Search
  • Follow NativePlanet
Share
» »ಇಲ್ಲಿಗೆ ಭೇಟಿ ನೀಡಿದರೆ ಕುಜ ದೋಷವಿದ್ದವರಿಗೂ ಕಂಕಣ ಭಾಗ್ಯ ಕೂಡುತ್ತೆ

ಇಲ್ಲಿಗೆ ಭೇಟಿ ನೀಡಿದರೆ ಕುಜ ದೋಷವಿದ್ದವರಿಗೂ ಕಂಕಣ ಭಾಗ್ಯ ಕೂಡುತ್ತೆ

ವೈದ್ಯೇಶ್ವರನ್ ದೇವಾಲಯವು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ. ನೀವು ಯಾವುದೇ ಅನಾರೋಗ್ಯದಿಂದ ಬಳಲುತ್ತಿದ್ದರೂ ಈ ದೇವಾಲಯಕ್ಕೆ ಬಂದರೆ ಸಾಕು ರೋಗ ಗುಣಮುಖವಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಕುಜ ದೋಷ ಇರುವವರು ಈ ದೇವಸ್ಥಾನಕ್ಕೆ ಬಂದರೆ ಅವರ ದೋಷ ನಿವಾರಣೆಯಾಗಿ ಕಂಕಣ ಭಾಗ್ಯ ಕೂಡಿಬರುತ್ತದೆ ಎನ್ನಲಾಗುತ್ತದೆ.

ಐದು ಗೋಪುರಗಳಿವೆ

ಐದು ಗೋಪುರಗಳಿವೆ

PC: Mazhavai

ಈ ದೇವಾಲಯವು ಐದು ಗೋಪುರಗಳನ್ನು ಹೊಂದಿದೆ. ಅದರಲ್ಲಿ ದೊಡ್ಡ ಗೋಪುರದಲ್ಲಿ ಶಿವಲಿಂಗವಿದೆ. ಕೇಂದ್ರ ಗರ್ಭಗುಡಿಯ ಸುತ್ತಲಿನ ಮೊದಲ ಆವರಣವು ಸುಬ್ರಹ್ಮಣ್ಯನ ಲೋಹದ ಚಿತ್ರಣವನ್ನು ಹೊಂದಿದೆ. ಇಲ್ಲಿ ಸುಬ್ರಹ್ಮಣ್ಯನನ್ನು ಮುತ್ತುಕುಮಾರ ಸ್ವಾಮಿ ಎಂದು ಕರೆಯಲಾಗುತ್ತದೆ. ಉಳಿದ ಗರ್ಭಗುಡಿಯಲ್ಲಿ ನಟರಾಜ, ಸೋಮಸ್ಕಂದ, ಅಂಗಾರಕನನ್ನು ಪ್ರತಿಷ್ಠಾಪಿಸಲಾಗಿದೆ.

ಕುಜ ದೋಷ ನಿವಾರಣೆಯಾಗುತ್ತದೆ

ಕುಜ ದೋಷ ನಿವಾರಣೆಯಾಗುತ್ತದೆ

PC: Raji.srinivas

ಕುಜದೋಷದಿಂದಾಗಿ ಕಂಕಣ ಭಾಗ್ಯ ಕೂಡಿ ಬರದಿದ್ದಲ್ಲಿ ಅಂತಹವರು ಈ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಿದರೆ ಕುಜ ದೋಷ ನಿವಾರಣೆಯಾಗಿ ಬೇಗನೆ ಕಂಕಣ ಭಾಗ್ಯ ಕೂಡಿ ಬರುತ್ತದಂತೆ.

ರೋಗ ಗುಣಮುಖವಾಗುತ್ತದೆ

ರೋಗ ಗುಣಮುಖವಾಗುತ್ತದೆ

ತಮಿಳುನಾಡಿನಲ್ಲಿರುವ ವೈದೇಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಶಿವನನ್ನು ವೈದ್ಯೇಶ್ವರನಾಗಿ ಪೂಜಿಸಲಾಗುತ್ತದೆ. ಅಷ್ಟೇ ಅಲ್ಲದೆ ಈ ಪ್ರದೇಶವು ನಾಡಿ ಜ್ಯೋತೀಷ್ಯಕ್ಕೆ ಹೆಸರುವಾಸಿಯಾಗಿದೆ. ಭಕ್ತರು ನೀವು ಯಾವುದೇ ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ದೇವಾಲಯ ಕ್ಕೆ ಬಂದರೆ ಗುಣಮುಖವಾಗುತ್ತಂತೆ.

ಜಟಾಯು ಕುಂಡ

ಜಟಾಯು ಕುಂಡ

PC: வணக்கம்

ರಾಮಾಯಣ ಕಾಲದಲ್ಲಿ ರಾಮ, ಲಕ್ಷಣ, ಸಪ್ತಋಷಿಗಳು ಇಲ್ಲಿ ಪೂಜಿಸುತ್ತಿದ್ದರು ಎನ್ನಲಾಗುತ್ತದೆ. ಇಲ್ಲಿನ ಒಂದು ಕುಂಡವಿದೆ. ಇದನ್ನು ಜಟಾಯು ಕುಂಡ ಎಂದೂ ಕರೆಯುತ್ತಾರೆ. ಈ ದೇವಸ್ಥಾನದಲ್ಲಿರುವ ನದಿಯಲ್ಲಿ ಮುಳುಗಿದರೆ ಚರ್ಮ ರೋಗ ನಿವಾರಣೆಯಾಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X