Search
  • Follow NativePlanet
Share
» »ಉತ್ತರಾಖಂಡದ ಅತ್ಯದ್ಭುತ ಗಿರಿಧಾಮಗಳು!

ಉತ್ತರಾಖಂಡದ ಅತ್ಯದ್ಭುತ ಗಿರಿಧಾಮಗಳು!

ದೇವಭೂಮಿ ಎಂದೆ ಜನಜನಿತವಾಗಿರುವ ಉತ್ತರಾಖಂಡ ರಾಜ್ಯವು ಕೇವಲ ಧಾರ್ಮಿಕ ತಾಣವಾಗಿ ಮಾತ್ರವಲ್ಲದೆ ಅದ್ಭುತ ಸೃಷ್ಟಿ ಸೌಂದರ್ಯದಿಂದ ಕೂಡಿರುವ ಗಿರಿಧಾಮಗಳಿಗಾಗಿಯೂ ಹೆಸರುವಾಸಿಯಾಗಿದೆ

By Vijay

"ದೇವ ಭೂಮಿ" ಎಂದು ಕರೆಯಲ್ಪಡುವ ಉತ್ತರಾಖಂಡ ರಾಜ್ಯವು ಹಿಮಾಲಯದ ವ್ಯಾಪ್ತಿಯಲ್ಲಿರುವ ಒಂದು ಸುಂದರ ಹಾಗೂ ಅಷ್ಟೆ ಮನಮೋಹಕ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಹಿಮದಿಂದ ಕೂಡಿರುವ ಪರ್ವತಗಳ ಅದ್ಭುತ ನೋಟಗಳನ್ನಷ್ಟೆ ಅಲ್ಲದೆ, ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತವಾಗಿರುವ ಸೃಷ್ಟಿ ಸೌಂದರ್ಯವನ್ನೂ ಸವಿಯಬಹುದು.

ಇಲ್ಲಿನ ತಾಪಮಾನ ಸದಾ ಕಡಿಮೆಯಾಗಿರುವುದರಿಂದ ಸಾಕಷ್ಟು ಶಿತಯುಕ್ತ ಪ್ರದೇಶ ಇದಾಗಿದೆ. ಅಲ್ಲದೆ ವಾತಾವರಣವು ಕಲ್ಮಶರಹಿತವಾಗಿರುವುದರಿಂದ ಅದ್ಭುತ ಅನುಭೂತಿ ನೀಡುವ ರಾಜ್ಯ ಇದಾಗಿದೆ. ಉತ್ತರಾಖಂಡವು ಒಂದೆಡೆ ಅದ್ವಿತೀಯ ನಿಸರ್ಗ ಸಂಪತ್ತಿನಿಂದ ಕೂಡಿದ್ದರೆ ಇನ್ನೊಂದೆಡೆ ಹಿಂದುಗಳ ಪ್ರಮುಖ ಧಾರ್ಮಿಕ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ.

ಸಾಕಷ್ಟು ಸಂಖ್ಯೆಯಲ್ಲಿ ದೇವಾಲಯಗಳು ಇಲ್ಲಿರುವುದನ್ನು ಕಾಣಬಹುದು. ತಮ್ಮದೆ ಆದ ದಂತಕಥೆ, ಪುರಾಣ ಪ್ರಸಂಗಗಳ ಕಥೆಯನ್ನು ಸಾರುವ ಹಾಗೂ ಧಾರ್ಮಿಕ ಮಹತ್ವ ಪಡೆದಿರುವ ಶಕ್ತಿಶಾಲಿ ದೈವಿ ಕ್ಷೇತ್ರಗಳು ರಾಜ್ಯಾದ್ಯಂತ ಕಂಡುಬರುತ್ತವೆ. ಹಾಗಾಗಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉತ್ತರಾಖಂಡ ರಾಜ್ಯಕ್ಕೆ ಪ್ರವಾಸ ಮಾಡುತ್ತಾರೆ.

ಆದರೆ, ಧಾರ್ಮಿಕ ಕ್ಷೇತ್ರಗಳಿಗಷ್ಟೆ ಉತ್ತರಾಖಂಡ ಸೀಮಿತವೆ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದರೆ, ಅದು ಖಂಡಿತ ತಪ್ಪು. ಏಕೆಂದರೆ ಉತ್ತರಾಖಂಡದಲ್ಲಿ ಪ್ರಕೃತಿ ಮಾತೆಯು ನಗುಮೊಗದಲ್ಲಿ ಲವಲವಿಕೆಯಿಂದ ಕೂಡಿರುವುದನ್ನು ನೋಡಬಹುದು. ಇಲ್ಲಿರುವ ಕೆಲವು ಅದ್ಭುತ ಗಿರಿಧಾಮಗಳಿಗೆ ಭೇಟಿ ನೀಡಿದರೆ ಸಾಕು, ಇಲ್ಲಿನ ಸೌಂದರ್ಯ ಹೇಗೆ ಎಂದು ನಿಮ್ಮ ಕಣ್ಣುಗಳಲ್ಲೆ ಕಟ್ಟುತ್ತದೆ.

ಗಿರಿಧಾಮ

ಗಿರಿಧಾಮ

ಉತ್ತರಾಖಂಡ ಜಿಲ್ಲೆಯ ಅಲ್ಮೋರಾ ಜಿಲ್ಲೆಯ ಅಲ್ಮೋರಾ ಪಟ್ಟಣವು ಒಂದು ಸುಂದರ ಗಿರಿಧಾಮ ಪ್ರದೇಶವಾಗಿದೆ. ಹಿಮಾಲಯ ಶ್ರೇಣಿಯ ಕುಮಾವೂನ್ ಪರ್ವತ ಪ್ರದೇಶಗಳಲ್ಲಿ ನೆಲೆಸಿರುವ ಈ ಗಿರಿಧಾಮವು ಅಪರಿಮಿತವಾದ ಸೃಷ್ಟಿ ಸೌಂದರ್ಯದಿಂದ ಕೂಡಿದ್ದು ನೋಡಿದ ಕ್ಷಣದಲ್ಲೆ ಪ್ರಸನ್ನಗೊಳ್ಳುವಂತೆ ಮಾಡುತ್ತದೆ.

ಚಿತ್ರಕೃಪೆ: Travelling Slacker

4000 ಬಗೆಯ

4000 ಬಗೆಯ

ಅಲ್ಮೋರಾ ಗಿರಿಧಾಮವು ಶ್ರೀಮಂತ ಸಸ್ಯ ಸಂಪತ್ತಿನಿಂದ ಕೂಡಿದೆ. ಏನಿಲ್ಲವೆಂದರೂ ಇಲ್ಲಿ 4000 ಬಗೆಯ ವೈವಿಧ್ಯಮಯ ಸಸ್ಯ ಪ್ರಬೇಧಗಳನ್ನು ಕಾಣಬಹುದು. ದಟ್ಟ ಹಸಿರಿನ ಗಿಡ ಮರಗಳಿಂದ ಕೂಡಿರುವ ಈ ಗಿರಿಧಾಮವು ವಿಶಿಷ್ಟವಾದ ಪ್ರಾಣಿ-ಪಕ್ಷಿಗಳಿಂದಲೂ ಸಹ ಕೂಡಿದೆ.

ಚಿತ್ರಕೃಪೆ: Travelling Slacker

ಎಷ್ಟು ದೂರ?

ಎಷ್ಟು ದೂರ?

ಅಲ್ಮೋರಾ ಪ್ರಸಿದ್ಧ ಪ್ರವಾಸಿ ತಾಣವಾದ ನೈನಿತಾಲ್ ನಿಂದ 63 ಕಿ.ಮೀ ಹಾಗೂ ನವದೆಹಲಿಯಿಂದ 375 ಕಿ.ಮೀ ಗಳಷ್ಟು ದೂರದಲ್ಲಿದೆ. ಅಲ್ಲದೆ ಉತ್ತರಾಖಂಡ ಸಾರಿಗೆ ಇಲಾಖೆಯಿಂದ ಬಸ್ಸುಗಳು ಡೆಹ್ರಾಡೂನ್ ನಗರದಿಂದ ಅಲ್ಮೋರಾಗೆ ತೆರಳಲು ದೊರೆಯುತ್ತವೆ. ನವದೆಹಲಿಯಿಂದಲೂ ಸಹ ಅಲ್ಮೋರಾಗೆ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Rajarshi MITRA

ಕಿರುಗಿರಿಧಾಮ

ಕಿರುಗಿರಿಧಾಮ

ಉತ್ತರಾಖಂಡ ರಾಜ್ಯದ ನೈನಿತಾಲ್‌ ಜಿಲ್ಲೆಯಲ್ಲಿರುವ ಸುಂದರ ನಗರಿ ಭೀಮತಲ್‌. ಇದು ಸಮುದ್ರ ಮಟ್ಟದಿಂದ 1370 ಮೀಟರ್‌ ಎತ್ತರದಲ್ಲಿದೆ. ಇಂದು ಭೀಮತಲ್ ನೈನಿತಾಲ್‌ ಜಿಲ್ಲೆಯ ಒಂದು ಸುಂದರ ಕಿರು ಗಿರಿಧಾಮ ಪ್ರದೇಶವಾಗಿ ಜನಪ್ರಿಯವಾಗಿದೆ.

ಚಿತ್ರಕೃಪೆ: genobz

ಕೆರೆ

ಕೆರೆ

ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಿಗುವ ಪ್ರಮುಖ ಆಕರ್ಷಣೆ ವಿಕ್ಟೋರಿಯಾ ಆಣೆಕಟ್ಟು. ಭೀಮತಲ ಕೆರೆಯ ಕೊನೆಯಲ್ಲಿ ಇದು ನಿರ್ಮಾಣಗೊಂಡಿದೆ. ಇಲ್ಲಿನ ಅತ್ಯಾಕರ್ಷಕ ಕೆರೆಯ ನೋಟ ನೋಡುಗರನ್ನು ಅಪಾರವಾಗಿ ಸೆಳೆಯುತ್ತದೆ.

ಚಿತ್ರಕೃಪೆ: draskd

ಹೆಸರು ಹೇಗೆ ಬಂತು

ಹೆಸರು ಹೇಗೆ ಬಂತು

ಇದರ ಹೆಸರು ರಾಜ ಅರ್ಜುನನ ಮಗಳಾದ ಚಂಪಾವತಿಯಿಂದ ವ್ಯುತ್ಪತ್ತಿಯಾಗಿದೆ. ಇಲ್ಲಿನ ಜನರು ಹೇಳುವಂತೆ ವಿಷ್ಣುವಿನ ಕೂರ್ಮಾವತಾರ ಇಲ್ಲೇ ಆಗಿತ್ತು. ಉತ್ತರಾಖಂಡದ ಒಂದು ಪ್ರತ್ಯೇಕ ಜಿಲ್ಲೆಯಾಗಿ ವಿಂಗಡಿಸಲಾದ ಇದು ಇಲ್ಲಿರುವ ದೇವಾಲಯಗಳು ಮತ್ತು ಅತ್ಯದ್ಭುತವಾದ ಪ್ರಕೃತಿ ಸೌಂದರ್ಯದಿಂದ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Ashish Gupta

ಹೆಸರುವಾಸಿ

ಹೆಸರುವಾಸಿ

ಕ್ರಾಂತೇಶ್ವರ ಮಹಾದೇವ ದೇವಾಲಯ, ಬಾಲೇಶ್ವರ ದೇವಸ್ಥಾನ, ಪೂರ್ಣಗಿರಿ ದೇವಾಲಯ, ಗ್ವಾಲ್ ದೇವತಾ, ಆದಿತ್ಯ ದೇವಾಲಯ, ಚೌಮು ದೇವಾಲಯ ಮತ್ತು ಪತಾಲ್ ರುದ್ರೇಶ್ವರ ದೇವಾಲಯ ಇಲ್ಲಿನ ಕೆಲವು ಪ್ರಸಿದ್ಧವಾದ ದೇವಾಲಯಗಳಾಗಿವೆ. ಇಲ್ಲಿನ ನಾಗನಾಥ್ ದೇವಸ್ಥಾನ ಹಳೆಯ ಕಾಲದ ಕುಮಾವೂನ್ ಪ್ರದೇಶ ಹೇಗಿತ್ತು ಎಂಬ ಬಗ್ಗೆ ಸುಂದರವಾಗಿ ಚಿತ್ರಿಸುತ್ತದೆ.

ಚಿತ್ರಕೃಪೆ: Ashwini Kesharwani

ಕನಸಿನಂತೆ

ಕನಸಿನಂತೆ

ಸಾಮಾನ್ಯವಾಗಿ ಟೀ ಎಸ್ಟೇಟ್/ಚಹ ತೋಟಗಳಂತಹ ಸುಂದರ ಸ್ಥಳಗಳನ್ನು ನಾವು ಚಿತ್ರಗಳಲ್ಲಷ್ಟೇ ವೀಕ್ಷಿಸುತ್ತೇವೆ ಅಥವಾ ಆ ಸ್ಥಳ ಎಲ್ಲಿದೆ ಎಂಬುದು ತಿಳಿದಿದ್ದರೂ ಅಲ್ಲಿಗೆ ಹೋಗಲು ನಮಗೆ ಆಗಿರುವುದಿಲ್ಲ ಅಲ್ಲವೇ? ಅದರೆ ಇಂತಹ ಸೌಂದರ್ಯದ ಗಣಿಯಂತಹ ಸ್ಥಳಕ್ಕೇನಾದರೂ ನಿಮಗೆ ನಿಮ್ಮ ರಜಾ ದಿನಗಳನ್ನು ಕಳೆಯಲು ಹೋಗಬೇಕೆಂದಿದ್ದರೆ ಅದಕ್ಕೆ ಅತ್ಯಂತ ಪ್ರಶಸ್ತವಾದ ಸ್ಥಳ ಉತ್ತರಖಂಡದ ಕೌಸಾನಿ ಗಿರಿಧಾಮ.

ಚಿತ್ರಕೃಪೆ: Sujayadhar

ಹೆಸರುವಾಸಿ

ಹೆಸರುವಾಸಿ

ಅದರಲ್ಲೂ ನಗರದ ಜೀವನ ಸಾಕೆನಿಸಿದವರಿಗೆ ತುಸು ವಿಶ್ರಾಂತಿ ಬೇಕೆಂದರೆ ಕೌಸಾನಿಯ ಆಶ್ರಮಗಳು ನಿಮಗೆ ಸಮಾಧಾನವನ್ನು ನೀಡಬಲ್ಲವು. ಕೌಸಾನಿ, ಉತ್ತರಖಂಡ್ ರಾಜ್ಯದಲ್ಲಿ ನೆಲೆಗೊಂಡಿರುವ ಒಂದು ಚಿತ್ರಸದೃಶ ಬೆಟ್ಟದ ಪಟ್ಟಣ. ಕೌಸಾನಿಯಲ್ಲಿ ಕಂಡುಬರುವ ಅದ್ಭುತ ಸೂರ್ಯೋದಯದ ನೋಟ.

ಚಿತ್ರಕೃಪೆ: Abhijit Kar Gupta

ನಯನಮನೋಹರ

ನಯನಮನೋಹರ

ಉತ್ತರಾಖಂಡ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಮಸ್ಸೂರಿಯು ಪ್ರವಾಸಿ ಆಕರ್ಷಣೆಯುಳ್ಳ ಅದ್ಭುತ ಗಿರಿಧಾಮವಾಗಿದೆ. ಇದು ಹಿಮಾಲಯದ ತಪ್ಪಲಿನಲ್ಲಿ ಸಮುದ್ರ ಮಟ್ಟದಿಂದ ಸುಮಾರು 1880 ಮೀ ಎತ್ತರದಲ್ಲಿದೆ. ಈ ಸ್ಥಳವು ಶಿವಾಲಿಕ್ ಕಣಿವೆ ಮತ್ತು ಡೂನ್ ಕಣಿವೆಗಳ ಅದ್ಭುತವಾದ ದೃಶ್ಯಾವಳಿಗಳನ್ನು ನೀಡುವಲ್ಲಿ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Paul Hamilton

ಧಾರ್ಮಿಕ ಕೇಂದ್ರಗಳು

ಧಾರ್ಮಿಕ ಕೇಂದ್ರಗಳು

ಅಲ್ಲದೆ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಯಮುನೋತ್ರಿ ಮತ್ತು ಗಂಗೋತ್ರಿಗಳಿಗೆ "ಪ್ರವೇಶ ದ್ವಾರ" ವಾಗಿ ಮಸ್ಸೂರಿ ಪ್ರಸಿದ್ಧವಾಗಿದೆ. ಈ ಭಾಗಕ್ಕೆ ಸೀಮಿತವಾದ ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುವ "ಮನ್ಸೂರ್" ಎಂಬ ಕುರುಚಲು ಪೊದೆಯ ಕಾರಣದಿಂದ ಈ ಪ್ರದೇಶಕ್ಕೆ ಮಸ್ಸೂರಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗಿದೆ.

ಚಿತ್ರಕೃಪೆ: Paul Hamilton

ಮನ್ಸೂರಿ

ಮನ್ಸೂರಿ

ಕೆಲ ಜನರು ಈ ಸ್ಥಳವನ್ನು ಮನ್ಸೂರಿ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ. ಈ ಸುಂದರವಾದ ಗಿರಿಧಾಮವು ತನ್ನಲ್ಲಿರುವ ಹಳೆಯ ಕಾಲದ ದೇವಸ್ಥಾನಗಳು, ಬೆಟ್ಟಗಳು, ಜಲಪಾತಗಳು, ಕಣಿವೆಗಳು, ಅರಣ್ಯಧಾಮ ಮತ್ತು ಶೈಕ್ಷಣಿಕ ಸಂಸ್ಥೆಗಳಿಂದಾಗಿ ಪ್ರಸಿದ್ಧವಾಗಿದೆ. ಜ್ವಾಲಾ ದೇವಿ ದೇವಾಲಯ, ನಾಗ ದೇವತಾ ದೇವಸ್ಥಾನ ಮತ್ತು ಭದ್ರಾಜ್ ದೇವಸ್ಥಾನ ಇಲ್ಲಿನ ಕೆಲವು ಪ್ರಮುಖವಾದ ದೇವಸ್ಥಾನಗಳಾಗಿವೆ.

ಚಿತ್ರಕೃಪೆ: Paul Hamilton

ಹೆಬ್ಬಾಗಿಲು

ಹೆಬ್ಬಾಗಿಲು

ಪಿಥೋರಗಡ್, ಉತ್ತರಾಖಂಡ ರಾಜ್ಯದಲ್ಲಿರುವ ಒಂದು ಸುಂದರ ಗಿರಿಧಾಮ ಪ್ರದೇಶವಾಗಿದ್ದು ಹಿಮಾಲಯಕ್ಕೆ ತೆರಳುತ್ತಿರುವವರಿಗೊಂದು ಹೆಬ್ಬಾಗಿಲಾಗಿದೆ. ಇದು ಸೋರ್ ಕಣಿವೆಯಲ್ಲಿದ್ದು ಉತ್ತರದಲ್ಲಿ ಅಲ್ಮೋರಾ ಜಿಲ್ಲೆಯ ಗಡಿಗೆ ಹೊಂದಿಕೊಂಡಿದೆ.

ಚಿತ್ರಕೃಪೆ: L. Shyamal

ನೋಡಲೇಬೇಕಾದ

ನೋಡಲೇಬೇಕಾದ

ರಾಣಿಖೇತ್ ಅನ್ನು 'ಕ್ವೀನ್ಸ್ಮೆಡೊವ್' ಅಥವಾ 'ರಾಣಿ ಹುಲ್ಲುಗಾವಲು' ಎಂದು ಕರೆಯಲಾಗುತ್ತದೆ. ಇದು ಅಲ್ಮೋರಾ ಜಿಲ್ಲೆಯಲ್ಲಿರುವ ನೋಡಲೇ ಬೇಕಾದ ಗಿರಿಧಾಮ. ಒಂದು ದಂತಕಥೆಯ ಪ್ರಕಾರ, ಕುಮಾವೂನ್ ಪ್ರದೇಶದ ಸುಂದರರಾಣಿ ಪದ್ಮಿನಿಯು, ಒಮ್ಮೆ ರಾನಿಖೇತ್ ಗೆ ಭೇಟಿ ನೀಡಿದ್ದಳು ಮತ್ತು ಈ ಸ್ಥಳದ ಸೌಂದರ್ಯದಿಂದ ವಿಸ್ಮಯಗೊಂಡಳು.

ಚಿತ್ರಕೃಪೆ: Ross Huggett

ಅರಮನೆ ನಿರ್ಮಿಸಿದ

ಅರಮನೆ ನಿರ್ಮಿಸಿದ

ಇದನ್ನರಿತ ಅವಳ ಪತಿ ರಾಜ ಸುಖೇರ್ ದೇವನು ಈ ಸ್ಥಳದಲ್ಲಿ ಅರಮನೆಯನ್ನು ನಿರ್ಮಿಸಿದ ಮತ್ತು ಅದಕ್ಕೆ 'ರಾನಿಖೇತ್' ಎಂದು ಹೆಸರಿಸಿದ. ಆದರೆ ಇದರ ಕುರಿತು ಯಾವುದೆ ಪುರಾತತ್ವ ಪುರಾವೆಗಳು ಲಭ್ಯವಿಲ್ಲ. ಆದರೂ ಅರಮನೆಯ ಮೂಲೆ ಮೂಲೆಯಲ್ಲಿ ರಾನಿಖೇತ್ ಅರಮನೆಯ ಬಗ್ಗೆ ಕಥೆಗಳು ಇನ್ನೂ ಜೀವಂತವಾಗಿವೆ.

ಚಿತ್ರಕೃಪೆ: Amol Sood

ಪ್ರಶಸ್ತ ಸಮಯ

ಪ್ರಶಸ್ತ ಸಮಯ

ರಾಣಿಖೇತ್ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ದೇಶದ ಇತರ ಭಾಗಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಈ ಪ್ರದೇಶದಲ್ಲಿ ವರ್ಷಪೂರ್ತಿ ಮಧ್ಯಮ ಹವಾಗುಣವನ್ನು ಕಾಣಬಹುದು. ಬೇಸಿಗೆ ಕಾಲವು ಈ ಸುಂದರ ತಾಣವನ್ನು ಅನ್ವೇಷಿಸಲು ಆದರ್ಶ ಸಮಯ ಎಂದು ಪರಿಗಣಿಸಲಾಗುತ್ತದೆ. ಮಳೆಗಾಲದಲ್ಲಿ ಇಲ್ಲಿನ ಹವಾಮಾನ ಆಹ್ಲಾದಕರವಾಗಿದ್ದು ಪ್ರವಾಸಿಗರು ಬೇಕಾದರೆ ಈ ಸಮಯದಲ್ಲಿಯೂ ಸಹ ರಾಣಿಖೇತ್ ಗೆ ಭೇಟಿ ನೀಡಬಹುದು.

ಚಿತ್ರಕೃಪೆ: Rahul Chhiber

ಬಲು ಜನಪ್ರೀಯ

ಬಲು ಜನಪ್ರೀಯ

ಹಲವಾರು ಸ್ಥಳಗಳು ಆದರ್ಶಮಯ ಪ್ರವಾಸಕ್ಕೆಂದೆ ದೇಶಾದ್ಯಂತ ಹೆಸರುವಾಸಿಯಾಗಿದ್ದು ಅವುಗಳಲ್ಲೊಂದಾಗಿದೆ ನೈನಿತಾಲ್ ಎಂಬ ಸುಂದರ ಹಾಗೂ ರಮಣೀಯ ನೋಟಗಳನ್ನೊಳಗೊಂಡ ಅದ್ಭುತ ಗಿರಿಧಾಮ. ಏಪ್ರಿಲ್-ಮೇ ಸಮಯದಲ್ಲೂ ಅಬ್ಬಬ್ಬಾ ಎಂದರೆ ಗರಿಷ್ಠ ತಾಪಮಾನ 25 ಡಿಗ್ರಿಗಳಾಗಿರಬಹುದಷ್ಟೆ.

ಚಿತ್ರಕೃಪೆ: Abhishek gaur70

ಪ್ರಶಸ್ತವಾಗಿದೆ

ಪ್ರಶಸ್ತವಾಗಿದೆ

ಬೇಸಿಗೆಯ ಧಗೆಯಿಂದ ನೀವು ಸ್ವಲ್ಪ ವಿರಾಮ ಬಯಸಿ ನಿಮ್ಮ ಸ್ನೇಹಿತರೊಂದಿಗೊ ಇಲ್ಲವೆ ಕುಟುಂಬದೊಂದಿಗೊ ಒಂದು ಮರೆಯಲಾಗದ ಪ್ರವಾಸ ಹೊರಡುವ ಯೋಚನೆಯಲ್ಲಿದ್ದರೆ ಒಂದೊಮ್ಮೆ ಉತ್ತರಾಖಂಡದ ನೈನಿತಾಲ್ ಗೆ ಭೇಟಿ ನೀಡಲು ಯೋಚಿಸಿ ನೋಡಿ. ಖಂಡಿತವಾಗಿಯೂ ನೀವು ತೆಗೆದುಕೊಂಡ ನಿರ್ಧಾರಕ್ಕೆ ಪರಿತಪಿಸುವ ಅಗತ್ಯ ಬರುವುದಿಲ್ಲ ಬದಲು ಅದಕ್ಕೆ ವಿರುದ್ಧವಾಗಿ ಹೆಮ್ಮೆ ಪಟ್ಟುಕೊಳ್ಳುತ್ತೀರಿ.

ಚಿತ್ರಕೃಪೆ: Udayanarya

ಸರೋವರದಿಂದ ಹೆಸರು!

ಸರೋವರದಿಂದ ಹೆಸರು!

ಸಮುದ್ರ ಮಟ್ಟದಿಂದ ಅಗಾಧ 1938 ಮೀ.ಗಳಷ್ಟು ಎತ್ತರದಲ್ಲಿ ಸ್ಥಿತವಿರುವ ಉತ್ತರಾಖಂಡದ ಸುಂದರ ಗಿರಿಧಾಮ ಪ್ರದೇಶ ನೈನಿತಾಲ್, ತನ್ನ ಹೆಸರನ್ನು ಅಲ್ಲಿರುವ ನೈನಿ ಸರೋವರ/ಕೆರೆಯಿಂದ ಪಡೆದುಕೊಂಡಿದೆ. ನೈನಿ ಕೆರೆ ನೈನಿತಾಲ್ ನ ಅತಿ ಗುರುತರವಾದ ಪ್ರವಾಸಿ ಆಕರ್ಷಣೆಯಾಗಿರುವುದು ವಿಶೇಷ.

ಚಿತ್ರಕೃಪೆ: draskd

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X