Search
  • Follow NativePlanet
Share
» »ಇಲ್ಲಿ ಪ್ರಾರ್ಥಿಸಿದರೆ ಶನಿದೆಸೆಯಿಂದ ಮುಕ್ತಿ ಸಿಗುತ್ತಂತೆ!

ಇಲ್ಲಿ ಪ್ರಾರ್ಥಿಸಿದರೆ ಶನಿದೆಸೆಯಿಂದ ಮುಕ್ತಿ ಸಿಗುತ್ತಂತೆ!

ಹಿಂದೂ ಪುರಾಣಗಳನ್ನು ನಂಬುವವರು ಶನೀಶ್ವರನನ್ನು ಅಷ್ಟೇ ಬಲವಾಗಿ ನಂಬುತ್ತಾರೆ. ಶನಿಯ ದೃಷ್ಠಿ ತಮ್ಮ ಮೇಲೆ ಬೀಳದೇ ಇರಲಿ ಎಂದು ಕೋರುತ್ತಾರೆ. ಒಂದು ವೇಳೆ ಶನಿ ಪ್ರಭಾವ ಕಾಣಿಸಿಕೊಂಡರೆ ಅದಕ್ಕೆ ಪರಿಹಾರಕ್ಕಾಗಿ ನೂರಾರು ದೇವಸ್ಥಾನಗಳನ್ನು ಸುತ್ತುತ್ತಾ ಇರುತ್ತಾರೆ.

ಇಲ್ಲಿ ದೇವಿಗೆ ಅರ್ಪಿಸಲಾದ ನಿಂಬೆಹಣ್ಣು ಮನೆಯಲ್ಲಿಟ್ರೆ ಏನಾಗುತ್ತೆ ಗೊತ್ತಾ?ಇಲ್ಲಿ ದೇವಿಗೆ ಅರ್ಪಿಸಲಾದ ನಿಂಬೆಹಣ್ಣು ಮನೆಯಲ್ಲಿಟ್ರೆ ಏನಾಗುತ್ತೆ ಗೊತ್ತಾ?

ಶನಿ ಪ್ರಭಾವದಿಂದ ಮುಕ್ತಿ ಪಡೆಯುವಂತಹ ಒಂದು ದೇವಸ್ಥಾನ ತಮಿಳುನಾಡಿನ ಸಣ್ಣ ಊರಿನಲ್ಲಿದೆ. ಇಲ್ಲಿ ಶಿವನ ಅತ್ಯಂತ ಅಪರೂಪದ ರೂಪದಲ್ಲಿ ಮುಖಲಿಂಗವೊಂದಿದೆ. ಇಲ್ಲಿ ವಿಷ್ಣು ಕೂಡಾ ಪ್ರಯೋಗ ವಕ್ರ ಭಂಗಿಯಲ್ಲಿರುವುದು ಗಮನಾರ್ಹ. ತಮಿಳುನಾಡಿನ ಅನೇಕ ರಾಜಕೀಯ ನಾಯಕರು ತಮಗೆ ಜಯವನ್ನು ನೀಡಿ ಎಂದು ಇಲ್ಲಿನ ಕಾಳಿ ಮಾತೆಯಲ್ಲಿ ಕೋರುತ್ತಿರುತ್ತಾರೆ. ಇಷ್ಟೊಂದು ವಿಶೇಷತೆಯನ್ನು ಹೊಂದಿರುವ ದೇವಸ್ಥಾನದ ಬಗ್ಗೆ ತಿಳಿಯಿರಿ.

ಪುಣೆಯ ಈ ಪ್ರೇತಾತ್ಮಗಳು ಓಡಾಡುವ ಸ್ಥಳಗಳ ಬಗ್ಗೆ ಕೇಳಿದ್ದೀರಾ?ಪುಣೆಯ ಈ ಪ್ರೇತಾತ್ಮಗಳು ಓಡಾಡುವ ಸ್ಥಳಗಳ ಬಗ್ಗೆ ಕೇಳಿದ್ದೀರಾ?

ವಕ್ರಾಸುರ

ವಕ್ರಾಸುರ

ಈ ಪ್ರಾಂತ್ಯದಲ್ಲಿ ವಕ್ರಾಸುರನೆಂಬ ರಾಕ್ಷಸ ಇದ್ದ. ಆತ ದೊಡ್ಡ ಶಿವಭಕ್ತನಾಗಿದ್ದ. ೫೦೦ ವರ್ಷ ತಪಸ್ಸು ಮಾಡಿ ಶಿವನಿಂದ ಅಪಾರವಾದ ಬಲವನ್ನು ಸಂಪಾದಿಸಿದ್ದ. ಗರ್ವದಿಂದ ವಕ್ರಾಸುರ ಅಲ್ಲಿನ ಸಾಮಾನ್ಯ ಪ್ರಜೆಗಳನ್ನು, ಮಹಿಳೆಯರನ್ನು, ಮಕ್ಕಳನ್ನು ಹಿಂಸಿಸಲು ಪ್ರಾರಂಭಿಸುತ್ತಾನೆ. ಇದರಿಂದ ಪ್ರಜೆಗಳೆಲ್ಲಾ ಪರಶಿವನ ಮೊರೆ ಹೋಗುತ್ತಾರೆ.

ವಕ್ರ ಭಂಗಿಯಲ್ಲಿರುವ ವಿಷ್ಣು

ವಕ್ರ ಭಂಗಿಯಲ್ಲಿರುವ ವಿಷ್ಣು

PC: youtube


ಪ್ರಜೆಗಳ ಗೋಳನ್ನು ಕೇಳಿದ ವಿಷ್ಣುವು ತನ್ನ ಆಯುಧ ಸುದರ್ಶನ ಚಕ್ರದಿಂದ ವಕ್ರಾಸುರನನ್ನು ಸಂಹರಿಸುತ್ತಾನೆ. ಹಾಗಾಗಿ ವಿಷ್ಣುವಿನ ವಿಗ್ರಹ ವಕ್ರ ಭಂಗಿಯಲ್ಲಿದ್ದಾನೆ. ಅಂದರೆ ಸುದರ್ಶನ ಚಕ್ರವನ್ನು ಎಸೆಯುವ ಭಂಗಿಯಲ್ಲಿ ವಿಷ್ಣುವಿನ ಮೂರ್ತಿ ಇದೆ. ಆದರೆ ಎಷ್ಟು ಭಾರಿ ಚಕ್ರವನ್ನು ವಕ್ರಾಸುರನ ಮೇಲೆ ಎಸೆದರೂ ಆತನು ಸಾಯುವುದಿಲ್ಲ. ಚಕ್ರ ತಾಗಿ ರಾಕ್ಷಸನ ದೇಹದಿಂದ ರಕ್ತ ಬೀಳುತ್ತಿದ್ದಂತೆ ಇನ್ನಷ್ಟು ರಾಕ್ಷಸರು ಉತ್ಪತ್ತಿಯಾಗುತ್ತಾ ಹೋಗುತ್ತಾರೆ.

ಕಾಳಿಯನ್ನು ಪ್ರಾರ್ಥಿಸಿದ ವಿಷ್ಣು

ಕಾಳಿಯನ್ನು ಪ್ರಾರ್ಥಿಸಿದ ವಿಷ್ಣು

PC: youtube

ವಕ್ರಾಸುರ ಸಾಯದಿರುವುದನ್ನು ಕಂಡು ವಿಷ್ಣುವು ಕಾಳಿದೇವಿಯನ್ನು ಪ್ರಾರ್ಥಿಸುತ್ತಾನೆ. ಕಾಳಿ ದೇವಿ ಪ್ರತ್ಯಕ್ಷವಾಗಿ ರಾಕ್ಷಸನ ರಕ್ತ ನೆಲದ ಮೇಲೆ ಬೀಳದಂತೆ ತನ್ನ ನಾಲಿಗೆಯನ್ನು ಅಡ್ಡ ಹಿಡಿಯುತ್ತಾಳೆ. ಹೀಗಾಗಿ ವಿಷ್ಣು ವಕ್ರಾಸುರನನ್ನು ಸಂಹರಿಸುವಲ್ಲಿ ಯಶಸ್ಸು ಕಾಣುತ್ತಾನೆ.

 ವಕ್ರಕಾಳಿ

ವಕ್ರಕಾಳಿ

ವಕ್ರಾಸುರನನ್ನು ಸಂಹರಿಸಲು ಭೂಮಿಗೆ ಬಂದ ಕಾಳಿಯನ್ನು ವಕ್ರಕಾಳಿ ಎನ್ನುತ್ತಾರೆ. ಇಲ್ಲಿ ದೇವಿಯನ್ನು ಉಗ್ರರೂಪದಲ್ಲಿ ಪೂಜಿಸಲಾಗುತ್ತದೆ.

ಶನಿದೆಸೆ ಇದ್ದಾಗ

ಶನಿದೆಸೆ ಇದ್ದಾಗ

PC: youtube

ಶನಿದೆಸೆ ಇದ್ದಾಗ ಅವರು ಈ ದೇವಸ್ಥಾನಕ್ಕೆ ಆಗಮಿಸಿ ಕಾಳಿದೇವಿಯನ್ನು ಪೂಜಿಸಿದರೆ ಅವರಿಗಿರುವ ಶನಿದೆಸೆಯಿಂದ ಮುಕ್ತಿ ಸಿಗುತ್ತದೆ ಎನ್ನುವುದು ಸ್ಥಳೀಯರ ನಂಬಿಕೆ. ಅಷ್ಟೇ ಅಲ್ಲದೆ ಈ ದೇವಿಯ ಅನುಗ್ರಹವಿದ್ದರೆ ಎಂತಹದ್ದೇ ಶತ್ರುವಿನಿಂದಾದರೂ ಜಯ ಲಭಿಸುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ತಮಿಳುನಾಡಿನ ವಿಲ್ಲುಪುರಾಮ್ ಜಿಲ್ಲೆಯ ತಿರುವಕ್ಕರೈ ಗ್ರಾಮದಲ್ಲಿ ಈ ದೇವಾಲಯವಿದೆ. ಈ ದೇವಾಲಯವನ್ನು ಚೆನ್ನೈನಿಂದ ಅಥವಾ ಖಾಸಗಿ ವಾಹನಗಳಿಂದ ಬಸ್ ಮೂಲಕ ತಲುಪಬಹುದು. ಚೆನ್ನೈನಿಂದ 155 ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನವಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X