Search
  • Follow NativePlanet
Share
» »ಶಿಲೆಯಾದ ಶ್ರೀ ಮಹಾವಿಷ್ಣುವಿನ ಮೂರ್ತಿ ಎಲ್ಲಿದೆ ಗೊತ್ತ?

ಶಿಲೆಯಾದ ಶ್ರೀ ಮಹಾವಿಷ್ಣುವಿನ ಮೂರ್ತಿ ಎಲ್ಲಿದೆ ಗೊತ್ತ?

ಸತ್ಯ ಯುಗದಲ್ಲಿ ನದಿಗೆ ಸಂಬಂಧಪಟ್ಟ ದೇವತೆಗಳಾದ ಭಗೀರಥಿ, ಜಲಂಧರಿಗಳ ಇಬ್ಬರಲ್ಲಿ ವಾದ-ವಿವಾದ ಏರ್ಪಡುತ್ತದೆ. ಅದಕ್ಕೆ ಮುಖ್ಯವಾದ ಕಾರಣವೆನೆಂದರೆ ಅವರಲ್ಲಿ ಯಾರು ಅತ್ಯಂತ ಪ್ರಮುಖವಾದವರು ಎಂಬುದೇ ಆಗಿದೆ. ಅವರನ್ನು ಕಂಡ ಶ್ರೀ ಮಹಾವಿಷ್ಣುವು ಒಂದು

ಉತ್ತರಾಖಂಡ ರಾಜ್ಯದಲ್ಲಿ ಸಮುದ್ರ ಮಟ್ಟಕ್ಕೆ ಸುಮಾರು 2620 ಅಡಿ ಎತ್ತರ, ಭಗೀರಥಿ ನದಿ ತೀರದಲ್ಲಿ, ಉತ್ತರ ಕಾಶಿಗೆ ಸುಮಾರು 72 ಕಿ.ಮೀ ದೂರದಲ್ಲಿ ಹರ್ಸಿಲ್ ಎಂಬ ಗ್ರಾಮವಿದೆ. ಈ ಹೆಸರಿನ ಬಗ್ಗೆ ಒಂದು ಚಿಕ್ಕದಾದ ಪೌರಾಣಿಕ ಕಥೆ ಇದೆ. ಅದೆನೆಂದರೆ

ಹಾರತಿ ಸಮಯದಲ್ಲಿ ಕಣ್ಣು ತೆರಯುವ ಸ್ವಾಮಿಯ ದೇವಾಲಯ ಎಲ್ಲಿದೆ ಗೊತ್ತ?ಹಾರತಿ ಸಮಯದಲ್ಲಿ ಕಣ್ಣು ತೆರಯುವ ಸ್ವಾಮಿಯ ದೇವಾಲಯ ಎಲ್ಲಿದೆ ಗೊತ್ತ?

ಸತ್ಯ ಯುಗದಲ್ಲಿ ನದಿಗೆ ಸಂಬಂಧಪಟ್ಟ ದೇವತೆಗಳಾದ ಭಗೀರಥಿ, ಜಲಂಧರಿಗಳ ಇಬ್ಬರಲ್ಲಿ ವಾದ-ವಿವಾದ ಏರ್ಪಡುತ್ತದೆ. ಅದಕ್ಕೆ ಮುಖ್ಯವಾದ ಕಾರಣವೆನೆಂದರೆ ಅವರಲ್ಲಿ ಯಾರು ಅತ್ಯಂತ ಪ್ರಮುಖವಾದವರು ಎಂಬುದೇ ಆಗಿದೆ. ಅವರನ್ನು ಕಂಡ ಶ್ರೀ ಮಹಾವಿಷ್ಣುವು ಒಂದು ಶಿಲೆಯಾದರು. ಹಾಗಾಗಿಯೇ ಈ ಗ್ರಾಮವನ್ನು "ಹರಿಶಿಲ" ಎಂದು ಕರೆಯಲಾಯಿತು. ಕೆಲವು ದಶಕಗಳ ಬಳಿಕ ಅದು ಹರ್ಸಿಲ ಎಂದು ಜನರು ಕರೆಯಲು ಪ್ರಾರಂಭ ಮಾಡಿದರು.

ತಿರುಮಲದಲ್ಲಿದೆ ಬಂಗಾರದ ಬಾವಿ !ತಿರುಮಲದಲ್ಲಿದೆ ಬಂಗಾರದ ಬಾವಿ !

ಚಾರ್ ಧಾಂ ಎಂದು ಕರೆಯಲ್ಪಡುವ ಪ್ರಮುಖವಾದ ಹಿಂದೂ ಯಾತ್ರಾ ಕೇಂದ್ರದಲ್ಲಿ ಒಂದಾದ ಗಂಗೋತ್ರಿಗೆ ಈ ಗ್ರಾಮ ಅತ್ಯಂತ ಸಮೀಪವಾಗಿದೆ. ಇದಕ್ಕೆ 30 ಕಿ.ಮೀ ದೂರದಲ್ಲಿರುವ ಗಂಗೋತ್ರಿಯ ಪಾರ್ಕ್, ಇಲ್ಲಿನ ಮತ್ತೊಂದು ಪ್ರವಾಸಿ ಆಕರ್ಷಣೆಯಾಗಿದೆ.

ನಿಮಿಷಕ್ಕೆ ಒಮ್ಮೆ ಭಾರ ಹೆಚ್ಚಾಗುವ ಮೂರ್ತಿ ಇವನು....ನಿಮಿಷಕ್ಕೆ ಒಮ್ಮೆ ಭಾರ ಹೆಚ್ಚಾಗುವ ಮೂರ್ತಿ ಇವನು....

ಹರ್ಸಿಲದಲ್ಲಿನ ಪ್ರವಾಸಿ ಆಕರ್ಷಣೆಗಳು

ಹರ್ಸಿಲದಲ್ಲಿನ ಪ್ರವಾಸಿ ಆಕರ್ಷಣೆಗಳು

ಧರಲಿ ಎಂಬ ಗ್ರಾಮವು ಹರ್ಸಿಲ್‍ನಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಈ ಸ್ಥಳದ ಸುತ್ತ-ಮುತ್ತ ದೇವದಾರು ವೃಕ್ಷಗಳಿಂದ ತುಂಬಿದೆ. ಹಾಗೆಯೇ ಈ ಸ್ಥಳವು ಪವಿತ್ರ ಗಂಗಾ ನದಿ ತೀರದಲ್ಲಿದೆ. ಮಂಜಿನಿಂದ ಕೂಡಿದ ಶಿಖರಗಳು, ಅಪಲ್ ತೋಟಗಳು ಇನ್ನು ಹಲವಾರು ಆಕರ್ಷಣೆಗಳು ಪ್ರವಾಸಿಗರನ್ನು ಸೆಳೆಯುತ್ತದೆ.

ಹರ್ಸಿಲದಲ್ಲಿನ ಪ್ರವಾಸಿ ಆಕರ್ಷಣೆಗಳು

ಹರ್ಸಿಲದಲ್ಲಿನ ಪ್ರವಾಸಿ ಆಕರ್ಷಣೆಗಳು

ಧರಲಿಯಲ್ಲಿ ಕೇದರಾನಾಥ ದೇವಾಲಯಕ್ಕೆ ಹೋಲುವ ಪ್ರಾಚೀನವಾದ ಶಿವಾಲಯವಿದೆ. ಗಂಗೋತ್ರಿಗೆ ತೆರಳುವ ದಾರಿಯಲ್ಲಿ ಇರುವುದರಿಂದ ಭಕ್ತರು ಈ ಪವಿತ್ರವಾದ ಸ್ಥಳಕ್ಕೆ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಕೇವಲ ಇದೊಂದೆ ದೇವಾಲಯವಲ್ಲದೇ ಇನ್ನು ಹಲವಾರು ದೇವಾಲಯ, ಆಕರ್ಷಣೆಗಳನ್ನು ಕಾಣಬಹುದಾಗಿದೆ.

ಹರ್ಸಿಲದಲ್ಲಿನ ಪ್ರವಾಸಿ ಆಕರ್ಷಣೆಗಳು

ಹರ್ಸಿಲದಲ್ಲಿನ ಪ್ರವಾಸಿ ಆಕರ್ಷಣೆಗಳು

ಮುಖ್ಭಾ ಗ್ರಾಮವನ್ನು ಮುಖ್ವಾಸ್ ಎಂದು ಕೂಡ ಕರೆಯುತ್ತಾರೆ. ಈ ಗ್ರಾಮವನ್ನು ಹಿಂದೂಗಳ ಪವಿತ್ರವಾದ ಸ್ಥಳ ಎಂದು ಭಾವಿಸಲಾಗುತ್ತದೆ. ಇಲ್ಲಿ ಹಿಂದೂ ನದಿಯನ್ನು ದೇವತೆ ಗಂಗೋತ್ರಿಯಾಗಿ ಆರಾಧನೆಯನ್ನು ಮಾಡಲಾಗುತ್ತದೆ.

ಹರ್ಸಿಲದಲ್ಲಿನ ಪ್ರವಾಸಿ ಆಕರ್ಷಣೆಗಳು

ಹರ್ಸಿಲದಲ್ಲಿನ ಪ್ರವಾಸಿ ಆಕರ್ಷಣೆಗಳು

ಚಳಿಗಾಲದಲ್ಲಿ ಗಂಗೋತ್ರಿಯು ಮಂಜುವಿನಿಂದ ಅವೃತ್ತವಾಗಿದ್ದು ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿಯೇ ಗಂಗಮ್ಮನನ್ನು ಗಂಗೋತ್ರಿಯಿಂದ ಇಲ್ಲಿಗೆ (ಮುಖ್ಭಾ ಗ್ರಾಮಕ್ಕೆ) ತೆಗೆದುಕೊಂಡು ಬಂದು ಪೂಜೆಗಳನ್ನು ಮಾಡುತ್ತಾರೆ. ಚಳಿಗಾಲವಾದ ಮರುಕ್ಷಣ ಹಾಗೆಯೇ ನದಿ ದೇವತೆಯನ್ನು ಯಥಾ ಪ್ರಕಾರ ಆಕೆಯ ಸ್ಥಾನದಲ್ಲಿ ಇಡುತ್ತಾರೆ.

ಹರ್ಸಿಲದಲ್ಲಿನ ಪ್ರವಾಸಿ ಆಕರ್ಷಣೆಗಳು

ಹರ್ಸಿಲದಲ್ಲಿನ ಪ್ರವಾಸಿ ಆಕರ್ಷಣೆಗಳು

ಹರ್ಸಿಲ್‍ನಲ್ಲಿ ನೋಡಬೇಕಾದ ಮತ್ತೊಂದು ಪ್ರವಾಸಿ ಆಕರ್ಷಣೆ ಎಂದರೆ ಅದು ಗಂಗೋತ್ರಿ ನ್ಯಾಷನಲ್ ಪಾರ್ಕ್. ಇದು ಹರ್ಸಿಲ್‍ಗೆ ಸುಮಾರು 30 ಕಿ.ಮೀ ದೂರದಲ್ಲಿರುತ್ತದೆ. ಸುಮಾರು 1553 ಚದರ ಕಿ.ಮೀ ವಿಸ್ತೀರ್ಣವಿರುವ ಈ ಪಾರ್ಕ್ 15 ವಿಧವಾದ ಪ್ರಾಣಿಗಳನ್ನು, 100 ಕ್ಕೂ ಹೆಚ್ಚು ವಿವಿಧ ಜಾತಿಯ ವೃಕ್ಷಗಳನ್ನು ಇಲ್ಲಿ ಕಾಣಬಹುದಾಗಿದೆ.

ಹರ್ಸಿಲದಲ್ಲಿನ ಪ್ರವಾಸಿ ಆಕರ್ಷಣೆಗಳು

ಹರ್ಸಿಲದಲ್ಲಿನ ಪ್ರವಾಸಿ ಆಕರ್ಷಣೆಗಳು

ಇಲ್ಲಿ ಅತ್ಯಂತ ಸುಂದರವಾದ ಪ್ರಾಣಿ ಪ್ರಪಂಚವನ್ನು ಕಂಡು ಆನಂದಿಸಬಹುದು. ಇಲ್ಲಿ ಮುಖ್ಯವಾಗಿ ಜಿಂಕೆಗಳು, ಚಿರತೆಗಳು, ಆನೆಗಳು, ಸಿಂಹ ಇನ್ನೂ ಹಲವಾರು ಪ್ರಾಣಿಗಳ ಜೊತೆ ಜೊತೆಗೆ ಹಿಮಾಲಯದ ವೃಕ್ಷಗಳನ್ನು ಇಲ್ಲಿ ಕಾಣಬಹುದು. ಇಲ್ಲಿ ವಿಭಿನ್ನವಾದ ಎಂದೂ ಕಂಡು ಕೇಳರಿಯದ ಪ್ರಾಣಿ ಸಂಕುಲವನ್ನು ಕಾಣಬಹುದಾಗಿದೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ರಸ್ತೆ ಮಾರ್ಗದ ಮೂಲಕ
ಉತ್ತರ ಕಾಶಿ, ಡೆಹ್ರಾಡೂನ್, ರಿಷಿಕೇಶ್ ನಂತಹ ಪ್ರದೇಶಗಳಿಂದ ಹರ್ಸಿಲ್‍ಗೆ ಬಸ್ಸುಗಳ ಸೌಕಾರ್ಯವಿರುತ್ತದೆ.

ರೈಲು ಮಾರ್ಗದ ಮೂಲಕ
ಹರ್ಸಿಲ್‍ಗೆ ಸುಮಾರು 239 ಕಿ.ಮೀ ದೂರದಲ್ಲಿ ರಿಷಿಕೇಶ್ ರೈಲ್ವೆ ಸ್ಟೇಷನ್ ಇದೆ. ಕ್ಯಾಬ್ ಅಥವಾ ಟ್ಯಾಕ್ಸಿ ಮೂಲಕ ಇಲ್ಲಿಗೆ ಸೇರಿಕೊಳ್ಳಬಹುದಾಗಿದೆ.

ವಿಮಾನ ಮಾರ್ಗ
ಹರ್ಸಿಲ್‍ಗೆ ಸುಮಾರು 253 ಕಿ.ಮೀ ದುರದಲ್ಲಿ ಡೆಹ್ರಾಡೂನ್ ವಿಮಾನ ನಿಲ್ದಾಣವಿದೆ. ಇದು ದೆಹಲಿ ವಿಮಾನ ನಿಲ್ದಾಣದಿಂದ ಅನುಸಂಧಾನಿಸಿದೆ. ಕ್ಯಾಬ್ ಅಥವಾ ಟ್ಯಾಕ್ಸಿಯಲ್ಲಿ ಹರ್ಸಿಲ್‍ಗೆ ಸೇರಿಕೊಳ್ಳಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X