Search
  • Follow NativePlanet
Share
» »40 ವರ್ಷಕ್ಕೆ ಕೇವಲ 40 ದಿನಗಳು ಮಾತ್ರವೇ ದರ್ಶನ ನೀಡುವ ದೇವಾಲಯವಿದು...

40 ವರ್ಷಕ್ಕೆ ಕೇವಲ 40 ದಿನಗಳು ಮಾತ್ರವೇ ದರ್ಶನ ನೀಡುವ ದೇವಾಲಯವಿದು...

ಭಾರತ ದೇಶದಲ್ಲಿ ಒಂದೊಂದು ದೇವಾಲಯಕ್ಕೆ ಒಂದೊಂದು ವಿಶೇಷತೆಗಳಿವೆ. ಕೆಲವು ದೇವಾಲಯಗಳು ಅಲ್ಲಿ ನಡೆಯುವ ಹೋಮ, ಪೂಜೆಗಳಿಗೆ ಪ್ರಖ್ಯಾತಿಯನ್ನು ಪಡೆದಿದ್ದರೆ, ಇನ್ನು ಕೆಲವು ಅದ್ಭುತವಾದ ಶಿಲ್ಪಕಲೆಗಳನ್ನು ಹೊಂದಿರುತ್ತವೆ. ಅದೇ ವಿಧವಾಗಿ ಕೆಲವು ದೇವಾಲ

ಭಾರತ ದೇಶದಲ್ಲಿ ಒಂದೊಂದು ದೇವಾಲಯಕ್ಕೆ ಒಂದೊಂದು ವಿಶೇಷತೆಗಳಿವೆ. ಕೆಲವು ದೇವಾಲಯಗಳು ಅಲ್ಲಿ ನಡೆಯುವ ಹೋಮ, ಪೂಜೆಗಳಿಗೆ ಪ್ರಖ್ಯಾತಿಯನ್ನು ಪಡೆದಿದ್ದರೆ, ಇನ್ನು ಕೆಲವು ಅದ್ಭುತವಾದ ಶಿಲ್ಪಕಲೆಗಳನ್ನು ಹೊಂದಿರುತ್ತವೆ. ಅದೇ ವಿಧವಾಗಿ ಕೆಲವು ದೇವಾಲಯದಲ್ಲಿ ಮೂಲ ವಿಗ್ರಹವು ಸ್ವಯಂ ಭೂವಾಗಿ ಅಥವಾ ಪ್ರತಿಷ್ಟಾಪನೆಗೊಳಿಸುವುದಾಗಿರುತ್ತದೆ. ಅನೇಕ ದೇವಾಲಯಗಳು ಅನೇಕ ವಿಭಿನ್ನವಾದ ಸಂಪ್ರದಾಯಗಳನ್ನು ಹೊಂದಿರುತ್ತದೆ.

ವಿಚಿತ್ರವಾದ ಆಚರಣೆಗಳನ್ನು ಹೊಂದಿರುವ ದೇವಾಲಯವೊಂದು ತಮಿಳುನಾಡಿನಲ್ಲಿದೆ. ಮುಖ್ಯವಾಗಿ ಈ ದೇವಾಲಯದಲ್ಲಿನ ನಿಜವಾದ ಮೂಲವಿಗ್ರಹವನ್ನು 40 ವರ್ಷಕ್ಕೆ ಒಮ್ಮೆ ಮಾತ್ರವೇ ಭಕ್ತರು ದರ್ಶನವನ್ನು ಪಡೆಯಬಹುದಂತೆ. ಇಲ್ಲಿನ ಸ್ವಾಮಿಯ ದರ್ಶನಕ್ಕೆ ಎಷ್ಟು ಪ್ರಾಧನ್ಯತೆಯನ್ನು ನೀಡುತ್ತಾರೆಯೋ, ಅದಕ್ಕಿಂತ ಹೆಚ್ಚು ಪ್ರಾಧನ್ಯತೆಯನ್ನು ಆ ದೇವಾಲಯದಲ್ಲಿರುವ 2 ವಿಗ್ರಹಗಳ ಸ್ಪರ್ಶಕ್ಕೆ ಮಹತ್ವವನ್ನು ನೀಡುತ್ತಾರಂತೆ. ಇನ್ನು ಈ ದೇವಾಲಯದಲ್ಲಿನ ಶಿಲ್ಪ ಸಂಪತ್ತು ಅತ್ಯಂತ ಮನೋಹರವಾಗಿರುತ್ತದೆ. ಇಷ್ಟು ವಿಶೇಷತೆಗಳನ್ನು ಹೊಂದಿರುವ ಈ ದೇವಾಲಯದ ಬಗ್ಗೆ ಲೇಖನದ ಮೂಲಕ ಮಾಹಿತಿಯನ್ನು ಪಡೆಯೋಣ.

1.108 ದಿವ್ಯಕ್ಷೇತ್ರದಲ್ಲಿ ಒಂದು

1.108 ದಿವ್ಯಕ್ಷೇತ್ರದಲ್ಲಿ ಒಂದು

PC:YOUTUBE

ಶ್ರೀ ಮಹಾವಿಷ್ಣುವನ್ನು ವರದರಾಜ ಸ್ವಾಮಿಯ ಹೆಸರಿನಿಂದ ಕಂಚಿಯಲ್ಲಿ ಆರಾಧಿಸುತ್ತಾರೆ. 108 ವೈಷ್ಣವ ದಿವ್ಯ ಕ್ಷೇತ್ರಗಳಲ್ಲಿ ವರದರಾಜಸ್ವಾಮಿ ದೇವಾಲಯವು ಒಂದು. ಈ ದೇವಾಲಯವಿರುವ ಪ್ರದೇಶವನ್ನೇ ವಿಷ್ಣು ಕಂಚಿ ಎಂದು ಕರೆಯುತ್ತಾರೆ. ಸುಮಾರು 23 ಎಕರೆಗಳಷ್ಟು ವಿಶಾಲವಾದ ಪ್ರಾಗಂಣದಲ್ಲಿ ಈ ಮಹಿಮಾನ್ವಿತವಾದ ದೇವಾಲಯವಿದೆ.

2.ಒಮ್ಮೆಯಾದರು ಅವುಗಳನ್ನು ಸ್ಪರ್ಶಿಸಬೇಕು

2.ಒಮ್ಮೆಯಾದರು ಅವುಗಳನ್ನು ಸ್ಪರ್ಶಿಸಬೇಕು

PC:YOUTUBE

ಈ ದೇವಾಲಯದಲ್ಲಿಯೇ ಬಂಗಾರ ಹಾಗು ಬೆಳ್ಳಿಯ ಹಲ್ಲಿಗಳಿವೆ. ಜೀವನದಲ್ಲಿ ಒಮ್ಮೆಯಾದರು ಈ ದೇವಾಲಯದಲ್ಲಿನ ಬಂಗಾರ ಹಾಗು ಬೆಳ್ಳೆ ಹಲ್ಲಿಗಳನ್ನು ಮುಟ್ಟಿದರೆ ತಮ್ಮ ಮೇಲಿರುವ ದೋಷವು ನಾಶವಾಗುತ್ತದೆ ಎಂದು ಹಿಂದುಗಳು ಬಲವಾಗಿ ನಂಬುತ್ತಾರೆ.

3.ಅನೇಕ ಪ್ರದೇಶಗಳಿಂದ

3.ಅನೇಕ ಪ್ರದೇಶಗಳಿಂದ

PC:YOUTUBE

ಕೆಲವುಮಂದಿ ತಮ್ಮ ಮೇಲೆ ಹಲ್ಲಿ ಬಿದ್ದ ತಕ್ಷಣ ಕಂಚಿಯಲ್ಲಿನ ಈ ವರದರಾಜ ಸ್ವಾಮಿ ದೇವಾಲಯಕ್ಕೆ ಬಂದು ದೋಷ ಪರಿಹಾರಕ್ಕಾಗಿ ದೇವಾಲಯದ ಬಂಗಾರದ ಹಾಗು ಬೆಳ್ಳಿಯ ಹಲ್ಲಿಗಳನ್ನು ಮುಟ್ಟುತ್ತಿರುತ್ತಾರೆ. ಇದಕ್ಕಾಗಿ ದೇಶದ ಮೂಲೆ-ಮೂಲೆಗಳಿಂದ ಈ ಮಹಿಮಾನ್ವಿತವಾದ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

4.2 ರಥಗಳು

4.2 ರಥಗಳು

PC:YOUTUBE

ಅಸಲಿಗೆ ಈ ದೇವಾಲಯದಲ್ಲಿ ಬಂಗಾರದ ಹಾಗು ಬೆಳ್ಳಿ ಹಲ್ಲಿಗಳು ಹೇಗೆ ಬಂದವು ಎಂಬ ವಿಷಯಕ್ಕೆ ಸಂಬಂಧಿಸಿದ 2 ಪುರಾಣ ಕಥೆಗಳು ಪ್ರಚಾರದಲ್ಲಿವೆ. ಅದರಲ್ಲಿ ಪ್ರಧಾನವಾದುದು ಗೌತಮ ಮಹರ್ಷಿ ಕಥೆ.

5.ಗೌತಮ ಮಹರ್ಷಿ

5.ಗೌತಮ ಮಹರ್ಷಿ

PC:YOUTUBE

ಗೌತಮ ಮಹರ್ಷಿ ಒಮ್ಮೆ ಪೂಜೆಗಾಗಿ ನೀರನ್ನು ತೆಗೆದುಕೊಂಡು ಬರಲು ಇಬ್ಬರು ಶಿಷ್ಯರನ್ನು ನದಿಗೆ ಕಳುಹಿಸಿದನು. ಗುರುವಿನ ಆದೇಶದ ಮೇರೆಗೆ ಅವರು ನದಿಗೆ ತೆರಳಿ ನೀರನ್ನು ತೆಗೆದುಕೊಂಡು ಬರುತ್ತಿರುತ್ತಾರೆ. ಆದರೆ ತಮ್ಮ ಚೇಷ್ಟೆಗಳಿಂದ ಮುಳುಗಿರುವ ಅವರಿಗೆ ಆ ನೀರಿನಲ್ಲಿ ಹಲ್ಲಿ ಬಿದ್ದಿರುವುದು ಕಾಣಿಸಲಿಲ್ಲ.

6.ಶಾಪ

6.ಶಾಪ

PC:YOUTUBE

ಇನ್ನು ಆಶ್ರಮಕ್ಕೆ ಬಂದ ನಂತರ ಪೂಜೆಗೆ ಎಂದು ತಂದ ನೀರಿನಲ್ಲಿ ಹಲ್ಲಿ ಇರುವುದನ್ನು ಗಮನಿಸಿದ ಗೌತಮ ಮಹರ್ಷಿಯು ತೀವ್ರವಾದ ಆಗ್ರಹಗೊಳ್ಳುತ್ತಾನೆ. ಇದರ ಪರಿಣಾಮ ಆ ಶಿಷ್ಯರನ್ನು ಹಲ್ಲಿಗಳಾಗಿ ಮಾರ್ಪಟಾಗಿ ವರದರಾಜಸ್ವಾಮಿ ದೇವಾಲಯದಲ್ಲಿ ಇದ್ದುಬಿಡುವ ಹಾಗೆ ಶಾಪವನ್ನು ನೀಡುತ್ತಾನೆ.

7.ವರದರಾಜಸ್ವಾಮಿಯ ಸಮಾನ

7.ವರದರಾಜಸ್ವಾಮಿಯ ಸಮಾನ

PC:YOUTUBE

ಇದರಿಂದಾಗಿ ಆ ಶಿಷ್ಯರು ಬಾಧೆಯನ್ನು ಅನುಭವಿಸುತ್ತಿರುತ್ತಾರೆ. ಅವರ ಆ ಬಾಧೆಯನ್ನು ಕಂಡ ಗೌತಮ ಮಹರ್ಷಿಯು ಶಾಂತಿಗೊಂಡು ಇಲ್ಲಿನ ವರದರಾಜಸ್ವಾಮಿಯ ಸಮಾನವಾಗಿ ಭಕ್ತರ ಕೈಯಲ್ಲಿ ಆರಾಧಿಸಲ್ಪಡಿ ಎಂದು ಹೇಳುತ್ತಾನೆ.

8.ದೋಷ ವಿಮುಕ್ತಿ

8.ದೋಷ ವಿಮುಕ್ತಿ

PC:YOUTUBE

ಹಲ್ಲಿ ಬಿದ್ದ ದೋಷದಿಂದ ಬಾಧೆಯನ್ನು ಅನುಭವಿಸುತ್ತಿರುವವರು ನಿಮ್ಮನ್ನು ತಾಕಿದರೆ ದೋಷದಿಂದ ವಿಮುಕ್ತಿಯನ್ನು ಹೊಂದುತ್ತಾರೆ ಎಂದು ಹೇಳುತ್ತಾನೆ. ಹೀಗೆ ವರದರಾಜಸ್ವಾಮಿ ದೇವಾಲಯದಲ್ಲಿ ಬಂಗಾರದ ಹಾಗು ಬೆಳ್ಳಿಯ ಹಲ್ಲಿಗಳಿವೆ. ಈ ವಿಶ್ವಾಸ ಇರುವವರೆವಿಗೂ ಆ ದೇವಾಲಯದಲ್ಲಿ ಈ ಹಲ್ಲಿಗಳು ಇರುತ್ತವೆ.

9.ಇಂದ್ರನು ಪ್ರತಿಷ್ಟಾಪಿಸಿದನು

9.ಇಂದ್ರನು ಪ್ರತಿಷ್ಟಾಪಿಸಿದನು

PC:YOUTUBE

ಅದೇ ವಿಧವಾಗಿ ಮತ್ತೊಂದು ಕಥೆಯ ಪ್ರಕಾರ ಇಂದ್ರನು ಸರಸ್ವತಿ ದೇವಿ ಶಾಪದಿಂದಾಗಿ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತಾನೆ. ಶಾಪ ವಿಮೋಚನೆಗಾಗಿ ಕಂಚಿಯಲ್ಲಿನ ವರದರಾಜಸ್ವಾಮಿ ದೇವಾಲಯದಲ್ಲಿ ಬಂಗಾರ ಹಾಗು ಬೆಳ್ಳಿ ಹಲ್ಲಿಗಳನ್ನು ಪ್ರತಿಷ್ಟಾಪಿಸಿ ಪೂಜಿಸಿದನು ಎಂದು ಹೇಳುತ್ತದೆ.

10.ವಿಗ್ರಹ

10.ವಿಗ್ರಹ

PC:YOUTUBE

ಇನ್ನು ದೇವಾಲಯದಲ್ಲಿ ಪ್ರಸ್ತುತವಿರುವ ಸ್ವಾಮಿ ವಿಗ್ರಹದ ಸ್ಥಾನದಲ್ಲಿ ಸುಮಾರು 600 ವರ್ಷಕ್ಕಿಂತ ಹಿಂದೆ ಮೆದ ಚಕ್ಕೆಯಿಂದ ತಯಾರು ಮಾಡಿದ ವಿಗ್ರಹವಿತ್ತಂತೆ. ಇದನ್ನು ದೇವ ಶಿಲ್ಪಿ ಕೆತ್ತನೆ ಮಾಡಿದ ಹಾಗೆ ಹೇಳುತ್ತಾರೆ. ಮೊದಲು ಆ ವಿಗ್ರಹಕ್ಕೆ ಪೂಜೆಯನ್ನು ಮಾಡುತ್ತಿದ್ದರಂತೆ.

11.ಪುಷ್ಕರಣಿಯಲ್ಲಿ

11.ಪುಷ್ಕರಣಿಯಲ್ಲಿ

PC:YOUTUBE

ಆದರೆ ವಿಗ್ರಹದಲ್ಲಿ ಸ್ವಲ್ಪ ಭಿನ್ನವಾದ್ದರಿಂದ ದೇವಾಲಯದ ಆವರಣದಲ್ಲಿನ ಪುಷ್ಕರಣಿಯಲ್ಲಿ ಆ ವಿಗ್ರಹವನ್ನು ಅಡಗಿಸಿ ಇಟ್ಟಿದ್ದಾರಂತೆ. ಆ ವಿಗ್ರಹವನ್ನು 40 ವರ್ಷಕ್ಕೆ ಒಮ್ಮೆ ಹೊರಗೆ ತಂದು 40 ದಿನಗಳ ಕಾಲ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶವನ್ನು ನೀಡುತ್ತಾರೆ.

12.ಮೋಕ್ಷ

12.ಮೋಕ್ಷ

PC:YOUTUBE

ಈ ವಿಗ್ರಹದ ದರ್ಶನದಿಂದಾಗಿ ಮೋಕ್ಷ ಲಭಿಸುತ್ತದೆ ಎಂದು ಹಿಂದೂಗಳ ನಂಬಿಕೆ. ಹಾಗಾಗಿಯೇ ಆ ವಿಗ್ರಹದ ದರ್ಶನಕ್ಕಾಗಿ ಭಕ್ತರು ತಮಿಳುನಾಡಿನಿಂದಲೇ ದೇಶದ ಮೂಲೆ-ಮೂಲೆಗಳಿಂದ ಈ ವರದರಾಜಸ್ವಾಮಿ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ.

13.2019 ರಲ್ಲಿ

13.2019 ರಲ್ಲಿ

PC:YOUTUBE

1979 ರ ವರ್ಷದಲ್ಲಿ ವರದರಾಜಸ್ವಾಮಿಯ ಚಕ್ಕೆಯಿಂದ ತಯಾರು ಮಾಡಿದ ವಿಗ್ರಹವನ್ನು ನೀರಿನಿಂದ ಹೊರಗೆ ತೆಗೆದು ಪ್ರಜೆಗಳಿಗೆ ದರ್ಶನಕ್ಕೆ ಅವಕಾಶವನ್ನು ಕಲ್ಪಿಸುತ್ತಾರೆ. ಇನ್ನು 2019 ರ ಜೂನ್ ತಿಂಗಳಿನಲ್ಲಿ ಈ ವಿಗ್ರಹವನ್ನು ಪ್ರಜೆಗಳಿಗೆ ದರ್ಶನಕ್ಕೆ ಇಡುತ್ತಾರೆ.

14.ಇವರೆಲ್ಲಾ ಪೂಜಿಸಿದ್ದಾರೆ

14.ಇವರೆಲ್ಲಾ ಪೂಜಿಸಿದ್ದಾರೆ

PC:YOUTUBE

ಪುರಾಣಗಳ ಪ್ರಕಾರ, ಇಲ್ಲಿ ವರದರಾಜಸ್ವಾಮಿಯನ್ನು ಕೃತ ಯುಗದಲ್ಲಿ ಬ್ರಹ್ಮ, ತ್ರೇತಾ ಯುಗದಲ್ಲಿ ಗಜೇಂದ್ರ, ದ್ವಾಪರಯುಗದ ಪ್ರಾರಂಭದಲ್ಲಿ ಬೃಹಸ್ಪತಿ, ಕಲಿಯುಗದಲ್ಲಿ ಅನಂತಶೇಷನು ಆರಾಧಿಸಿದ್ದಾರಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X