Search
  • Follow NativePlanet
Share
» »ಉತ್ತರಾಖಂಡ ಎಂಬ ಪ್ರಚಂಡ ಸ್ವರ್ಗ ದರ್ಶನ

ಉತ್ತರಾಖಂಡ ಎಂಬ ಪ್ರಚಂಡ ಸ್ವರ್ಗ ದರ್ಶನ

By Vijay

"ದೇವತೆಗಳ ಭೂಮಿ" ಎಂದೆ ಜನಜನಿತವಾಗಿರುವ, ಹಿಮಾಲಯ ಪರ್ವತಗಳ ಹತ್ತಿರದಲ್ಲಿರುವ ಉತ್ತರಾಖಂಡವು ಹಿಂದೂಗಳ ಪಾಲಿಗೆ ಒಂದು ಪುಣ್ಯ ಭೂಮಿಯಾಗಿದೆ. ಕಾರಣ ಇಲ್ಲಿರುವ, ಮಹಾಭಾರತ, ರಾಮಾಯಣಗಳಾದಿಯಾಗಿ ಹಲವಾರು ಧಾರ್ಮಿಕ, ಪೌರಾಣಿಕ ಕಥೆಗಳಲ್ಲಿ ಉಲ್ಲೇಖಗೊಂಡಿರುವ ಅಸಂಖ್ಯಾತ ಪುಣ್ಯ ಕ್ಷೇತ್ರಗಳ ಉಪಸ್ಥಿತಿ.

ಪಂಚಪ್ರಯಾಗ, ಚಾರ್ ಧಾಮ್ ಯಾತ್ರೆ, ಉತ್ತರಕಾಶಿ, ಗುಪ್ತಕಾಶಿ, ವಿಶ್ವದಲ್ಲೆ ಅತಿ ಎತ್ತರದಲ್ಲಿ ನೆಲೆಸಿರುವ ಶಿವನೆಂಬ ಖ್ಯಾತಿ ಪಡೆದ ತುಂಗನಾಥ ಮುಂತಾದ ಕ್ಷೇತ್ರಗಳಿರುವುದು ಇದೆ ಉತ್ತರಾಖಂಡ ರಾಜ್ಯದಲ್ಲೆ. ಇದೇನಪ್ಪಾ ಉತ್ತರಾಖಂಡ ರಾಜ್ಯವು ಕೇವಲ ತೀರ್ಥ ಯಾತ್ರೆಗೆ ಮಾತ್ರವೆ ಮೀಸಲಾದ ರಾಜ್ಯವೆ.. ಎಂಬ ಸಂಶಯ ನಿಮಗೆ ಮೂಡಿದ್ದರೆ ಅದು ಸಹಜ ಹಾಗೂ ಅದಕ್ಕೆ ಉತ್ತರ ಖಂಡಿತ ಅಲ್ಲ.

ವಿಶೇಷ ಲೇಖನ : ಅದ್ಭುತ ಆಕರ್ಷಣೆಗಳ ಕರ್ನಾಟಕ ದರ್ಶನ

ಸಮುದ್ರ ಮಟ್ಟದಿಂದ ಸಾಕಷ್ಟು ಅಂದರೆ 5000 ಕ್ಕೂ ಅಧಿಕ ಅಡಿಗಳಷ್ಟು ಎತ್ತರದಲ್ಲಿದ್ದು, ಚಳಿಯಿಂದ ಕೂಡಿದ ವಾತವರಣ, ಹಿಮ ಪರ್ವತಗಳ ಅನನ್ಯ ನೋಟ ಹಾಗೂ ನಿರ್ದಿಷ್ಟವಾಗಿ ಅಲ್ಲಿಯೆ ಕಂಡುಬರುವಂತಹ ದೇವದಾರು ಮರಗಳ ದಟ್ಟ ಕಾಡು, ಕಣಿವೆ, ಪ್ರಪಾತ, ಶುದ್ಧ ತಾಜಾ ನೀರಿನ ನೂರಾರು ತೊರೆಗಳು, ಕೆರೆಗಳು ಹಾಗೂ ನದಿಗಳನ್ನು ಹೊಂದಿರುವ ಈ ರಾಜ್ಯ ಪ್ರಾಕೃತಿಕವಾಗಿಯೂ ಅತ್ಯಂತ ಶ್ರೀಮಂತವಾದ ತಾಣವಾಗಿದೆ. ಮತ್ತೊಂದು ವಿಶೇಷವೆಂದರೆ ಉತ್ತರಾಖಂಡವು ತನ್ನಲ್ಲಿ ಕಂಡುಬರುವ ವೈವಿಧ್ಯಮಯ ಪಕ್ಷಿಗಳಿಗೆ ಹೆಚ್ಚು ಪ್ರಖ್ಯಾತವಾಗಿದೆ.

ಪಕ್ಷಿ ವೀಕ್ಷಕರು, ವಿದೇಶಿ ಪ್ರವಾಸಿಗರು ಉತ್ತರಾಖಂಡ ರಾಜ್ಯಕ್ಕೆ ಪ್ರಕೃತಿಯ ಸೊಬಗಿನಲ್ಲಿ ಅಡಗಿ ಕುಳಿತಿರುವ ವಿವಿಧ ಪಕ್ಷಿಗಳನ್ನು, ಪ್ರಕೃತಿಯ ವೈಭವವನ್ನು ನೋಡಲೆಂದೆ ಇಲ್ಲಿಗೆ ಬರುತ್ತಾರೆ. ಅಷ್ಟೆ ಅಲ್ಲ ಉತ್ತರಾಖಂಡದಲ್ಲಿ ಸರ್ಕಾರದ ವತಿಯಿಂದ ಆಯಾ ಸಮಯದಲ್ಲಿ ಪಕ್ಷಿ ವೀಕ್ಷಣೆಯ ಉತ್ಸವವನ್ನೂ ಸಹ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಕೇವಲ ಪಕ್ಷಿಗಳಲ್ಲದೆ ಉತ್ತರಾಖಂಡದಲ್ಲಿ ಇತರೆ ಹಲವಾರು ವಿಶಿಷ್ಟ ಜೀವಿಗಳನ್ನೂ ಸಹ ಕಾಣಬಹುದು. ಯಾವೆಲ್ಲ ಅದ್ಭುತ ಪ್ರಾಕೃತಿಕ ನೋಟಗಳು ಹಾಗೂ ಪಕ್ಷಿಗಳು, ಜೀವಿಗಳು ಸಾಮಾನ್ಯವಾಗಿ ಉತ್ತರಾಖಂಡ ರಾಜ್ಯದಲ್ಲಿ ಕಂಡುಬರುತ್ತವೆ ಎಂಬ ಕುತೂಹಲ ನಿಮಗಿದ್ದರೆ ಈ ಸ್ಲೈಡುಗಳನ್ನು ನೋಡುತ್ತ ಸಾಗಿ.

ಸೂಚನೆ : ಉತ್ತರಾಖಂಡವು ದೇವಭೂಮಿಯಾಗಿದ್ದು ಸಾಕಷ್ಟು ತೀರ್ಥ ಕ್ಷೇತ್ರಗಳನ್ನೊಳಗೊಂಡಿದೆ. ಪ್ರಸ್ತುತ ಲೇಖನದಲ್ಲಿ ತೀರ್ಥ ಕ್ಷೇತ್ರ, ದೇಗುಲಗಳ ಕುರಿತು ಹೇಳದೆ ಕೇವಲ ರಾಜ್ಯದ ವೈಭವ ಸಾರುವ ಪ್ರಾಕೃತಿಕ ಸಂಪತ್ತನ್ನು ತೋರಿಸಲಾಗಿದೆ. ತೀರ್ಥ ಕ್ಷೇತ್ರಗಳ ಕುರಿತು ತಿಳಿಯಬೇಕಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ.

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಮನ ಎಂಬ ಗ್ರಾಮದ ಬಳಿ ಕಂಡುಬರುವ ಸುಂದರಮಯ ಪ್ರಕೃತಿ. ಈ ಗ್ರಾಮದಲ್ಲಿ ವ್ಯಾಸ ಗುಹೆ ಮತ್ತು ಗಣೇಶ ಗುಹೆ ಎಂಬ ಎರಡು ಗುಹೆಗಳನ್ನು ಕಾಣಬಹುದು. ಪ್ರವಾಸಿಗರು ನಿರಂತರವಾಗಿ ಈ ಗುಹೆಗಳಿಗೆ ಭೇಟಿ ನೀಡುತ್ತಿರುತ್ತಾರೆ. ವ್ಯಾಸ ಗುಹೆಯಲ್ಲಿ ಮಹರ್ಷಿ ವ್ಯಾಸರು ಮಹಾಭಾರತವನ್ನು ಸಂಯೋಜಿಸಿದರೆನ್ನಲಾಗಿದೆ.

ಚಿತ್ರಕೃಪೆ: Sharada Prasad CS

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಸಾಮಾನ್ಯವಾಗಿ ಉತ್ತರಾಖಂಡದಲ್ಲಿ ಆಯೋಜಕರಿಂದ ಆಗಾಗ ಪವಿತ್ರ ಕ್ಷೇತ್ರಗಳ ದರ್ಶನದ ಪ್ರವಾಸವನ್ನು ನಿರಂತರವಾಗಿ ಆಯೋಜಿಸಲಾಗುತ್ತಿರುತ್ತದೆ. ಇದೆ ರೀತಿಯ ಒಂದು ಪ್ರವಾಸದ ಸಂದರ್ಭದಲ್ಲಿ ಉತ್ತರಾಖಂಡದ ಉತ್ತರಕಾಶಿ ಕ್ಷೇತ್ರದಲ್ಲಿ ಪ್ರಕೃತಿಯ ಸುಂದರ ಒಡಲಿನಲ್ಲಿ ಹೂಡಲಾದ ಒಂದು ಕ್ಯಾಂಪ್.

ಚಿತ್ರಕೃಪೆ: Barry Silver

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಪಂಚಚುಲಿ ಎಂಬುದು ಹಿಮಾಲಯದ ಹಿಮಚ್ಛಾದಿತ ಶಿಖರ ಶೃಂಗಗಳ ಒಂದು ಸಮೂಹವಾಗಿದೆ. ಈ ಸಮುಹವು ಉತ್ತರಾಖಂಡ ರಾಜ್ಯದ ಪಿತೋರ್ಗಡ್ ಜಿಲ್ಲೆಯ ಮುನ್ಶಿಯಾರಿ ಎಂಬ ಸ್ಥಳದಲ್ಲಿ ನೆಲೆಸಿರುವುದನ್ನು ಕಾಣಬಹುದು. ಪಂಚಚುಲಿ ಒಟ್ಟು ಐದು ಶಿಖರ ಶೃಂಗಗಳ ಸಮೂಹವಾಗಿದೆ. ಪಂಚಚುಲಿ ಐದು ಶಿಖರಗಳ ಪೈಕಿ ಒಂದಾಗಿರುವ ಒಂದು ಶಿಖರ.

ಚಿತ್ರಕೃಪೆ: Abhijit Kar Gupta

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡದ ಗಡ್ವಾಲ್ ಹಿಮಾಲಯ ಭಾಗದಲ್ಲಿ ಕಂಡುಬರುವ ಮೇರು ಪರ್ವತ ಹಾಗೂ ಶಿವಲಿಂಗ ಶಿಖರಗಳು. ಈ ತಾಣವು ಸವಾಲೆಸೆಯುವಂತಹ ಕ್ಲಿಷ್ಟಕರ ಚಾರಣದ ಮಾರ್ಗವನ್ನು ಒಳಗೊಂಡಿದ್ದು ಗಂಗೆಯ ಉಗಮ ಸ್ಥಾನವಾದ ಗೋಮುಖದಿಂದ ಮತ್ತೆ ಮೇಲ್ಮುಖವಾಗಿ ಆರು ಕಿ.ಮೀ ಗಳಷ್ಟು ಚಾರಣ ಮಾಡಿ ತಲುಪಬಹುದಾಗಿದೆ.

ಚಿತ್ರಕೃಪೆ: Sharada Prasad CS

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡ ರಾಜ್ಯದ ಕೌಸಾನಿ ಎಂಬ ಸ್ಥಳದಿಂದ ಕಂಡುಬರುವ ನಂದಾದೇವಿ ಪರ್ವತ ಶ್ರೇಣಿಯ ರಮಣೀಯ ನೋಟ.

ಚಿತ್ರಕೃಪೆ: V.Vasant

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಕಾಶಿಯ ಹಿಮಚ್ಛಾದಿತ ಪರ್ವತಗಳ ಮಧ್ಯದಲ್ಲಿ ಹಿಮದ ಪದರಗಳ ನಡುವೆ ಸರಾಗವಾಗಿ ಸಾಗುತ್ತಿರುವ ನದಿ.

ಚಿತ್ರಕೃಪೆ: Sharada Prasad CS

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡದ ಚಮೋಲಿ ಪಟ್ಟಣದ ಬಳಿ ಕಂಡುಬರುವ ಸ್ವರ್ಗಸದೃಶ ಪರಿಸರ.

ಚಿತ್ರಕೃಪೆ: Sharada Prasad CS

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಅಲ್ಪೈನ್ ಹೂವುಗಳು ವಿಶಿಷ್ಟವಾದ ಹೂವುಗಳಾಗಿದ್ದು ಉತ್ತರಾಖಂಡದಲ್ಲಿ ಕಂಡುಬರುತ್ತವೆ. ಇವುಗಳಿಗೆ ಮುಡಿಪಾದ ಸ್ವರ್ಗದಂತಹ ಕಣಿವೆಯೊಂದು ಉತ್ತರಾಖಂಡದಲ್ಲಿದೆ. ಇದನ್ನೆ ಹೂವುಗಳ ಕಣಿವೆ ರಾಷ್ಟ್ರೀಯ ಉದ್ಯಾನ ಎಂದು ಕರೆಯುತ್ತಾರೆ. ಇಲ್ಲಿ ಕಂಡುಬರುವ ರಾಶಿ ರಾಶಿ ಅಲ್ಪೈನ್ ಹೂವುಗಳು ಹಾಗೂ ಇತರೆ ಬಣ್ಣದ ಹೂವುಗಳು ಇದನ್ನು ಒಂದು ಆಕರ್ಷಕ ಪ್ರವಾಸಿ ಆಕರ್ಷಣೆಯನ್ನಾಗಿಸಿದೆ.

ಚಿತ್ರಕೃಪೆ: Alosh Bennett

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಮೂಕವಿಸ್ಮಿತರನ್ನಾಗಿಸುವ ಉತ್ತರಾಖಂಡದ ಕೌಸಾನಿಯ ಸೂರ್ಯೋದಯ.

ಚಿತ್ರಕೃಪೆ: Abhijit Kar Gupta

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಬೇದಿನಿ ಕುಂಡ : ವೈತರಣಿ ಕೊಳ ಎಂತಲೂ ಕರೆಯಲ್ಪಡುವ ಈ ಸುಂದರ ಬಯಲು ಪ್ರದೇಶದ ಕುಂಡವು ಉತ್ತರಾಖಂಡದ ಚಮೋಲಿಯಲ್ಲಿ ಕಂಡುಬರುತ್ತದೆ. ರೂಪಕುಂಡಕ್ಕೆ ಚಾರ್ಣ ಮಾಡುವ ಸಂದರ್ಭದಲ್ಲಿ ಈ ಕೊಳವು ಎದುರಾಗುತ್ತದೆ. ಇಲ್ಲಿನ ಬಯಲು ಪ್ರದೇಶದಲ್ಲಿ ವೈವಿಧ್ಯಮಯ ಹೂವುಗಳನ್ನು ನೋಡಿ ಆನಂದಿಸಬಹುದು. ಅದರಲ್ಲೂ ವಿಶೇಷವಾಗಿ ಇಲ್ಲಿ ಬ್ರಹ್ಮ ಕಮಲಗಳನ್ನೂ ಸಹ ನೋಡಬಹುದಾಗಿದೆ.

ಚಿತ್ರಕೃಪೆ: Abhijith Shastry

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡದಲ್ಲಿ ಕಂಡುಬರುವ ಹಲವು ಚಾರಣ ಮಾರ್ಗಗಳಲ್ಲಿ ಕಾಲಿಂದಿ ಪಾಸ್ ಅಥವಾ ಕಾಲಿಂದಿಖಾಲ್ ಟ್ರೆಕ್ ಕೂಡ ಒಂದು. ವಿಪರೀತ ಹವಾಮಾನದಿಂದ ಕೂಡಿರುವ ಈ ಟ್ರೆಕ್ ಮಾರ್ಗವು ಪರಿಣಿತ ಚಾರಣಿಗರಿಗೂ ಸಹ ಸಾಕಷ್ಟು ಸಾವಲೆಸೆಯುತ್ತದೆ. ಈ ಮಾರ್ಗದಲ್ಲಿ ಕಂಡು ಬರುವ ಪರ್ವತಗಳ ಅತ್ಯದ್ಭುತ ನೋಟವು ಟ್ರೆಕ್ ಕೈಗೊಳ್ಳಲು ಮನಸ್ಸನ್ನು ಪ್ರೇರೇಪಿಸಿದರೆ ತಪ್ಪಾಗಲಾರದು. ಉತ್ತರಕಾಶಿಯ ಭಾಗದಲ್ಲಿ ಇದು ಕಂಡು ಬರುತ್ತದೆ.

ಚಿತ್ರಕೃಪೆ: Sharada Prasad CS

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡದ ಮಸ್ಸೂರಿ ಹಾಗೂ ಲಂಡೌರ್ ಎಂಬ ಪಟ್ಟಣಗಳನ್ನು ಸಂಪರ್ಕಿಸುವ ದಟ್ಟ ಹಸಿರಿನಿಂದ ಕೂಡಿದ ಪರ್ವತಗಳ ಮಧ್ಯದಲ್ಲಿ ಹಾದು ಹೋದ ಅದ್ಭುತ ದಾರಿ. ಈ ರಸ್ತೆಯಲ್ಲಿ ಸಾಗುವಾಗ ನೀವು ಮೋಡಗಳೊಂದಿಗೆ ಸಾಗುತ್ತಿದ್ದಿರಿ ಎಂಬ ಭಾವ ಮೂಡಿದರೆ ಅಚ್ಚರಿ ಪಡಬೇಕಾಗಿಲ್ಲ.

ಚಿತ್ರಕೃಪೆ: Sharada Prasad CS

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡ ರಾಜ್ಯದಲ್ಲಿರುವ, ಪ್ರಕೃತಿಯ ಸುಂದರ ಮಡಿಲಿನಲ್ಲಿ ಮಗುವಂತೆ ಮಲಗಿರುವ ಅಲ್ಮೋರಾ ಪಟ್ಟಣದ ಒಂದು ವಿಹಂಗಮ ದೃಶ್ಯ. ಇಂತಹ ಸುಂದರ ಆಕರ್ಷಣೆಗಳಿಂದಲೆ ಉತ್ತರಾಖಂಡ ರಾಜ್ಯವು ಅದ್ಭುತ ಪ್ರವಾಸಿ ಆಕರ್ಷಣೆಯ ರಾಜ್ಯವಾಗಿದೆ ಎಂದರೆ ಸಂಶಯ ಪಡಬೇಕಾಗಿಲ್ಲ.

ಚಿತ್ರಕೃಪೆ: Travelling Slacker

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಬದರಿನಾಥದೆಡೆ ಟ್ರೆಕ್ ಮಾಡುವಾಗ ಗಸ್ತೋಲಿ ಎಂಬ ಸ್ಥಳವು ದೊರೆಯುತ್ತದೆ. ಘಸ್ತೋಲಿ ಎಂಬಲ್ಲಿರುವ ನಾಗ ತಲ್ ಅಥವಾ ನಾಗ್ ಕೊಳ.

ಚಿತ್ರಕೃಪೆ: Sharada Prasad CS

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡ ರಾಜ್ಯದ ಅಲ್ಮೋರಾ ಪಟ್ಟಣದ ಬಳಿ ಕಂಗೊಳಿಸುತ್ತಿರುವ ನಿಸರ್ಗ ಸೌಂದರ್ಯ.

ಚಿತ್ರಕೃಪೆ: Rajarshi MITRA

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ರುದ್ರಪ್ರಯಾಗ ಜಿಲ್ಲೆಯ ಉಖಿಮಠದಲ್ಲಿರುವ ಮಕ್ಕು ಎಂಬ ಗ್ರಾಮದ ಸುಂದರ ಪರಿಸರದಲ್ಲಿ ಹಾರಾಡುತ್ತಿರುವ ವಿಶಿಷ್ಟ ಹಾಗೂ ಅಪರೂಪದ ಹಿಮ ಪಾರಿವಾಳಗಳು.

ಚಿತ್ರಕೃಪೆ: Koshy Koshy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡ ರಾಜ್ಯದ ಪೌರಿ ಗಡ್ವಾಲ್ ಜಿಲ್ಲೆಯಲ್ಲಿರುವ ಲ್ಯಾನ್ಸ್ ಡೌನ್ ಎಂಬುದು ಒಂದು ದಂಡು ಪ್ರದೇಶ. ಸುಂದರ ನಿಸರ್ಗದಿಂದ ಕೂಡಿರುವ ಈ ತಾಣ ಪ್ರವಾಸಿ ಆಕರ್ಷಣೆಯೂ ಹೌದು. ಲ್ಯಾನ್ಸ್ ಡೌನ್ ನಲ್ಲಿರುವ ಒಂದು ಮನಮೋಹಕ ಕೆರೆಯ ಅದ್ಭುತ ನೋಟ.

ಚಿತ್ರಕೃಪೆ: Priyambada Nath

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡ ರಾಜ್ಯವು ಬಗೆ ಬಗೆಯ ವಿಶಿಷ್ಟ ಹೂವುಗಳಿಗೂ ಸಹ ಹೆಸರುವಾಸಿ ಈ ರಾಜ್ಯದ ಅಲ್ಮೋರಾ ಜಿಲ್ಲೆಯ ದುನಗಿರಿ ಪರ್ವತ ಪ್ರದೇಶಗಳಲ್ಲಿ ಕಂಡುಬರುವ ಕೃಷ್ಣ ಕಮಲ. ಉತ್ತರ ಭಾರತದಲ್ಲಿ ಇದನ್ನು ಪಂಚ ಪಾಂಡವ ಕಮಲ ಎಂತಲೂ ಕರೆಯುತ್ತಾರೆ. ಕಾರಣ ಹೂವಿನ ಮಧ್ಯದಲ್ಲಿ ಗಾಢಿ ನೀಲಿಯ ವರ್ಣದ ಏಕ ಭಾಗವು ಕೃಷ್ಣನನ್ನು ಪರ್ತಿನಿಧಿಸಿದರೆ ಕೆಳಗಿನ ಎರಡು ಸ್ತರಗಳು ಕ್ರಮವಾಗಿ ಐದು ಪಾಂಡವರನ್ನು ಹಾಗೂ ನೂರು ಕೌರವರನ್ನು ಪ್ರತಿನಿಧಿಸುತ್ತವೆ. ಇದನ್ನು ಪ್ಯಾಶನ್ ಹೂವು ಎಂತಲೂ ಸಹ ಕೆಲವರು ಕರೆಯುತ್ತಾರೆ.

ಚಿತ್ರಕೃಪೆ: Sagarika Bose

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡ ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣವಾದ ನೈನಿತಾಲ್ ಎಂಬಲ್ಲಿರುವ ಪ್ರಸಿದ್ಧ ನೈನಿತಾಲ್ ಕೆರೆ.

ಚಿತ್ರಕೃಪೆ: Aman Arora

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಗಂಗೆಯು ಕರುಣಿಸುವ ಉತ್ಸಾಹ. ಉತ್ತರಾಖಂಡ ರಿಶಿಕೇಷದಲ್ಲಿ ಹರಿದಿರುವ ಗಂಗೆಯ ಮಾಯೆ.

ಚಿತ್ರಕೃಪೆ: ramesh Iyanswamy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡದ ಪ್ರಸಿದ್ಧ ಟ್ರೆಕ್ ಮಾರ್ಗ ಕಾಲಿಂದಿ ಶಿಖರ ಶೃಂಗದ ಸನಿಹದಲ್ಲಿ....

ಚಿತ್ರಕೃಪೆ: Sharada Prasad CS

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡದ ಪ್ರಖ್ಯಾತ ಪ್ರವಾಸಿ ಆಕರ್ಷಣೆ ಗಿರಿಧಾಮವಾದ ಮಸ್ಸೂರಿಯಿಂದ ಕೇವಲ 24 ಕಿ.ಮೀ ಗಳಷ್ಟು ದೂರದಲ್ಲಿರುವ ಧನೌಲ್ತಿ ಎಂಬ ಮತ್ತೊಂದು ಸುಂದರ ಗಿರಿಧಾಮದ ಸೊಬಗು.

ಚಿತ್ರಕೃಪೆ: Alok Prasad

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಅದ್ಭುತ ಪ್ರವಾಸಿ ಆಕರ್ಷಣೆಯಾದ ಮಸ್ಸೂರಿಯ ಕೆಂಪ್ಟಿ ಜಲಪಾತದ ಅನನ್ಯ ನೋಟ.

ಚಿತ್ರಕೃಪೆ: KuwarOnline

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡ ರಾಜ್ಯದ ಪ್ರವಾಸಿ ತಾಣ ಸಾಮಾನ್ಯವಾಗಿ ಡಿಸೆಂಬರ್ ಅಂತ್ಯದಿಂದ ಪ್ರಾರಂಭವಾಗಿ ಜನವರಿ-ಫೆಬ್ರುವರಿಗಳಲ್ಲಿ ಹಿಮಪಾತವನ್ನು ಅನುಭವಿಸುತ್ತದೆ. ಈ ಸಂದರ್ಭದಲ್ಲೂ ಸಹ ಸಾಕಷ್ಟು ಜನರು ಇಲ್ಲಿ ಹಿಮಪಾತದ ಸುಂದರ ದೃಶ್ಯಾವಳಿಗಳನ್ನು ತಮ್ಮ ಕಣ್ಣುಗಳಲ್ಲಿ ತುಂಬಿಕೊಂಡು ಮಾನಸಿಕವಾಗಿ ಅನುಭವಿಸುವ ದೃಷ್ಟಿಯಿಂದ ಇಲ್ಲಿಗೆ ಬರುತ್ತಾರೆ. ಇಂತಹ ಹಿಮಪಾತದೊಂದು ಸಂದರ್ಭದಲ್ಲಿ ಕಂಡುಬರುವ ಮಸ್ಸೂರಿಯ ನೋಟ.

ಚಿತ್ರಕೃಪೆ: Paul Hamilton

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಹಿಮಾಲಯನ್ ಮೋನಲ್ ಎಂಬ ಹೆಸರಿನ ಈ ಹಕ್ಕಿಯು ಉತ್ತರಾಖಂಡದ ರಾಜ್ಯ ಪಕ್ಷಿಯೂ ಹೌದು. ಸಾಮಾನ್ಯವಾಗಿ ಗಂಡು ಮೋನಲ್ ಪಕ್ಷಿಗಳು ಆಕರ್ಷಕವಾದ ಬಣ್ಣಗಳಿಂದ ಕೂಡಿರುತ್ತದೆ.

ಚಿತ್ರಕೃಪೆ: Koshy Koshy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಗೋಲ್ಡನ್ ಜಾಕಾಲ್, ಪೋವಾಲ್ಗಡ್, ಉತ್ತರಾಖಂಡ ರಾಜ್ಯ.

ಚಿತ್ರಕೃಪೆ: soumyajit nandy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡದ ಚೋಪ್ಟ ಎಂಬಲ್ಲಿ ಕಂಡುಬರುವ ಮೌಪಿನ'ಸ್ ಪಿಕಾ ಮೊಲದ ಕುಟುಂಬ ವರ್ಗಕ್ಕೆ ಸೇರಿದ ಒಂದು ಚಿಕ್ಕ ಸಸ್ತನಿ.

ಚಿತ್ರಕೃಪೆ: soumyajit nandy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಇನ್ನೂ ಉತ್ತರಾಖಂಡದಲ್ಲಿ ಸಾಮಾನ್ಯವಾಗಿ ಕಂಡುಬರುವ ವಿಶಿಷ್ಟ ಪಕ್ಷಿಗಳು ಯಾವುವು ಎಂಬುದರ ಕುರಿತು ತಿಳಿಯಿರಿ. ಗ್ರೇಟರ್ ಗೋಲ್ಡನ್ ಬ್ಯಾಕ್.

ಚಿತ್ರಕೃಪೆ: soumyajit nandy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಕೋಲ್ ಟಿಟ್ ಎಂಬ ಮುದ್ದಾದ ಸುಂದರ ಪಕ್ಷಿ.

ಚಿತ್ರಕೃಪೆ: soumyajit nandy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಹಳದಿ ಬಣ್ಣವುಳ್ಳ ಬ್ಲ್ಯಾಕ್ ಲೋರ್ಡ್ ಟಿಟ್. ಸಾಮಾನ್ಯವಾಗಿ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಮಾತ್ರವೆ ಈ ಪಕ್ಷಿಗಳು ಕಂಡುಬರುತ್ತವೆ.

ಚಿತ್ರಕೃಪೆ: Koshy Koshy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಸಾಮಾನ್ಯವಾಗಿ ಕಂಡುಬರುವ ನೀಲಿ ವರ್ಣದ ವ್ಹಿಸ್ಟ್ಲಿಂಗ್ ತ್ರಶ್ ಎಂಬ ಪುಟ್ಟ ಪಕ್ಷಿ.

ಚಿತ್ರಕೃಪೆ: soumyajit nandy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ನೀಲಿ ಟೋಪಿಯ ತ್ರಶ್ ಪಕ್ಷಿ.

ಚಿತ್ರಕೃಪೆ: soumyajit nandy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಭಾರತೀಯ ಬೂದು ಬಣ್ಣದ ಹಾರ್ನ್ ಬಿಲ್.

ಚಿತ್ರಕೃಪೆ: J.M.Garg

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಸಾಮಾನ್ಯವಾಗಿ ಹರಿದ್ವಾರ ಜಿಲ್ಲೆಯಲ್ಲಿ ಕಂಡುಬರುವ ಶಿಕ್ರಾ ಎಂಬ ಗಿಡುಗ.

ಚಿತ್ರಕೃಪೆ: J.M.Garg

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಅಗಲವಾಗಿ ರೆಕ್ಕೆ ಬಿಚ್ಚಿ ತನ್ನ ಬೇಟೆಗಾಗಿ ಹಾರಾಡುತ್ತಿರುವ ಸರ್ಪಂಟ್ ಈಗಲ್ ಅಥವಾ ಹಾವುಗಳನ್ನು ಬೇಟೆಯಾಡುವ ಹದ್ದು.

ಚಿತ್ರಕೃಪೆ: Bendale.Kaustubh

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ರಂಗು ರಂಗಾದ ಆಕರ್ಷಕ "ಕ್ರಿಮ್ಸನ್ ಸನ್ ಬರ್ಡ್".

ಚಿತ್ರಕೃಪೆ: soumyajit nandy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಸಾಮಾನ್ಯವಾಗಿ ಉತ್ತರಾಖಂಡದ ಕಾಡು ಪ್ರದೇಶಗಳಲ್ಲಿ ಕಂಡುಬರುವ ಕಾಡು ಕೋಳಿ.

ಚಿತ್ರಕೃಪೆ: Yogendra Joshi

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉತ್ತರಾಖಂಡದ ಎತ್ತರದ ಅಥವಾ ಚಾರಣ ಮಾರ್ಗಗಳ ಪ್ರದೇಶಗಳಲ್ಲಿ ಕಂಡುಬರುವ ಮೋನಲ್.

ಚಿತ್ರಕೃಪೆ: Vvnataraj

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಏಷಿಯಾದ ಫ್ಲೈ ಕ್ಯಾಚರ್. ಅಂದರೆ ಹುಳುಗಳನ್ನು ಹಿಡಿದು ತಿಂದು ಬದುಕುವ ಪಕ್ಷಿ.

ಚಿತ್ರಕೃಪೆ: soumyajit nandy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಕೆಂಪು ಚುಂಚಿನ ಲಿಯೋಥ್ರಿಕ್ಸ್ ಎಂಬ ಪುಟ್ಟ ಹಾಗೂ ಚೂಟಿಯಾದ ಪಕ್ಷಿ.

ಚಿತ್ರಕೃಪೆ: Koshy Koshy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಕಂದು ಬಣ್ಣದ ಮರಗುಟುಕ ಅಥವಾ ವುಡ್ ಪೆಕ್ಕರ್.

ಚಿತ್ರಕೃಪೆ: soumyajit nandy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಕಪ್ಪು ಕತ್ತಿನ ಟಿಟ್ ಪಕ್ಷಿ.

ಚಿತ್ರಕೃಪೆ: soumyajit nandy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಹುಳು ಹುಪ್ಪಡಿಗಳನ್ನು ತಿಂದು ಬದುಕುವ ಆಕಾಶ ನೀಲಿ ವರ್ಣದ "ಉಲ್ಟ್ರಾ ಮರೈನ್" ಎಂಬ ಪುಟ್ಟ ಹಕ್ಕಿ. ಇವು ಸಾಮಾನ್ಯವಾಗಿ ಹಿಮಾಲಯ ಪ್ರದೇಶಗಳಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Koshy Koshy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಕಂದು ಹಾಗೂ ಗುಲಾಬಿ ವರ್ಣಗಳ ರೋಸ್ ಫಿಂಚ್ ಎಂಬ ಮನಮೋಹಕ ಪಕ್ಷಿ.

ಚಿತ್ರಕೃಪೆ: soumyajit nandy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಸ್ಟೋಟ್ ಎಂಬ ಮುಂಗುಸಿಯ ಜಾತಿಗೆ ಸೇರಿದ ಒಂದು ಚತುಷ್ಪದಿ ಸಸ್ತನಿ. ಸಾಮಾನ್ಯವಾಗಿ ಉತ್ತರಾಖಂಡದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಚಿತ್ರಕೃಪೆ: soumyajit nandy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಉದ್ಯಾನದ ಅಲಂಕಾರಿಕ ಹಲ್ಲಿ ಎಂದು ಅರ್ಥೈಸಬಹುದಾದ "ಒರಿಯಂಟಲ್ ಗಾರ್ಡನ್ ಲಿಜಾರ್ಡ್".

ಚಿತ್ರಕೃಪೆ: Himanshu Punetha

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಹಿಮಾಲಯ ಪ್ರದೇಶಗಳಲ್ಲಿ ಮಾತ್ರವೆ ಕಂಡುಬರುವ ಕೀಲ್ ಬ್ಯಾಕ್ ಹಾವು. ಇದು ಲಘುವಾದ ವಿಷ ಹೊಂದಿರುವ ಹಾವು.

ಚಿತ್ರಕೃಪೆ: L. Shyamal

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಇಗುವಾನಾ ಜಾತಿಗೆ ಸೇರಿದ ಲೌಡಾಕಿಯಾ ಎಂಬ ಹೆಸರಿನ ಹಿಮ ಪ್ರದೇಶಗಳಲ್ಲಿ ಕಂಡುಬರುವ ಒಂದು ಓತಿಕ್ಯಾತ ಅಥವಾ ಉಸರವಳ್ಳಿ.

ಚಿತ್ರಕೃಪೆ: L. Shyamal

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಕಂದು ಬಣ್ಣದ ಮೀನು ಹಾಗೂ ಇತರೆ ಜಲಚರಗಳನ್ನು ತಿಂದು ಬದುಕುವ ಗೂಬೆ.

ಚಿತ್ರಕೃಪೆ: Koshy Koshy

ಮೋಡಿ ಮಾಡುವ ಉತ್ತರಾಖಂಡ:

ಮೋಡಿ ಮಾಡುವ ಉತ್ತರಾಖಂಡ:

ಪಲ್ಲಾದ ಮೀನು ತಿಂದು ಬದುಕುವ ಹದ್ದು.

ಚಿತ್ರಕೃಪೆ: Koshy Koshy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more