Search
  • Follow NativePlanet
Share
» »ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ

ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ

ಅದೇ ಸಾಂಪ್ರದಾಯಿಕ ಪ್ರವಾಸಿ ತಾಣಗಳಿಗೆ ಹೋಗಿ ನಿಮಗೆ ಬೇಸರವಾಗಿದ್ದರೆ ಮತ್ತು ಹಳ್ಳಿಗಾಡಿನ ಜೀವನದ ಮತ್ತು ಪ್ರಕೃತಿಯ ಮಿಶ್ರಣವನ್ನು ನೀವು ಆನಂದಿಸಲು ಸೂಕ್ತ ತಾಣಗಳನ್ನು ಹುಡುಕುತ್ತಿದ್ದರೆ, ನೀವು ಈ ಲೇಖನವನ್ನು ಖಂಠಿತವಾಗಿಯೂ ಓದಬೇಕು. ಇಲ್ಲಿ ನಾವು ಬೆಂಗಳೂರಿನ ಸುತ್ತಮುತ್ತ ಇರುವ ಸುಂದರವಾದ ಹಳ್ಳಿಗಳನ್ನು ಪಟ್ಟಿ ಮಾಡಿದ್ದೇವೆ. ಈ ಹಳ್ಳಿಗಳು ಪ್ರಾಚೀನ ಸೌಂದರ್ಯ ಮತ್ತು ಅದ್ಬುತ ವಾತಾವರಣದಿಂದ ಕೂಡಿವೆ. ಈ ಆಕರ್ಷಕ ಹಳ್ಳಿಗಗಳಲ್ಲಿ ನೀವು ನಿಜಕ್ಕೂ ಪ್ರಕೃತಿಯ ಅದ್ಬುತ ವಾತಾವರಣವನ್ನು ಅಕ್ಷರಶಃ ಅನುಭವಿಸಬಹುದು. ಕೆಲವು ಹಳ್ಳಿಗಳು ಇನ್ನು ಹಳೆಯ ಕಾಲದ ಪದ್ಧತಿಗಳು ಮತ್ತು ಸಂಪ್ರದಾಯಗಳಿಗೆ ಪ್ರಸಿದ್ಧವಾಗಿದ್ದು ಮತ್ತು ಸೊಂಪಾದ ಸಸ್ಯ ಸಮೃದ್ಧಿಯನ್ನು ಹೊಂದಿವೆ.

ಸಾಮಾನ್ಯವಾಗಿ ಪ್ರವಾಸಿಗರನ್ನು ಆಕರ್ಷಿಸುವ ವಿಷಯವೆಂದರೆ ಹಚ್ಚ ಹಸಿರಿನೊಂದಿಗೆ ಕೂಡಿದ ಅದ್ಬುತ ವಾತಾವರಣ. ಆದ್ದರಿಂದ, ನಾವು ಇಲ್ಲಿ ಈ ಸುಂದರವಾದ ಹಳ್ಳಿಗಳ ಬಗ್ಗೆ ಮತ್ತು ಅವುಗಳು ಬೆಂಗಳೂರಿನಿಂದ ಇರುವ ದೂರದ ಬಗ್ಗೆ ವಿವರವಾಗಿ ತಿಳಿಸಲಿದ್ದೇವೆ.

1. ನೃತ್ಯ ಗ್ರಾಮ

ಬೆಂಗಳೂರಿನಿಂದ ಇರುವ ದೂರ - 35 ಕಿ.ಮೀ.

ಡ್ಯಾನ್ಸ್ ವಿಲೇಜ್ ಎಂದೂ ಕರೆಯಲ್ಪಡುವ ನೃತ್ಯ ಗ್ರಾಮ ಭಾರತದ ಶಾಸ್ತ್ರೀಯ ನೃತ್ಯಗಾರರಿಗೆ ಮೊದಲ ವಸತಿ ಶಾಲೆಯಾಗಿದೆ. ಒಡಿಸ್ಸಿಯಿಂದ ಕಥಕಳಿ ಮತ್ತು ಭರತನಾಟ್ಯದಿಂದ ಕಥಕ್ ವರೆಗಿನ ನೃತ್ಯ ಪ್ರಕಾರಗಳಲ್ಲಿ ಉತ್ತಮ ಸಾಧನೆ ಮಾಡಲು ನೃತ್ಯಗಾರರಿಗೆ ನೆಲೆಯಾಗಿದೆ.

ಈ ನೃತ್ಯಗಾರರು ಜಗತ್ತಿನಾದ್ಯಂತ ಪ್ರದರ್ಶನ ನೀಡಲು ಹೆಸರುವಾಸಿಯಾಗಿದ್ದಾರೆ. 1990 ರಲ್ಲಿ ಪ್ರೊಟಿಮಾ ಗೌರಿ ಎಂಬ ಶಾಸ್ತ್ರೀಯ ನರ್ತಕಿ ಸ್ಥಾಪಿಸಿದ ನೃತ್ಯ ಗ್ರಾಮ ಇಂದು ದೇಶದ ಶಾಸ್ತ್ರೀಯ ನೃತ್ಯಗಾರರಿಗಾಗಿ ಹೆಚ್ಚು ಹೆಸರುವಾಸಿಯಾದ ಶಾಲೆಗಳಲ್ಲಿ ಒಂದಾಗಿದೆ. ಶಾಲೆಯನ್ನು ಹಳ್ಳಿಯ ರೂಪದಲ್ಲಿ ಸ್ಥಾಪಿಸಿಲಾಗಿದ್ದು, ಇದು ಪ್ರವಾಸಿಗರಲ್ಲಿಯೂ ಜನಪ್ರಿಯವಾಗಿದೆ. ಈ ಸುಂದರ ಹಳ್ಳಿಯ ಸೌಂದರ್ಯಕ್ಕೆ ಸಾಕ್ಷಿಯಾಗಲು ಮತ್ತು ನೃತ್ಯವನ್ನು ಕಲಿಯಲು ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

2. ಆನೆಗುಂದಿ

ಬೆಂಗಳೂರಿನಿಂದ ಇರುವ ದೂರ - 360 ಕಿ.ಮೀ.

ಕೊಪ್ಪಲ್ ಜಿಲ್ಲೆಯಲ್ಲಿರುವ ಆನೆಗುಂದಿ ಭಾರತದ ಅತ್ಯಂತ ಪ್ರಾಚೀನ ಸ್ಥಳಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ, ಏಕೆಂದರೆ ಇದು ಮಹಾಕಾವ್ಯ ರಾಮಾಯಣದ ಕಾಲದಲ್ಲಿ ಮಂಗಗಳ ರಾಜ ಸುಗ್ರೀವನ ಸಾಮ್ರಾಜ್ಯವೆಂದು ಹೇಳಲಾಗುತ್ತದೆ. ಆದ್ದರಿಂದ, ಇದು ಹಲವಾರು ಧಾರ್ಮಿಕ ಸ್ಥಳಗಳು ಮತ್ತು ಪ್ರಾಚೀನ ದೇವಾಲಯಗಳಿಗೆ ನೆಲೆಯಾಗಿದೆ. ಸ್ಥಳೀಯ ದಂತಕಥೆಗಳ ಪ್ರಕಾರ, ಆನೆಗುಂದಿ ಭಗವಾನ್ ಹನುಮನ ಜನ್ಮಸ್ಥಳವೂ ಆಗಿದೆ.

ದೇವಾಲಯಗಳು ಮತ್ತು ಇತರ ಐತಿಹಾಸಿಕ ತಾಣಗಳು ಹಚ್ಚ ಹಸಿರಿನಿಂದ ಕೂಡಿದ್ದು ವಾರಾಂತ್ಯದಲ್ಲಿ ಅನ್ವೇಷಿಸಲು ಸೂಕ್ತವಾದ ತಾಣವಾಗಿದೆ. ಇದು ಆಫ್‌ಬೀಟ್ ಪ್ರಯಾಣಿಕರು ಮತ್ತು ಕೆಲವು ಇತಿಹಾಸ ಪ್ರಿಯರಲ್ಲಿ ಮಾತ್ರ ಜನಪ್ರಿಯವಾಗಿರುವ ಕಾರಣ, ನಿಮ್ಮ ವಾರಾಂತ್ಯವನ್ನು ಏಕಾಂತದ ನಡುವೆ ಕಳೆಯಲು ಇದು ಒಂದು ಸುಂದರವಾದ ತಾಣವಾಗಿದೆ.

ಒಂದೆಡೆ, ನೀವು ಅದರ ಬೆಟ್ಟಗಳು, ಕಾಡುಗಳು ಮತ್ತು ಬಹುಕಾಂತೀಯ ಬಯಲು ಪ್ರದೇಶಗಳ ಸೌಂದರ್ಯವನ್ನು ಆನಂದಿಸಬಹುದು ಮತ್ತು ಮತ್ತೊಂದೆಡೆ, ನೀವು ಅದರ ಪ್ರಾಚೀನ ದೇವಾಲಯಗಳು ಮತ್ತು ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸಲು ಹೋಗಬಹುದು. ಇಲ್ಲಿನ ಪ್ರಮುಖ ಸ್ಥಳಗಳಲ್ಲಿ ಅಂಜನೇಯ ಪರ್ವತ, ಪಂಪಾ ಸರೋವರ, ಕಮಲ್ ಮಹಲ್ ಮತ್ತು ಹುಚಪ್ಪಯನ ಮಾಥ ದೇವಾಲಯ ಸೇರಿವೆ. ಇಲ್ಲಿ ನೀವು ದೇಶದ ಜೀವನದ ಸೌಂದರ್ಯವನ್ನು ಅನುಭವಿಸುತ್ತ ಭಾರತೀಯ ಸಂಸ್ಕೃತಿಯ ಇತಿಹಾಸದ ಬಗ್ಗೆ ಸಾಕಷ್ಟು ಕಲಿಯಬಹುದು.

3. ಕಿಗ್ಗಾ

ಬೆಂಗಳೂರಿನಿಂದ ಇರುವ ದೂರ - 335 ಕಿ.ಮೀ.

ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಶಾಂತಿಯುತವಾಗಿ ನೆಲೆಗೊಂಡಿರುವ ಕಿಗ್ಗಾ ಪ್ರತಿ ಪ್ರವಾಸಿಗರನ್ನು ಅನ್ವೇಷಿಸಲು ಮತ್ತು ಸವಿಯಲು ಇಷ್ಟಪಡುವ ಅದ್ಬುತ ತಾಣವಾಗಿದೆ. ಹಚ್ಚ ಹಸಿರಿನ ಸುತ್ತಮುತ್ತಲಿನ ಪ್ರದೇಶಗಳು ಮತ್ತು ಹಳ್ಳಿಗಾಡಿನ ಜೀವನವನ್ನು ಹೊರತುಪಡಿಸಿ, ಇದು ಜಲಪಾತಗಳು, ಚಾರಣದ ಹಾದಿಗಳು, ಬೆಟ್ಟಗಳು, ಶಿಖರಗಳು ಮತ್ತು ಸುಂದರವಾದ ತೊರೆಗಳಿಗೆ ನೆಲೆಯಾಗಿದೆ. ಪ್ರಶಾಂತತೆ ಮತ್ತು ನೆಮ್ಮದಿಯ ಜಗತ್ತಿನಲ್ಲಿ ಕಳೆದುಹೋಗಲು ಇದು ಬೆಂಗಳೂರಿನ ಸುತ್ತ ಒಂದು ಪರಿಪೂರ್ಣ ತಾಣವಾಗಿದೆ ಎಂದರೆ ತಪ್ಪಲ್ಲ.

ನೀವು ಹಲವಾರು ಐತಿಹಾಸಿಕ ತಾಣಗಳು ಮತ್ತು ಪ್ರಾಚೀನ ದೇವಾಲಯಗಳನ್ನು ಇಲ್ಲಿ ಕಾಣಬಹುದು. ಸಣ್ಣ ಹಳ್ಳಿಯ ಪ್ರವಾಸಕ್ಕೆ ನೀವು ಹೋಗಲು ಹಾತೊರೆಯುತ್ತಿದರೆ, ಕರ್ನಾಟಕದ ಹಚ್ಚ ಹಸಿರಿನಿಂದ ಕೂಡಿದ ಈ ಅತ್ಯುನ್ನತ ಕುಗ್ರಾಮಕ್ಕೆ ಭೇಟಿ ನೀಡುವುದನ್ನು ನೀವು ಮಿಸ್ ಮಾಡಿಕೊಳ್ಳಬಾರದು. ಇಲ್ಲಿನ ಪ್ರಮುಖ ಸ್ಥಳಗಳೆಂದರೆ ಸಿರಿಮನೆ ಜಲಪಾತ, ನರಸಿಂಹ ಪರ್ವತ ಮತ್ತು ಶ್ರೀ ರಿಶ್ಯ ಶೃಂಗೇಶ್ವರ ದೇವಸ್ಥಾನ.

4. ಕೊಕ್ರೇಬೆಳ್ಳೂರು

ಬೆಂಗಳೂರಿನಿಂದ ಇರುವ ದೂರ - 90 ಕಿ.ಮೀ.

ಈ ಸುಂದರ ಗ್ರಾಮವು ಕೊಕ್ರೇಬೆಳ್ಳೂರು ಪಕ್ಷಿಧಾಮಕ್ಕೆ ನೆಲೆಯಾಗಿದ್ದು, ಶ್ರೀಮಂತ ಜೀವವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಹುಲ್ಲುಗಾವಲುಗಳಿಂದ ಕಾಡುಗಳು, ಹೊಳೆಗಳು ವೈವಿಧ್ಯಮಯ ವನ್ಯಜೀವಿಗಳು ಇನ್ನು ಅನೇಕ ಅದ್ಬುತಗಳಿಗೆ ಸಾಕ್ಷಿಯಾಗಬಹುದು. ಆದಾಗ್ಯೂ, ಇದು ಮುಖ್ಯವಾಗಿ ಪಕ್ಷಿಧಾಮಕ್ಕೆ ಜನಪ್ರಿಯವಾಗಿದೆ. ಆದ್ದರಿಂದ, ಇಲ್ಲಿಗೆ ಹೆಚ್ಚಾಗಿ ಪಕ್ಷಿ ವೀಕ್ಷಕರು ಮತ್ತು ವನ್ಯಜೀವಿ ಛಾಯಾಚಿತ್ರಗ್ರಾಹಕರು ಭೇಟಿ ನೀಡುತ್ತಾರೆ.

ಇಲ್ಲಿರುವ ಪಕ್ಷಿಗಳ ಪ್ರಮುಖ ಪ್ರಭೇದಗಳೆಂದರೆ ಬಣ್ಣದ ಕೊಕ್ಕರೆಗಳು ಮತ್ತು ಪೆಲಿಕನ್ಗಳು. ನೀವು ಹುಲ್ಲಿನ ಹಾದಿಗಳಲ್ಲಿ ಅಡ್ಡಾಡುತ್ತ ಪಕ್ಷಿಗಳ ಸುಮಧುರ ಧ್ವನಿಯನ್ನು ಕೇಳಲು ಇಷ್ಟಪಡುವುದಿಲ್ಲವೇ? ಹೌದು ಎಂದಾದರೆ, ಪಕ್ಷಿಧಾಮವಾಗಿರುವ ಈ ಸುಂದರ ಹಳ್ಳಿಗೆ ಭೇಟಿ ನೀಡಲು ಪ್ಲಾನ್ ಮಾಡಿ.

5. ಕುಟ್ಟ

ಬೆಂಗಳೂರಿನಿಂದ ಇರುವ ದೂರ - 235 ಕಿ.ಮೀ.

ಕಿಗ್ಗಾ ಗ್ರಾಮಕ್ಕೆ ಕಠಿಣ ಸ್ಪರ್ಧೆಯನ್ನು ನೀಡುವ ಮತ್ತೊಂದು ಸುಂದರ ಸ್ಥಳವೆಂದರೆ ಅದು ಕುಟ್ಟಾ, ಕೊಡಗು ಜಿಲ್ಲೆಯ ಒಂದು ಸಣ್ಣ ಹಳ್ಳಿಯಾಗಿದ್ದು, ಪ್ರಶಾಂತ ಕಾವೇರಿಯ ನದಿತೀರಗಳಿಗೆ ಹೆಸರುವಾಸಿಯಾಗಿದೆ. ಸುಂದರವಾದ ಕಾಡುಗಳಿಂದ ಆವೃತವಾದ ಈ ಮೋಡಿಮಾಡುವ ಸೌಂದರ್ಯವು ತನ್ನ ಪ್ರವಾಸಿಗರಿಗೆ ನಿಜಕ್ಕೂ ಆಹ್ಲಾದಕರ ಅನುಭವವನ್ನು ನೀಡುತ್ತದೆ.

ಕುಟ್ಟಾದ ಗಡಿಯೊಳಗೆ ಅನ್ವೇಷಿಸಲು ಹೆಚ್ಚಿನ ಸ್ಥಳಗಳಿಲ್ಲದಿದ್ದರೂ ಸಹ, ಖಂಡಿತವಾಗಿಯೂ ಅದರ ಸಮೀಪ ನೂರಾರು ಅದ್ಬುತ ಸ್ಥಳಗಳಿವೆ, ಅದು ಮತ್ತೆ ಮತ್ತೆ ಭೇಟಿ ನೀಡಲು ನಿಮ್ಮನ್ನು ಉತ್ತೇಜಿಸುತ್ತದೆ. ಈ ತಾಣಗಳಲ್ಲಿ ಗುಡ್ಡಗಾಡುಗಳು, ದೇವಾಲಯಗಳು, ಚಾರಣ ಮಾರ್ಗಗಳು, ಪಾದಯಾತ್ರೆಯ ತಾಣಗಳು, ಬೆಟ್ಟಗಳು ಮತ್ತು ವನ್ಯಜೀವಿ ಅಭಯಾರಣ್ಯಗಳು ಸೇರಿವೆ. ಈ ಶಾಂತ ವಾತಾವರಣದಲ್ಲಿ ನಿಮ್ಮ ಏಕಾಂತ ಸಮಯವನ್ನು ಕಳೆಯಲು ಅದ್ಬುತ ತಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more