Search
  • Follow NativePlanet
Share
» »ಗುಲ್ಬರ್ಗಾದಲ್ಲಿರುವ ದೆವ್ವದ ಹಳ್ಳಿ ಬಗ್ಗೆ ಗೊತ್ತಾ?

ಗುಲ್ಬರ್ಗಾದಲ್ಲಿರುವ ದೆವ್ವದ ಹಳ್ಳಿ ಬಗ್ಗೆ ಗೊತ್ತಾ?

60 ವರ್ಷಗಳ ಹಿಂದೆ ಸೋಮನಾಥ ಹಳ್ಳಿಯಲ್ಲಿ ಇಬ್ಬರು ಲಿಂಗಾಯಿತ ಮಹಿಳೆಯರು ಹುಲಿಗೆ ಬಲಿಯಾದಾಗಿನಿಂದ ಈ ಊರಿನಲ್ಲಿ ಅನೇಕ ಸಾವು ನಡೆದಿದೆ. ಅಲ್ಲದೆ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಾ ಇದೆ. ಆ ಪರಿಸರದ ಸುತ್ತಲೂ ಆತ್ಮಹತ್ಯೆಯಂತಹ ಪ್ರಕರಣಗಳು ಆರಂಭವಾದವು. ಹೀಗಾಗಿ ಈ ಭೂತದ ಕಥೆ ಇಡೀ ಹಳ್ಳಿಗೆ ಹಬ್ಬಿತು.

 ಹಾಸನದಲ್ಲಿದೆ ಪ್ರತೀ ವರ್ಷ ಮುಳುಗಿ ಏಳುವ ಚರ್ಚ್ ಹಾಸನದಲ್ಲಿದೆ ಪ್ರತೀ ವರ್ಷ ಮುಳುಗಿ ಏಳುವ ಚರ್ಚ್

ಊರು ಬಿಡುವಂತೆ ಸೂಚಿಸಿದ ಜ್ಯೋತಿಷಿಯರು

ಊರು ಬಿಡುವಂತೆ ಸೂಚಿಸಿದ ಜ್ಯೋತಿಷಿಯರು

ಜೇವರ್ಗಿಯ ಜ್ಯೋತೀಷಿಯೊಬ್ಬರು ಆ ಊರಿನ ಜನರಿಗೆ ಊರನ್ನೇ ಬಿಟ್ಟು ಹೋಗುವಂತೆ ತಿಳಿಸಿದರು. ಆ ಕುಟಂಬದಲ್ಲಿ ಬದುಕುಳಿದಿದ್ದವರು ಆ ಜಾಗವನ್ನು ಮಾರಾಟ ಮಾಡಿ ಪಕ್ಕದ ಹಳ್ಳಿಗೆ ಹೋಗಿ ನೆಲೆಸಿದರು. ದೆವ್ವಕ್ಕೆ ಹೆದರಿ ಉಳಿದ ಕುಟುಂಬಗಳೂ ಊರು ಬಿಡಲು ಆರಂಭಿಸಿದರು.

ಜಮೀನು ಮಾರಾಟ ಮಾಡಿ ಹೊರಟ ಜನರು

ಜಮೀನು ಮಾರಾಟ ಮಾಡಿ ಹೊರಟ ಜನರು

ಸುಮಾರು ಈ ಹಳ್ಳಿಯಲ್ಲಿರುವ ಸುಮಾರು 400 ಮನೆಗಳಲ್ಲಿ 300 ಮನೆಗಳು ಮನೆಬಿಟ್ಟು ಹೋದವು. ಉಳಿದ ಮನೆಯವರು ರಾತ್ರಿಯಾಗುತ್ತಿದ್ದಂತೆ ಅತ್ತ ಸುಳಿಯುವುದನ್ನೇ ನಿಲ್ಲಿಸಿ ಬಿಟ್ಟಿದ್ದರು. ಯಾದಗಿರಿಯ ವಿಶ್ವಾರಾಧ್ಯ ಮಠದ ಗಂಗಾಧರೇಂದ್ರ ಸ್ವಾಮೀಜಿಯವರನ್ನು ಈ ಊರಿನ ಸಮಸ್ಯೆ ಏನು ಎನ್ನುವುದನ್ನು ತಿಳಿಯುವಂತೆ ಕೋರಲಾಗಿತ್ತು.

 ಮನೆ ಕೆಡವುವಂತೆ ಸೂಚನೆ

ಮನೆ ಕೆಡವುವಂತೆ ಸೂಚನೆ

ಸ್ವಾಮೀಜಿ ಮೂರು ರಾತ್ರಿ ಆ ಊರಿನ ರಸ್ತೆಯಲ್ಲಿ ಓಡಾಡಿದರು. ಆ ಊರಿನಲ್ಲಿ ವಾಸ್ತವ್ಯ ಹೂಡಿದರು. ಆ ಭಯಾನಕ ಮನೆಯ ಮುಂದೆ ನಡೆಯುವಾಗ ಏನೋ ವಿಚಿತ್ರ ಅನುಭವವಾದದನ್ನು ತಿಳಿಸಿದರು. ಆ ಊರಿನವರಿಗೆ ಆ ಮನೆಯನ್ನು ಕೆಡವುವಂತೆ ಸಲಹೆ ನೀಡಿದ್ದರು.

ಸೋಮನಾಥ ಹಳ್ಳಿಗೆ ಹೋಗ್ತೀರಾ?

ಸೋಮನಾಥ ಹಳ್ಳಿಗೆ ಹೋಗ್ತೀರಾ?

ಹಾಗಾದ್ರೆ ದುರಂತ ಹಳ್ಳಿಯ ಸಮಸ್ಯೆ ಏನು ಎಂಬುವುದನ್ನು ತಿಳಿಯಬೇಕಾದರೆ ನೀವು ಆ ಹಳ್ಳಿಗೆ ಹೋಗಬೇಕು. ಇಂತಹ ಭಯಾನಕ ಸ್ಥಳಗಳಿಗೆ ಹೋಗುವ ಧೈರ್ಯ ನಿಮಲ್ಲಿದ್ದರೆ ನೀವು ಸೋಮನಾಥ ಹಳ್ಳಿಗೆ ಹೋಗಬಹುದು.

Read more about: karnataka haunted
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X