Search
  • Follow NativePlanet
Share
» »ಆಶ್ಚರ್ಯ: ಇಲ್ಲಿ ವೇದಗಳೇ ಬೆಟ್ಟಗಳಾಗಿವೆಯಂತೆ

ಆಶ್ಚರ್ಯ: ಇಲ್ಲಿ ವೇದಗಳೇ ಬೆಟ್ಟಗಳಾಗಿವೆಯಂತೆ

ಶಾಸ್ತ್ರ ಸಾಂಕೇತಿಕ ರಂಗದಲ್ಲಿ ಅಭಿವೃದ್ಧಿ ಹೊಂದುತ್ತಾ..... ಸೃಷ್ಟಿಗೆ ಪ್ರತಿ-ಸೃಷ್ಟಿ ಮಾಡುವ ಮಟ್ಟಕ್ಕೆ ಮನುಷ್ಯ ತಲುಪಿದ್ದಾನೆ. ಮಾನವ ಎಷ್ಟೇ ಬೆಳೆದರೂ ಸಹ ಕೆಲವು ಘಟನೆಗಳು ಹಾಗೂ ನಂಬಿಕೆಗಳು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಮುಖ್ಯವಾಗಿ ನಮ್ಮ ಪ್ರಾಚೀನ ಕಟ್ಟಡಗಳು, ದೇವಾಲಯಗಳು ಅವುಗಳ ಹಿಂದಿರುವ ರೋಚಕವಾದ ಕತೆಗಳು ಇಂದಿಗೂ ರಹಸ್ಯವಾಗಿಯೇ ಉಳಿದಿವೆ. ಅಂತಹ ನಿಗೂಢವಾದ ಸ್ಥಳಗಳಲ್ಲಿ ತಮಿಳುನಾಡಿನ ವೇದಗಿರಿಶ್ವರ ದೇವಾಲಯವೂ ಒಂದು. ಈ ದೇವಾಲಯದಲ್ಲಿ ಪರಮೇಶ್ವರ ವೇದೇಶ್ವರನಾಗಿ ನೆಲೆಸಿದ್ದಾನೆ.

ಈ ದೇವಾಲಯದ ವಿಶೇಷತೆಯ ಬಗ್ಗೆ ನೇಟಿವ್ ಪ್ಲಾನೆಟ್ ಮೂಲಕ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

 ವೇದಗಿರಿಶ್ವರ ದೇವಾಲಯದ ಬಗ್ಗೆ ಆಸಕ್ತಿಕರವಾದ ವಿಷಯಗಳು

ವೇದಗಿರಿಶ್ವರ ದೇವಾಲಯದ ಬಗ್ಗೆ ಆಸಕ್ತಿಕರವಾದ ವಿಷಯಗಳು

ವೇದಗಿರಿಶ್ವರ ದೇವಾಲಯದ ಬಗ್ಗೆ ಆಸಕ್ತಿಕರವಾದ ವಿಷಯಗಳು ಸ್ಥಳೀಯವಾಗಿ ಪ್ರಚಾರವನ್ನು ಹೊಂದಿದೆ. ಅದನೆಂದರೆ ಭಾರದ್ವಜ ಮಹಾಮುನಿಯ ಕೋರಿಕೆಯ ಮೇರೆಗೆ ವೇದಗಳು ಇಲ್ಲಿ ಬೆಟ್ಟದ ರೂಪದಲ್ಲಿ ನೆಲೆಸುವಂತೆ ಪರಮೇಶ್ವರನು ಮಾಡಿದನಂತೆ. ವೇದಗಳನ್ನು ಅಭ್ಯಾಸ ಮಾಡಬೇಕು ಎಂದು ಕೊಂಡಿದ್ದ ಮಹರ್ಷಿಯ ಆಸೆಯನ್ನು ಪರಮೇಶ್ವರ ಈ ವಿಧವಾಗಿ ಪೂರೈಸಿದರಂತೆ. ಕಲಿಯುಗದಲ್ಲಿ ಅತ್ಯಂತ ಭಕ್ತಿ ಶ್ರದ್ಧೆಯಿಂದ ಈ ದೇವಾಲಯಕ್ಕೆ ಬರುವ ಭಕ್ತರಿಗೆ ಮೋಕ್ಷವನ್ನು ಪ್ರಸಾದಿ ಸುತ್ತೇನೆ ಎಂದು ಪರಮಶಿವನು ಮಹರ್ಷಿಗೆ ತಿಳಿಸಿದಂತೆ ಕಥೆ ಕೂಡ ಚಾಲ್ತಿಯಲ್ಲಿದೆ. ಹೀಗಾಗಿ ಇಲ್ಲಿರುವ ಬೆಟ್ಟಗಳನ್ನು ವೇದಗಳ ಪರ್ವತ ಎಂದು ಕರೆಯುತ್ತಾರೆ.

ತ್ರಿಪುರ ಸುಂದರಿ ದೇವಿ

ತ್ರಿಪುರ ಸುಂದರಿ ದೇವಿ

ಬೆಟ್ಟದ ಮೇಲೆ ಪರಮಶಿವನು ವೇದಗಿರಿಶ್ವರ ನಗಿ ನೆಲೆಸಿದ್ದರೆ, ಬೆಟ್ಟದ ಕೆಳಗೆ ಪಾರ್ವತಿ ದೇವಿಯು ತ್ರಿಪುರಸುಂದರಿ ದೇವಿಯಾಗಿ ನೆಲೆಸಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ಬೆಟ್ಟದ ಮೇಲ್ಭಾಗದಲ್ಲಿ ಪರಮೇಶ್ವರನು ಹಾಗೂ ಕೆಳ ಭಾಗದಲ್ಲಿ ಪಾರ್ವತಿದೇವಿಯು ಪ್ರತ್ಯೇಕವಾಗಿ ನೆಲೆಸಿರುವುದು ಈ ದೇವಾಲಯದ ಮತ್ತೊಂದು ವಿಶೇಷತೆಯಾಗಿದೆ. ಬೆಟ್ಟದ ಕೆಳಗೆ ಒಂದು ಪವಿತ್ರವಾದ ತೀರ್ಥವಿದೆ. ಪೂರ್ತಿಯಾಗಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾದ ಈ ದೇವಾಲಯವು ಚರಿತ್ರಕಾರರನ್ನೂ ಆಕರ್ಷಿಸುತ್ತದೆ. ಕಾಂಚಿಪುರದಲ್ಲಿನ ಪ್ರಖ್ಯಾತ ದೇವಾಲಯಗಳಲ್ಲಿ ಒಂದಾದ ವೇದೇಶ್ವರ ದೇವಾಲಯಕ್ಕೆ ಚೆನ್ನೈನಿಂದ ಸುಮಾರು 72 ಕಿಲೋ ಮೀಟರ್ ದೂರದಲ್ಲಿದೆ. ಮಹಾಬಲಿಪುರಂನಿಂದ ಕೇವಲ 16 ಕಿಲೋಮೀಟರ್ ಪ್ರಯಾಣಿಸಿದರೆ ಈ ದೇವಾಲಯಕ್ಕೆ ಸುಲಭವಾಗಿ ತಲುಪಬಹುದು.

 ಆ ಪಕ್ಷಿಗಳು

ಆ ಪಕ್ಷಿಗಳು

ಪೂರ್ವದಲ್ಲಿ ಈ ದೇವಾಲಯ ಇರುವ ಗ್ರಾಮವನ್ನು ತಿಲಕುರಕುಂಡ್ರ ಎಂದು ಕರೆಯುತ್ತಿದ್ದರು. ತದನಂತರ ವೇದ ಗಿರಿಯಾಗಿ ಮಾರ್ಪಾಟಾಯಿತು. ಒಂದು ಕಾಲದಲ್ಲಿ ಎರಡು ಪಕ್ಷಿಗಳು ಕ್ರಮವಾಗಿ ಮಧ್ಯಾಹ್ನ 12 ಗಂಟೆಗೆ ಪೂಜಾರಿ ನೀಡುತ್ತಿದ್ದ ಪ್ರಸಾದವನ್ನು ಸ್ವೀಕರಿಸುತ್ತಿದ್ದಂತೆ. ಇದರಿಂದಾಗಿ ಇಲ್ಲಿನ ತೀರ್ಥವನ್ನು ಪಕ್ಷಿ ತೀರ್ಥ ಎಂದು ಕರೆಯಲಾಯಿತು. ಎರಡು ಪಕ್ಷಿಗಳು ಶಿವನ ಕೋಪಕ್ಕೆ ಗುರಿಯಾದ ಋಷಿಗಳ ಆಗಿದ್ದರಂತೆ. ಆದುದರಿಂದಲೇ ಆ ಪಕ್ಷಿಗಳು ಪ್ರತಿದಿನವೂ ದೇವಾಲಯಕ್ಕೆ ಬರುತ್ತಿದ್ದವು ಎಂಬುದು ಸ್ಥಳೀಯ ಕಥೆಯಾಗಿದೆ. ಭಕ್ತರು ಪಾಪಾತ್ಮರಾದರೆ ಆ ಪಕ್ಷಿಗಳು ಅಲ್ಲಿಗೆ ಬರುವುದಿಲ್ಲವಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X