Search
  • Follow NativePlanet
Share
» »ಈ ಊರಲ್ಲಿ ನೆಲೆಸಲು ಬರೀ ಸಿಳ್ಳೆ ಹೊಡೆಯಲು ಬಂದ್ರೆ ಸಾಕು !

ಈ ಊರಲ್ಲಿ ನೆಲೆಸಲು ಬರೀ ಸಿಳ್ಳೆ ಹೊಡೆಯಲು ಬಂದ್ರೆ ಸಾಕು !

ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ ಎನ್ನುವುದು ಗೊತ್ತೇ ಇದೆ. ಇಲ್ಲಿ ವಿವಿಧ ಭಾಷೆ, ಜನಾಂಗದ ಜನ ರು ನೆಲೆಸುತ್ತಿದ್ದಾರೆ. ಪ್ರತಿಯೊಂದು ರಾಜ್ಯಕ್ಕೆ ಹೋದಂತೆ ಅವರ ವೇಷಭೂಷಣ, ಆಹಾರ, ಭಾಷೆಯಲ್ಲಿ ಬದಲಾವಣೆಯಾಗುತ್ತಾ ಇರುತ್ತದೆ. ಇಲ್ಲಿ ಯಾರ ಜೊತೆಯಾದರೂ ವ್ಯವಹರಿಸಬೇಕಾದರೆ ಲೋಕಲ್ ಭಾಷೆಯನ್ನೇ ಮಾತನಾಡಬೇಕಾಗುತ್ತದೆ. ಆದರೆ ಇಂದು ನಾವೊಂದು ವಿಶೇಷ ನಗರ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿ ಎಲ್ಲವೂ ಸಿಳ್ಳೆ ಹೊಡೆಯುವುದರಲ್ಲೇ ನಡೆಯುತ್ತದೆ.

 ಸಿಳ್ಳೆ ಹೊಡೆಯುವುದು

ಸಿಳ್ಳೆ ಹೊಡೆಯುವುದು

ನಾವು ಸಿಳ್ಳೆ ಹೊಡೆಯುವ ಮೂಲಕ ಯಾರಿಗಾದರೂ ಸನ್ನೆ ಮಾಡಬಹುದು. ಆದರೆ ಮಾತಿನ ಬದಲಿಗೆ ಸಿಳ್ಳೆ ಹೊಡೆಯುವುದೆಂದರೆ ಸ್ವಲ್ಪ ವಿಚಿತ್ರ ಅನಿಸುವುದು ಸಹಜ ಅಲ್ವಾ. ಸಿಳ್ಳೆ ಮುಖಾಂತರ ಮಾತನಾಡಲು ಸಾಧ್ಯನಾ ? ಹೌದು, ಭಾರತದಲ್ಲಿ ಅಂತಹದ್ದೊಂದು ಹಳ್ಳಿ ಇದೆ. ಇಲ್ಲಿ ಮಾತಿನ ಬದಲಿಗೆ ಸಿಳ್ಳೆಯನ್ನೇ ಬಳಸುತ್ತಾರೆ. ಇಲ್ಲಿ ಎಲ್ಲರೂ ಸಿಳ್ಳೆ ಹೊಡೆಯುವ ಮೂಲಕವೇ ಇನ್ನೊಬ್ಬರ ಜೊತೆ ವ್ಯವಹರಿಸುತ್ತಾರೆ. ಹಾಗಾದ್ರೆ ಬನ್ನಿ ಆ ಹಳ್ಳಿ ಯಾವುದು ಎನ್ನುವುದನ್ನು ತಿಳಿಯೋಣ.

150 ರೂ.ಗೆ ಜೀನ್ಸ್, 90 ರೂ.ಗೆ ಶರ್ಟ್; ದೇಶದಲ್ಲೇ ಅಗ್ಗದ ಮಾರ್ಕೇಟ್ ಇದು150 ರೂ.ಗೆ ಜೀನ್ಸ್, 90 ರೂ.ಗೆ ಶರ್ಟ್; ದೇಶದಲ್ಲೇ ಅಗ್ಗದ ಮಾರ್ಕೇಟ್ ಇದು

ಮೇಘಾಲಯದ ವಿಸಿಲಿಂಗ್ ಹಳ್ಳಿ

ಮೇಘಾಲಯದ ವಿಸಿಲಿಂಗ್ ಹಳ್ಳಿ

ಈ ವಿಚಿತ್ರ ಹಳ್ಳಿ ಇರುವುದು ಮೇಘಾಲಯದಲ್ಲಿ. ಈ ಹಳ್ಳಿಯ ಹೆಸರು ಕೊಂಗ್‌ತಾಂಗ್. ಆದರೆ ತನ್ನ ಸೀಟಿ ಹೊಡೆಯುವ ವಿಶೇಷತೆಯಿಂದಾಗಿ ಇದನ್ನು ವಿಸಿಲಿಂಗ್ ವಿಲೇಜ್ ಎಂದು ಕರೆಯುತ್ತಾರೆ. ಇವರು ರಾಜ್ಯದ ವಿಶೇಷ ಜನಜಾತಿಯ ಜನರು. ಇಲ್ಲಿ ಭಾಷೆಯ ಬದಲಿಗೆ ಸಿಳ್ಳೆಯನ್ನು ಬಳಸಲಾಗುತ್ತದೆ. ಈ ಸಿಳ್ಳೆಯ ಮೂಲಕ ಸಂಭಾಷಣೆ ನಡೆಸುವ ಪರಂಪರೆ ಅನಾದಿಕಾಲದಿಂದಲೂ ಮುಂದುವರೆದಿದೆ.

ಮುರುಡೇಶ್ವರವನ್ನು ಬಿಟ್ರೆ ರಾಜ್ಯದ ಅತೀ ಎತ್ತರದ ಶಿವನ ವಿಗ್ರಹ ಇರೋದು ಎಲ್ಲಿ ಗೊತ್ತ ?ಮುರುಡೇಶ್ವರವನ್ನು ಬಿಟ್ರೆ ರಾಜ್ಯದ ಅತೀ ಎತ್ತರದ ಶಿವನ ವಿಗ್ರಹ ಇರೋದು ಎಲ್ಲಿ ಗೊತ್ತ ?

ಎರಡೆರಡು ಹೆಸರು

ಎರಡೆರಡು ಹೆಸರು

ಇಲ್ಲಿ ಪ್ರತಿಯೊಬ್ಬರಿಗೂ ಎರಡೆರಡು ಹೆಸರಿದೆಯಂತೆ. ಒಂದು ಸಾಮಾನ್ಯ ಹೆಸರು. ಇನ್ನೊಂದು ವಿಸಿಲಿಂಗ್ ಹೆಸರು. ಸಿಟಿಯಲ್ಲಿ ಹೆಸರು ಹೇಗೆ ಇಡೋದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಸಿಟಿಯಲ್ಲಿ ಟ್ಯೂನ್ ಬೇರೆ ಬೇರೆ ಇರುತ್ತದೆ. ಹಾಗಾಗಿ ಒಂದೊಂದು ಹೆಸರಿಗೂ ಒಂದೊಂದು ಟ್ಯೂನ್‌ನ ಸಿಳ್ಳೆ ಹೊಡೆಯಲಾಗುತ್ತದೆ. ಟ್ಯೂನ್‌ ಗುರುತಿಸುವ ಕಲೆಯನ್ನು ಮಕ್ಕಳು ಸಣ್ಣವರಿರುವಾಗಲೇ ಹೆತ್ತವರು ಕಲಿಸಿಕೊಡುತ್ತಾರೆ.

ಯಾವ ರೀತಿ ಮ್ಯೂಸಿಕ್ ರಚಿಸಲಾಗುತ್ತದೆ

ಯಾವ ರೀತಿ ಮ್ಯೂಸಿಕ್ ರಚಿಸಲಾಗುತ್ತದೆ

ಈ ಹಳ್ಳಿಯಲ್ಲಿ 100 ಕ್ಕೂ ಅಧಿಕ ಕುಟುಂಬದವರು ನೆಲೆಸುತ್ತಿದ್ದಾರೆ. ಇಲ್ಲಿನ ಸದಸ್ಯರ ಹೆಸರನ್ನು ವಿಭಿನ್ನ ಮ್ಯೂಸಿಕ್ ಮೇಲೆ ಇಡಲಾಗಿದೆ. ಇಲ್ಲಿನ ಜನರು ಈ ಮ್ಯೂಸಿಕ್‌ನ್ನು ರಚಿಸಲು ಪ್ರಕೃತಿಯ ಸಹಾಯ ಪಡೆಯುತ್ತಾರೆ. ಅಂದರೆ ಪಕ್ಷಿಗಳ ಸದ್ದು ಮುಂತಾದವು. ಈ ಹಳ್ಳಿಯು ಕಾಡು ಹಾಗೂ ಬೆಟ್ಟಗಳಿಂದ ಆವೃತ್ತವಾಗಿದೆ. ಇಲ್ಲಿ ವಿಭಿನ್ನ ರೀತಿಯ ಪಕ್ಷಿಗಳಿವೆ. ಹೊಸ ಮ್ಯೂಸಿಕ್‌ನ್ನು ತಯಾರಿಸಬೇಕಾದರೆ ಮನೆಯ ಸದಸ್ಯನಿಗೆ ಕಾಡಿನಲ್ಲಿ ಸುತ್ತಾಡಬೇಕಾಗುತ್ತದೆ. ನಂತರ ವಿಭಿನ್ನ ಮ್ಯೂಸಿಕ್‌ನ್ನು ರಚಿಸಲಾಗುತ್ತದೆ.

ಬಿ.ಎಂ.ಟಿ.ಸಿ ಬಸ್‌ನಲ್ಲಿ ಓಡಾಡಿರೋರಿಗೆಲ್ಲಾ ಈ ಸ್ಥಳ ಗೊತ್ತಿರ್ಲೇ ಬೇಕು ಬಿ.ಎಂ.ಟಿ.ಸಿ ಬಸ್‌ನಲ್ಲಿ ಓಡಾಡಿರೋರಿಗೆಲ್ಲಾ ಈ ಸ್ಥಳ ಗೊತ್ತಿರ್ಲೇ ಬೇಕು

ಇದರ ಹಿಂದಿನ ಕಥೆ

ಇದರ ಹಿಂದಿನ ಕಥೆ

ಈ ಊರಿನ ಜನರು ಸಿಳ್ಳೆ ಮೂಳಕ ಸಂಭಾಷಣೆ ನಡೆಸುವುದರ ಹಿಂದೆ ಒಂದು ಕಥೆ ಇದೆ. ಈ ಸಂಪ್ರದಾಯವಯ ಯಾವುದೋ ಹಿಂದಿನ ಘಟನೆಯೊಂದಿಗೆ ಸಂಬಂಧಿಸಿದೆ. ಕಥೆಯ ಪ್ರಕಾರ, ಹಳ್ಳಿಯ ಯಾವುದೋ ವ್ಯಕ್ತಿ ಶತ್ರುಗಳಿಂದ ತಪ್ಪಿಸಿಕೊಂಡು ಓಡುತ್ತಾ ಮರದ ಮೇಲೆ ಹತ್ತಿದನು. ಸಹಾಯಕ್ಕಾಗಿ ಸ್ನೇಹಿತರನ್ನು ಕರೆಯಲು ಯಾವುದೋ ಪ್ರಾಣಿಗಳ ಶಬ್ಧ ಮಾಡತೊಡಗಿದನು. ಶತ್ರುಗಳು ಆತನ ವಾಯ್ಸ್‌ನ್ನು ಗುರುತಿಸಲಾದರು. ಆತನ ಸ್ನೇಹಿತರು ಆತನನ್ನು ರಕ್ಷಿಸಿದರು. ಆ ನಂತರದಿಂದ ಸಿಳ್ಳೆ ಹೊಡೆಯುವ ಮೂಲಕ ಮಾತನಾಡುವ ಕ್ರಮ ಜಾರಿಗೆ ಬಂದಿತು.

ಪ್ರಾಕೃತಿಕ ಸೌಂದರ್ಯ

ಪ್ರಾಕೃತಿಕ ಸೌಂದರ್ಯ

ಈ ವಿಶೇಷತೆಗಳನ್ನು ಹೊರತುಪಡಿಸಿ ಕಂಗಾತಂಗಾ ತನ್ನ ಪ್ರಾಕೃತಿಕ ಸೌಂದರ್ಯಕ್ಕೂ ಹೆಸರುವಾಸಿಯಾಗಿದೆ. ಇಲ್ಲಿನ ಹಚ್ಚಹಸಿರು ಜನರನ್ನು ತನ್ನತ್ತ ಆಕರ್ಷಿಸುತ್ತದೆ. ನೀವು ನಿಮ್ಮ ಪ್ರವಾಸವನ್ನು ಇಂಟರೆಸ್ಟಿಂಗ್ ಆಗಿಸಬೇಕೆಂದಿದ್ದರೆ ಮೇಘಾಲಯದ ಈ ಹಳ್ಳಿಗೆ ಭೇಟಿ ನೀಡಬಹುದು.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಇದೊಂದು ಗುಡ್ಡದ ಪ್ರದೇಶವಾಗಿದ್ದು ಇಲ್ಲಿಗ ತಲುಪಬೇಕಾದರೆ ಟ್ರಕ್ಕಿಂಗ್ ಮಾಡಬೇಕು. ಇಲ್ಲಿಗೆ ಸ್ವಲ್ಪ ಸಮೀಪದ ಏರ್‌ಪೋರ್ಟ್ ಶಿಲಾಂಗ್ ಏರ್‌ಪೋರ್ಟ್, ರೈಲು ನಿಲ್ದಾಣವೆಂದರೆ ಶಿಲಾಗ್‌ ರೈಲ್ವೆ ನಿಲ್ದಾಣ. ಟ್ರಕ್ಕಿಂಗ್ ಮೂಲಕ ನೀವು ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನೂ ಸವಿಯಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X