Search
  • Follow NativePlanet
Share
» »ಗೋವಾದಿಂದ 200 ಕಿ.ಮೀ ಅಂತರದಲ್ಲಿ ಕರ್ನಾಟಕದಲ್ಲಿ ವಾರಾಂತ್ಯದಲ್ಲಿ ಪ್ರವಾಸ ಮಾಡಬಹುದಾದ ತಾಣಗಳು

ಗೋವಾದಿಂದ 200 ಕಿ.ಮೀ ಅಂತರದಲ್ಲಿ ಕರ್ನಾಟಕದಲ್ಲಿ ವಾರಾಂತ್ಯದಲ್ಲಿ ಪ್ರವಾಸ ಮಾಡಬಹುದಾದ ತಾಣಗಳು

ಗೋವಾ ತಾನೇ ಸ್ವರ್ಗಕ್ಕಿಂತ ಕಡಿಮೆಯೇನೂ ಇಲ್ಲದ ಹಲವಾರು ಸ್ಥಳಗಳನ್ನು ತನ್ನಲ್ಲಿ ಹೊಂದಿದ್ದರೂ ಕೂಡಾ ನೀವು ಇದರ ಗಡಿಯಲ್ಲಿ ಇನ್ನೂ ಹೆಚ್ಚಿನದನ್ನು ಊಹೆಗಿಂತಲೂ ಹೆಚ್ಚಿನದನ್ನು ಅನ್ವೇಷಣೆ ಮಾಡಬಹುದಾಗಿದೆ. ಗೋವಾದಲ್ಲಿಯ ಬೀಚ್ ಗಳು ಮತ್ತು ಪ್ರಾಚೀನ ಸ್ಮಾರಕಗಳನ್ನು ಅನ್ವೇಷಣೆ ಮಾಡಿ ಬೇಜಾರಾಗಿದ್ದಲ್ಲಿ, ಗೋವಾದಿಂದ ಅದರ ಗಡಿಯಲ್ಲಿ ಅಂದರೆ 200 ಕಿ.ಮೀ ಅಂತರದಲ್ಲಿ ಕರ್ನಾಟಕದಲ್ಲಿ ವಾರಾಂತ್ಯದಲ್ಲಿ ಪ್ರವಾಸ ಮಾಡಬಹುದಾದ ಹಲವಾರು ತಾಣಗಳನ್ನು ನೋಡಬಹುದಾಗಿದ್ದು ಇವಗಳು ಖಂಡಿತವಾಗಿಯೂ ಭಾರತದಲ್ಲಿಯ ಅತ್ಯಂತ ಸೌಂದರ್ಯತೆಯಿಂದ ಕೂಡಿದ ಇತರ ಸ್ಥಳಗಳಿಗೆ ಸ್ಪರ್ಧೆ ನೀಡುತ್ತದೆ.

ಇವುಗಳನ್ನು ವಿಂಗಡಣೆ ಮಾಡುವುದಾದರೆ ಕಡಿಮೆ ಅನ್ವೇಷಿತ ಬೀಚ್ ಗಳಿಂದ ಶ್ರೀಮಂತ ಕಾಡುಗಳವರೆಗೆ ಮತ್ತು ಹರಿಯುವ ನದಿಗಳಿಂದ ಹಳೆಯಕಾಲದ ಸಂಕೀರ್ಣಗಳವರೆಗೆ , ಪ್ರವಾಸಿಗರು ಬಯಸುವ ಎಲ್ಲವನ್ನೂ ಪಟ್ಟಿ ಮಾಡಬಹುದಾಗಿದೆ. ಆದುದರಿಂದ ಗೋವಾಗೆ ಅತ್ಯಂತ ದೂರವೂ ಅಲ್ಲ ಅತೀ ಹತ್ತಿರವೂ ಇರದ ಈ ವಾರಾಂತ್ಯದ ಸ್ಥಳಗಳ ಬಗ್ಗೆ ತಿಳಿಯೋಣ ಇವುಗಳು ಖಂಡಿತವಾಗಿಯೂ ನಿಮ್ಮನ್ನು ಮಂತ್ರಮುಗ್ದರನ್ನಾಗಿಸುತ್ತದೆ.

karwar beach

ಕಾರವಾರ

ಅಂತರ - 85 ಕಿ.ಮೀ

ಪೂರ್ವಭಾಗದಲ್ಲಿ ಪಶ್ಚಿಮಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳು, ಪಶ್ಚಿಮದಲ್ಲಿ ಅರಬ್ಬೀ ಸಮುದ್ರದ ನೀರಿನಿಂದ ಆವರಿಸಲ್ಪಟ್ಟ ಕಾರವಾರವು ಸುಂದರವಾದ ಮತ್ತು ನಯನಮನೋಹರವಾದ ಕರ್ನಾಟಕದಲ್ಲಿರುವ ತಾಣಗಳಲ್ಲಿ ಒಂದೆನಿಸಿದೆ. ಬಂದರು ನಗರವಾಗಿರುವ ಬಂದರು ಪಟ್ಟಣವಾಗಿರುವುದರಿಂದ ಕೃಷಿ ಮತ್ತು ಮೀನುಗಾರಿಕೆ ಕಾರವಾರದ ಪ್ರಾಥಮಿಕ ಉದ್ಯಮವಾಗಿದೆ. ಆದುದರಿಂದ ಈ ನಗರವು ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದ್ದು, ಇಲ್ಲಿಯ ಶ್ರೀಮಂತ ಕಾಡುಗಳಲ್ಲಿ ಮತ್ತು ಶಾಂತವಾದ ಬೀಚ್ ಗಳ ಪರಿಸರದಲ್ಲಿ ಕಾಲ ಕಳೆಯಲು ಬಯಸುತ್ತಾರೆ.ಹಾಗಿದ್ದಲ್ಲಿ, ಬೆರಗುಗೊಳಿಸುವ ಕಡಲತೀರಗಳಲ್ಲಿ ಅಡ್ಡಾಡುವುದು ಮತ್ತು ಇಲ್ಲಿಯ ಕಾಡುಗಳ ಸಾಂದ್ರತೆಯನ್ನು ಅನ್ವೇಷಿಸುವುದು ಹೇಗೆ?

gokak water falls

ಗೋಕಾಕ್

ಅಂತರ - 182 ಕಿ.ಮೀ

ಕರ್ನಾಟಕದ ಇನ್ನೊಂದು ಸುಂದರವಾದ ಪಟ್ಟಣವೆಂದರೆ ಅದು ಗೋಕಾಕ್ ಇಲ್ಲಿಘಟಪ್ರಭಾ ನದಿಯ ಮೇಲಿರುವ ಸುಂದರವಾದ ವಿಶಾಲವಾದ ನೀರಿನ ಕ್ಯಾಸ್ಕೇಡ್ ಆಗಿರುವ ಗೋಕಾಕ್ ಜಲಪಾತಕ್ಕಾಗಿ ಅಪಾರವಾಗಿ ಜನಪ್ರಿಯವಾಗಿದೆ. ಇದರ ಹೊರತಾಗಿಯೂ ಗೋಕಾಕ್ 19ನೇ ಶತಮಾನಕ್ಕೂ ಹಿಂದಿನ ಹಲವಾರು ಪ್ರಾಚೀನ ಕಟ್ಟಡಗಳನ್ನು ಹೊಂದಿದೆ. ಗೋಕಾಕವು ಗೋಕಾಕ್ ಜಲಪಾತಕ್ಕೆ ಹೆಸರುವಾಸಿಯಾಗಿದ್ದರೂ ಸಹ, ಅದರ ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳ ಶಿಖರಗಳಿಂದಾಗಿ ಕ್ಯಾಂಪ್ ಮಾಡಲು ಮತ್ತು ಚಾರಣ ಮಾಡಲು ಇಷ್ಟಪಡುವ ಚಾರಣಿಗರು ಮತ್ತು ಶಿಬಿರಾರ್ಥಿಗಳಿಗೆ ಇದು ಇನ್ನೂ ಸೂಕ್ತವಾದ ಒಂದು ಆಫ್‌ಬೀಟ್ ತಾಣವಾಗಿದೆ.

gokarna beach

ಗೋಕರ್ಣ

ಅಂತರ -145 ಕಿ.ಮೀ

ಇಂದು ಗೋಕರ್ಣವು ಪ್ರವಾಸೋದ್ಯಮವನ್ನು ಉತ್ತಮಪಡಿಸುವುದರ ಮೂಲಕ ದಿನದಿಂದ ದಿನಕ್ಕೆ ಹೆಸರುಗಳಿಸುತ್ತಿದೆ. ಇಲ್ಲಿಯ ಪವಿತ್ರವಾದ ಬೀಚ್ ಗಳ ಇರುವಿಕೆ ಮತ್ತು ಪ್ರಶಾಂತವಾದ ವಾತಾವರಣದಿಂದಾಗಿ ಪ್ರವಾಸಿಗರು ಮತ್ತು ಪ್ರಯಾಣಿಕರ ವಾರಾಂತ್ಯದಲ್ಲಿ ಭೇಟಿ ಕೊಡುವ ಮೆಚ್ಚಿನ ತಾಣಗಳಲ್ಲಿ ಒಂದಾಗಿದೆ.
ಹಲವಾರು ಶತಮಾನಗಳಷ್ಟು ಹಳೆಯದಾದ ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳ ಉಪಸ್ಥಿತಿಯಿಂದಾಗಿ ಕರ್ನಾಟಕದ ದೇವಾಲಯಗಳ ಪಟ್ಟಣ ಎಂದು ಸಹ ಕರೆಯಲ್ಪಡುತ್ತದೆ, ನೀವು ಗೋವಾದಿಂದ 200 ಕಿಮೀ ಅಂತರದಲ್ಲಿ ವಾರಾಂತ್ಯದ ವಿಹಾರಗಳನ್ನು ಹುಡುಕುತ್ತಿದ್ದರೆ ಗೋಕರ್ಣವು ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಿ.

belgavi city to explore

ಬೆಳಗಾವಿ

ಅಂತರ -105 ಕಿ.ಮೀ

ಕೋಟೆ ನಗರವಾಗಿರುವ ಬೆಳಗಾವಿಗೆ 13 ನೇ ಶತಮಾನದ ಯುಗಕ್ಕೂ ಹಿಂದಿನ ಇತಿಹಾಸವಿದೆ. ಹಲವಾರು ಹಿಂದಿನ ಯುದ್ದಗಳ ನಂತರವೂ ಅತ್ಯಾಧುನಿಕತೆಯ ಮೂಲಕ ಉಳಿದುಕೊಂಡಿರುವ ಬೆಳಗಾವಿಯು ತನ್ನ ಅಸ್ತಿತ್ವದ ಕಥೆಗಳನ್ನು ಸಾರುತ್ತಾ ಇನ್ನೂ ಗಟ್ಟಿಯಾಗಿ ನಿಂತಿದೆ. ಈ ಐತಿಹಾಸಿಕ ಪಟ್ಟಣಕ್ಕೆ ನೀವೇ ಹೋಗಿ ಅದರ ಹಿಂದಿನ ಯುಗದ ಅನುಭವವನ್ನು ಪಡೆಯುವುದು ಹೇಗಿರಬಹುದು.
ಬೆಳಗಾವಿಯಲ್ಲಿ ಕೋಟೆಗಳಿಂದ ದೇವಾಲಯಗಳವರೆಗೆ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಹಸಿರಿನ ನಡುವೆ ನಿರ್ಮಿಸಲಾದ 13 ನೇ ಶತಮಾನದ ಜೈನ ದೇವಾಲಯಗಳಿಗಾಗಿ ಇದು ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ. ನೀವು ಇತಿಹಾಸಪ್ರಿಯರಾಗಿದ್ದಲ್ಲಿ, ಬೆಳಗಾವಿಯು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.

dandeli

ದಾಂಡೇಲಿ

ಅಂತರ -100 ಕಿ.ಮೀ

ದಟ್ಟವಾದ ಹಾಗೂ ಸುಂದರವಾದ ಕಾಡುಗಳ ಮಧ್ಯೆ ರಮಣೀಯವಾದ ನದಿಗಳು ಹರಿಯುವುದನ್ನು ನೋಡಿ ಆನಂದಿಸಬೇಕೆ? ಹಾಗಿದ್ದಲ್ಲಿ, ದಾಂಡೇಲಿಯು ನಿಮಗೆ ಭೇಟಿಗೆ ಯೋಗ್ಯವಾದ ತಾಣವಾಗಿದೆ. ಶ್ರೀಮಂತ ಪಶ್ಚಿಮಘಟ್ಟದಲ್ಲಿ ನೆಲೆಸಿರುವ ಈ ಸ್ಥಳವು ಇಲ್ಲಿಯ ನದಿಗಳು, ಮತ್ತು ಕಾಡುಗಳಿಂದಾಗಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. ಈ ಸ್ಥಳವು ಹಲವಾರು ಸಾಹಸಮಯ ಚಟುವಟಿಕೆಗಳಾದ ವಾಟರ್ ರಾಫ್ಟಿಂಗ್, ಸ್ವಿಮ್ಮಿಂಗ್, ಮತ್ತು ಇಲ್ಲಿಯ ವೈವಿಧ್ಯಮಯ ವನ್ಯಜೀವಿಗಳ ಅನ್ವೇಷಣೆ ಇತ್ಯಾದಿಗಳನ್ನು ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ಕಾಳೀ ನದಿ ದಂಡೆಯಲ್ಲಿರುವ ಹಲವಾರು ಐತಿಹಾಸಿಕ ದೇವಾಲಯಗಳಿಗೂ ಇಲ್ಲಿ ಭೇಟಿನೀಡಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X