Search
  • Follow NativePlanet
Share
» »ತಾಯಿ ಕರೆದಾಗ ಮಾತ್ರ ಹೋಗಲು ಸಾಧ್ಯ, ಏಕೆಂದರೆ ಇದು ವೈಷ್ಣೊದೇವಿ!

ತಾಯಿ ಕರೆದಾಗ ಮಾತ್ರ ಹೋಗಲು ಸಾಧ್ಯ, ಏಕೆಂದರೆ ಇದು ವೈಷ್ಣೊದೇವಿ!

By Vijay

ಈ ಜಗನ್ಮಾತೆಯ ಮಹಿಮೆಯೆ ಹಾಗೆ. ಇವಳಿಗೆ ಪರಮ ಪಾವನ ಶಕ್ತಿ ದೇವತೆಯರಿಂದ ಬಂದ ವರದಾನವೆ ಕಲಿಯುಗದಲ್ಲಿ ಹರಸಿಕೊಂಡು ಬಂದ ಜನರ/ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುವುದು ಹಾಗೂ ಅವರನ್ನು ಸನ್ಮಾರ್ಗದಲ್ಲಿ, ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದು. ಹೀಗಾಗಿ ಸಾಕಷ್ಟು ಪ್ರಭಾವಿ ದೇವಿಯಾಗಿ ವೈಷ್ಣೊದೇವಿಯನ್ನು ಪೂಜಿಸಲಾಗುತ್ತದೆ.

ಭಾರತದಲ್ಲಿ ಕಂಡುಬರುವ ಹಾಗೂ ಅತಿ ಹೆಚ್ಚು ಭಕ್ತಾದಿಗಳಿಂದ ಯಾತ್ರೆ ಮಾಡಲಾಗುವ ಕೆಲವು ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ವೈಷ್ಣೊದೇವಿಯ ಸನ್ನಿಧಿಯೂ ಸಹ ಒಂದು. ಈ ಗುಹಾ ದೇವಾಲಯವು ತ್ರಿಕೂಟ ಬೆಟ್ಟಗಳಲ್ಲಿ ನೆಲೆಸಿದ್ದು ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಿಯಾಸಿ ಜಿಲ್ಲೆಯಲ್ಲಿರುವ ಕಟ್ರಾ ಪಟ್ಟಣದಿಂದ ಸುಮಾರು 11 ಕಿ.ಮೀ ದೂರದಲ್ಲಿದೆ.

ಚಿನ್ನಮಸ್ತಾ ದೇವಿಯ ಚಿಂತಪೂರ್ಣಿ ಶಕ್ತಿಪೀಠ

ವೈಷ್ಣೊದೇವಿ ಜಗತ್ತಿನಲ್ಲೆ ಅತಿ ಹೆಚ್ಚು ಜನರಿಂದ ಭೇಟಿ ನೀಡಲ್ಪಡುವ ತೀರ್ಥಕ್ಷೇತ್ರಗಳ ಪೈಕಿ ಒಂದಾಗಿದ್ದು ಏನಿಲ್ಲವೆಂದರೂ ಪ್ರತಿ ವರ್ಷ ಸುಮಾರು 80 ಲಕ್ಷದಷ್ಟು ಜನರಿಂದ ಭೇಟಿ ನೀಡಲ್ಪಡುತ್ತದೆ ಎಂದು ದಾಖಲೆಗಳು ತಿಳಿಸುತ್ತವೆ. ಇದು ಕೇವಲ ಉತ್ತರ ಭಾರತ ಮಾತ್ರವಲ್ಲ ದಕ್ಷಿಣದವರಿಂದಲೂ ಸಹ ಭೇಟಿ ನೀಡಲ್ಪಡುತ್ತದೆ.

ಕಲಿಯುಗದಲ್ಲಿ ಶೀಘ್ರವಾಗಿ ಹರಸುವ, ಬೇಡಿದ ಕಾಮನೆಗಳನ್ನು ಈಡೇರಿಸುವ, ಕಷ್ಟಗಳನ್ನು ದೂರ ಮಾಡುವ ಶಕ್ತಿಶಾಲಿ ಹಾಗೂ ಕರುಣಾಮಯಿ ದೇವಿಯಾಗಿ ಆರಾಧಿಸಲಾಗುವ ವೈಷ್ಣೊ ದೇವಿಯ ನಂಟು ದಕ್ಷಿಣ ಭಾರತದೊಂದಿಗೂ ತಳುಕು ಹಾಕಿಕೊಂಡಿರುವುದು ವಿಶೇಷ. ಅಲ್ಲದೆ ದೇವಿಯ ಸನ್ನಿಧಿಗೆ ತೆರಳಲು ಬೆಂಗಳೂರಿನಿಂದ ಕಟ್ರಾವರೆಗೆ ನೇರವಾದ ರೈಲು ಇರುವುದೂ ಸಹ ಇನ್ನೊಂದು ವಿಶೇಷ.

ಬನ್ನಿ ವೈಷ್ಣೊ ದೇವಿಯ ಕುರಿತು ಮಹಿಮೆ, ಕಥೆ, ಇತಿಹಾಸ ತಿಳಿಯಿರಿ, ಸಮಯಾವಕಾಶ ಮಾಡಿಕೊಂಡು ಖಂಡಿತವಾಗಿಯೂ ಒಂದೊಮ್ಮೆ ದೇವಿಯ ದರ್ಶನ ಮಾಡಿ ಕೃತಾರ್ಥರಾಗಿರಿ.

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಜಮ್ಮು ಮತ್ತು ಕಾಶ್ಮೀರ ರಾಜ್ಯದ ರಿಯಾಸಿ ಜಿಲ್ಲೆಯ ಕಟ್ರಾ ಪಟ್ಟಣದಿಂದ ಸುಮಾರು ಹನ್ನೊಂದು ಕಿ.ಮೀ ದೂರದಲ್ಲಿ ತ್ರಿಕೂಟ ಎಂಬ ಬೆಟ್ಟ ತಾಣದಲ್ಲಿ ನೆಲೆಸಿರುವ ವೈಷ್ಣೊ ದೇವಿಯ ಸನ್ನಿಧಿಯು ಸಮುದ್ರ ಮಟ್ಟದಿಂದ 5300 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿದೆ ಎಂದರೆ ಯಾರಿಗಾದರೂ ಸರಿ ಒಂದು ಕ್ಷಣ ರೋಮಾಂಚನ ಆಗದೆ ಇರಲಾರದು.

ಚಿತ್ರಕೃಪೆ: Raju hardoi

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ತಿರುಪತಿ ತಿರುಮಲದ ನಂತರ ಅತಿ ಹೆಚ್ಚು ಜನರಿಂದ ಭೇಟಿ ನೀಡಲ್ಪಡುವ ತೀರ್ಥಕ್ಷೇತ್ರ ಇದಾಗಿದೆ ಎಂದು ಹೇಳಲಾಗಿದೆ. ವರ್ಷಕ್ಕೆ ಏನಿಲ್ಲವೆಂದರೂ ಎಂಟು ಮಿಲಿಯನ್ ಗೂ ಅಧಿಕ ಜನರು ವೈಷ್ಣೊ ದೇವಿಗೆ ಭೇಟಿ ನೀಡುತ್ತಾರೆ. ಕಟ್ರಾ ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣವಾಗಿದ್ದು ಇಲ್ಲಿಗೆ ಬೆಂಗಳೂರಿನಿಂದಲೂ ಇತ್ತೀಚಿಗಷ್ಟೆ ರೈಲನ್ನು ಪರಿಚಯಿಸಲಾಗಿದೆ. ಜಮ್ಮು ಹತ್ತಿರದಲ್ಲಿರುವ ವಿಮಾನ ನಿಲ್ದಾಣ. ವೈಷ್ಣೊ ದೇವಿಯ ಪ್ರವೇಶ ದ್ವಾರ.

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ವೈಷ್ಣೊ ದೇವಿಗೆ ಭೇಟಿ ನೀಡುವ ಮೊದಲು ಆ ದೇವಿಯ ಕುರಿತು ಮಾಹಿತಿ ನಿಮಗಿದ್ದರೆ ನಿಮ್ಮ ಪ್ರವಾಸ ಮತ್ತಷ್ಟು ಆನಂದಮಯವಾಗಬಲ್ಲುದು. ಹಾಗಿದ್ದರೆ ಕಥೆಯ ಪ್ರಕಾರವಾಗಿ, ಒಂದು ಕಾಲದಲ್ಲಿ ಲೋಕದಲ್ಲಿ ರಾಕ್ಷಸರ ಅಸುರಿತನ, ಕ್ರೌರ್ಯತೆ ಹೆಚ್ಚಾಗಿ ಶಕ್ತಿ ದೇವತೆಯರಾದ ಪಾರ್ವತಿ, ಲಕ್ಷ್ಮಿ ಹಾಗೂ ಸರಸ್ವತಿಯರು ಅಸುರರನ್ನು ನಿರ್ನಾಮ ಮಾಡುತ್ತಿದ್ದರು.

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಈ ಸಂದರ್ಭದಲ್ಲಿ ಆ ಮೂರು ಮಹಾಶಕ್ತಿ ಸ್ವರೂಪಿಣಿಯರು ತಮ್ಮೆಲ್ಲ ಶಕ್ತಿಯನ್ನು ಒಂದೆ ಸ್ಥಳದಲ್ಲಿ ಪ್ರವಹಿಸಿದರು. ಇದರಿಂದ ರುದ್ರಮಯವಾದ ತೇಜಸ್ಸಿನಿಂದ ಕೂಡಿದ ಪ್ರಕಾಶವುಂಟಾಗಿ ಅದರಿಂದ ಚಿಕ್ಕ ಹುಡುಗಿಯೊಬ್ಬಳು ಅವತರಿಸಿ ಬಂದಳು.

ಚಿತ್ರಕೃಪೆ: Raulcaeser

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಆ ಹುಡುಗಿ ಮೂರು ದೇವಿಯರನ್ನು ಕುರಿತು ತಾನೇಕೆ ಜನಿಸಿದ್ದು ಎಂದು ಕೇಳಿದಾಗ, ನೀನು ಲೋಕ ಕಲ್ಯಾಣಕ್ಕಾಗಿ, ಅದರಲ್ಲೂ ವಿಶೇಷವಾಗಿ ಕಲ್ಕಿಯ ಕಲಿಯುಗದಲ್ಲಿ ಮನುಷ್ಯ ಜಾತಿಯು ಕಷ್ಟ ಕಾರ್ಪಣ್ಯಗಳಿಂದ ಜರ್ಜರಿತರಾಗಿ ನಿನ್ನಲ್ಲಿ ಶರಣಾಗತಿ ಬಯಸಿ ಬಂದಲ್ಲಿ ಅವರನ್ನು ಉದ್ಧರಿಸುವುದಕ್ಕಾಗಿ, ದುಷ್ಟ ಅಂಶಗಳನ್ನು ನಿಗ್ರಹಿಸುವುದಕ್ಕಾಗಿ ದೇವಿಯಾಗಿ ಅವರನ್ನು ಹರಿಸುವುದಕ್ಕಾಗಿ ನಿನ್ನ ಜನ್ಮವಾಗಿದೆ ಎಂದು ಹೇಳಿದರು. ವೈಷ್ಣೊ ದೇವಿಯಲ್ಲಿ ಮುಂಜಾವಿನ ಮಂಜು.

ಚಿತ್ರಕೃಪೆ: Lp25

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಹೀಗೆ ಮಾತನ್ನು ಮುಂದುವರೆಸಿ ನೀನು ದಕ್ಷಿಣ ಭಾರತದ ಪ್ರಾಂತವೊಂದರಲ್ಲಿದ್ದ ರತ್ನಾಕರ ಸಾಗರ ದಂಪತಿಗಳಿಗೆ ಜನಿಸಬೇಕೆಂದು ಹೇಳಿದರು. ಅದರಂತೆ ಇತ್ತ ದಕ್ಷಿಣ ಭಾರತದಲ್ಲಿದ್ದ ವಿಷ್ಣು ಹಾಗೂ ಶಕ್ತಿ ದೇವಿಯರ ಪರಮ ಭಕ್ತರಾಗಿದ್ದ ರತ್ನಾಕರ ಸಾಗರ ದಂಪತಿಗಳಿಗೆ ಬಹಳ ಸಮಯದಿಂದ ಸಂತಾನವಾಗಿರಲಿಲ್ಲ. ಹೀಗಾಗಿ ರತ್ನಾಕರನು ತನಗೊಂದು ಮಗು ನೀಡಬೇಕೆಂದು ಅದನ್ನು ಬೆಳೆಸುವಾಗ ಆ ಮಗುವಿನ ಯಾವ ನಿರ್ಧಾರಕ್ಕೂ ಅಡ್ಡಿ ಪಡಿಸುವುದಿಲ್ಲವೆಂದೂ ವಿಷ್ಣುವಿಗೆ ಬೆಡಿಕೊಂಡಿದ್ದನು.

ಚಿತ್ರಕೃಪೆ: Shikha Baranwal

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಅದರಂತೆ ರತ್ನಾಕರನಿಗೆ ದೇವಿಯು ಮನುಷ್ಯ ರೂಪದಲ್ಲಿ ಅವನಿಗೆ ಮಗಳಾಗಿ ಹುಟ್ಟಿದಳು. ಆಕೆಗೆ ವೈಷ್ಣವಿ ಎಂದು ಹೆಸರಿಡಲಾಯಿತು. ಹುಡುಗಿಯು ಚಿಕ್ಕ ವಯಸ್ಸಿನಲ್ಲೆ ಅಸಾಧಾರಣ ಪ್ರತಿಭೆಯುಳ್ಳವಳಾಗಿದ್ದಳು. ಮಾಯಾ ಲೋಕದ ಕಾಮನೆಗಳಿಂದ ದೂರವಾಗಿದ್ದಳು. ವೈಷ್ಣೊ ದೇವಿಯಲ್ಲಿ ಹೆಲಿಕಾಪ್ಟರ್ ನಿಲ್ಲಿಸಲು ಮಾಡಲಾಗಿರುವ ಸಂಜಿ ಛತ್.

ಚಿತ್ರಕೃಪೆ: Mabhishek84

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಒಂಭತ್ತು ವಯಸಿನವಳಿದ್ದಾಗ ವೈಷ್ಣವಿಗೆ ತನ್ನ ದಿವ್ಯತ್ವದ ಅರಿವಾಗಿ ವಿಷ್ಣುವಿನಲ್ಲಿ ಸೇರಬೆಕೆಂಬೆ ಮಹದಾಸೆಯಿಂದ ಕಾಡಿಗೆ ತೆರಳಿ ತಪಸ್ಸು ಮಾಡಲು ಪ್ರಾರಂಭಿಸಿದಳು. ಇದೆ ಸಮಯದಲ್ಲಿ ಶ್ರೀರಾಮನು ಸೀತೆಯನ್ನು ಕರೆತರಲೆಂದು ಲಂಕೆಗೆ ವಾನರ ಸೈನ್ಯದೊಂದಿಗೆ ಹೋಗುತ್ತಿರುವಾಗ ವೈಷ್ಣವಿಯ ತಪಸ್ಸನ್ನು ನೋಡಿ ಪ್ರಸನ್ನನಾದನು ಹಾಗೂ ಆಕೆಯ ಹತ್ತಿರ ತೆರಳಿದನು. ಹಿನ್ನಿಲೆಯಲ್ಲಿ ತ್ರಿಕೂಟ ಬೆಟ್ಟ.

ಚಿತ್ರಕೃಪೆ: Nikhilchandra81

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ವೈಷ್ಣವಿ, ವಿಷ್ಣುವಿನ ಅವತಾರವೆ ಆದ ರಾಮನನ್ನು ಅರ್ಥ ಮಾಡಿಕೊಂಡು ತನ್ನನ್ನು ಮದುವೆ ಮಾಡಿಕೊಳ್ಳಬೇಕೆಂದು ವಿನಂತಿಸಿದಳು. ಅದಕ್ಕೆ ರಾಮನು ಈ ಜನ್ಮದಲ್ಲಿ ತಾನು ಏಕ ಪತ್ನಿ ವೃತಸ್ಥಾನಗಿರುವುದಾಗಿಯೂ ಕಲಿಯುಗದಲ್ಲಿ ಕಲ್ಕಿಯ ಅವತಾರದಲ್ಲಿದ್ದಾಗ ಮದುವೆಯಾಗುವುದಾಗಿಯೂ ಹೇಳಿ, ಆಕೆಗೆ ಬಿಲ್ಲು ಬಾಣಗಳನ್ನು, ಸ್ವಲ್ಪ ವಾನರ ಸೈನ್ಯವನ್ನು ಹಾಗೂ ಸಿಂಹವೊಂದನ್ನು ರಕ್ಷಣೆಗೆಂದು ನೀಡಿ ಉತ್ತರದ ತ್ರಿಕೂಟ ಬೆಟ್ಟದಲ್ಲಿ ತಪಸ್ಸನ್ನಾಚರಿಸುವಂತೆ ಹೇಳಿ ಕಳುಹಿಸಿದನು. ವೈಷ್ಣೊ ದೇವಿಯಲ್ಲಿರುವ ವಸತಿಗೃಹಗಳು.

ಚಿತ್ರಕೃಪೆ: Nikhilchandra81

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಇದರಿಂದ ಸಂತಸಗೊಂಡ ವೈಷ್ಣವಿ ರಾಮನು ಯುದ್ಧದಲ್ಲಿ ಜಯಶೀಲನಾಗಬೇಕೆಂದು ಬಯಸಿ ಅದಕ್ಕಾಗಿ ಒಂಭತ್ತು ದಿನಗಳ ಕಾಲ "ನವರಾತ್ರ" ವನ್ನು ಆಚರಿಸಿದಳು. ಹೀಗಾಗಿಯೆ ಇಂದಿಗೂ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಬಹಳಷ್ಟು ಜನ ಭಕ್ತಾದಿಗಳು ರಾಮಾಯಣವನ್ನು ಓದುತ್ತಾರೆ. ಕಾಟ್ರಾದಿಂದ ವೈಷ್ಣೊ ದೇವಿಗೆ ಹೋಗುವ ಸಂದರ್ಭದಲ್ಲಿ.

ಚಿತ್ರಕೃಪೆ: Vinayaraj

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ರಾಮನು ಉಪದೇಶಿಸಿದಂತೆ ವೈಷ್ಣವಿಯು ತ್ರಿಕೂಟ ತಲುಪಿ ಆಶ್ರಮವೊಂದನ್ನು ಸ್ಥಾಪಿಸಿಕೊಂಡು ತನ್ನ ತಪಸ್ಸನ್ನು ಮುಂದುವರೆಸಿದಳು. ಕೆಲ ಕಾಲದಲ್ಲೆ ಅವಳ ತಪ ಶಕ್ತಿಯು ಹೆಚ್ಚಾಗಿ ಆ ವಿಷಯ ಸುತ್ತಲಿನ ಸ್ಥಳಗಳಲೆಲ್ಲ ಹರಡಿತು. ಇದರಿಂದ ತಂಡೋಪ ತಂಡವಾಗಿ ಜನರು ಬಂದು ವೈಷ್ಣವಿಯ ಆಶೀರ್ವಾದಗಳನ್ನು ಪಡೆದುಕೊಳ್ಳುತ್ತ ತಮ್ಮ ಕಷ್ಟಗಳಿಂದ ಮುಕ್ತಿ ಹೊಂದಿದರು. ಸೂಕ್ಷ್ಮವಾಗಿ ಗಮನಿಸಿ. ವೈಷ್ಣೊ ದೇವಿಗೆ ಹೋಗುವ ಸಂದರ್ಭದಲ್ಲಿ. ಹೇಗೆಲ್ಲ ಮಾರ್ಗವು ಬೆಟ್ಟದೆ ಮೇಲೆ ಸಾಗುತ್ತದೆಂಬುದು.

ಚಿತ್ರಕೃಪೆ: Rishi ganguly

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ತಾಯಿಯಂತೆಯೆ ಸಕಲರಿಗೆ ಸನ್ಮಂಗಳ ಉಂಟುಮಾಡುತ್ತಿದ್ದ ವೈಷ್ಣವಿಯು ಕ್ರಮೇಣವಾಗಿ ಮಾತಾ ವೈಷ್ಣೊ ದೇವಿಯಾಗಿ ಪ್ರಸಿದ್ಧಿ ಪಡೆದಳು. ಆಕೆಯ ಅಪ್ರತಿಮ ಭಕ್ತನಾಗಿದ್ದ ಶ್ರೀಧರ ಎಂಬಾತನು ಗ್ರಾಮದ ಸಮಸ್ತ ಜನರಿಗೆ ಭಂಡಾರ (ಸಾಮೂಹಿಕ ಭೋಜನ ಕೂಟ) ಆಯೋಜಿಸಿದ್ದನು. ಆ ಭಂಡಾರಕ್ಕೆ ವೈಷ್ಣವಿ ದೇವಿ, ಮಹಾ ಗುರುವಾದ ಗೋರ್ಕ್ಷನಾಥ್ ಜಿ ಹಾಗೂ ಅವರ ಪರಮ ಶಿಷ್ಯನಾದ ಭೈರವನಾಥರು ಆಗಮಿಸಿದ್ದರು. ವೈಷ್ಣೊ ದೇವಿಗೆ ಹೋಗುವ ಸಂದರ್ಭದಲ್ಲಿ. ಭಕ್ತರು ತಮ್ಮ ಬಯಕೆ ಬೇಡಿ ಕೆಂಪು ವಸ್ತ್ರಗಳನ್ನು ಕಟ್ಟುತ್ತಾರೆ.

ಚಿತ್ರಕೃಪೆ: Vinayaraj

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ವೈಷ್ಣೊ ದೇವಿಯ ಕುರಿತು ಮೊದಲೆ ತಿಳಿದಿದ್ದ ಗೋರಕ್ಷನಾಥ್ ಹಾಗೂ ಭೈರವನಾಥರು ಆಕೆಯ ದಿವ್ಯ ಶಕ್ತಿಗೆ ಬೆರಗಾಗಿ ಹೋದರು. ಆ ಸಂದರ್ಭದಲ್ಲಿ ಭೈರವನಾಥನು ಆಕೆಯ ಮೇಲೆ ಮೋಹಗೊಂಡು ಆಕೆಯನ್ನು ಪಡೆಯಲು ಹವಣಿಸಿದ. ವೈಷ್ಣೊ ದೇವಿಗೆ ಹೋಗುವ ಸಂದರ್ಭದಲ್ಲಿ.

ಚಿತ್ರಕೃಪೆ: Vinayaraj

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಅವನ ಕೈಗಳಿಂದ ತಪ್ಪಿಸಿಕೊಂಡು ದೇವಿಯು ಬೆಟ್ಟ ಗುಡ್ಡಗಳ ಮಧ್ಯೆ ಅಲೆದಾಡುತ್ತಾ ಸಾಗಿದಳು. ಈ ಸಂದರ್ಭದಲ್ಲಿ ಅವಳು ಬಾಣಗಂಗಾ, ಚರಣ ಪಾದುಕಾ ಹಾಗೂ ಅಧಕ್ವಾರಿ ಎಂಬಲ್ಲಿ ವಿಶ್ರಾಂತಿ ಪಡೆದಿದ್ದಳು. ಕೊನೆಯದಾಗಿ ತಾನು ತಪಸ್ಸನಾಚರಿಸ ಬೆಕಾದ ಗುಹೆ ತಲುಪಿದಳು. ಇಷ್ಟಾಗಿಯೂ ಭೈರವನಾಥ ಆಕೆಯನ್ನು ಹಿಂಬಾಲಿಸುತ್ತಲೆ ಅಲ್ಲಿಗೂ ಸಹ ಬಂದ.

ಚಿತ್ರಕೃಪೆ: Vinayaraj

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಇಷ್ಟು ಹೊತ್ತು ಸಹನೆಯಿಂದಿದ್ದ ದೇವಿ ಕೊನೆಗೆ ಅವನ ದುರ್ನಡತೆಯನ್ನು ಸಹಿಸಲಾಗದೆ ಗುಹೆಯೊಳಗಿನಿಂದ ರೌದ್ರಾವತಾರ ತಾಳಿ ಹೊರ ಬಂದು ಒಂದು ಕ್ಷಣದಲ್ಲೆ ಭೈರವನಾಥನ ರುಂಡವನ್ನು ಚೆಂಡಾಡಿದಳು. ಆ ರುಂಡವು ಮುಂಡದಿಂದ ಬೇರ್ಪಟ್ಟು ಪಕ್ಕದ ಬೆಟ್ಟದ ಮೇಲೆ ಬಿದ್ದಿತು.

ಚಿತ್ರಕೃಪೆ: Vinayaraj

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಇದಾದ ನಂತರ ಭೈರವನಾಥನ ಆತ್ಮಕ್ಕೆ ತನ್ನ ತಪ್ಪಿನ ಅರಿವಾಗಿ ವೈಷ್ಣೊ ದೇವಿಯನ್ನು ಅತಿ ಭಕ್ತಿ ಆದರಗಳಿಂದ ಮಾಡಿದ ತಪ್ಪಿಗೆ ಕ್ಷಮಾದಾನ ನೀಡಬೇಕೆಂದು ಅಂಗಲಾಚಿತು. ದಯಾಮಯಿಯಾದ ವೈಷ್ಣೊ ದೇವಿಯು ಭೈರವನನ್ನು ಕ್ಷಮಿಸುತ್ತ ಆತನಿಗೆ ವರದಾನವೊಂದನ್ನು ನೀಡಿದಳು. ಅದರ ಪ್ರಕಾರವಾಗಿ, ವೈಷ್ಣೊ ದೇವಿಗೆ ಭೇಟಿ ನೀಡುವವರು ದೇವಿಯ ದರ್ಶನದ ನಂತರ ಭೈರವನ ದರ್ಶನವನ್ನೂ ಪಡೆಯಬೆಕು, ಇಲ್ಲವಾದಲ್ಲಿ ಆ ಯಾತ್ರೆ ಪರಿಪೂರ್ಣವಲ್ಲವೆಂದು. ಭೈರವನಾಥ ದೇವಾಲಯ.

ಚಿತ್ರಕೃಪೆ: Abhishek Chandra

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ನಂತರ ದೇವಿಯು ತನ್ನ ಮನುಷ್ಯ ರೂಪವನ್ನು ತ್ಯಜಿಸಿ ಐದುವರೆ ಅಡಿಗಳಷ್ಟು ಎತ್ತರದ ಶಿಲೆಯ ರೂಪ ಧರಿಸಿ ತನ್ನ ತಪಸ್ಸನ್ನು ಮುಂದುವರೆಸಿದಳು. ಹಾಗಾಗಿಯೆ ಇಂದು ವೈಷ್ಣೊ ದೇವಿಯು ಶಿಲೆಯ ಮೇಲೆ ಮೂರು ಪಿಂಡಿಗಳ ರೂಪದಲ್ಲಿ ನೆಲೆಸಿದ್ದು ಭಕ್ತರನ್ನು ಹರಸುತ್ತಿದ್ದಾಳೆ. ಕಲಿಯುಗದ ಸಾರ್ಥಕ ದೇವಿಯಾಗಿ ಭಕ್ತರ ಮನದಲ್ಲಿ ಚಿರಸ್ಥಾಯಿಯಾಗಿ ನೆಲೆಸಿದ್ದಾಳೆ.

ಚಿತ್ರಕೃಪೆ: Vinayaraj

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಪಾರ್ವತಿ, ಲಕ್ಷ್ಮಿ ಹಾಗೂ ಸರಸ್ವತಿ ದೇವಿಯರ ಮೂರು ಸಂಯೋಜಿತ ಶಕ್ತಿಯನ್ನು ಶಿಲೆಯ ಮೆಲಿರುವ ಮೂರು ಪಿಂಡಿಗಳಿ ಪ್ರತಿನಿಧಿಸುತ್ತವೆ ಎನ್ನಲಾಗುತ್ತದೆ.

ಚಿತ್ರಕೃಪೆ: Vinayaraj

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಕರುಣಾಮಯಿ ವೈಷ್ಣೊ ದೇವಿ ಸನ್ನಿಧಾನ:

ಇನ್ನೊಂದು ವಿಚಾರವೆಂದರೆ, ಈ ಕ್ಷೇತ್ರದ ಕುರಿತು ಗಟ್ಟಿಯಾಗಿರುವ ನಂಬಿಕೆ ಎಂದರೆ ಯಾರೊಬ್ಬರೂ ಆಗಲಿ ತಮಗೆ ಬೇಕೆಂದಾಗ ಯೋಜಿಸಿ ದೇವಿಯ ದರ್ಶನಕ್ಕೆ ತೆರಳಲಾಗುವುದಿಲ್ಲವಂತೆ. ದೇವಿಯಿಂದಲೆ ಕರೆ ಬಂದಾಗ ಅಥವಾ ಆಕೆಯ ಇಚ್ಛೆಯಿದ್ದಗ ಮಾತ್ರ ಅಲ್ಲಿ ತೆರಳಬಹುದಂತೆ. ಬಹಳಷ್ಟು ಜನರ ಅನುಭವಕ್ಕಿದು ಬಂದಿದೆ ಎನ್ನಲಾಗಿದೆ. ಹಾಗಾಗಿಯೆ ದೇವಿಯನ್ನು ಕುರಿತು ಭಕ್ತಾದಿಗಳು ಕರೆಸಿಕೊಳ್ಳುವಂತೆ ಸದಾ ಪ್ರಾರ್ಥಿಸುತ್ತಿರುತ್ತಾರೆ.

ಚಿತ್ರಕೃಪೆ: Vinayaraj

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X