಿಂದ ತೀರ್ಥಯಾತ್ರಾ ತಾಣವಾಗಿ ಪ್ರಸಿದ್ದಿಗೊಂಡಿದೆ. ಕಡಲು ಪ್ರಿಯರಿಗೆ ಕೂಡಾ ರಜಾದಿನಗಳನ್ನು ಕಳೆಯಲು ಸೂಕ್ತವಾದ ಸ್ಥಳವೆಂದು ಇತ್ತೀಚೆಗೆ ತಿಳಿದುಬಂದಿದೆ.

ಯಾವುದೇ ಹಾನಿಗೆ ಒಳಗಾಗದ, ಸ್ವಚ್ಛವಾದ ಮರಳು ಮತ್ತು ಕಡಲತೀರದ ನೀಲಿ ನೀರಿನಲ್ಲಿ ಅನೇಕ ಪ್ರವಾಸಿಗರು ವಿಶ್ರಮಿಸಿ ತಮ್ಮ ಸಮಯವನ್ನು ಶಾಂತ ರೀತಿಯಿಂದ ಕಳೆಯಬಹುದಾಗಿದೆ. ಗೋಕರ್ಣ ಈಗ ಕಡಲತೀರದ ವಿಹಾರದ ಅವಶ್ಯಕತೆ ಇರುವವರು ಮತ್ತು ತೀರ್ಥಯಾತ್ರೆಯ ಅವಶ್ಯಕತೆ ಇರುವವರ ಇಚ್ಛೆಯನ್ನು ಪೂರೈಸುವ ಒಂದು ಪಟ್ಟಣವಾಗಿದೆ.

ಗೋಕರ್ಣವೆಂದರೆ ಅಕ್ಷರಶಃ "ಗೋವಿನ ಕಿವಿ" ಎಂದು ಅರ್ಥೈಸುತ್ತದೆ. ಇಲ್ಲಿ ಶಿವನು ಹಸುವಿನ ಕಿವಿಯಿಂದ ಹೊರಹೊಮ್ಮಿದನೆಂದು ಸ್ಥಳೀಯರ ನಂಬಿಕೆಯಾಗಿದೆ. ಗೋಕರ್ಣವು ಗಂಗಾವಳಿ ನದಿ ಮತ್ತು ಅಘಾನಾಶಿನಿ ನದಿಯ ಸಂಗಮದಲ್ಲಿದೆ. ಸಾಕಷ್ಟು ದೇವಾಲಯಗಳು ಮತ್ತು ವಿಶ್ರಾಂತಿ ಪಡೆಯಲು ಕಡಲ ತೀರಗಳಿಂದ ಗೋಕರ್ಣವು ಒಂದು ಪರಿಪೂರ್ಣವಾದ ವಾರಾಂತ್ಯವನ್ನು ಕಳೆಯಬಹುದಾದ ತಾಣವಾಗಿದೆ.

ಗೋಕರ್ಣಕ್ಕೆ ಭೇಟಿ ನೀಡಲು ಉತ್ತಮ ಸಮಯ

ಗೋಕರ್ಣಕ್ಕೆ ಭೇಟಿ ನೀಡಲು ಉತ್ತಮ ಸಮಯ

PC: Robert Helvie

ಗೋಕರ್ಣವನ್ನು ಬೇಸಿಗೆ ಮತ್ತು ಮಾನ್ಸೂನ್ ಋತುವಿನಲ್ಲಿ ಭೇಟಿ ಮಾಡಬಹುದು, ಅಂದರೆ, ನವೆಂಬರ್ ನಿಂದ ಜೂನ್ ವರೆಗೆ. ಶಿವರಾತ್ರಿ ಮತ್ತು ಗಣೇಶ ಚತುರ್ಥಿ ಹಬ್ಬದ ಸಮಯದಲ್ಲಿ ಗೋಕರ್ಣದಲ್ಲಿರುವ ದೇವಾಲಯಗಳನ್ನು ಭೇಟಿ ಮಾಡಬಹುದು

ಬೆಂಗಳೂರಿನಿಂದ ಗೋಕರ್ಣಕ್ಕೆ ಮಾರ್ಗ

ಬೆಂಗಳೂರಿನಿಂದ ಗೋಕರ್ಣಕ್ಕೆ ಮಾರ್ಗ

ಮಾರ್ಗ 1: ಸಿಎನ್ಆರ್ ರಾವ್ ಅಂಡರ್ಪಾಸ್ / ಸಿ.ವಿ ರಾಮನ್ ಆರ್ಡಿ. - ರಾ.ಹೆ 48 - ಸಿರ್ಸಿ-ಹಾವೆರಿ ಆರ್ಡಿ. - ಎಕ್ಸಿಟ್ ರಾ.ಹೆ 48 - ಸಿರ್ಸಿ-ಕುಮಟಾ ರಸ್ತೆ. - ರಾ.ಹೆ 66 - ಗೋಕರ್ಣ ರಸ್ತೆ. - ಗೋಕರ್ಣ (485 ಕಿಮೀ - 8 ಗಂ 15 ನಿ)

ದೇವರಾಯನದುರ್ಗ

ದೇವರಾಯನದುರ್ಗ

PC: Mishrasasmita

ದೇವರಾಯನದುರ್ಗ ಬೆಟ್ಟಗಳು ಅನೆಬೀಡ್ಡಾಸರಿ ಅಥವಾ ಕರಿಗಿರಿ ಬೆಟ್ಟಗಳು ಎಂದೂ ಕರೆಯಲ್ಪಡುತ್ತವೆ, ಇದು ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ಟ್ರಕ್ಕಿಂಗ್ ಮಾಡಲು ಈ ಬೆಟ್ಟಗಳು ಹೆಸರುವಾಸಿಯಾಗಿವೆ.

ಸುಲಭದ ಮಧ್ಯಮ ಮಟ್ಟದಿಂದ ಹಿಡಿದು ಟ್ರೆಕ್ಕಿಂಗ್ ನ ಹಲವಾರು ಆಯ್ಕೆಗಳಿವೆ.

ನಡೆಯುವ ಒಂದು ಮಾರ್ಗದಲ್ಲಿ ಟ್ರಕ್ಕಿಂಗ್ ಗಾಗಿ ಉತ್ತಮವಾಗಿ-ನಿರ್ಮಿತವಾದ ಮೆಟ್ಟಿಲುಗಳಿವೆ. ಉಳಿದ ಜಾಗಗಳು ಕಿರುಚಲು ಗಿಡಗಳು ಮತ್ತು ಪೊದೆಗಳಿಂದ ಆವೃತವಾಗಿದೆ. ಪ್ರಯಾಣದ ವೇಳೆ ಕಳ್ಳಿ ಸಸ್ಯಗಳು ಮತ್ತು ಅಥವಾ ಕರಡಿಗಳನ್ನು ನೋಡಿದಿರಾ ಎಂದು ಖಚಿತಪಡಿಸಿಕೊಳ್ಳಿ. ದೇವರಾಯನದುರ್ಗದಲ್ಲಿ ಯೋಗನರಸಿಂಹ ಮತ್ತು ಭೋಗನರಸಿಂಹ ಎಂಬ ಎರಡು ಸುಂದರವಾದ ದೇವಾಲಯಗಳಿವೆ, ಇದರಲ್ಲಿ ಒಂದು ಶಿಖರದ ಮೇಲೆ ಮತ್ತು ಮತ್ತೊಂದು ತಪ್ಪಲಿನಲ್ಲಿದೆ.

ಚಿತ್ರದುರ್ಗ

ಚಿತ್ರದುರ್ಗ

PC: Nagarjun Kandukuru

ಚಿತ್ರದುರ್ಗವು ಪುರಾತನ ಪರಂಪರೆಯ ಪ್ರದೇಶವಾಗಿದೆ, ಇದು ಚಾಲುಕ್ಯ ರಾಜಮನೆತದಿಂದ ಹೆಸರುವಾಸಿಯಾಗಿದೆ. ಈ ನಗರವು ಚಂದ್ರವಲ್ಲಿ ಮತ್ತು ಚಿತ್ರದುರ್ಗ ಕೋಟೆಯಂತಹ ಐತಿಹಾಸಿಕ ಮಹತ್ವವುಳ್ಳ ಸ್ಥಳಗಳನ್ನು ಹೊಂದಿದೆ. ಚಂದ್ರವಲ್ಲಿನಲ್ಲಿನ ಉತ್ಖನನದ ಬಳಿಕ ಇಲ್ಲಿ ಅನೇಕ ರಾಜವಂಶ ಸಾಮ್ರಾಜ್ಯಗಳಿಗೆ ಸೇರಿದ ನಾಣ್ಯಗಳು ಮತ್ತು ಇತರ ಕಲಾಕೃತಿಗಳು ದೊರಕಿದುದರಿಂದ ಇದು ಈಗ ಪುರಾತತ್ವ ಶಾಸ್ತ್ರದ ಸ್ಥಳವಾಗಿದೆ.

ಚಂದ್ರವಲ್ಲಿನಲ್ಲಿ ಭೂಗತ ಗುಹೆಗಳು ಪ್ರವಾಸಿ ತಾಣವಾಗಿದೆ. ಭೂಮಿಯ ಕೆಳಗೆ 80 ಅಡಿ ಕೆಳಗಿರುವ ಈ ಗುಹೆಯು ಅಂಕಲ್ಲಿ ಮಠ ಎಂದು ಕರೆಯಲ್ಪಡುವ ದೇವಾಲಯವನ್ನು ಹೊಂದಿದೆ. ಹತ್ತಿರದಲ್ಲಿರುವ ಸರೋವರವು ಈ ಸ್ಥಳದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಚಿತ್ರದುರ್ಗವನ್ನು ಆಳಿದ ಅನೇಕ ರಾಜವಂಶಗಳಿಂದ ಚಿತ್ರದುರ್ಗದ ಕೋಟೆಯನ್ನು ನಿರ್ಮಿಸಲಾಯಿತು ಮತ್ತು ವಿಸ್ತರಿಸಲಾಯಿತು. ಇದನ್ನು ಕಲ್ಲಿನ ಕೋಟೆ ಎಂದೂ ಕರೆಯಲಾಗುತ್ತದೆ. ಇದು ಕೋಟೆಗಳು, ಗೋದಾಮುಗಳು ಮತ್ತು ಹಲವಾರು ದೇವಾಲಯಗಳನ್ನೊಳಗೊಂಡ ಸುಂದರವಾದ ಕೋಟೆಯಾಗಿದೆ. ಬೆಟ್ಟಗಳು, ಗುಹೆಗಳು ಮತ್ತು ಸರೋವರದೊಂದಿಗೆ ಚಂದ್ರವಲ್ಲಿ ಚಿತ್ರದುರ್ಗದಲ್ಲಿ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

ದಾವಣಗೆರೆ ಬೆಣ್ಣೆ ದೋಸೆ

ದಾವಣಗೆರೆ ಬೆಣ್ಣೆ ದೋಸೆ

PC: Srutiagarwal123

ನೀವು ಕರ್ನಾಟಕದಲ್ಲಿ ಇರುವವರಾಗಿದ್ದಲ್ಲಿ ಈ ಈ ಖಾದ್ಯದ ಬಗ್ಗೆ ನಿಮಗೆ ತಿಳಿದಿರಲೇಬೇಕು. ಇದು ರಾಜ್ಯದ ಎಲ್ಲಾರಿಗೂ ಪ್ರೀತಿ ಪಾತ್ರವಾಗಿರುವುದಾಗಿದೆ! ದಾವಣಗೆರೆ ಬೆಣ್ಣೆ ದೋಸೆ ಜನಪ್ರಿಯ ಮತ್ತು ಅತೀ-ರುಚಿಯಾದ ಭಕ್ಷ್ಯವಾಗಿದೆ, ಈ ಸುವಾಸನೆಯುಳ್ಳ ಭಕ್ಷಕ್ಕೆ ದಾವಣಗೆರೆ ಮೂಲವಾಗಿದೆ.

ಆದುದರಿಂದ ನೀವು ಪ್ರಯಾಣ ಮಾಡುವಾಗ ದಾವಣಗೆರೆಯಲ್ಲಿ ನಿಲ್ಲಿಸಿ ಬೆಣ್ಣೆ ದೋಸೆಯ ಸವಿಯನ್ನು ಸವಿಯಲು ಮರೆಯದಿರಿ. ದಾವಣಗೆರೆಯಲ್ಲಿ ಹರಿಹರೇಶ್ವರ ದೇವಸ್ಥಾನ ಮತ್ತು ದುರ್ಗಾಂಬಿಕಾ ದೇವಸ್ಥಾನವು ಭೇಟಿ ಮಾಡಲೇಬೇಕಾದ ದೇವಾಲಯವಾಗಿದೆ.

ರಾಣಿ ಬೆನ್ನೂರಿನ ಕೃಷ್ಣ ಮೃಗ ವನ್ಯಧಾಮ

ರಾಣಿ ಬೆನ್ನೂರಿನ ಕೃಷ್ಣ ಮೃಗ ವನ್ಯಧಾಮ

PC: Tejas054

ದಾವಣಗೆರೆಯಿಂದ 45 ಕಿ.ಮೀ ದೂರದಲ್ಲಿ ಈ ವನ್ಯಪ್ರದೇಶವಿದೆ. ಇಲ್ಲಿ ಬ್ಲ್ಯಾಕ್ಬಕ್ಸ್ ಅಥವಾ "ಕೃಷ್ಣ ಮೃಗ" ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದೆ. ಈ ಪ್ರದೇಶದಲ್ಲಿ ಸುಮಾರು 6000 ಕೃಷ್ಣ ಮೃಗಗಳು ವಾಸವಾಗಿವೆ. ಈ ಅಭಯಾರಣ್ಯವು ಯೂಕಲಿಪ್ಟಸ್ ನ ತೋಟಗಳಿಂದ ತುಂಬಿಕೊಂಡಿದೆ. ಇಲ್ಲಿ ನರಿ, ಜಾಕಲ್ ಲಂಗೂರ್ ಮುಂತಾದ ಪ್ರಾಣಿಗಳ ವಾಸಸ್ಥಾನವೂ ಆಗಿದೆ. ಇದು ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಜಾತಿಗಳ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ನೆಲೆಯಾಗಿದೆ.

ಹಾವೇರಿಯ ದೇವಾಲಯಗಳು

ಹಾವೇರಿಯ ದೇವಾಲಯಗಳು

PC: Rhalasur113

ಗೋಕರ್ಣ ತಲುಪುವ ಮೊದಲು ಹಾವೇರಿಗೆ ಭೇಟಿ ನಿಮ್ಮ ಯಾತ್ರೆಗೆ ಮುಖ್ಯವಾದುದಾಗಿದೆ. ಈ ಪಟ್ಟಣವು ಹಲವಾರು ದೇವತೆಗಳಿಗೆ ಮೀಸಲಾಗಿರುವ ದೇವಸ್ಥಾನಗಳಿಂದ ತುಂಬಿಕೊಂಡಿದೆ. ಹುಕ್ಕೇರಿ ಮಠ, ತಾರಕೇಶ್ವರ ದೇವಸ್ಥಾನ, ಕದಂಬೇಶ್ವರ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ, ನಾಗರೇಶ್ವರ ದೇವಸ್ಥಾನ ಈ ಜಿಲ್ಲೆಯಲ್ಲಿದೆ.

ದೇವಾಲಯಗಳ ಜೊತೆಗೆ ಇಲ್ಲಿಯ ಬಂಕಾಪುರದಲ್ಲಿರುವ ನವಿಲು ಅಭಯಾರಣ್ಯವೂ ಕೂಡಾ ಭೇಟಿ ನೀಡಬಹುದಾದ ಸ್ಥಳಗಳಲ್ಲಿ ಒಂದಾಗಿದೆ. ವಿಶೇಷವಾಗಿ ನವಿಲುಗಳನ್ನು ರಕ್ಷಿಸುವ ಕೆಲವು ಅಭಯಾರಣ್ಯಗಳಲ್ಲಿ ಒಂದಾಗಿದೆ, ಈ ಅಭಯಾರಣ್ಯವು ಇತರ ಪಕ್ಷಿ ಪ್ರಭೇದಗಳಾದ ಪ್ಯಾರಕೆಟ್ಸ್, ಕಿಂಗ್ ಫಿಶರ್ಸ್, ಸ್ಪಾಟ್ ಮರಕುಟಿಕ ಇನ್ನೂ ಹಲವಾರು ಪಕ್ಷಿಗಳಿಗೆ ನೆಲೆಯಾಗಿದೆ.

ಶಿರಸಿಯ ಜಲಪಾತಗಳು

ಶಿರಸಿಯ ಜಲಪಾತಗಳು

PC: Sachin Bv

ಶಿರಸಿಯು ಹಾವೇರಿಯಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ಪಟ್ಟಣವು ಮಧುಕೇಶ್ವರ ಮತ್ತು ಮಾರಿಕಾಂಬ ದೇವಸ್ಥಾನದಂತಹ ಕೆಲವು ದೇವಾಲಯಗಳನ್ನು ಹೊಂದಿದೆ, ಇಲ್ಲಿ ಹಲವಾರು ಜಲಪಾತಗಳನ್ನು ನೋಡಬಹುದು, ಎಲ್ಲವು ಶಿರಸಿಯಿಂದ 50-60 ಕಿ.ಮೀ ದೂರದಲ್ಲಿದೆ.

ಉಂಚಲಿ ಜಲಪಾತ, ಸಥೋಡಿ ಜಲಪಾತ, ಬೆಣ್ಣೆ ಹೋಲ್ ಜಲಪಾತ ಶಿರಸಿಯ ಹತ್ತಿರದ ಮತ್ತು ಅತ್ಯಂತ ಪ್ರಸಿದ್ಧವಾದ ಜಲಪಾತಗಳು.ಉಂಚಲಿ ಜಲಪಾತವು ಪಶ್ಚಿಮ ಘಟ್ಟದ ​​ಸಹ್ಯಾದ್ರಿ ಬೆಟ್ಟಗಳಲ್ಲಿರುವ ಸುಂದರ ಜಲಪಾತವಾಗಿದೆ.ಇದು 116 ಮೀ ಎತ್ತರದಿಂದ ಅಗಾನಾಶಿನಿ ನದಿಯಿಂದ ನಿರ್ಮಿಸಲ್ಪಟ್ಟಿದೆ. ಗೋಕರ್ಣದಲ್ಲಿ ಭೇಟಿ ನೀಡುವ ಸ್ಥಳಗಳ ಬಗ್ಗೆ ತಿಳಿದುಕೊಳ್ಳಲು ಮತ್ತಷ್ಟು ಓದಿ!

ಗೋಕರ್ಣಾದ ಕಡಲತೀರಗಳು

ಗೋಕರ್ಣಾದ ಕಡಲತೀರಗಳು

PC: Robert Helvie

ನೀವು ಅಂತಿಮವಾಗಿ ಕೊನೆಯ ಗಮ್ಯಸ್ಥಾನವನ್ನು ತಲುಪಿದ್ದೀರಿ, ಅದೇ ಗೋಕರ್ಣ!ಈ ಸ್ಥಳವು ಆಕರ್ಷಣೀಯ ಕಡಲ ತೀರಗಳಿಂದ ತುಂಬಿಕೊಂಡಿದೆ. ಇಲ್ಲಿ ಉತ್ತಮವಾಗಿ ಸಮಯವನ್ನು ಕಳೆಯಬಹುದು. ಇಲ್ಲಿಯ ಹೊಂಬಣ್ಣದ ಮರಳು, ಸ್ವಚ್ಚವಾದ ನೀಲಿ ನೀರು, ಸೂರ್ಯನ ಕಿರಣ ಮುಂತಾದುವುಗಳನ್ನು ಕೇವಲ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.

ಅವುಗಳಲ್ಲಿ ಓಂ ಬೀಚ್ ವಿದೇಶಿ ಮತ್ತು ಭಾರತೀಯ ಪ್ರವಾಸಿಗರಲ್ಲಿ ಪ್ರಸಿದ್ಧವಾಗಿದೆ."ಓಂ" ಸಂಕೇತದಂತೆಯೇ ಇರುವ ಆಕಾರದಿಂದಾಗಿ ಈ ಬೀಚ್ ಈ ಹೆಸರನ್ನು ಪಡೆದಿದೆ. ಗೋಕರ್ಣದಲ್ಲಿನ ಪ್ಯಾರಡೈಸ್ ಬೀಚ್ ಮತ್ತು ಗೋಕರ್ಣ ಬೀಚ್ ಇತರ ಜನಪ್ರಿಯ ಬೀಚ್ ಗಳಾಗಿವೆ.

ಸರ್ಫಿಂಗ್ ಮತ್ತು ಸ್ನೊರ್ಕೆಲಿಂಗ್

ಸರ್ಫಿಂಗ್ ಮತ್ತು ಸ್ನೊರ್ಕೆಲಿಂಗ್

PC: Stan Shebs

ನೀವು ಸಾಹಸ ಮಾಡುವ ಪ್ರವೃತ್ತಿಯವರಾಗಿದ್ದಲ್ಲಿ ಗೋಕರ್ಣದಲ್ಲಿ ಹಲವಾರು ಜಲಕ್ರೀಡೆಗೆ ಸಂಭಂದಿಸಿದ ಚಟುವಟಿಕೆಗಳಿವೆ. ಸರ್ಫಿಂಗ್ ಅವುಗಳಲ್ಲೊಂದಾಗಿದೆ. ಸ್ಥಳೀಯ ಸರ್ಫಿಂಗ್ ಸಂಸ್ಥೆಗಳು ಪ್ರಾರಂಭದ ಹಂತದ ಸರ್ಫಿಂಗ್ ಕ್ರೀಡೆಯ ತರಬೇತಿಯನ್ನು ನೀಡುತ್ತವೆ.

ಸರ್ಫಿಂಗ್ ಗೇರ್ ಗಳೂ ಅದೇ ಜಾಗದಲ್ಲಿ ಲಭ್ಯವಿರುತ್ತದೆ. ಸ್ನೋರ್ಕ್ಲಿಂಗ್ ಅಂದರೆ ನೀರಿನ ಒಳಗೆ ಮುಳುಗುವ ಮತ್ತು ನೀರಿನ ಒಳ ಜಗತ್ತಲ್ಲಿ ಎನೇನಿದೆ ಎಂದು ಅನುಭವಿಸುವಂತಹ ಸಾಹಸಮಯ ಕ್ರೀಡೆಯಾಗಿದೆ. ಈ ಮುಳುಗು ಸುಮಾರು 15 ಅಡಿ ಕೆಳಗೆ ಹೋಗುವುದಾಗಿದ್ದು ಅಲ್ಲಿ ಸಮುದ್ರದ ಒಳಗಿರುವ ಹವಳದ ಬಂಡೆಗಳನ್ನು ನೋಡಬಹುದಾಗಿದೆ. ಅಲ್ಲದೆ ಸಮುದ್ರ ಅರ್ಚಿನ್ಗಳು ಮತ್ತು ಏಂಜಲ್ ಮೀನುಗಳನ್ನು ಸಹ ನೋಡಬಹುದು! ನೀವು ಅದೃಷ್ಟವಂತರಾಗಿದ್ದಲ್ಲಿ, ಸಮುದ್ರ ಆಮೆಗಳು ಅಥವಾ ಡಾಲ್ಫಿನ್ಗನ್ ಗಳೊಂದಿಗೆ ಈಜುವುದನ್ನು ಪಡೆಯಬಹುದು!

ಜೆಟ್ ಸ್ಕಿಯಿಂಗ್ ಮತ್ತು ಪ್ಯಾರಾಸೈಲಿಂಗ್

ಜೆಟ್ ಸ್ಕಿಯಿಂಗ್ ಮತ್ತು ಪ್ಯಾರಾಸೈಲಿಂಗ್

PC: Echasketch123

ಜಲ ಕ್ರೀಡೆಗಳು ಸರ್ಫಿಂಗ್ ಅಥವಾ ಸ್ನಾರ್ಕಲಿಂಗ್ನಲ್ಲಿ ಕೊನೆಗೊಳ್ಳುವುದಿಲ್ಲ, ಗೋಕರ್ಣದಲ್ಲಿ ನೀವು ಇನ್ನೂ ಹೆಚ್ಚು ಮಾಡಬಹುದು.ಜೆಟ್ ಸ್ಕೀಯಿಂಗ್ ಎಂಬುದು ಬಾಳೆಹಣ್ಣಿನ ದೋಣಿಯ ಮೇಲೆ ಕುಳಿತುಕೊಳ್ಳುವುದು ಮಾತ್ರವಲ್ಲದೆ ಅದು ನೀರಿನ ಏರಿಳಿತಗಳ ಜೊತೆಗೆ ಅನುಭವವನ್ನು ನೀಡುತ್ತದೆ!

ಆಹ್ಲಾದಕರವಾದ ಅಲೆಗಳ ಮೇಲೆ ನೀವು ಪ್ರಯಾಣ ಮಾಡಬಹುದು ಹೀಗೆ ಹೋಗುವಾಗ ವಿಶಿಷ್ಟವಾಗಿ 15-20 ನಿಮಿಷಗಳ ಕಾಲ, ಮತ್ತು ಉಪ್ಪು ಸಮುದ್ರದ ತಂಗಾಳಿಯನ್ನು ಅನುಭವಿಸಬಹುದು.ಬಲವಾದ ಅಡ್ರಿನಾಲಿನ್ ನ ವೈಪರೀತ್ಯವನ್ನು ಅನುಭವಿಸಲು ನೀವು ಪ್ಯಾರಾಸೈಲ್ ಮಾಡಬೇಕು!

ಇಲ್ಲಿ, ಸುಮಾರು 300 ಅಡಿಗಳಷ್ಟು ಉದ್ದದ ಹಗ್ಗವನ್ನು ವೇಗ ದೋಣಿಗೆ ಜೋಡಿಸಲಾಗಿದೆ, ಇನ್ನೊಂದು ತುದಿಗೆ ಪ್ಯಾರಚುಟ್ ನ್ನು ಕಟ್ಟಲಾಗಿದೆ. ಸಮುದ್ರದ ಮೇಲೆ ದೋಣಿಯು ವೇಗವಾಗುತ್ತಿದ್ದಂತೆ ಇದು ಆಕಾಶದಲ್ಲಿ ಹಾರುತ್ತದೆ! ಆದರೆ ಪ್ಯಾರಾಸೈಲಿಂಗ್ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳವರೆಗೆ ಮಾತ್ರ ಲಭ್ಯವಿದೆ.

ಗೋಕರ್ಣದ ದೇವಾಲಯಗಳು

ಗೋಕರ್ಣದ ದೇವಾಲಯಗಳು

PC: Sbblr geervaanee

ಮೊದಲೇ ಹೇಳಿರುವಂತೆ ಗೋಕರ್ಣವು ಹಲವಾರು ದೇವಾಲಯಗಳಿಗೆ ನೆಲೆಯಾಗಿದೆ. ಮಹಾಬಲೇಶ್ವರ ದೇವಸ್ಥಾನ, ಮಹಾ ಗಣಪತಿ ದೇವಾಲಯ, ತಾಮ್ರಗೌರಿ ಮತ್ತು ವೆಂಕಟರಮಣ ದೇವಾಲಯಗಳು ನಾಲ್ಕು ಪ್ರಮುಖ ಭೇಟಿ ನೀಡಲೇ ಬೇಕಾದ ದೇವಾಲಯಗಳಾಗಿವೆ.

ಮಹಾಬಲೇಶ್ವರ ದೇವಸ್ಥಾನವು ಅತ್ಯಂತ ಜನಪ್ರಿಯವಾದ ದೇವಾಲಯವಾಗಿದ್ದು, ಶಿವನಿಗೆ ಸಮರ್ಪಿಸಲಾಗಿದೆ. ಇದನ್ನು ದ್ರಾವಿಡ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಿಸಲಾಗಿದೆ, ಈ ದೇವಸ್ಥಾನದಲ್ಲಿ ಕಂಡುಬರುವ ಶಿವನ ಕಲ್ಲಿನ ಕೆತ್ತನೆಯು ಕನಿಷ್ಠ 1,500 ವರ್ಷಗಳಷ್ಟು ಹಳೆಯದಾಗಿದೆ ಎಂದು ನಂಬಲಾಗಿದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X